ಈರುಳ್ಳಿ

ಈರುಳ್ಳಿಯ ಸ್ಟೆಂಫಿಲಿಯಮ್ ಎಲೆ ಅಂಗಮಾರಿ

Pleospora allii

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಸಣ್ಣ, ನೀರಿನಲ್ಲಿ-ನೆನೆಸಿದಂತಹ, ಬಿಳಿ ಬಣ್ಣದಿಂದ ತಿಳಿ ಹಳದಿ ಬಣ್ಣದ ಕಲೆಗಳು.
  • ಕಾಲಾನಂತರದಲ್ಲಿ, ಕಪ್ಪು ಬಣ್ಣದ ಕೇಂದ್ರಗಳಿರುವ ಕಂದಾದ, ಗುಂಡಿ ಬಿದ್ದಂತಹ, ಉದ್ದವಾದ, ಮಚ್ಚೆಗಳು ರೂಪುಗೊಳ್ಳುತ್ತವೆ.
  • ದೊಡ್ಡ ಕೊಳೆತ ಪ್ರದೇಶಗಳು ಅಂಗಾಂಶಗಳಲ್ಲಿ ವ್ಯಾಪಕ ರೋಗವನ್ನು ಉಂಟುಮಾಡುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು
ಬೆಳ್ಳುಳ್ಳಿ
ಈರುಳ್ಳಿ

ಈರುಳ್ಳಿ

ರೋಗಲಕ್ಷಣಗಳು

ಆರಂಭಿಕ ಲಕ್ಷಣಗಳು ಸಣ್ಣ, ನೀರಿನಲ್ಲಿ-ನೆನೆಸಿದಂತಹ, ಬಿಳಿ ಬಣ್ಣದಿಂದ ತಿಳಿ ಹಳದಿ ಕಲೆಗಳಾಗಿ ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತವೆ. ವಿಶಿಷ್ಟವೆಂದರೆ, ಈ ಗಾಯಗಳು ಬೀಸುತ್ತಿರುವ ಗಾಳಿಗೆ ಮುಖ ಮಾಡಿರುವ ಎಲೆಗಳ ಬದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಕಾಲಾನಂತರದಲ್ಲಿ, ಈ ಸಣ್ಣ ಗಾಯಗಳು ಎಲೆಯ ಗರಿಯ ಉದ್ದಕ್ಕೂ ಬೆಳೆಯುತ್ತವೆ ಮತ್ತು ಗುಂಡಿ ಬಿದ್ದ, ಅಂಡಾಕಾರದ ಅಥವಾ ಉದ್ದವಾದ, ಕಂದು ಬಣ್ಣದಿಂದ ಕಪ್ಪು ಬಣ್ಣದ ಕೇಂದ್ರಗಳಿರುವ, ಕಂದು ಬಣ್ಣದ ಮಚ್ಚೆಗಳಾಗುತ್ತವೆ. ಅವುಗಳ ಕೇಂದ್ರದಲ್ಲಿ ಏಕಕೇಂದ್ರಕ ವಲಯಗಳು ಬೆಳೆಯಬಹುದು. ಮುಂದುವರಿದ ಹಂತಗಳಲ್ಲಿ, ದೊಡ್ಡ ಕೊಳೆತದಂತಹ ಪ್ರದೇಶಗಳು ರೂಪುಗೊಳ್ಳುತ್ತವೆ. ಇವು ಎಲೆ ಅಥವಾ ಬೀಜದ ಕಾಂಡವನ್ನು ಸುತ್ತುವರಿಯಬಹುದು ಮತ್ತು ಅಂಗಾಂಶಗಳಲ್ಲಿ ವ್ಯಾಪಕ ರೋಗವನ್ನು ಉಂಟುಮಾಡುತ್ತದೆ.

