ಇತರೆ

ಈರುಳ್ಳಿ ಮಗ್ಗೋಟ್(ಹುಳಗಳು)

Delia platura

ಕೀಟ

5 mins to read

ಸಂಕ್ಷಿಪ್ತವಾಗಿ

  • ಮೊಳೆತ ಸಸಿಗಳು ಮತ್ತು ಬೀಜಗಳನ್ನು ತಿನ್ನುವ ಮೂಲಕ ಮಗ್ಗೋಟ್(ಹುಳಗಳು) ಬೆಳೆಯುವ ಅಂಗಾಂಶಗಳನ್ನು ಹಾನಿಗೊಳಿಸುತ್ತವೆ.
  • ಹುಳು ತಿಂದಿರುವುದರಿಂದ ಆಗಿರುವ ಹಾನಿ ಎಳೆಯ ಎಲೆಗಳ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ.
  • ಸಸಿಗಳು ಕಡಿಮೆ ಇಳುವರಿ ನೀಡುವ, ಸುರುಟಿಕೊಂಡ, ಕುಂಠಿತಗೊಂಡ, ವಿರೂಪಗೊಂಡ ಸಸ್ಯಗಳಾಗಿ ಬೆಳೆಯುತ್ತವೆ.
  • ತೇವ ಮಣ್ಣು ಮತ್ತು ದೀರ್ಘಕಾಲದ ತಂಪಾದ ವಾತಾವರಣ ಮತ್ತು ಹೆಚ್ಚಿನ ಆರ್ದ್ರತೆಯು ಈ ಕೀಟಕ್ಕೆ ಅನುಕೂಲಕರವಾಗಿರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

5 ಬೆಳೆಗಳು
ಹುರುಳಿ
ಎಲೆಕೋಸು
ಬೆಳ್ಳುಳ್ಳಿ
ಈರುಳ್ಳಿ
ಇನ್ನಷ್ಟು

ಇತರೆ

ರೋಗಲಕ್ಷಣಗಳು

ಮಗ್ಗೋಟ್, ಮಣ್ಣಿನಲ್ಲಿರುವ ಸಾವಯವ ಪದಾರ್ಥ ಮತ್ತು ಮೊಳಕೆಯೊಡೆದ ಸಸಿಗಳನ್ನು ತಿನ್ನುತ್ತವೆ. ಅವು ಬೀಜಗಳನ್ನು ಕೊರೆದು ಬೆಳೆಯುತ್ತಿರುವ ಅಂಗಾಂಶಗಳನ್ನು ನಾಶಮಾಡುತ್ತವೆ ಮತ್ತು ಮೊಳಕೆಯೊಡೆಯುವುದನ್ನು ತಪ್ಪಿಸುತ್ತವೆ. ಅವುಗಳು ಬೆಳೆದರೂ, ಎಳೆಯ ಎಲೆಗಳ ಮೇಲೆ ಮಗ್ಗೋಟ್ ನಿಂದ ಆದ ಸ್ಪಷ್ಟ ಹಾನಿ ಗೋಚರಿಸುತ್ತದೆ. ಅಂಗಾಂಶಗಳ ಕೊಳೆತ ಉಂಟಾಗಬಹುದು. ಸಸಿಗಳು ಸುರುಟಿಕೊಂಡಿರುವ, ಕುಂಠಿತಗೊಂಡ, ವಿರೂಪಗೊಂಡ ಸಸ್ಯಗಳಾಗಿ ಬೆಳೆಯಬಹುದು. ಅವು ಕಡಿಮೆ ಗುಣಮಟ್ಟದ, ಕೆಲವು ಬೀಜಗಳನ್ನು ಮತ್ತು ಮುಂದೆ ಕಡಿಮೆ ಇಳುವರಿಯನ್ನು ನೀಡುತ್ತವೆ. ಮಣ್ಣು ತೇವವಾಗಿದ್ದರೆ ಮತ್ತು ತಂಪಾದ ಹವಾಮಾನ ಮತ್ತು ಅಧಿಕ ಆರ್ದ್ರತೆ ದೀರ್ಘಕಾಲದವರೆಗೆ ಇದ್ದರೆ, ಹಾನಿ ಹೆಚ್ಚಾಗಿರುತ್ತದೆ.

