ಈರುಳ್ಳಿ

ಈರುಳ್ಳಿಯ ನೇರಳೆ ಕಲೆ

Alternaria porri

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಹಳೆಯ ಎಲೆಗಳು ಮತ್ತು ಹೂವಿನ ತೊಟ್ಟುಗಳ ಮೇಲೆ ಸಣ್ಣ, ಅನಿಯಮಿತ, ಗುಂಡಿ ಬಿದ್ದಂತಹ ಮತ್ತು ಬಿಳಿ ಬಣ್ಣದ ಕಲೆಗಳು.
  • ಹೆಚ್ಚಿನ ಆರ್ ಹೆಚ್ ನಲ್ಲಿ ಈ ಗಾಯಗಳು ಅಂಡಾಕಾರದ ಕಂದು ಅಥವಾ ನೇರಳೆ ಬಣ್ಣದ ಕಲೆಗಳಾಗಿ ಬೆಳೆಯುತ್ತವೆ.
  • ಮತ್ತು ಅವುಗಳ ಕೇಂದ್ರದಲ್ಲಿ ತೆಳು ಮತ್ತು ಗಾಡ ಬಣ್ಣದ ಕೇಂದ್ರೀಕೃತ ವಲಯಗಳಿರುತ್ತವೆ.
  • ಎಲೆಗಳು ಅಥವಾ ಹೂವಿನ ತೊಟ್ಟು ಬಾಡುತ್ತದೆ ಮತ್ತು ಸಾಯುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು
ಬೆಳ್ಳುಳ್ಳಿ
ಈರುಳ್ಳಿ

ಈರುಳ್ಳಿ

ರೋಗಲಕ್ಷಣಗಳು

ರೋಗಲಕ್ಷಣಗಳು ಮುಖ್ಯವಾಗಿ ಪರಿಸರದ ಸಾಪೇಕ್ಷ ಆರ್ದ್ರತೆ (ಆರ್ ಹೆಚ್) ಮೇಲೆ ಅವಲಂಬಿತವಾಗಿರುತ್ತದೆ. ಸಣ್ಣ, ಅನಿಯಮಿತ, ಗುಳಿ ಬಿದ್ದಂತಹ ಮತ್ತು ಬಿಳಿ ಬಣ್ಣದ ಚುಕ್ಕೆಗಳು ಮೊದಲು ಹಳೆಯ ಎಲೆಗಳು ಮತ್ತು ಹೂವಿನ ತೊಟ್ಟುಗಳಲ್ಲಿ ಕಾಣಿಸಿಕೊಳ್ಳುತ್ತವೆ. ಆರ್ ಹೆಚ್ ಕಡಿಮೆ ಇದ್ದರೆ, ಇವು ಮತ್ತೆ ಬೆಳೆಯುವುದಿಲ್ಲ. ಆದರೆ, ಹೆಚ್ಚಿನ ಆರ್ ಹೆಚ್ ಇದ್ದಾಗ ಈ ಗಾಯಗಳು ಅಂಡಾಕಾರದ ಕಂದು ಅಥವಾ ನೇರಳೆ ಬಣ್ಣದ ಕಲೆಗಳಾಗಿ ಬೆಳೆಯುತ್ತವೆ. ಅವುಗಳ ಕೇಂದ್ರದಲ್ಲಿ ಕೇಂದ್ರೀಕೃತ ತೆಳು ಮತ್ತು ಗಾಢ ವಲಯಗಳಿರುತ್ತವೆ. ಕಾಲಾನಂತರದಲ್ಲಿ, ಈ ಗಾಯಗಳು ಹಲವಾರು ಸೆಂಟಿಮೀಟರ್ ಉದ್ದಕ್ಕೆ ಹರಡಬಹುದು ಮತ್ತು ಹಳದಿ ಬಣ್ಣದ ಅಂಚನ್ನು ಹೊಂದಿರುತ್ತವೆ. ಗಾಯಗಳು ಒಗ್ಗೂಡಿ ಎಲೆ ಅಥವಾ ಹೂವಿನ ತೊಟ್ಟನ್ನು ಸುತ್ತುವರಿಯಬಹುದು ಮತ್ತು ಅವುಗಳ ಬಾಡುವಿಕೆ ಹಾಗು ಸಾವಿಗೆ ಕಾರಣವಾಗಬಹುದು. ಸುಗ್ಗಿಯ ಸಮಯದಲ್ಲಿ ಗಾಯಗೊಂಡರೆ ಗೆಡ್ಡೆಗಳೂ ಮುಖ್ಯವಾಗಿ ಕುತ್ತಿಗೆ ಬಳಿ ಆಕ್ರಮಣಕ್ಕೆ ಒಳಗಾಗಬಹುದು. ಶೇಖರಣೆಯಲ್ಲಿ ಲಕ್ಷಣಗಳು ಗಾಢವಾದ ಹಳದಿ ಬಣ್ಣದಿಂದ ಕೆಂಪು ಬಣ್ಣದ, ಗೆಡ್ಡೆಗಳ ಹೊರ ಅಥವಾ ಒಳ ಪದರಗಳಲ್ಲಿ ಸ್ಪಂಜಿನಂತಹ ಕೊಳೆತವಾಗಿ ಕಾಣಬಹುದು. ಈ ರೋಗ ಈರುಳ್ಳಿ, ಬೆಳ್ಳುಳ್ಳಿ ಮತ್ತು ಲೀಕ್ ಮೇಲೆ ಪರಿಣಾಮ ಬೀರಬಹುದು.