Recommendations

ಜೈವಿಕ ನಿಯಂತ್ರಣ

ಸ್ಟೆಂಫಿಲಿಯಮ್ ಎಲೆ ಅಂಗಮಾರಿಯ ಜೈವಿಕ ನಿಯಂತ್ರಣಕ್ಕಾಗಿ ಸಾಂಪ್ರದಾಯಿಕ ಶಿಲೀಂಧ್ರನಾಶಕಗಳಿಗೆ ಹತ್ತಿರವಾದ ಪರಿಣಾಮಕಾರಿತ್ವವನ್ನು ಹೊಂದಿರುವ ಆಜಾಡಿರಾಕ್ಟಾ ಇಂಡಿಕಾ (ಬೇವು) ಮತ್ತು ದತೂರಾ ಸ್ಟ್ರಾಮೋನಿಯಮ್ (ಜಿಮ್ಸನ್‌ವೀಡ್) ನ ಜಲೀಯ ಸಾರಗಳನ್ನು ಬಳಸಬಹುದು. ಹಸಿರುಮನೆ ಪರಿಸ್ಥಿತಿಗಳಲ್ಲಿ, ಟ್ರೈಕೊಡರ್ಮಾ ಹರ್ಜಿಯಾನಮ್ ಮತ್ತು ಸ್ಟ್ಯಾಚಿಬೊಟ್ರಿಸ್ ಚಾರ್ಟಾರಮ್ ಅನ್ನು ಆಧರಿಸಿದ ಉತ್ಪನ್ನಗಳ ತಡೆಗಟ್ಟುವ ಅಥವಾ ಗುಣಪಡಿಸುವ ಬಳಕೆಯಿಂದ ರೋಗದ ಸಂಭವ ಮತ್ತು ತೀವ್ರತೆಯನ್ನು ಕಡಿಮೆ ಮಾಡಬಹುದು (ಎರಡೂ ಸಂದರ್ಭಗಳಲ್ಲಿ ಸುಮಾರು 70%).

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ತಡೆಗಟ್ಟುವ ಕ್ರಮಗಳೊಂದಿಗೆ ಜೈವಿಕ ಚಿಕಿತ್ಸೆಗಳಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಸಕ್ರಿಯ ಪದಾರ್ಥಗಳಾದ ಅಜೋಕ್ಸಿಸ್ಟ್ರೋಬಿನ್ + ಡಿಫೆನೊಕೊನಜೋಲ್, ಬೊಸ್ಕಾಲಿಡ್ + ಪೈರಾಕ್ಲೋಸ್ಟ್ರೋಬಿನ್, ಕ್ಲೋರೊಥಲೋನಿಲ್, ಐಪ್ರೊಡಿಯೋನ್, ಮ್ಯಾಂಕೋಜೆಬ್ ಮತ್ತು ಪ್ರೊಕ್ಲೋರಾಜ್ ಇವುಗಳ ದ್ರಾವಣ, ಎಸ್. ವೆಸಿಕೇರಿಯಂನ ಬೆಳವಣಿಗೆಯನ್ನು ಕಡಿಮೆ ಮಾಡಲು ಹೆಚ್ಚು ಪರಿಣಾಮಕಾರಿ. ಶಿಲೀಂಧ್ರಕ್ಕೆ (ತಂಪಾದ ಮತ್ತು ಶುಷ್ಕ ಹವಾಮಾನ) ಪರಿಸ್ಥಿತಿಗಳು ಪ್ರತಿಕೂಲವಾಗಿದ್ದಾಗ ಚಿಕಿತ್ಸೆಯನ್ನು ಮಾಡಬೇಕು. ಸಾಮಾನ್ಯವಾಗಿ, ಉತ್ಪನ್ನಗಳ ಪರ್ಯಾಯ ಬಳಕೆಯಿಂದ ಶಿಲೀಂಧ್ರನಾಶಕಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸಬಹುದು.

