ಕಲ್ಲಂಗಡಿ

ಆಸ್ಟರ್ ಯೆಲ್ಲೋ ಫೈಟೋಪ್ಲಾಸ್ಮಾ

Phytoplasma asteris

ಬ್ಯಾಕ್ಟೀರಿಯಾ

5 mins to read

ಸಂಕ್ಷಿಪ್ತವಾಗಿ

  • ಎಲೆಯ ನಾಳಗಳು ಬಣ್ಣಗೆಡುತ್ತಾ ಹೋಗುತ್ತದೆ, ಕೊನೆಗೆ ಇದು ಇಡೀ ಎಲೆಗೆ ಹಬ್ಬುತ್ತದೆ.
  • ಹೂವು ಹಸಿರಾಗುತ್ತದೆ ಹಾಗೂ ರೂಪುಗೆಡುತ್ತದೆ, ಮತ್ತು ಎಲೆಯಂತೆ ಕಾಣುವ ಹೂದಳಗಳು ಬೆಳೆಯುತ್ತವೆ ಹಾಗೂ ಗೊಡ್ಡು ಹೂಗಳು ಮೂಡತೊಡಗುತ್ತವೆ.
  • ಒಟ್ಟಾರೆಯಾಗಿ ಗಿಡದ ಬೇರಿನ ವ್ಯವಸ್ಥೆ ಕುಗ್ಗುತ್ತದೆ ಹಾಗೂ ಗಿಡವು ಕುಬ್ಜವಾಗಿ ಗೋಚರವಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

6 ಬೆಳೆಗಳು

ಕಲ್ಲಂಗಡಿ

ರೋಗಲಕ್ಷಣಗಳು

ರೋಗ ಲಕ್ಷಣಗಳು ಫೈಟೋಪ್ಲಾಸ್ಮಾದ ವರ್ಗ, ಸೋಂಕು ತಗುಲಿದಾಗ ಗಿಡದ ವಯಸ್ಸು, ಗಿಡದ ಪ್ರಭೇದ ಮತ್ತು ಉಷ್ಣಾಂಶ ಹಾಗೂ ತೇವಾಂಶಗಳಂಥ ಪ್ರಾಕೃತಿಕ ಅಂಶಗಳು – ಇವುಗಳನ್ನವಲಂಬಿಸಿ ಬದಲಾಗುತ್ತವೆ. ಕಳೆನಾಶಕದಿಂದಾದ ಹಾನಿಯೆಂದು ಸುಲಭವಾಗಿ ತಪ್ಪು ತಿಳಿಯುವ ಹಾಗಿರುವ ರೋಗಲಕ್ಷಣವು ಸಾಮಾನ್ಯವಾಗಿ ಎಲೆ ನಾಳಗಳು ಬಣ್ಣಗೆಡುವುದರೊಂದಿಗೆ ಪ್ರಾರಂಭವಾಗುತ್ತದೆ. ಕ್ರಮೇಣವಾಗಿ ಕ್ಲೋರೋಸಿಸ್ ಎಲೆಯ ಉಳಿದ ಭಾಗಕ್ಕೂ ಹರಡಿ ಪೂರ್ತಿಯಾಗಿ ಆವರಿಸುತ್ತದೆ. ಕೆಲವು ಗಿಡಗಳಲ್ಲಿ ಎಲೆಯು ಕೆಂಪು ಬಣ್ಣಕ್ಕೆ ತಿರುಗುವುದೂ ಕಂಡುಬಂದಿದೆ. ಹೂವು ರೂಪುಗೆಡುವುದು ಮತ್ತು ಹಸಿರು ಬಣ್ಣಕ್ಕೆ ತಿರುಗುವುದು, ಎಲೆಯಂತೆ ಕಾಣುವ ಹೂದಳಗಳು ಮೂಡುವುದು ಮತ್ತು ಗೊಡ್ಡು ಹೂಗಳು ಕಾಣಿಸಿಕೊಳ್ಳುವುದು – ಇವು ಬೇರೆಯ ಕೆಲವು ಲಕ್ಷಣಗಳು. ಒಟ್ಟಾರೆಯಾಗಿ ಗಿಡದ ಬೇರಿನ ವ್ಯವಸ್ಥೆ ಕುಗ್ಗುತ್ತದೆ ಹಾಗೂ ಗಿಡವು ಕುಬ್ಜವಾಗಿ ಗೋಚರವಾಗುತ್ತದೆ.