Recommendations

ಜೈವಿಕ ನಿಯಂತ್ರಣ

ಇಲ್ಲಿಯವರೆಗೆ, ಈ ರೋಗಕ್ಕೆ ಯಾವುದೇ ಪರಿಣಾಮಕಾರಿ ಜೈವಿಕ ನಿಯಂತ್ರಣ ಲಭ್ಯವಿಲ್ಲ. ಕ್ಲಾಡೋಸ್ಪೊರಿಯಮ್ ಹರ್ಬರಮ್ ಎಂಬ ವಿರೋಧಿ ಶಿಲೀಂಧ್ರವನ್ನು ವಿವೋದಲ್ಲಿನ ಸಂಪರ್ಕದ ಮೇಲೆ ಆಲ್ಟರ್ನೇರಿಯಾ ಪೊರ್ರಿ ರೋಗಕಾರಕವನ್ನು ತಡೆಯಲು ಬಳಸಲಾಗುತ್ತದೆ. ಇದು ಸೋಂಕನ್ನು 66.6% ರಷ್ಟು ಕಡಿಮೆ ಮಾಡುತ್ತದೆ. ಇತರ ಶಿಲೀಂಧ್ರಗಳು ಕಡಿಮೆ ಪರಿಣಾಮಕಾರಿಯಾಗಿವೆ ಉದಾಹರಣೆಗೆ ಪೆನಿಸಿಲಿಯಮ್ ಎಸ್ ಪಿ. (54%). ಹಲವಾರು ಆ್ಯಂಟೋಗನಿಸ್ಚ್ ಮಿಶ್ರಣವು 79.1% ರಷ್ಟು ರೋಗ ಕಡಿತಕ್ಕೆ ಕಾರಣವಾಗಬಹುದು. ಆದಾಗ್ಯೂ, ಈ ಆವಿಷ್ಕಾರಗಳಲ್ಲಿ ಯಾವುದೇ ವಾಣಿಜ್ಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲಾಗಿಲ್ಲ. ಆಜಾದಿರಾಕ್ಟಾ ಇಂಡಿಕಾ (ಬೇವು) ಮತ್ತು ದತೂರಾ ಸ್ಟ್ರಾಮೋನಿಯಮ್ ( ದತ್ತೂರ) ನ ಜಲ ಸಾರಗಳನ್ನು ನೇರಳೆ ಕಲೆಯ ವಿರುದ್ಧ ಜೈವಿಕ ನಿಯಂತ್ರಣಕ್ಕಾಗಿ ಬಳಸಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಇರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ರಕ್ಷಣಾತ್ಮಕ ಶಿಲೀಂಧ್ರನಾಶಕಗಳನ್ನು ಪುನರಾವರ್ತಿತವಾಗಿ ಬಳಸಿ ಹೆಚ್ಚಿನ ವಾಣಿಜ್ಯ ಈರುಳ್ಳಿ ಬೆಳೆಗಳನ್ನು ನೇರಳೆ ಕಲೆಯಿಂದ ರಕ್ಷಿಸಬೇಕು. ಬೋಸ್ಕಾಲಿಡ್, ಕ್ಲೋರೊಥಲೋನಿಲ್, ಫೆನಾಮಿಡೋನ್ ಮತ್ತು ಮ್ಯಾಂಕೋಜೆಬ್ (ಎಲ್ಲಾ @ 0.20 - 0.25%) ಮುಂತಾದ ಶಿಲೀಂಧ್ರನಾಶಕಗಳನ್ನು ಆಧರಿಸಿದ ದ್ರಾವಣಗಳನ್ನು ಕಸಿ ಮಾಡಿದ ಒಂದು ತಿಂಗಳ ನಂತರ ಹದಿನೈದು ದಿನಗಳ ಮಧ್ಯಂತರದಲ್ಲಿ ಹಾಕುವ ಮೂಲಕ ರೋಗ ತಡೆಗಟ್ಟಬಹುದು. ನೇರಳೆ ಕಲೆಯನ್ನು ನಿಯಂತ್ರಿಸಲು ತಾಮ್ರದ ಶಿಲೀಂಧ್ರನಾಶಕಗಳನ್ನು ಬಳಸಲಾಗುತ್ತದೆ. ಆದರೆ ಅವು ಹೆಚ್ಚು ಪರಿಣಾಮಕಾರಿಯಾಗಿರುವುದಿಲ್ಲ. ಪ್ರತಿರೋಧ ಬೆಳೆಯುವುದನ್ನು ತಪ್ಪಿಸಲು ವಿವಿಧ ಕುಟುಂಬಗಳ ಶಿಲೀಂಧ್ರನಾಶಕಗಳನ್ನು ಪರ್ಯಾಯವಾಗಿ ಬಳಸಿ.

