ಕಡಲೆಕಾಯಿ

ಫುಟ್ ಮತ್ತು ಕಾಲರ್ ರಾಟ್

Athelia rolfsii

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ರೆಂಬೆ ಮತ್ತು ಗಿಡದ ಸುತ್ತಲಿನ ನೆಲದಲ್ಲಿ ಬಿಳಿಯ ತುಪ್ಪಳದಂತಹ ಹೊದಿಕೆ.
  • ಎಲೆಗಳು ಬಾಡಲಾರಂಭಿಸುತ್ತವೆ.
  • ಗಿಡವು ಬುಡದಲ್ಲಿ ಮುರಿದು ನೆಲದತ್ತ ಬಾಗುವ ಅಥವಾ ಸಾಯುವ ಸಾಧ್ಯತೆ ಇದೆ.

ಇವುಗಳಲ್ಲಿ ಸಹ ಕಾಣಬಹುದು

28 ಬೆಳೆಗಳು
ಬಾರ್ಲಿ
ಹುರುಳಿ
ಹಾಗಲಕಾಯಿ
ಎಲೆಕೋಸು
ಇನ್ನಷ್ಟು

ಕಡಲೆಕಾಯಿ

ರೋಗಲಕ್ಷಣಗಳು

ಶಿಲೀಂಧ್ರವು ಮುಖ್ಯವಾಗಿ ಕಾಂಡಗಳನ್ನು ಆಕ್ರಮಿಸುತ್ತದಾದರೂ ಅನುಕೂಲಕರ ಪರಿಸ್ಥಿತಿಗಳಲ್ಲಿ ಗಿಡದ ಇತರ ಭಾಗಗಳ ಮೇಲೂ ಹಾನಿ ಮಾಡಬಹುದು. ಇದು ಸಸ್ಯ ಅಂಗಾಂಶದ ಮೇಲೆ ಮತ್ತು ಮಣ್ಣಿನ ಸುತ್ತಲೂ ಬಿಳಿಯ, ತುಪ್ಪಳದಂತಹ ಹೊದಿಕೆಯಾಗಿ ಬೆಳೆಯುತ್ತದೆ ಹಾಗೂ ವಿಶಿಷ್ಟವಾದ ದುಂಡನೆಯ ಸ್ಕ್ಲೆರೋಟಿಯಾ ಎಂದು ಕರೆಯಲ್ಪಡುವ ಕಂದು ಬೀಜಗಳು ಕಂಡು ಬರುತ್ತವೆ. ಕಾಂಡದ ಅಂಗಾಂಶಗಳು ತಿಳಿ ಕಂದು ಬಣ್ಣಕ್ಕೆ ತಿರುಗಿ ಮೃದುವಾಗುತ್ತವೆ, ಆದರೆ ನೀರು ತುಂಬಿಕೊಂಡಿರುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಕಾಂಡವನ್ನು ಸಂಪೂರ್ಣವಾಗಿ ಸುತ್ತುವರಿಯಬಹುದು ಮತ್ತು ಕ್ರಮೇಣ ಎಲೆಗಳು ಬಾಡತೊಡಗಿ ಕ್ಲೋರೋಫಿಲ್ ಉತ್ಪಾದನೆ ಕಡಿಮೆಯಾಗಿ ಹಳದಿ ಬಣ್ಣಕ್ಕೆ ತಿರುಗುತ್ತದೆ.ಕೊನೆಯಲ್ಲಿ ಗಿಡವು ಬುಡದಲ್ಲಿ ಮುರಿದು ನೆಲದತ್ತ ಬಾಗಬಹುದು. ಸಾಲುಸಾಲಾಗಿ ಎಲ್ಲ ಗಿಡಗಳೂ ಸಾಯುವುದು ಅಥವಾ ತೋಟದ ದೊಡ್ಡದೊಂದು ಭಾಗದಲ್ಲಿ ಗಿಡಗಳು ಸತ್ತಿರುವುದು ಕಂಡು ಬರುತ್ತದೆ. ಮೊಳಕೆಯು ಸೋಂಕಿಗೆ ಒಳಗಾಗುತ್ತದೆ ಮತ್ತು ಅವು ಸೋಂಕಿತವಾದಾಗ ಶೀಘ್ರವಾಗಿ ಸಾಯುತ್ತವೆ. ಕೆಲವೊಮ್ಮೆ, ಹಣ್ಣುಗಳು ಕೂಡ ಶಿಲೀಂಧ್ರದ ಹೊದಿಕೆಯಲ್ಲಿ ಮುಚ್ಚಿರುತ್ತವೆ ಮತ್ತು ಅವುಗಳು ಬೇಗನೆ ಕೊಳೆತು ಹೋಗುತ್ತವೆ.

