ಟೊಮೆಟೊ

ಟೊಮೆಟೊ ರಸೆಟಿಂಗ್

Fruit Deformation

ಇತರೆ

5 mins to read

ಸಂಕ್ಷಿಪ್ತವಾಗಿ

  • ಹಣ್ಣಿನ ಮೇಲೆ ಕೇಂದ್ರೀಕೃತ ಬಿರುಕುಗಳು ಗೋಚರಿಸುತ್ತವೆ ಮತ್ತು ಹೊರಚರ್ಮವು ಬೂದು ಬಣ್ಣವನ್ನು ಹೊಂದಿರುತ್ತದೆ.
  • ಈ ಅಸ್ವಸ್ಥತೆಯು ಮುಖ್ಯವಾಗಿ ನೀರು ಅಥವಾ ತೇವಾಂಶ-ಸಂಬಂಧಿತ ಸಮಸ್ಯೆಗಳಿಂದ ಉಂಟಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಟೊಮೆಟೊ

ರೋಗಲಕ್ಷಣಗಳು

ಹಲವು, ಅತೀ ಸಣ್ಣದಾದ, ಕೂದಲು-ರೀತಿಯ ಬಿರುಕುಗಳು ಟೊಮೆಟೊ ಸಿಪ್ಪೆಯ ಮೇಲೆ ಕಾಣಿಸಿಕೊಳ್ಳುತ್ತವೆ, ಸಾಮಾನ್ಯವಾಗಿ ಇವು ಕೇಂದ್ರೀಕೃತ ಮಾದರಿಯನ್ನು ಅನುಸರಿಸುತ್ತವೆ. ಹೊರಚರ್ಮ ಬೂದು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಬಿರುಕುಗಳು ಕೆಲವೇ ಮಿಲಿಮೀಟರ್ ಉದ್ದವಿರುತ್ತವೆ ಮತ್ತು ಸಾಮಾನ್ಯವಾಗಿ ಪಕ್ವತೆಯ ಪ್ರಾರಂಭದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಕೀಟನಾಶಕಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ತೆರೆದಿಟ್ಟ ಹಣ್ಣುಗಳು ವಿಶೇಷವಾಗಿ ಈ ರೀತಿಯ ಗಾಯಗಳಿಗೆ ತುತ್ತಾಗುವ ಸಾಧ್ಯತೆಗಳಿವೆ. ಕೀಟನಾಶಕವು ಚರ್ಮದ ಸ್ಥಿತಿಸ್ಥಾಪಕತ್ವವನ್ನು ಕಡಿಮೆಮಾಡುತ್ತದೆ ಮತ್ತು ಇದು ಬಿರುಕಿಗೆ ಅನುಕೂಲಕರವಾಗಿರುತ್ತದೆ.

Recommendations

ಜೈವಿಕ ನಿಯಂತ್ರಣ

ಈ ಅಸ್ವಸ್ಥತೆಗೆ ಯಾವುದೇ ಜೈವಿಕ ಚಿಕಿತ್ಸೆಯು ಲಭ್ಯವಿಲ್ಲ. ಇದನ್ನು ಮುಂಜಾಗ್ರತಾ ಕ್ರಮಗಳ ಮೂಲಕ ಮಾತ್ರ ಸರಿಪಡಿಸಬಹುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಈ ರೋಗವನ್ನು ಮುಂಜಾಗ್ರತಾ ಕ್ರಮಗಳ ಮೂಲಕ ಮಾತ್ರ ಸರಿಪಡಿಸಬಹುದು, ಹಾನಿಯನ್ನು ಬದಲಾಯಿಸಲಾಗುವುದಿಲ್ಲ. ಆದಾಗ್ಯೂ, ಈ ಅಸ್ವಸ್ಥತೆಯ ರೋಗಲಕ್ಷಣಗಳನ್ನು ತಡೆಗಟ್ಟಲು ಕೀಟನಾಶಕಗಳ ಅತಿಯಾದ ಬಳಕೆ ಮತ್ತು ಅವುಗಳನ್ನು ಮಿಶ್ರಣ ಮಾಡಿ ಬಳಸುವುದನ್ನು ತಪ್ಪಿಸಿ.