ಅದಕ್ಕೆ ಏನು ಕಾರಣ

ಆಲ್ಟರ್ನೇರಿಯಾ ಪೊರ್ರಿ ಎಂಬ ಶಿಲೀಂಧ್ರದಿಂದ ನೇರಳೆ ಕಲೆ ಉಂಟಾಗುತ್ತದೆ. ಇದು ಚಳಿಗಾಲದಲ್ಲಿ ಸೋಂಕಿತ ಬೆಳೆಯ ಅವಶೇಷಗಳ ಮೇಲೆ ಅಥವಾ ಮಣ್ಣಿನ ಮೇಲ್ಮೈ ಬಳಿ ಉಳಿದುಕೊಳ್ಳುತ್ತವೆ. ವಸಂತ ಋತುವಿನಲ್ಲಿ ಬೆಚ್ಚಗಿನ, ಆರ್ದ್ರ ಪರಿಸ್ಥಿತಿಗಳು ಉಂಟಾಗುವುದರಿಂದ ಇದು ಬೀಜಕಗಳ ಉತ್ಪಾದನೆಯೊಂದಿಗೆ ತನ್ನ ಜೀವನ ಚಕ್ರವನ್ನು ಪುನರಾರಂಭಿಸುತ್ತದೆ. ಗಾಳಿ, ನೀರಾವರಿ ನೀರು ಅಥವಾ ತುಂತುರು ಮಳೆ, ಬೀಜಕಗಳನ್ನು ಆರೋಗ್ಯಕರ ಸಸ್ಯಗಳು ಮತ್ತು ಹೊಲಗಳಿಗೆ ಹರಡುತ್ತದೆ. 21-30ºC ತಾಪಮಾನ ಮತ್ತು 80-90% ಸಾಪೇಕ್ಷ ಆರ್ದ್ರತೆಯು ಅನುಕೂಲಕರ ಪರಿಸ್ಥಿತಿಗಳಾಗಿದ್ದು ಆಗ ಈ ರೋಗ ಸಂಭವಿಸುತ್ತದೆ. ರೋಗದ ಸಂಭವ ಮತ್ತು ರೋಗಲಕ್ಷಣದ ತೀವ್ರತೆಯು ಋತುಮಾನ ಮತ್ತು ಹೊಲದ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿರುತ್ತದೆ. ಇದು ಸ್ಟೆಂಫಿಲಿಯಮ್ ಅಂಗಮಾರಿಯ ಜೊತೆಗೆ ಸಂಭವಿಸಿದಾಗ, ಹಾನಿ ಗಂಭೀರವಾಗಿರುತ್ತದೆ. ನೇರಳೆ ಕಲೆಗೆ ಪ್ರತಿರೋಧ ಮುಖ್ಯವಾಗಿ ಹೊರಪೊರೆಯ ದಪ್ಪದಿಂದಾಗಿ ಉಂಟಾಗುತ್ತದೆ. ಹೊಲದ ಕೆಲಸದ ಸಮಯದಲ್ಲಿ ಅಥವಾ ಮರಳು-ಚಂಡಮಾರುತದ ಸ್ಫೋಟದ ನಂತರ ಆಗುವ ಗಾಯಗಳು ಈ ಪ್ರತಿರೋಧವನ್ನು ಕಡಿಮೆ ಮಾಡಬಹುದು.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲಗಳಿಂದ ಬೀಜಗಳನ್ನು ಬಳಸುವುದನ್ನು ಖಚಿತಪಡಿಸಿಕೊಳ್ಳಿ.