Recommendations

ಜೈವಿಕ ನಿಯಂತ್ರಣ

ವಿರೋಧಿ ಶಿಲೀಂಧ್ರಗಳು (ಸಾಮಾನ್ಯವಾಗಿ ಇತರ ಚಿಕಿತ್ಸೆಗಳ ಜೊತೆ) ಈ ರೋಗಕಾರಕ ಶಿಲೀಂಧ್ರದ ವಿರುದ್ಧ ಸ್ವಲ್ಪ ನಿಯಂತ್ರಣವನ್ನು ಒದಗಿಸುತ್ತದೆ. ಫಲಿತಾಂಶಗಳು ಬೆಳೆ ಮತ್ತು ವಾತಾವರಣದ ಪರಿಸ್ಥಿತಿಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಸಾಮಾನ್ಯವಾಗಿ ಟ್ರೈಕೋಡರ್ಮಾ ಹಾರ್ಜಿಯಂ, ಟ್ರೈಕೊಡೆರ್ಮ ವೈರೈಡ್, ಬ್ಯಾಸಿಲಸ್ ಸಬ್ಟಿಲಿಸ್, ಸ್ಟ್ರೆಪ್ಟೊಮೈಸಸ್ ಪಿಲಾಂಥಿಸೋಮ್, ಪೆನಿಸಿಲಿಯಮ್ನ ಕೆಲವು ಬಗೆಗಳು, ಗ್ಲಿಯೊಕ್ಲಾಡಿಯಮ್ ವೈರೆನ್ಸ್ – ಇವುಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಯಾವಾಗಲೂ ಜೈವಿಕ ಚಿಕಿತ್ಸೆಗಳ ಜೊತೆಗೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಬಿತ್ತನೆಯ ಮೊದಲು ಮಣ್ಣಿಗೆ ವಿವಿಧೋದ್ದೇಶದ ಫ್ಯೂಮಿಗೆಂಟನ್ನು ಹಾಕುವುದರಿಂದ ಶಿಲೀಂಧ್ರವನ್ನು ಹಿಡಿತದಲ್ಲಿಡುವುದು ಸಾಧ್ಯವಾಗುತ್ತದೆ. ಮೆಟಾಮ್ಸೋಡಿಯಮ್, ಆಧರಿಸಿರುವ ಉತ್ಪನ್ನಗಳನ್ನು ಬೀಜಮಡಿಗಳ ಅಥವಾ ಬೆಲೆ ಬಾಳುವ ಬೆಳೆಗಳ ಸಂಸ್ಕರಣೆಗಾಗಿ ಬಳಸಬಹುದು.

