ಆಲೂಗಡ್ಡೆ

ಆಲೂಗೆಡ್ಡೆಯ ಟ್ಯುಬರ್ ಪತಂಗ

Phthorimaea operculella

ಕೀಟ

5 mins to read

ಸಂಕ್ಷಿಪ್ತವಾಗಿ

  • ಪಾರದರ್ಶಕ ಗುಳ್ಳೆಗಳು.
  • ಗೆಡ್ಡೆಗಳ ಮೇಲೆ ತೆಳುವಾದ ಸುರಂಗಗಳು.
  • ತಿರುಳಲ್ಲಿ ಆಳವಾದ ಅನಿಯಮಿತ ಗೂಡುಗಳು.
  • ಲಾರ್ವಾಗಳು ಎಲೆಗಳು, ಕಾಂಡಗಳು, ತೊಟ್ಟುಗಳು ಮತ್ತು ಗೆಡ್ಡೆಗಳ ಮೇಲೆ ದಾಳಿ ಮಾಡುತ್ತವೆ.
  • ಪತಂಗಗಳಿಗೆ ಬೂದು ಬಣ್ಣದ ವಿಸ್ತರಿಸಿದ ದೇಹವಿದ್ದು, ವಿಸ್ತೃತ ಆಂಟೆನಾ, ಕಿರಿದಾದ ಕಂದು ಮುಂದಿನ ರೆಕ್ಕೆಗಳು ಮತ್ತು ತಿಳಿ ಬೂದು ಬಣ್ಣದ ಹಿಂದಿನ ರೆಕ್ಕೆಗಳಿರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

3 ಬೆಳೆಗಳು

ಆಲೂಗಡ್ಡೆ

ರೋಗಲಕ್ಷಣಗಳು

ಈ ಕೀಟವು ವೈವಿಧ್ಯಮಯ ಸೋಲಾನಾಸಿಯಸ್ ಬೆಳೆಗಳನ್ನು ತಿನ್ನುತ್ತದೆ ಆದರೆ ಆಲೂಗಡ್ಡೆಯು ಹೆಚ್ಚು ಅನುಕೂಲಕರವಾಗಿದೆ. ಆಲೂಗಡ್ಡೆ ಎಲೆಗಳು, ಕಾಂಡಗಳು, ತೊಟ್ಟುಗಳು ಮತ್ತು ಗೆಡ್ಡೆಗಳ ಮೇಲೆ (ಗದ್ದೆ ಅಥವಾ ಶೇಖರಣೆಯಲ್ಲಿ) ಲಾರ್ವಾಗಳು ಲಗ್ಗೆಯಿಡುತ್ತವೆ. ಅವು ಆಂತರಿಕ ಎಲೆ ಅಂಗಾಂಶವನ್ನು ಎಪಿಡರ್ಮಿಸ್ ಅನ್ನು ಮುಟ್ಟದೆ ತಿಂದು ಪಾರದರ್ಶಕ ಗುಳ್ಳೆಗಳನ್ನು ರೂಪಿಸುತ್ತವೆ. ಕಾಂಡಗಳು ದುರ್ಬಲವಾಗಬಹುದು ಅಥವಾ ಮುರಿಯಬಹುದು, ಇದು ಸಸ್ಯದ ಪತನಕ್ಕೆ ಕಾರಣವಾಗುತ್ತದೆ. ಲಾರ್ವಾಗಳು ಗೆಡ್ಡೆಯನ್ನು ಅದರ ಮೇಲಿನ ಕಣ್ಣಿನ ಮೂಲಕ ಪ್ರವೇಶಿಸಿ ಮೇಲ್ಮೈಯಲ್ಲಿ ತೆಳ್ಳಗಿನ ಸುರಂಗಗಳನ್ನು ತಯಾರಿಸುತ್ತವೆ ಅಥವಾ ತಿರುಳಿನೊಳಗೆ ಆಳವಾದ ಅನಿಯಮಿತ ಗ್ಯಾಲರಿಗಳನ್ನು ಅಗೆಯುತ್ತವೆ. ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ಕಾಯಿಲೆಗಳಿಗೆ ತೆರೆದಿರುವ ಪ್ರವೇಶ ಬಿಂದುಗಳಲ್ಲಿ ಲಾರ್ವಾ ದ ಹಿಕ್ಕೆಗಳು ಗೋಚರಿಸುತ್ತದೆ.

