ಇತರೆ

ಬಿಳಿ ಗ್ರಬ್

Scarabaeidae sp.

ಕೀಟ

5 mins to read

ಸಂಕ್ಷಿಪ್ತವಾಗಿ

  • ಮೇಲಾವರಣವೇ ಬಾಡಿ ಹಳದಿ ಬಣ್ಣಕ್ಕೆ ತಿರುಗುತ್ತದೆ.
  • ಸಸ್ಯಗಳು ಸಾಯುತ್ತವೆ, ಅವುಗಳನ್ನು ಸುಲಭವಾಗಿ ಬುಡಸಮೇತ ಕೀಳಬಹುದು.
  • ಇಳುವರಿಯಲ್ಲಿ ಕಡಿತ.
  • ಪ್ರೌಢ ಕೀಟಗಳು ಗಾಢ ಕಂದು ಬಣ್ಣದಲ್ಲಿದ್ದು, ಸುಮಾರು 20 ಮಿಮೀ ಉದ್ದ ಮತ್ತು 8 ಮಿಮೀ ಅಗಲವಿರುತ್ತವೆ.


ಇತರೆ

ರೋಗಲಕ್ಷಣಗಳು

ಪ್ರೌಢ ಮತ್ತು ಲಾರ್ವಾ ಈ ಎರಡೂ ಬೇರುಗಳನ್ನು ತಿನ್ನುವ ಮೂಲಕ ಸಸ್ಯಗಳು ಅಥವಾ ಮರಗಳಿಗೆ ಹಾನಿಯುಂಟು ಮಾಡುತ್ತವೆ. ಗ್ರಬ್ ಗಳು ಉತ್ತಮವಾದ ಬೇರಿನ ಶಾಖೆಗಳನ್ನು ಮತ್ತು ಗಂಟುಗಳನ್ನು ತಿಂದು ಸಸ್ಯಗಳು ಸೊರಗುವಂತೆ ಮಾಡಿ ಮೇಲಾವರಣವು ಹಳದಿಯಾಗುವಂತೆ ಮಾಡುತ್ತವೆ. ಕಡಲೆಕಾಯಿಗಳಲ್ಲಿ, ಬೀಜಕೋಶಗಳಿಗೂ ದಾಳಿಯಾಗಿ ಅವು ಹಾನಿಯಾಗಬಹುದು. ಸೋಂಕು ತೀವ್ರವಾಗಿದ್ದ ಸಂದರ್ಭದಲ್ಲಿ, ಸಸ್ಯಗಳು ಕ್ರಮೇಣ ಸಾಯುತ್ತವೆ ಮತ್ತು ಅವುಗಳನ್ನು ಸುಲಭವಾಗಿ ಬುಡಸಮೇತ ಕೀಳಬಹುದು. ಸೋಂಕಾಗಿದ್ದರೂ ಸಹ, ಸಸ್ಯಗಳು ಸಾಮಾನ್ಯವಾಗಿ ಹಾನಿಯ ಲಕ್ಷಣಗಳನ್ನು ತಕ್ಷಣವೇ ತೋರಿಸುವುದಿಲ್ಲ. ಆದಾಗ್ಯೂ, ದೀರ್ಘಾವಧಿಯಲ್ಲಿ, ಅವುಗಳ ಜೀವಿತಾವಧಿ ಕಡಿಮೆಯಾಗುತ್ತದೆ ಮತ್ತು ಇಳುವರಿಯು ಸತತವಾಗಿ ಕಡಿಮೆಯಾಗುತ್ತದೆ. ವಾರ್ಷಿಕ ಸಸ್ಯಗಳಲ್ಲಿ, ಸಸ್ಯಗಳ ಹಠಾತ್ ಬಾಡುವಿಕೆಯು ಮೊದಲ ಲಕ್ಷಣವಾಗಿದೆ, ನಂತರ ಅಕಾಲಿಕ ಎಲೆಗಳಚುವಿಕೆ ಕಂಡುಬರುತ್ತದೆ. ಬಾಧಿತ ಸಸ್ಯಗಳು ಹಳದಿಯಾಗಿರುತ್ತವೆ ಮತ್ತು ಬಾಗಿರುತ್ತವೆ ಮತ್ತು ತೇಪೆಗಳಾಗಿ ಸಾಯುತ್ತವೆ.