ಅದಕ್ಕೆ ಏನು ಕಾರಣ

ಈ ರೋಗಲಕ್ಷಣಗಳು ಅಥೇಲಿಯಾ ರೋಲ್ಫೀಸ್ ಶಿಲೀಂಧ್ರದಿಂದ ಉಂಟಾಗುತ್ತವೆ, ಇದನ್ನು ಸ್ಕ್ಲೆರೋಟಿಯಂ ರೋಲ್ಫೀಸಿ ಎಂದೂ ಕರೆಯುತ್ತಾರೆ. ರೋಗದ ಹೆಸರು ಇದರಿಂದ ಬಂದಿದೆ. ಈ ಶಿಲೀಂಧ್ರವು ಚಳಿಗಾಲವನ್ನು ಮಣ್ಣಿನಲ್ಲಿ ಅಥವಾ ಗಿಡದ ಅವಶೇಷಗಳಲ್ಲಿ ಕಳೆಯುತ್ತದೆ. ಇದು ವ್ಯಾಪಕ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ (ಉದಾಹರಣೆಗೆ ಧಾನ್ಯಗಳು, ಸಿಹಿ ಗೆಣಸು, ಕುಂಬಳಕಾಯಿ, ಮುಸುಕಿನ ಜೋಳ, ಗೋಧಿ ಮತ್ತು ಕಡಲೆಕಾಯಿ) ರೋಗಕ್ಕೆ ಕಾರಣವಾಗುತ್ತದೆ. ಅನುಕೂಲಕರ ಪರಿಸ್ಥಿತಿಯಲ್ಲಿ, ಇದು ಬೇಗನೆ ಬೆಳೆಯುತ್ತದೆ ಹಾಗೂ ಕೆಲವೇ ದಿನಗಳಲ್ಲಿ ಮಣ್ಣಿನ ಸಾಲಿನ ಹತ್ತಿರ ಅಥವಾ ಸಸ್ಯದ ಅಂಗಾಂಶಗಳನ್ನು ಆಕ್ರಮಿಸಿಕೊಳ್ಳುತ್ತದೆ. ಮಣ್ಣಿನ pH ಕಡಿಮೆ ಇದ್ದರೆ (3.0 ರಿಂದ 5.0), ಅತಿಯಾದ ನೀರಾವರಿ ಅಥವಾ ಮಳೆ, ಒತ್ತೊತ್ತಾಗಿರುವ ಗಿಡಗಳು ಹಾಗೂ ಹೆಚ್ಚಿನ ಉಷ್ಣಾಂಶ (25 ರಿಂದ 35 ° C) ಶಿಲೀಂಧ್ರ ಮತ್ತು ಸೋಂಕಿನ ಪ್ರಕ್ರಿಯೆಗೆ ಅನುಕೂಲಕಾರಿ. ಇದಕ್ಕೆ ವಿರುದ್ಧವಾಗಿ ಹೆಚ್ಚಿನ pH ಹೊಂದಿರುವ ಸುಣ್ಣಭರಿತ ಮಣ್ಣು ಸಾಮಾನ್ಯವಾಗಿ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ. ರೋಗ ಸಾಮಾನ್ಯವಾಗಿ ಸೋಂಕಿನ ಅಂಶವಿರುವ ಮಣ್ಣು ಅಥವಾ ನೀರಿನಿಂದ, ಸೋಂಕಿನ ಅಂಶ ಇರುವ ಉಪಕರಣಗಳಿಂದ, ಸೋಂಕಿತ ಸಸ್ಯಭಾಗಗಳು ಹಾಗೂ ಸೋಂಕಿತ ಪ್ರಾಣಿಯ ತ್ಯಾಜ್ಯದಿಂದ (ಗೊಬ್ಬರ ಮತ್ತು ಬೀಜ) ಹಬ್ಬುತ್ತದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲದಿಂದ ಆರೋಗ್ಯಕರ ಬೀಜಗಳನ್ನು ಬಳಸಲು ಮರೆಯದಿರಿ.
  • ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಬಳಸಿ.
  • ಹಿಂದೆ ರೋಗ ಬಂದಿರದ ಲೆನದಲ್ಲಿ ನೆಡಿ.
