ಟೊಮೆಟೊ

ಗ್ಲೈಫೋಸೇಟ್ ಗಾಯ

Herbicide Shikimic acid pathway inhibitors

ಇತರೆ

5 mins to read

ಸಂಕ್ಷಿಪ್ತವಾಗಿ

  • ಮೋಟಾದ, ಬಣ್ಣ ಮಾಸಿದ ಮತ್ತು ಕೊನೆಗೆ ಕೊಳೆತ ಎಲೆಗಳು.

ಇವುಗಳಲ್ಲಿ ಸಹ ಕಾಣಬಹುದು


ಟೊಮೆಟೊ

ರೋಗಲಕ್ಷಣಗಳು

ಮೊದಲ ಲಕ್ಷಣಗಳಲ್ಲಿ ಚಿಗುರೆಲೆಗಳ ಬುಡದಲ್ಲಿ ಬಿಳಿ/ಹಳದಿ ಬಣ್ಣಕ್ಕೆ ತಿರುಗಿರುತ್ತದೆ. ಎಲೆಗಳು ಸುಕ್ಕುಗಟ್ಟಿ ಸಣ್ಣದಾಗಿ ಕಾಣುತ್ತವೆ ಮತ್ತು ಅಂಚು ಮೇಲ್ಮುಖವಾಗಿ ಬಾಗಿರುತ್ತದೆ. ಹೂವಿನ ಸಂಖ್ಯೆ ಕುಗ್ಗುವುದರಿಂದ ಇಳುವರಿ‌ ನಷ್ಟವಾಗುತ್ತದೆ. ಹಣ್ಣುಗಳು ವಿಕಾರವಾಗಿ ಚಿಕ್ಕದಾಗಿರುತ್ತವೆ ಮತ್ತು ದಟ್ಟ ಕಂದು ಬಣ್ಣದ ಗಾಯದ ಗುರುತು ಇರುತ್ತವೆ. ತೀವ್ರವಾದ ಪ್ರಕರಣಗಳಲ್ಲಿ ಕೊಳೆತ ಗಿಡದ ಮೇಲ್ತುದಿಯಿಂದ ಶುರುವಾಗಿ ಕೆಳಮುಖವಾಗಿ ಮುಂದುವರೆಯುತ್ತದೆ.

Recommendations

ಜೈವಿಕ ನಿಯಂತ್ರಣ

ಲಭ್ಯವಿಲ್ಲ

ರಾಸಾಯನಿಕ ನಿಯಂತ್ರಣ

ಲಭ್ಯವಿಲ್ಲ

ಅದಕ್ಕೆ ಏನು ಕಾರಣ

ಈ ತೊಂದರೆಗೆ ಕಾರಣ ಆಯ್ಕೆಯೇತರ ಗ್ಲೈಫೋಸೇಟ್‌ ಕಳೆನಾಶಕವನ್ನ ಯರ್ರಾಬಿರ್ರಿ ಬಳಸುವುದು. ಇದರಿಂದಾಗಿ ಸಿಂಪಡಣೆ ರೈತನ ಗುರಿ ತಪ್ಪಿ ಪಕ್ಕದ ಹೊಲ ಸೇರುವುದು ಅಥವಾ ಬಹುಪಯೋಗಿ ಕೀಟನಾಶಕ ಸಿಂಪಡಣೆ ಯಂತ್ರದಲ್ಲಿ ಉಳಿದಿರುವ ಗ್ಲೈಫೋಸೇಟ್ ಬೇರೆ ಪ್ರಬೇಧದ ಗಿಡಗಳ ಮೇಲೆ ಬಿದ್ದು ಅವುಗಳ ಮೇಲೆ ಪರಿಣಾಮ ಬೀರಬಹುದು. ಎಲೆಗಳ ಸುತ್ತ ಚಿಮ್ಮುವ ಕಳೆನಾಶಕ ಇಡೀ ಗಿಡ ಪೂರ್ತಿ ಆವರಿಸುತ್ತದೆ. ಗಿಡಗಳ ಹೊಸ ಬೆಳವಣಿಗೆಗೆ ಅವಶ್ಯಕವಾದ ಅಮಿಮೋ ಆ್ಯಸಿಡ್ ಉತ್ಪಾದನೆಗೆ ಬೇಕಾದ ರಸಾಯನಿಕದ ಜೊತೆಗೆ ಇದು ಮಧ್ಯಬರುವುದರಿಂದ ಗಿಡಗಳು ಸಾವನ್ನಪ್ಪುತ್ತವೆ. ಇದರ ಹರಡುವಿಕೆ ಗಾಳಿ ಸೆಳೆತದಿಂದ ಗುರಿ ತಪ್ಪುವುದು, ಸಿಂಪಡಣೆ ಯಂತ್ರ ಕುಲುಷಿತಗೊಂಡಾಗ, ಮಣ್ಣಿನ ಜೊತೆ ಕೊಚ್ಚಿಕೊಂಡು ಬಂದಾಗ, ಚಂಚಲವಾದ, ಅಚಾನಕ್ಕಾದ ಸಿಂಪಡಣೆ ಮುಂತಾದ ರೀತಿಯಿಂದಲೂ ಆಗಬಹುದು. ಎಷ್ಟು ಪ್ರಮಾಣದ ಗ್ಲೈಫೋಸೇಟ್ ಸೇರಿದೆ, ಬೆಳೆಯುತ್ತಿರುವ ಸ್ಥಿತಿಗತಿ, ಪೀಡಿತ ತಳಿ ಮತ್ತು ಬೆಳೆವಣಿಗೆಯ ಹಂತಗಳ ಮೇಲೆ ಎಷ್ಟರ ಮಟ್ಟಿಗೆ ತೊಂದರೆಯಾಗಬಹುದು ಎಂಬುದು ನಿಂತಿದೆ. ತೊಂದರೆ ತುಂಬಾ ದೊಡ್ಡದಾಗಿ ಬೆಲೆಬಾಳುವ ಗಿಡಗಳು ಶಾಶ್ವತವಾಗಿ ಕೈತಪ್ಪುವ ಸಾಧ್ಯತೆ ಇದೆ.