Recommendations

ಜೈವಿಕ ನಿಯಂತ್ರಣ

ಬೀಜ ಚಿಕಿತ್ಸೆಯಾಗಿ ಸೋಲೋನಮ್ ಸುರಟನ್ಸ್ ಅಥವಾ ನೀಮ್ ಎಲೆಗಳ ಸಾರಗಳನ್ನು ಬಳಸಿ. ಪ್ರಯೋಜನಕಾರಿಯಾದ ನೆಮಟೋಡ್ಗಳ (ಉದಾಹರಣೆಗೆ, ಹೆಟೆಟರ್ಹ್ಯಾಬಿಡಿಟಿಸ್ ಜಾತಿಯದ್ದು) ದ್ರವದ ಸಸ್ಪೆನ್ಶನ್ ಅನ್ನು ಹೆಕ್ಟೇರಿಗೆ 1.5 ಬಿಲಿಯನ್ ನೆಮಟೊಡ್ಗಳಂತೆ ಋತುವಿನ ಆರಂಭದಲ್ಲಿ ಮಣ್ಣಿನ ಮೇಲೆ ಬಳಸಿ. ನ್ಯೂಕ್ಲಿಯರ್ ಪಾಲಿಹೆಡ್ರೋಸಿಸ್ ವೈರಸ್ ಅಥವಾ ಹಸಿರು ಮಸ್ಕಾರ್ಡಿನ್ ಎಂಬ ಶಿಲೀಂಧ್ರವನ್ನು ಆಧರಿಸಿದ ಜೈವಿಕ ಕೀಟನಾಶಕಗಳು ಸಹ ಕೆಲಸ ಮಾಡಬಹುದು. ಬಿತ್ತನೆಯ ಮುಂಚೆ ಸೀಮೆಎಣ್ಣೆಯೊಂದಿಗೆ (75 ಕೆ.ಜಿ / ಲೀಟರಿಗೆ ) ಕಾಳುಗಳನ್ನು ಸಂಸ್ಕರಿಸಿ. ಬ್ರಾಕೋನಿಡ್ಗಳನ್ನು, ಡ್ರ್ಯಾಗನ್ ಫ್ಲೈಸ್, ಟ್ರೈಕೊಗ್ರಾಮ್ಯಾಡಿಡ್ಗಳನ್ನು ಸಂರಕ್ಷಿಸಿ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಯು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಮಣ್ಣಿನಿಂದ ಹೊರಬಂದ ಮೇಲೆ ಪ್ರೌಢ ಕೀಟಗಳು, ಕೆಲವು ಸಮೀಪದ ಸಸ್ಯಗಳ ಎಲೆಗಳನ್ನು ತಿನ್ನಬಹುದು. ಬಲವಾದ ಕೀಟನಾಶಕಗಳನ್ನು ರಾತ್ರಿ ಈ ಸಸ್ಯಗಳಿಗೆ ಸಿಂಪಡಿಸುವುದರಿಂದ ಮೊಟ್ಟೆ ಇಡುವ ಮೊದಲು ಪ್ರೌಢ ಕೀಟಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಈ ಉದ್ದೇಶಕ್ಕಾಗಿ 1125 ಮಿಲಿ / ಹೆಕ್ಟೇರ್ ನಷ್ಟು ಕ್ಲೋರ್ಪಿರಿಫೊಸ್ 20% ಇಸಿ ಅನ್ನು ಬಳಸಬಹುದು. ಕ್ಲೋರ್ಪಿರಿಫೊಸ್ @ 6.5 ಮಿಲಿ / ಕೆಜಿ ಬೀಜದೊಂದಿಗೆ ಬೀಜ ಸಂಸ್ಕರಣೆಯು ಸಹ ಈ ಕೀಟಗಳ ಬೆಳವಣಿಗೆಯನ್ನು ತಡೆಯಲು ಉತ್ತಮ ಮಾರ್ಗವಾಗಿದೆ.