Recommendations

ಜೈವಿಕ ನಿಯಂತ್ರಣ

ಅವುಗಳ ಭೂಗತ ಜೀವನದಿಂದಾಗಿ, ಸೀಡ್ ಕಾರ್ನ್ ಮಗ್ಗೋಟ್ ಗಳು ಹೆಚ್ಚಿನ ಸಂಖ್ಯೆಯ ನೈಸರ್ಗಿಕ ಶತ್ರುಗಳನ್ನು ಹೊಂದಿರುವುದಿಲ್ಲ. ಆದಾಗ್ಯೂ, ವಯಸ್ಕ ಕೀಟಗಳಿಗೆ ನೆಲದ ಜೀರುಂಡೆಗಳು, ಜೇಡಗಳು ಮತ್ತು ಪಕ್ಷಿಗಳ ಮುಂತಾದವು ಪರಭಕ್ಷಕವಾಗಿವೆ. ಮರಿಹುಳುಗಳು ಶಿಲೀಂಧ್ರ ರೋಗಗಳಿಗೆ ಒಳಗಾಗಬಹುದು, ಆದರೂ, ಪರಭಕ್ಷಕ ಮತ್ತು ಶಿಲೀಂಧ್ರ ರೋಗಗಳು ಸಾಕಷ್ಟು ನಿಯಂತ್ರಣವನ್ನು ಒದಗಿಸುವುದಿಲ್ಲ. ಈ ನೊಣಗಳು ಸಹಜವಾಗಿ ಪ್ರಕಾಶಮಾನವಾದ ಬಣ್ಣಗಳಿಂದ ಆಕರ್ಷಿಸಲ್ಪಡುತ್ತವೆ. ಆದ್ದರಿಂದ ಅವುಗಳನ್ನು ಬಣ್ಣದ ಬಕೆಟ್ ನಲ್ಲಿ ಸಾಬೂನಿನ ನೀರು ಇಟ್ಟು ಹಿಡಿಯಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಮಗ್ಗೋಟ್ ಗಳನ್ನು ಹೊರಹಾಕಲು ಬೀಜಗಳಿಗೆ ಕೀಟನಾಶಕದಿಂದ ಚಿಕಿತ್ಸೆ ನೀಡಬಹುದು. ಕೀಟನಾಶಕಗಳನ್ನು ಬಳಸಬಹುದು, ಆದರೆ ನಿಮ್ಮ ದೇಶದಲ್ಲಿರುವ ನಿರ್ಬಂಧಗಳನ್ನು ತಿಳಿಯಿರಿ. ಮಣ್ಣಿಗೆ-ಹಾಕುವ ಕೀಟನಾಶಕಗಳನ್ನು ಸಹ ಬಳಸಬಹುದು.

ಅದಕ್ಕೆ ಏನು ಕಾರಣ

ಫ್ಲೈಸ್ ಡೇಲಿಯಾ ಪ್ಲಾಟುರಾ ಮತ್ತು ಡಿ. ಆಂಟಿಕಾದ ಮಗ್ಗೋಟ್ ಗಳಿಂದ ರೋಗಲಕ್ಷಣಗಳು ಉಂಟಾಗುತ್ತವೆ. ವಯಸ್ಕ ಕೀಟಗಳು ಸಾಮಾನ್ಯ ನೊಣಗಳನ್ನು ಬಣ್ಣದಲ್ಲಿ ಹೋಲುತ್ತವೆ. ಆದರೆ ಇವು ಚಿಕ್ಕದಾಗಿದ್ದು ಹೆಚ್ಚು ತೆಳ್ಳಗಿರುತ್ತವೆ. ಅವು ಹಳೆಯ ಬೇರುಗಳು ಮತ್ತು ಸಸ್ಯ ಅವಶೇಷಗಳಿಗೆ ಹತ್ತಿರವಿರುವ ಮಣ್ಣಿನಲ್ಲಿ ಚಳಿಗಾಲವನ್ನು ಕಳೆಯುತ್ತವೆ. ಬೀಜಗಳನ್ನು ನೆಡುವಾಗಲೇ ವಯಸ್ಕ ಕೀಟಗಳು ವಸಂತಕಾಲದಲ್ಲಿ ಹೊರಹೊಮ್ಮುತ್ತವೆ. ಕೊಳೆಯುತ್ತಿರುವ ವಸ್ತು ಅಥವಾ ಗೊಬ್ಬರವನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿರುವ ತೇವವಾದ ಮಣ್ಣಿನಲ್ಲಿ ಹೆಣ್ಣುಗಳು ಮೊಟ್ಟೆಗಳನ್ನು ಇಡುತ್ತವೆ. ಸುಮಾರು ಒಂದು ವಾರದ ನಂತರ ಹಳದಿ-ಬಿಳಿ ಬಣ್ಣದ, ಕಾಲುಗಳಿಲ್ಲದ ಲಾರ್ವಾ ಗಳು ಹೊರಬಂದು ಸಾವಯವ ವಸ್ತು ಮತ್ತು ಸಸಿಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಕೀಟಗಳ ಜೀವನ ಚಕ್ರ ಮತ್ತು ಅದರ ಆಹಾರ ಚಟುವಟಿಕೆಯನ್ನು ಬೆಂಬಲಿಸುವ ತಂಪಾದ, ಆರ್ದ್ರ ವಾತಾವರಣದಲ್ಲಿ ಹಾನಿ ಹೆಚ್ಚಾಗಿರುತ್ತದೆ. ಬೆಚ್ಚಗಿನ ಮತ್ತು ಬಿಸಿಲಿನ ವಾತಾವರಣವು ಮೊಟ್ಟೆಗಳನ್ನು ಇಡುವುದನ್ನು ತಡೆಗಟ್ಟುತ್ತದೆ ಮತ್ತು ಸಸ್ಯಗಳು ವೇಗವಾಗಿ ಮತ್ತು ಗಟ್ಟಿಯಾಗಿ ಬೆಳೆಯುವಂತೆ ಮಾಡುತ್ತದೆ.


ಮುಂಜಾಗ್ರತಾ ಕ್ರಮಗಳು

  • ಕಡಿಮೆ ಸಾವಯವ ಅಂಶಗಳೊಂದಿಗೆ ಒಣ ಮಣ್ಣುಗಳಲ್ಲಿ ನೆಡಿ.
  • ಬೆಚ್ಚಗಿನ ಮತ್ತು ಬಿಸಿಲಿರುವ ವಾತಾವರಣದಲ್ಲಿ ಆಳದಲ್ಲಿ ನೆಡದಂತೆ ಖಚಿತಪಡಿಸಿಕೊಳ್ಳಿ.
  • ಗೊಬ್ಬರವನ್ನು ಹಾಕುವುದಿದ್ದರೆ, ನೆಡುವ ಮೊದಲು ಕೆಲವು ವಾರಗಳ ಕಾಲ ಕಾಯಿರಿ.
  • ಹುಲ್ಲಿನಂತಹ ಹೊದಿಕೆ ಬೆಳೆಗಳನ್ನು ಬಳಸಿ.
  • ಬೀಜಗಳಿಗೆ ಗಾಯವಾಗದಂತೆ ಎಚ್ಚರಿಕೆಯಿಂದ ನಿರ್ವಹಿಸಿ.
  • ಹೊಲಗಳಲ್ಲಿ ಮತ್ತು ಸುತ್ತಲಿನ ಕಳೆಗಳನ್ನು ನಾಶಮಾಡಿ.
  • ನಿಮ್ಮ ಬೀಜಪಾತಿಯ ಮೇಲೆ ಉತ್ತಮ ಜಾಲರಿ ಬಲೆ ಮಗ್ಗಟ್ ನೊಣಗಳನ್ನು ದೂರವಿಡುತ್ತದೆ.
  • ನೆಲದೊಳಗೆ ಆಳವಾಗಿ ಉಳುಮೆ ಮಾಡಿ ಸಸ್ಯ ಅವಶೇಷಗಳನ್ನು ಹೂತುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