  • ಸಾಧ್ಯವಾದರೆ, ಋತುವಿನ ಆರಂಭದಲ್ಲಿ ಬಿತ್ತನೆ ಮತ್ತು ಕಸಿ ಮಾಡಿ.
  • ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಆರಿಸಿ.
  • ಶಿಲೀಂಧ್ರವನ್ನು ಸೌರ ವಿಕಿರಣಕ್ಕೆ ಒಡ್ಡಲು ಋತುಗಳ ನಡುವೆ 2-3 ಬಾರಿ ಹೊಲವನ್ನು ಉಳುಮೆ ಮಾಡಿ.
  • ನಾಟಿ ಮಾಡುವಾಗ ಸಸ್ಯಗಳ ನಡುವಿನ ಜಾಗ ಹೆಚ್ಚಾಗಿರಲಿ.
  • ಸದೃಢ ಮತ್ತು ಆರೋಗ್ಯಕರ ಸಸ್ಯಗಳನ್ನು ಹೊಂದಲು ಸಾರಜನಕ ಮತ್ತು ರಂಜಕವನ್ನು ರಸಗೊಬ್ಬರದಲ್ಲಿ ಉದಾರವಾಗಿ ಬಳಸಿ.
  • ಹೊಲಗಳ ಸುತ್ತಲೂ ಕಳೆಗಳನ್ನು ನಿಯಂತ್ರಿಸಿ.
  • ಸುಗ್ಗಿಯ ನಂತರ ಉಳಿದಿರುವ ಮತ್ತು ತಾವಾಗೇ ಬೆಳೆದ ಸಸ್ಯಗಳನ್ನು ತೆಗೆದುಹಾಕಿ.
  • ಹೊಲದಲ್ಲಿ ಕೆಲಸ ಮಾಡುವ ಸಮಯದಲ್ಲಿ ಸಸ್ಯಗಳಿಗೆ ಗಾಯವಾಗದಂತೆ ನೋಡಿಕೊಳ್ಳಿ.
  • 2-3 ವರ್ಷಗಳ ಕಾಲ ಬೆಳೆ ಸರದಿ ಮಾಡಿದರೆ ರೋಗಕಾರಕಗಳ ಸಂಖ್ಯೆಯ ಮಟ್ಟ ಹೆಚ್ಚುವುದನ್ನು ತಡೆಯಬಹುದು.
  • ಗೆಡ್ಡೆಗಳನ್ನು 1-3 °C ಮತ್ತು 65-70% ತೇವಾಂಶದಲ್ಲಿ ಚೆನ್ನಾಗಿ ಗಾಳಿಯಾಡುವ ಕೂಲರ್‌ನಲ್ಲಿ ಸಂಗ್ರಹಿಸಿ.
  • ಈರುಳ್ಳಿ ಥ್ರೈಪ್‌ಗಳನ್ನು ನಿಯಂತ್ರಿಸಿ, ಏಕೆಂದರೆ ಅವುಗಳಿಂದ ದುರ್ಬಲಗೊಂಡ ಸಸ್ಯಗಳು ಹೆಚ್ಚಾಗಿ ರೋಗಕ್ಕೆ ಒಳಗಾಗುತ್ತವೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