Recommendations

ಜೈವಿಕ ನಿಯಂತ್ರಣ

ಕಿತ್ತಳೆ ಸಿಪ್ಪೆಯ ಸಾರ ಮತ್ತು ಇತರ ಅನೇಕ ಸಸ್ಯಗಳ ಪೈಕಿ ಪೈಥುರಾನ್ತೋಸ್ ಟಾರ್ಟೊಸಸ್ ಅಥವಾ ಐಫಿಯೊನಾ ಸ್ಕ್ಯಾಬ್ರಾಗಳ ಜಾತಿಯವು ಪತಂಗದ ಸಂತಾನಶಕ್ತಿಯನ್ನು ಕಡಿಮೆಗೊಳಿಸುತ್ತದೆ. ಬ್ರಾಸನ್ ಜೆಲೆಸಿಯೆ, ಕೋಪಿಡೋಸೊಮಾ ಕೊಹ್ಲೆರಿ ಅಥವಾ ಟ್ರೈಕೊಗ್ರಾಮ ಜಾತಿಗಳ ಪ್ಯಾರಸೈಟಾಯಿಡ್ಸ್ ಕಣಜಗಳು ಕೀಟ ಸಂಖ್ಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಿದೆ. ಪರಭಕ್ಷಕಗಳಲ್ಲಿ ಇರುವೆಗಳು ಮತ್ತು ಹೆಣ್ಣು ಪಕ್ಷಿಗಳು ಸೇರಿವೆ. ಗ್ರ್ಯಾನ್ಯುಲೋವೈರಸ್ ಅಥವಾ ಬ್ಯಾಸಿಲಸ್ ತುರಿಂಜಿಯೆನ್ಸಿಸ್ನ ಅನ್ವಯಿಸುವಿಕೆಯು ಹದಿನೈದು ದಿನಗಳೊಳಗೆ 80% ನಷ್ಟು ಮರಣಕ್ಕೆ ಕಾರಣವಾಗಬಹುದು. ಕೆಲವು ದೇಶಗಳಲ್ಲಿ, ಯೂಕಲಿಪ್ಟಸ್ ಅಥವಾ ಲ್ಯಾಂಟಾನಿಯ ಎಲೆಗಳುಳ್ಳ ಚೀಲಗಳನ್ನು ಮುಚ್ಚುವ ಮೂಲಕ ಶೇಖರಣೆಯ ಸಮಯದಲ್ಲಾಗುವ ಹಾನಿಯನ್ನು ಕಡಿಮೆಗೊಳಿಸಬಹುದು.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಆರ್ಗನೋಫಾಸ್ಫೇಟ್ಗಳ ಗುಂಪಿನ ಕೀಟನಾಶಕಗಳನ್ನು ಎಲೆಗಳಲ್ಲಿ ಸಿಂಪಡಿಸಬಹುದಾಗಿದೆ. ಲಾರ್ವಾಗಳ ದಾಳಿಯನ್ನು ತಡೆಗಟ್ಟಲು ಪೈರೆಥ್ರಾಯ್ಡ್ಗಳನ್ನು ನಿವಾರಕಗಳಂತೆ ಬೀಜಗಳಿಗೆ ಹಾಕಬಹುದು.

