ಇತರೆ

ಅಗಲ ಮಿಟೆ

Polyphagotarsonemus latus

ಹುಳು

5 mins to read

ಸಂಕ್ಷಿಪ್ತವಾಗಿ

  • ಎಲೆಗಳು, ಎಲೆ ಮೊಗ್ಗುಗಳು, ಹೂವಿನ ಮೊಗ್ಗುಗಳು ಮತ್ತು ಹಣ್ಣುಗಳಲ್ಲಿ ವಿರೂಪತೆ ಮತ್ತು ಬಣ್ಣ ಬದಲಾವಣೆ.
  • ಎಲೆಗಳು ಕೆಳಗೆ ದಪ್ಪ ಕಂದು ಕಲೆಗಳು.
  • ಕುಂಠಿತ ಬೆಳವಣಿಗೆ.
  • ಚಿಗುರುಗಳ ಡೈ ಬ್ಯಾಕ್ ಸಂಭವಿಸಬಹುದು.


ಇತರೆ

ರೋಗಲಕ್ಷಣಗಳು

ಹಾನಿಯು ಸಾಮಾನ್ಯವಾಗಿ ಸಸ್ಯನಾಶಕಗಳ ಅತಿಯಾದ ಉಪಯೋಗದಿಂದ ಮತ್ತು ಪೌಷ್ಟಿಕಾಂಶದ ಕೊರತೆಯಿಂದಾಗುವ ಹಾನಿಯನ್ನು ಹೋಲುತ್ತದೆ. ಎಲೆಗಳು ಸುರುಳಿಯಾಗಿ, ದಪ್ಪವಾಗುತ್ತವೆ ಮತ್ತು ಕಂದು ಬಣ್ಣಕ್ಕೆ ತಿರುಗುತ್ತವೆ. ಗಡುಸಾದ ಕಂದು ಬಣ್ಣದ ಪ್ರದೇಶಗಳು ಎಲೆಗಳ ಕೆಳಭಾಗದಲ್ಲಿನ ಮುಖ್ಯ ನಾಳಗಳ ನಡುವೆ ಕಂಡುಬರುತ್ತವೆ. ಹೂವುಗಳು ಅರಳುವುದಿಲ್ಲ ಮತ್ತು ಚಿಗುರು ಎಲೆಗಳು ಸಾಮಾನ್ಯವಾಗಿ ವಿರೂಪಗೊಂಡಿರುತ್ತವೆ. ಇವುಗಳ ಸಂಖ್ಯಾ ಸಾಂದ್ರತೆಯು ಅಧಿಕವಾಗಿದ್ದಾಗ ಕುಂಠಿತಗೊಂಡ ಬೆಳವಣಿಗೆ ಮತ್ತು ಚಿಗುರುಗಳ ಡೈ ಬ್ಯಾಕ್ ಗಮನಿಸಬಹುದು. ಮಿಟೆಗಳು ಮಾಡುವ ಹಾನಿಯಿಂದ ಹಣ್ಣುಗಳು ಬೆಳ್ಳಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಗಡುಸಾದ ಕಂದು ಪ್ರದೇಶಗಳು ಕಂಡುಬರುತ್ತವೆ.

Recommendations

ಜೈವಿಕ ನಿಯಂತ್ರಣ

ಸೋಂಕಾದ ನಂತರ ರೋಗವನ್ನು ನಿಯಂತ್ರಿಸಲು ನಿಯೋಸಿಯುಲಸ್ ಕ್ಯುಕುಮೆರಿಸ್ ಮತ್ತು ಅಂಬಿಲೈಸಿಯಸ್ ಮೊಂಟ್ಡೋರೆನ್ಸಿಸ್ನಂತಹ ಅಗಲ ಮಿಟೆಯ ನೈಸರ್ಗಿಕ ಪರಭಕ್ಷಕಗಳನ್ನು ಬಳಸಿ. ಬೆಳ್ಳುಳ್ಳಿ ಸ್ಪ್ರೇ ಮತ್ತು ಕೀಟನಾಶಕ ಸಾಬೂನುಗಳನ್ನು ಸಹ ಪ್ರಯತ್ನಿಸಿ. ಸಣ್ಣ ಗಿಡಗಳ ಮೇಲೆ ಬಿಸಿ ನೀರಿನ ಚಿಕಿತ್ಸೆಗಳು (43 °C ನಿಂದ 49 °C ಯಲ್ಲಿ 15 ನಿಮಿಷಗಳವರೆಗೆ) ಸಹ ಮಿಟೆ ಸೋಂಕನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಹೆಚ್ಚಿನ ಕೀಟ ಒತ್ತಡದ ಸಂದರ್ಭದಲ್ಲಿ ಮಾತ್ರ ರಾಸಾಯನಿಕಗಳನ್ನು ಬಳಸಿ. ಮಿಟೆ ಕೀಟಗಳನ್ನು ರಾಸಾಯನಿಕ ಚಿಕಿತ್ಸೆಗಳ ಮೂಲಕ ನಿಯಂತ್ರಿಸುವುದು ಬಹಳ ಕಷ್ಟವಾಗುತ್ತದೆ. ಏಕೆಂದರೆ ಮಿಟೆ ತನ್ನ ಸಣ್ಣ ಜೀವನ ಚಕ್ರದ ಕಾರಣದಿಂದ ಪ್ರತಿರೋಧವನ್ನು ಬೆಳೆಸಿಕೊಳ್ಳುವ ಸಾಧ್ಯತೆಯಿದೆ. ಮಿಟೆನಾಶಕಗಳು ನಿಜವಾಗಿಯೂ ಅವಶ್ಯಕವಾಗಿದ್ದರೆ, ಅಬಮೆಕ್ಟಿನ್, ಸ್ಪೈರೋಮೆಸಿಫೆನ್ ಅಥವಾ ಪಿರಿಡಿನ್ ಹೊಂದಿರುವ ಉತ್ಪನ್ನಗಳನ್ನು ಸಿಂಪಡಿಸಿ.