Recommendations

ಜೈವಿಕ ನಿಯಂತ್ರಣ

ಮೆಟಾರೈಝಿಯಮ್ ಆನಿಸೋಪ್ಲಿಯೇ, ಬ್ಯೂವೆರಿಯಾ ಬಾಸಿಯಾನಾ, ಪೀಸಿಲೋಮೈಸಿಸ್ ಫೂಮೋಸೊರೋಸಿಯಸ್ ಮತ್ತು ವರ್ಟಿಸಿಲಿಯಮ್ ಲೆಸಾನೈ ಮುಂತಾದ ಪರಾವಲಂಬಿ ಶಿಲೀಂಧ್ರಗಳುಳ್ಳ ಜೈವಿಕ ಕೀಟನಾಶಕಗಳನ್ನು ಬಳಸಿ. ಜಿಗಿ ಹುಳುಗಳ ಸಂಖ್ಯೆಯನ್ನು ಮಿತಿಯಲ್ಲಿಡಲು ಅನಾಗ್ರಸ್ ಅಟೋಮಸ್ ಮುಂತಾದ ಪರಾವಲಂಬಿ ಕೀಟಗಳನ್ನು ಬಳಸಿ. ಲೇಡಿ ಬಗ್ ಮತ್ತು ಲೇಸ್‍ವಿಂಗ್ ರೀತಿಯ ಪ್ರಯೋಜನಕಾರಿ ಕೀಟಗಳು ಜಿಗಿ ಹುಳುಗಳ ಲಾರ್ವಾ ಮತ್ತು ಮೊಟ್ಟೆಗಳನ್ನು ತಿನ್ನುತ್ತವೆ, ಇವುಗಳನ್ನು ಬಳಸಿ. ಕೀಟನಾಶಕ ಮಾರ್ಜಕಗಳು ಕೂಡ ಕೆಲಸ ಮಾಡುತ್ತವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಲ್ಯಾಂಬ್ಡಾ-ಸೈಹಾಲತ್ರಿನ್, ಡೈಮೀಥೋವೇಟ್ ಮತ್ತು ಇಂಡೋಕ್ಸಾಕಾರ್ಬ್ – ಇವುಗಳನ್ನಾಧರಿಸಿದ ಉತ್ಪನ್ನಗಳು ಜಿಗಿ ಹುಳುಗಳ ಮೇಲೆ ಹೆಚ್ಚು ಕೆಲಸ ಮಾಡುವುದರಿಂದ ಸೋಂಕು ಹರಡುವುದನ್ನು ತಡೆಗಟ್ಟುವಲ್ಲಿ ಉಪಯೋಗಕ್ಕೆ ಬರುತ್ತವೆ.