ಅದಕ್ಕೆ ಏನು ಕಾರಣ

ಈ ಪ್ರಾಕೃತಿಕ ಅಸ್ವಸ್ಥತೆಯನ್ನು ಬೆಳವಣಿಗೆ ಬಿರುಕುಗಳೊಂದಿಗೆ ಗೊಂದಲ ಮಾಡಿಕೊಳ್ಳಬಹುದು, ಆದರೆ ರಸೆಟಿಂಗ್ ನಿಂದಾಗಿ ಆದ ಗುರುತುಗಳು ಚಿಕ್ಕದಾಗಿರುತ್ತವೆ, ಸಣ್ಣದಾಗಿರುತ್ತವೆ ಮತ್ತು ಬಾಹ್ಯವಾಗಿರುತ್ತವೆ. ಇದು ಸಾಮಾನ್ಯವಾಗಿ ಆರ್ದ್ರ ಹಸಿರುಮನೆ ಪರಿಸರದಲ್ಲಿ ಮತ್ತು ಮಣ್ಣಿನ ತೇವಾಂಶ ಮತ್ತು ದಿನ/ರಾತ್ರಿ ಉಷ್ಣತೆಯಲ್ಲಿನ ಏರಿಳಿತಗಳೊಂದಿಗೆ ಸಂಬಂಧ ಹೊಂದಿದೆ. ಸೂಕ್ತವಲ್ಲದ ನೀರಿನ ಮಟ್ಟಗಳು (ಬರ, ನೀರು ಹಾಕುವುದು/ಮಳೆಯಲ್ಲಿ ಏರಿಳಿತ, ಪ್ರವಾಹ), ಪೋಷಕಾಂಶಗಳು ಮತ್ತು ಬೆಳಕಿನ ಗಾಢತೆಯಲ್ಲಿ ಅತಿರೇಕ/ಕೊರತೆಯೂ ಕಾರಣವಾಗಬಹುದು. ಅಂತಿಮವಾಗಿ ಕೀಟನಾಶಕಗಳ ತಪ್ಪು ಅಥವಾ ಅತೀ ಹೆಚ್ಚು ಬಳಕೆಯು ಪರಿಸ್ಥಿತಿಯನ್ನು ಉಲ್ಬಣಗೊಳಿಸಬಹುದು. ಹಣ್ಣುಗಳು ವಿಶೇಷವಾಗಿ ಸೂಕ್ಷ್ಮವಾಗಿರುತ್ತವೆ ಏಕೆಂದರೆ ಅವು ತಮ್ಮ ಬೆಳವಣಿಗೆಯ ತುತ್ತ ತುದಿಯಲ್ಲಿರುತ್ತವೆ ಮತ್ತು ನೀರು ಮತ್ತು ಪೋಷಕಾಂಶಗಳಿಗೆ ಹೊಸ ಚಿಗುರುಗಳೊಂದಿಗೆ ಸ್ಪರ್ಧಿಸಬೇಕಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಕ್ರಿಮಿನಾಶಕಗಳ ಚಿಕಿತ್ಸೆಯ ವಿಚಾರಲ್ಲಿ ಜಾಗರೂಕರಾಗಿರಿ ಮತ್ತು ಮಿತಿಮೀರಿದ ಬಳಕೆ ಮಾಡಬೇಡಿ ಮತ್ತು ವಿವಿಧ ಕೀಟನಾಶಕಗಳನ್ನು ಮಿಶ್ರಣ ಮಾಡಿ ಬಳಸಬೇಡಿ.
  • ಹಣ್ಣುಗಳನ್ನು ರಕ್ಷಿಸಲು ನಿಮ್ಮ ಸಸ್ಯಗಳಲ್ಲಿ ಸಾಕಷ್ಟು ಎಲೆಗಳಿವೆ ಎಂದು ಖಚಿತಪಡಿಸಿಕೊಳ್ಳಿ.
  • ಮಣ್ಣನ್ನು ತಂಪಾಗಿರಿಸಲು ಮತ್ತು ಬಾಷ್ಪೀಕರಣವನ್ನು ಕಡಿಮೆ ಮಾಡಲು ಬಿಸಿ ವಾತಾವರಣದಲ್ಲಿ ಸಾಕಷ್ಟು ಹಸಿಗೊಬ್ಬರವನ್ನು ಹಾಕಿ.
  • ಮಣ್ಣಿನ ಉತ್ತಮ ಒಳಚರಂಡಿಗಾಗಿ ಎತ್ತರಿಸಿದ ಮಡಿಗಳನ್ನು ಪರಿಗಣಿಸಿ.
  • ಮಧ್ಯಾಹ್ನದ ಬದಲು ಬೆಳಗ್ಗಿನ ಸಮಯದಲ್ಲಿ ನೀರು ಹಾಯಿಸಿ.
  • ಸಂಪೂರ್ಣ ಸಸ್ಯದ ಮೇಲೆ ತಂಪಾಗುವ ಪರಿಣಾಮವನ್ನು ಹೆಚ್ಚಿಸಲು ನೆರಳು ನೀಡುವ ವಸ್ತುಗಳನ್ನು ಬಳಸಿ.
  • ಹಣ್ಣು ಬಣ್ಣವನ್ನು ತೋರಿಸಿದಾಗ ಟೊಮೆಟೊವನ್ನು ಕಟಾವು ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