ಅದಕ್ಕೆ ಏನು ಕಾರಣ

ಸ್ಟೆಮ್ಫಿಲಿಯಮ್ ಎಲೆ ಅಂಗಮಾರಿಯು ಪ್ಲೆಸ್ಪೊರಾ ಆಲ್ಲೈ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಇದನ್ನು ಮೊದಲು ಸ್ಟೆಂಫಿಲಿಯಮ್ ವೆಸಿಕೇರಿಯಮ್ ಎಂದು ಕರೆಯಲಾಗುತ್ತಿತ್ತು. ಹೀಗಾಗಿ, ರೋಗಕ್ಕೆ ಈ ಹೆಸರು ಬಂದಿದೆ. ಇದು ಸೋಂಕಿತ ಸಸ್ಯಗಳ ಅವಶೇಷಗಳ ಮೇಲೆ ಉಳಿದುಕೊಂಡಿರುತ್ತದೆ ಮತ್ತು ವಸಂತಕಾಲದಲ್ಲಿ ಅನುಕೂಲಕರ ಹವಾಮಾನ ಪರಿಸ್ಥಿತಿಗಳಲ್ಲಿ ಬೆಳವಣಿಗೆಯನ್ನು ಪುನರಾರಂಭಿಸುತ್ತದೆ. ನಂತರ ಅದು ಗಾಳಿಯ ಮೂಲಕ ಹತ್ತಿರದ ಸಸ್ಯಗಳಿಗೆ ಹರಡುವ ಬೀಜಕಗಳನ್ನು ಉತ್ಪಾದಿಸುತ್ತದೆ. ಇದು ಸಾಮಾನ್ಯವಾಗಿ ಎಲೆಗಳ ಸುಳಿ, ಹಿಂದಿನ ಕಾಯಿಲೆಗಳಿಂದ ಉಂಟಾದ ಗಾಯಗಳು ಅಥವಾ ಗಾಯಗೊಂಡ ಅಂಗಾಂಶಗಳಂತಹ (ಉದಾ. ಕೀಟಗಳು ಅಥವಾ ಆಲಿಕಲ್ಲುಗಳಿಂದ) ಸತ್ತ ಮತ್ತು ಸಾಯುತ್ತಿರುವ ಈರುಳ್ಳಿಯ ಅಂಗಾಂಶಗಳನ್ನು ಆಕ್ರಮಿಸುತ್ತದೆ. ದೀರ್ಘಕಾಲದ ಬೆಚ್ಚಗಿನ ಆರ್ದ್ರ ಪರಿಸ್ಥಿತಿಗಳು ರೋಗದ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ಹವಾಮಾನವು ಬೆಚ್ಚಗಿದ್ದರೆ (18 - 25 ° C) ಮತ್ತು ಎಲೆಗಳ ಮೇಲ್ಮೈ 24 ಗಂಟೆಗಳಿಗಿಂತ ಹೆಚ್ಚುಕಾಲ ತೇವವಾಗಿದ್ದರೆ ಆರೋಗ್ಯಕರ ಎಲೆಗಳ ಮೇಲೂ ಇವು ದಾಳಿ ಮಾಡಬಹುದು. ಸೋಂಕು ಸಾಮಾನ್ಯವಾಗಿ ಎಲೆಗಳಿಗೆ ಸೀಮಿತವಾಗಿರುತ್ತದೆ ಮತ್ತು ಗೆಡ್ಡೆ ಮೇಲೆ ಪರಿಣಾಮ ಬೀರುವುದಿಲ್ಲ. ಹಳೆಯ ಎಲೆಗಳು ಎಳೆಯ ಎಲೆಗಳಿಗಿಂತ ಹೆಚ್ಚು ಬೇಗ ರೋಗಕ್ಕೆ ಒಳಗಾಗುತ್ತವೆ.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಪ್ರಭೇದಗಳನ್ನು ಆಯ್ಕೆಮಾಡಿ (ಹಲವಾರು ಲಭ್ಯವಿದೆ).
  • ಎಲೆಗಳ ದೀರ್ಘಕಾಲಿಕ ತೇವವನ್ನು ತಪ್ಪಿಸಲು ಗಾಳಿ ಬೀಸುತ್ತಿರುವ ದಿಕ್ಕಿನಲ್ಲಿ ಸಸ್ಯಗಳ ಸಾಲುಗಳನ್ನು ಬಿತ್ತನೆ ಮಾಡಿ.
  • ಉತ್ತಮ ಗಾಳಿಯ ಹರಿವನ್ನು ಹೊಂದಲು ಸಸ್ಯ ಸಾಂದ್ರತೆಯನ್ನು ಕಡಿಮೆ ಮಾಡಿ.
  • ನಾಟಿ ಮಾಡುವ ಮೊದಲು ಹೊಲದಲ್ಲಿ ಸಾಕಷ್ಟು ಒಳಚರಂಡಿ ವ್ಯವಸ್ಥೆ ಇರುವುದನ್ನು ಖಚಿತಪಡಿಸಿಕೊಳ್ಳಿ.
  • ರೋಗದ ತೀವ್ರತೆಯನ್ನು ಹೆಚ್ಚಿಸುವ ಅತಿಯಾದ ಸಾರಜನಕ ಬಳಕೆಯನ್ನು ತಪ್ಪಿಸಿ.
  • ಸುಗ್ಗಿಯ ನಂತರ ಉಳುಮೆ ಮೂಲಕ ಸಸ್ಯದ ಅವಶೇಷಗಳನ್ನು ಹೂಳಬೇಕು.
  • 3-4 ವರ್ಷಗಳ ಅವಧಿಗೆ ಬೆಳೆ ಸರದಿ ಯೋಜಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