ಅದಕ್ಕೆ ಏನು ಕಾರಣ

ಫೈಟೋಪ್ಲಾಸ್ಮಾ ಆಸ್ಟೆರಿಸ್ ಹೆಸರಿನ ಪರಾವಲಂಬಿ ಬ್ಯಾಕ್ಟೀರಿಯಾವೇ ಈ ರೋಗಕ್ಕೆ ಕಾರಣ. ಇದು ತನ್ನ ಜೀವನಚಕ್ರವನ್ನು ಮುಂದುವರೆಸಲು ಗಿಡದ ನಾಳೀಯ ಅಂಗಾಂಶದ ಮೇಲೆ ಅವಲಂಬಿಸುವ ಪರಾವಲಂಬಿ ಬ್ಯಾಕ್ಟೀರಿಯಾ. ಸೋಂಕು ಗಿಡದಿಂದ ಗಿಡಕ್ಕೆ ಹರಡುವುದು ಹೆಚ್ಚೂ ಕಡಿಮೆ ಕೀಟಗಳ ಮೂಲಕ, ಮುಖ್ಯವಾಗಿ ಎಲೆ ಜಿಗಿ ಹುಳುಗಳ ಮೂಲಕ. ಹೊಲದಲ್ಲಿ ಸಂಚರಿಸಲು ಹಾಗೂ ಆಹಾರ ಪಡೆಯಲು ಅನುಕೂಲಕರವಾದ ಪರಿಸ್ಥಿತಿ ಇದ್ದರೆ ಸೋಂಕು ಸುಲಭವಾಗಿ ಹರಡುತ್ತದೆ. ಉದಾಹರಣೆಗೆ, ಗಾಳಿ ಮತ್ತು ಮಳೆ ಅಥವಾ 15°C ಗಿಂತ ಕಡಿಮೆ ಉಷ್ಣಾಂಶ ಇರುವ ಪರಿಸ್ಥಿತಿಯಲ್ಲಿ ಕೀಟಗಳ ಸಂಚಾರ ಕಡಿಮೆಯಾಗುವುದರಿಂದ ಸೋಂಕು ಹರಡುವುದು ಕೂಡ ತಾತ್ಕಾಲಿಕವಾಗಿ ತಡವಾಗಬಹುದು. ಆ ಪ್ರದೇಶದ ಹವಾಮಾನ ಕೂಡ ಈ ಕೀಟಗಳ ಆಹಾರ ಪದ್ಧತಿಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಹೇರಳ ಮಳೆಯಾಗುವ ಋತುಗಳಲ್ಲಿ ಗಿಡಗಳು ಪುಷ್ಕಳವಾಗಿ ಬೆಳೆದು ಕೀಟಗಳನ್ನು ಆಕರ್ಷಿಸುತ್ತವೆ. ಎಲೆಗಳುದುರುವ ಸಮಯದಲ್ಲಿ ಚಳಿಗಾಲ ಕಳೆಯುವ ಸ್ಥಳಕ್ಕೆ ವಲಸೆ ಹೋಗುವವರೆಗೂ ಕೀಟಗಳು ಈ ಎಲೆಗಳನ್ನು ತಿಂದು ಬದುಕುತ್ತವೆ.


ಮುಂಜಾಗ್ರತಾ ಕ್ರಮಗಳು

  • ಎಲೆ ಜಿಗಿ ಹುಳುಗಳು ಎರಗಿದ ಲಕ್ಷಣಗಳಿವೆಯೇ ಎಂದು ನಿಯಮಿತವಾಗಿ ಪರಿಶೀಲಿಸಿ.
  • ಫೈಟೋಪ್ಲಾಸ್ಮಾದ ಮೂಲವನ್ನು ನಾಶ ಮಾಡಿ ಸೋಂಕು ಹರಡುವುದನ್ನು ತಡೆಯಲು ಸೋಂಕು ತಗುಲಿದ ಗಿಡವನ್ನು ತೆಗೆದುಹಾಕಿ.
  • ಹಸಿರು ಎಲೆ ಮಿಡತೆಗಳನ್ನು ಆಕರ್ಷಿಸಲು ಹಳದಿ ಬಣ್ಣದ ಅಂಟುಬಲೆಗಳನ್ನು ಉಪಯೋಗಿಸಿ.
  • ಲೇಡಿ ಬಗ್, ಕೀಟಾವಲಂಬಿ ಕಣಜಗಳು ಮತ್ತು ಲೇಸ್‍ವಿಂಗ್ ಮುಂತಾದ ಕೀಟಗಳ ಸಂಖ್ಯೆ ಪೋಷಿಸುವ ಉತ್ತಮ ವಾತಾವರಣಕ್ಕೆ ಆದ್ಯತೆ ಕೊಡಿ.
  • ಎಲೆ ಮಿಡತೆಗಳು ಕಳೆಗಳು ಮತ್ತು ದೀರ್ಘಕಾಲಿಕ ಅಲಂಕಾರಿಕ ಗಿಡಗಳಾದ ಥಿಸಲ್, ಡ್ಯಾಂಡೇಲಿಯನ್ ಮತ್ತು ಕ್ಯಾರೆಟ್‌ಗಳಲ್ಲಿ ಚಳಿಗಾಲವನ್ನು ಕಳೆಯಬಹುದಾದ್ದರಿಂದ, ಈ ಸಸ್ಯಗಳನ್ನು ಹೊಲದಲ್ಲಿ ನೆಡುವುದನ್ನು ತಪ್ಪಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