ಮುಂಜಾಗ್ರತಾ ಕ್ರಮಗಳು

  • ಗಿಡಗಳನ್ನ ಆರೋಗ್ಯವಾಗಿಡಲು ಗಿಡಗಳಿಗೆ ನೀರು ಮತ್ತೆ ಗೊಬ್ಬರ ಒದಗಿಸಿ.
  • ಶಿಫಾರಸು ಮಾಡಿದ ಗೊಬ್ಬರಗಳನ್ನ ಸರಿಯಾದ ಪ್ರಮಾಣದಲ್ಲಿ ಬಳಸುವುದರ ಜೊತೆಗೆ ರಸಾಯನಿಕಗಳ ಮೇಲೆ ಬರೆದಿರುವ ಎಲ್ಲಾ ಸೂಚನೆಗಳನ್ನ ಓದಿ ಮತ್ತೆ ಪಾಲಿಸಿ.
  • ಸಿಂಪಡಿಸುವ ಯಂತ್ರದ ಅಳತೆ ನೋಡಿಕೊಳ್ಳಿ ಮತ್ತು ಗಿಡಗಳ ಸುತ್ತ ಕಳೆನಾಶಕ ಸಿಂಪಡಿಸುವಾಗ ಎಚ್ಚರವಾಗಿರಿ.
  • ಶೀತದ, ತೇವದ ವಾತಾವರಣದಲ್ಲಿ ಕಳೆನಾಶಕ ನಿಧಾನವಾಗಿ ಜೀರ್ಣವಾಗುವುದರಿಂದ ಈ ಸಂದರ್ಭದಲ್ಲಿ ಸಿಂಪಡಣೆ ಮಾಡುವುದನ್ನ ತಪ್ಪಿಸಿ.
  • ಗಾಳಿಯ ವೇಗ ನಿಧಾನವಿದ್ದು ಸೆಳವು ಕಮ್ಮಿ ಇರುವ ಸಂದರ್ಭದಲ್ಲಿ ಕಳೆನಾಶಕ ಸಿಂಪಡಿಸಿ.
  • ಕಳೆನಾಶಕ ಸಿಂಪಡಣೆ ಯಂತ್ರದ ಮೂಲಕ ಕೀಟನಾಶಕ ಮತ್ತು ಶಿಲೀಂಧ್ರನಾಶಕಗಳನ್ನ ಸಿಂಪಡಿಸಬೇಡಿ.
  • ಸಾಮಾನ್ಯವಾಗಿ ಲಕ್ಷಣಗಳು ಕಂಡ ನಂತರ ಗಾಯವನ್ನ ಸರಿಪಡಿಸಲು ಆಗುವುದಿಲ್ಲ.
  • ಆದರೆ ಲಕ್ಷಣಗಳು ತೀವ್ರವಾಗಿರದೆ ಗಿಡ ಸತ್ತಿಲ್ಲ ಎಂದಾದರೆ ಹೊಸ ಬೆಳವಣಿಗೆ ಯಥಾ ರೀತಿ ನಡೆಯಬಹುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