ಅದಕ್ಕೆ ಏನು ಕಾರಣ

ಹೊಲೊಟ್ರಿಚಿಯಾ ಜಾತಿಯ ಬಿಳಿ ಗ್ರಬ್‌ಗಳ ಗುಂಪಿನಿಂದ ಈ ಲಕ್ಷಣಗಳು ಕಂಡುಬರುತ್ತವೆ. ಪ್ರೌಢಕೀಟಗಳು ಕಪ್ಪು ಕಂದು ಬಣ್ಣದ್ದಾಗಿದ್ದು ಮತ್ತು 20ಮಿಮೀ ಉದ್ದ ಮತ್ತು 8 ಮಿಮೀ ಅಗಲವಿದೆ. ಮಳೆ ಪ್ರಾರಂಭವಾದ ಮೂರು ಅಥವಾ ನಾಲ್ಕು ದಿನಗಳ ನಂತರ, ಅವು ಮಣ್ಣಿನಿಂದ ಹೊರಹೊಮ್ಮುತ್ತವೆ, ಅಲ್ಪ ಅಂತರದಲ್ಲಿ ಹಾರುತ್ತವೆ ಮತ್ತು ಸುತ್ತಮುತ್ತಲಿನ ಸಸ್ಯಗಳನ್ನು ತಿನ್ನುತ್ತವೆ. ತಿಂದ ನಂತರ, ಅವು ಅಡಗಿಕೊಳ್ಳಲು ಮತ್ತು ತಮ್ಮ ಮೊಟ್ಟೆಗಳನ್ನು ಇಡಲು ಮಣ್ಣನ್ನು ಮರುಪ್ರವೇಶಿಸುತ್ತವೆ. ಮಣ್ಣಿನಲ್ಲಿ 5-8 ಸೆಂ.ಮೀ ಆಳದಲ್ಲಿ 20-80 ಬಿಳಿ ಮತ್ತು ದುಂಡಗಿನ ಮೊಟ್ಟೆಗಳನ್ನು ಒಂದೇ ಹೆಣ್ಣು ಇಡುತ್ತದೆ. ಲಾರ್ವಾ ಬಿಳಿ ಹಳದಿ ಬಣ್ಣದ್ದಾಗಿದ್ದು, ಅರೆಪಾರದರ್ಶಕವಾಗಿದೆ ಮತ್ತು ಸುಮಾರು 5 ಮಿಮೀ ಉದ್ದವಾಗಿದೆ. ಸಂಪೂರ್ಣ ಬೆಳೆದ ಗ್ರಬ್ಗಳು ಬಲವಾದ ದವಡೆಯೊಂದಿಗೆ ಗಿಡ್ಡವಾಗಿರುತ್ತವೆ. ಅದರ ತಲೆ ಹಳದಿ ಮತ್ತು ಬಿಳಿ ಬಣ್ಣದ ದೇಹವು ಮಾಂಸ ಭರಿತವಾಗಿದ್ದು 'C' ಆಕಾರದಲ್ಲಿದೆ. ಅವುಗಳು ಕೆಲವೇ ವಾರಗಳ ಕಾಲ ಸಾವಯವ ಪದಾರ್ಥವನ್ನು ತಿನ್ನುತ್ತವೆ ಮತ್ತು ನಂತರ ಉತ್ತಮ ರೂಟ್ಲೆಟ್ಗಳು ಮತ್ತು ಬೀಜಕೋಶಗಳನ್ನು ತಿನ್ನುತ್ತವೆ. ನೆಲಗಡಲೆ ಜೊತೆಗೆ, ಬಿಳಿ ಗ್ರಬ್ಗಳು ಕಬ್ಬಿನ ಮೇರುಗಳನ್ನು, ಮೆಣಸಿನಕಾಯಿಗಳು, ಹುಲ್ಲು, ಮೆಕ್ಕೆಜೋಳ, ಕೆಂಪು ಧಾನ್ಯ ಅಥವಾ ಸಜ್ಜೆಯ ಬೇರುಗಳನ್ನು ಸಹ ಆಹಾರವಾಗಿ ತಿನ್ನುತ್ತವೆ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಮಾರುಕಟ್ಟೆಯಲ್ಲಿ ಚೇತರಿಸಿಕೊಳ್ಳುವ ಪ್ರಭೇದಗಳನ್ನು ಲಭ್ಯವಿದ್ದಲ್ಲಿ ನೆಡಿ.
  • ಆರಂಭದಲ್ಲಿ ಬಿತ್ತಿದರೆ ಗ್ರಬ್ಬಿನ ಗರಿಷ್ಟ ಹಾನಿಯನ್ನು ತಪ್ಪಿಸಬಹುದು.
  • ಕಡಲೆಕಾಯಿ ಸಸ್ಯಗಳ ನಡುವೆ ಹುಲ್ಲು, ಮೆಕ್ಕೆ ಜೋಳ ಅಥವಾ ಈರುಳ್ಳಿ ಮುಂತಾದ ಟ್ರ್ಯಾಪ್ ಬೀಜಗಳನ್ನು ಬಿತ್ತಿ.
  • ಮಳೆಯ ಆರಂಭದಲ್ಲಿ ಬೆಳಕಿನ ಟ್ರ್ಯಾಪ್ ಗಳನ್ನು ಸ್ಥಾಪಿಸಿ ಮತ್ತು ದಿನಕ್ಕೆ ಜೀರುಂಡೆಗಳ ಸಂಖ್ಯೆಯನ್ನು ಪರಿಶೀಲಿಸಿ.
  • ಮೇಲಾಗಿ ಬೆಳಿಗ್ಗೆ ಗದ್ದೆಯಲ್ಲಿ ಬಿಳಿ ಗ್ರಬ್ ಅನ್ನು ಸಂಗ್ರಹಿಸಿ ಮತ್ತು ನಾಶಮಾಡಿ.
  • ನೈಸರ್ಗಿಕ ಶತ್ರುಗಳನ್ನು ಸಂರಕ್ಷಿಸಲು ಇಟಾಲಿಯನ್ ರೈಗ್ರಾಸ್ ಅಥವಾ ದ್ವಿದಳ ಧಾನ್ಯಗಳಂತಹ ಹಸಿರು ಗೊಬ್ಬರವನ್ನು ಬಳಸಿ.
  • ಬೇರಿನ ರಸಗೊಬ್ಬರವಾಗಿ ಪೊಟ್ಯಾಸಿಯಮ್ ಅನ್ನು ಬೇರಿನ ವ್ಯವಸ್ಥೆ ಬಲಪಡಿಸಲು ಮತ್ತು ಗ್ರಬ್ ಹಾನಿಗೆ ಸಹಿಷ್ಣುತೆಯನ್ನು ಹೆಚ್ಚಿಸಲು ಹಾಕಿ.
  • ನೆಡುವ ಮೊದಲು ಆಯಾ ಋತುವಿನಲ್ಲಿ ಮತ್ತು ವಸಂತಕಾಲದಲ್ಲಿ ಆಳವಾಗಿ ಉಳಬೇಕು.
  • ಎರಡು ವರ್ಷಗಳಿಗೆ ಜಾಗವನ್ನು ಬೀಳು ಬಿಡಿ.
  • ಹೋಸ್ಟ್ ಅಲ್ಲದ ಸಸ್ಯಗಳೊಂದಿಗೆ ಬೆಳೆಗಳನ್ನು ಸರದಿ ಮಾಡಿ(ಭತ್ತ ಅಕ್ಕಿ).

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