  • ಬಿತ್ತನೆ ಪ್ರಮಾಣ ಅತಿಯಾಗದಂತೆ ನೋಡಿಕೊಳ್ಳಿ ಹಾಗೂ ತಕ್ಕ ಅಂತರವನ್ನು ಕಾಪಾಡಿ.
  • ತಡವಾಗಿ ನೆಡುವುದರಿಂದ ಕೂಡಾ ರೋಗ ಬರುವ ಸಂಭವ ಕಡಿಮೆಯಾಗುತ್ತದೆ.
  • ಮಣ್ಣು ಅತಿಯಾಗಿ ತೇವವಾಗಿರುವುದನ್ನು ತಡೆಯಲು ತೋಟದಲ್ಲಿ ಉತ್ತಮ ಒಳಚರಂಡಿ ವ್ಯವಸ್ಥೆ ಮಾಡಿ.
  • ಗಿಡಗಳನ್ನು ನೇರವಾಗಿಡಲು ಅಗತ್ಯವಿದ್ದರೆ ಗೂಟಗಳನ್ನು ಬಳಸಿ.
  • ಗಿಡಗಳಿಗೆ ಅತಿಯಾಗಿ ನೀರುಣಿಸಬೇಡಿ, ನೀರಿನಿಂದ ಶಿಲೀಂಧ್ರದ ಬೆಳವಣಿಗೆ ಹೆಚ್ಚುತ್ತದೆ.
  • ತೋಟದ ಕೆಲಸದ ಉಪಕರಣಗಳನ್ನು ಸ್ವಚ್ಛವಾಗಿರಿಸಿ ಮತ್ತು ಸೋಂಕಿನ ಅಂಶ ತಗುಲದಂತೆ ಎಚ್ಚರಿಕೆ ವಹಿಸಿ.
  • ತೋಟಗಳ ನಡುವೆ ಮಣ್ಣನ್ನು ಸಾಗಿಸಬೇಡಿ.
  • ಜಾಗವನ್ನು ಕಳೆಯಿಂದ ಮುಕ್ತಗೊಳಿಸಿ.
  • ವಾರಕ್ಕೊಮ್ಮೆಯಾದರೋ ರೋಗಲಕ್ಷಣಕ್ಕಾಗಿ ಜಮೀನನ್ನು ಪರಿಶೀಲಿಸಿ.
  • ರೋಗಪೀಡಿತ ಗಿಡ ಅಥವಾ ಗಿಡದ ಭಾಗವನ್ನು ತೆಗೆದು ಅದನ್ನು ನೆಲದಲ್ಲಿ ಆಳವಾಗಿ ಹೂಳಿ ಅಥವಾ ಸುಟ್ಟು ಹಾಕಿ.
  • ತೋಟದ ಕೆಲಸದ ಸಮಯದಲ್ಲಿ ಗಿಡಗಳಿಗೆ ಹಾನಿಯಾಗದಂತೆ ಎಚ್ಚರವಹಿಸಿ.
  • ಶಿಲೀಂಧ್ರದ ಬೆಳವಣಿಗೆಯನ್ನು ಕಡಿಮೆ ಮಾಡಲು ಗಿಡದ ಸುತ್ತ ಕಪ್ಪು ಪ್ಲಾಸ್ಟಿಕ್ ಹೊದಿಕೆ ಬಳಸಿ.
  • ಮಣ್ಣಿನ pH ಅನ್ನು ಸರಿ ಹೊಂದಿಸಲು ಸುಣ್ಣವನ್ನು ಬಳಸಿ.
  • ಗಿಡಗಳನ್ನು ಬಲಪಡಿಸಲು ಉತ್ತಮ ರಸಗೊಬ್ಬರವನ್ನು ಒದಗಿಸಿ.
  • ಶಿಲೀಂಧ್ರದ ಬೆಳವಣಿಗೆಯನ್ನು ಕುಗ್ಗಿಸಲು ಮತ್ತು ಸೂರ್ಯನ ಕಿರಣಗಳಿಗೆ ಮಣ್ಣನ್ನು ಒಡ್ಡಲು ಗಿಡದ ಅವಶೇಷಗಳನ್ನು ನೆಲದಲ್ಲಿ 20-30 ಸೆಂ ಮೀ ಆಳದಲ್ಲಿ ಹೂಳಿ.
  • ತಕ್ಕ ಪೂರ್ವಸಿದ್ಧತೆ ಮಾಡಿಕೊಂಡು ಈ ಶಿಲೀಂಧ್ರಕ್ಕೆ ಆಶ್ರಯ ಕೊಡದ ಗಿಡಗಳನ್ನು ಆವರ್ತಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