ಅದಕ್ಕೆ ಏನು ಕಾರಣ

ವಯಸ್ಕ ಪತಂಗಗಳು ಕಪ್ಪು ಚುಕ್ಕೆಯಿಂದ ಹರಡಿರುವ ಕಿರಿದಾದ ಕಂದು ಬಣ್ಣಗಳು ಮತ್ತು ಉದ್ದನೆಯ ಅಂಚುಗಳೊಂದಿಗೆ ತಿಳಿ ಬೂದು ಬಣ್ಣದ ಹಿಂಬದಿಯ ರೆಕ್ಕೆಗಳೊಡನೆ ವಿಸ್ತೃತ ಆಂಟೆನಾಗಳೊಂದಿಗೆ ಬೂದು ಬಣ್ಣದ ವಿಸ್ತರಿಸಿದ ದೇಹವನ್ನು ಹೊಂದಿರುತ್ತವೆ. ಇದು ಹೆಚ್ಚಾಗಿ ನಿಶಾಚರವಾಗಿದೆ ಮತ್ತು ಬೆಳಕಿಗೆ ಆಕರ್ಷಿತವಾಗುತ್ತದೆ. ಮೊಟ್ಟೆಗಳನ್ನು ಒಂಟಿಯಾಗಿ ಅಥವಾ ಗುಂಪಿನಲ್ಲಿ ಎಲೆಗಳ ಮೇಲೆ ಅಥವಾ ಒಣ ಮಣ್ಣಿನಲ್ಲಿ ಹೊರಗಿರುವ ಎಳೆ ಗೆಡ್ಡೆಗಳ ಮೇಲೆ ಹಾಕಲಾಗುತ್ತದೆ. 4 ° C ಗಿಂತ ಕಡಿಮೆ ತಾಪಮಾನದಲ್ಲಿ ದೀರ್ಘಾವಧಿಯವರೆಗೆ ಇರುವಾಗ ಅವುಗಳು ಮೊಟ್ಟೆಯಿಂದ ಹೊರಬರುವುದಿಲ್ಲ . ಮರಿಹುಳುಗಳು ಗಾಢವಾದ ಕಂದು ತಲೆಗಳನ್ನು ಮತ್ತು ತಿಳಿ-ಕಂದು ಗುಲಾಬಿ ದೇಹಗಳನ್ನು ಹೊಂದಿರುತ್ತವೆ. ಅವು ತೊಟ್ಟುಗಳು, ಎಳೆ ಚಿಗುರುಗಳು ಅಥವಾ ಎಲೆಯ ಸಿರೆಗಳು ಮತ್ತು ನಂತರ ಗೆಡ್ಡೆಗಳಲ್ಲಿ ಅನಿಯಮಿತ ಗ್ಯಾಲರಿಗಳನ್ನು ಕೊರೆಯುತ್ತವೆ. 25 ° C ಅವುಗಳ ಜೀವನ ಚಕ್ರಕ್ಕೆ ಗರಿಷ್ಟ ಉಷ್ಣಾಂಶ ಆದರೆ 15 ರಿಂದ 40 ° C ನಡುವಿನ ಸಹಿಷ್ಣುತೆ ಇರುತ್ತದೆ. ಶುಷ್ಕ ಮಣ್ಣಿನಲ್ಲಿನ ಬಿರುಕುಗಳು ಮರಿಹುಳುಗಳ ಉಳಿವಿಗಾಗಿ ಅನುಕೂಲಕರವಾಗಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಸಸ್ಯಗಳಿಂದ ಬೀಜದ ಗೆಡ್ಡೆಗಳನ್ನು ಬಳಸಿ.
  • ನಿರೋಧಕ ಅಥವಾ ಸಹಿಷ್ಣು ಪ್ರಭೇದಗಳನ್ನು ಪರೀಕ್ಷಿಸಿ.
  • ಮಣ್ಣಿನೊಳಗೆ 5 ಸೆಂ.ಮೀ ಅಥವಾ ಹೆಚ್ಚು ಆಳದಲ್ಲಿ ಬಿತ್ತನೆ ಆಲೂಗಡ್ಡೆಗಳನ್ನು ನೆಡಿ.
  • ಅವುಗಳ ಉಪಸ್ಥಿತಿಯನ್ನು ಪರಿಶೀಲಿಸಿ ಮತ್ತು ಬೆಳಕು ಅಥವಾ ಫೆರೋಮೋನ್ ಬಲೆಗಳಿಂದ ಪತಂಗಗಳನ್ನು ಹಿಡಿಯಿರಿ.
  • ಗದ್ದೆ ಮತ್ತು ಅದರ ಸುತ್ತಲೂ ಕಳೆಗಳನ್ನು ಮತ್ತು ತಾನಾಗೇ ಇರುವ ಸಸ್ಯಗಳನ್ನು ನಿಯಂತ್ರಿಸಿ.
  • ಮಣ್ಣಿನ ಬಿರುಕುಗಳನ್ನು ತಪ್ಪಿಸಲು ನಿಯಮಿತವಾಗಿ ಗದ್ದೆಗೆ ನೀರು ಹಾಕಿ.
  • ಪ್ರೌಢತೆಯನ್ನು ತಲುಪಿದಾಗ ಸಾಧ್ಯವಾದಷ್ಟು ಬೇಗ ಕೊಯ್ಲು ಮಾಡಿ.
  • ತಿರಸ್ಕರಿಸಲ್ಪಟ್ಟ ಗೆಡ್ಡೆಗಳ ರಾಶಿಯನ್ನು ಹೂಳಿ ಅಥವಾ ಅವುಗಳನ್ನು ನಾಶಮಾಡಿ.
  • ಸಸ್ಯ ಉಳಿಕೆಗಳನ್ನು ಮತ್ತು ಮಲ್ಚ್ನಿಂದ ಜಾಗವನ್ನು ಸಂಪೂರ್ಣವಾಗಿ ತೆರವುಗೊಳಿಸಿ.
  • ಶೇಖರಣಾ ಚೀಲಗಳು ಮತ್ತು ಸೌಲಭ್ಯಗಳನ್ನು ಕೀಟಗಳಿಂದ ಮುಕ್ತವಾನ್ನಾಗಿರಿಸಿ.
  • 7 ರಿಂದ 10 ಡಿಗ್ರಿ ಸೆಲ್ಶಿಯಸ್ ತಾಪಮಾನದಲ್ಲಿ ಆಲೂಗಡ್ಡೆಯನ್ನು ಶೇಖರಿಸಿಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