ಅದಕ್ಕೆ ಏನು ಕಾರಣ

ಅಗಲ ಮಿಟೆಗಳು ಎಳೆಯ ಎಲೆಗಳು ಮತ್ತು ಮೊಗ್ಗುಗಳನ್ನು ಚುಚ್ಚಿ ಆ ಗಾಯದಿಂದ ಹೊರಬರುವ ರಸವನ್ನು ಹೀರಿಕೊಳ್ಳುತ್ತವೆ. ಅವುಗಳ ಲಾಲಾರಸದಲ್ಲಿ ಅಂಗಾಂಶ-ವಿರೂಪತೆಗಳನ್ನು ಉಂಟುಮಾಡುವ ಸಸ್ಯ-ಹಾರ್ಮೋನ್-ರೀತಿಯ ವಸ್ತುಗಳಿರುತ್ತವೆ. ಈ ಮಿಟೆಗಳನ್ನು ಕೈ ಮಸೂರವಿಲ್ಲದೆಯೇ ನೋಡುವುದು ಬಹಳ ಕಷ್ಟ, ಇವುಗಳು ತುಂಬಾ ಚಿಕ್ಕದಾಗಿರುತ್ತವೆ. ಪ್ರೌಢ ಹುಳಗಳು ಸುಮಾರು 0.2 ಮಿಮೀ ಉದ್ದವಿರುತ್ತವೆ ಮತ್ತು ಅಂಡಾಕಾರದಲ್ಲಿರುತ್ತವೆ. ಬಣ್ಣ ಹಳದಿ ಮತ್ತು ಹಸಿರಿನ ನಡುವೆ ಬದಲಾಗುತ್ತದೆ. ಪ್ರೌಢ ಹೆಣ್ಣು ಹುಳುಗಳು ದಿನಕ್ಕೆ ಐದು ಮೊಟ್ಟೆಗಳನ್ನು ಎಲೆಗಳ ಕೆಳಭಾಗದಲ್ಲಿ ಅಥವಾ ಹಣ್ಣುಗಳ ಕುಳಿಗಳಲ್ಲಿ ಇಡುತ್ತವೆ. ಎರಡು ಅಥವಾ ಮೂರು ದಿನಗಳಲ್ಲಿ ಲಾರ್ವಾ ಮೊಟ್ಟೆಯೊಡೆದು ಹೊರಬರುತ್ತವೆ. ಕೀಟವನ್ನು ವಾಹಕದಂತೆ ಬಳಸದಿದ್ದರೆ ಅಥವಾ ಗಾಳಿಯ ಮೂಲಕ ಹರಡದಿದ್ದರೆ ಮಿಟೆಗಳ ಹರಡುವಿಕೆ ಬಹಳ ನಿಧಾನವಾಗಿರುತ್ತದೆ. ಹಸಿರುಮನೆಗಳಲ್ಲಿರುವಂತಹ ಬೆಚ್ಚಗಿನ ಆರ್ದ್ರ ಸ್ಥಿತಿಯಲ್ಲಿ ಈ ಜಾತಿಗಳು ಚೆನ್ನಾಗಿ ಬೆಳೆಯುತ್ತವೆ.


ಮುಂಜಾಗ್ರತಾ ಕ್ರಮಗಳು

  • ಸೋಂಕಿತ ಬೆಳೆಗಳ ಹತ್ತಿರ ಗಾಳಿಯ ವಿರುದ್ಧ ದಿಕ್ಕಿನಲ್ಲಿ ಬೆಳೆಗಳನ್ನು ನೆಡಬೇಡಿ.
  • ಸೋಂಕಿತ ಬೆಳೆಗಳ ಪಕ್ಕದಲ್ಲಿ ಆರೋಗ್ಯಕರ ಬೆಳೆಗಳನ್ನು ನೆಡಬೇಡಿ.
  • ಆರೋಗ್ಯಕರ ಸಸ್ಯಗಳಿಗೆ ಸೋಂಕಾಗುವುದನ್ನು ತಡೆಗಟ್ಟಲು ರೋಗಲಕ್ಷಣಗಳನ್ನು ಹೊಂದಿರುವ ಸಸ್ಯಗಳನ್ನು ಮತ್ತು ಅವುಗಳ ಪಕ್ಕದ ಸಸ್ಯಗಳನ್ನು ತೆಗೆದುಹಾಕಿ.
  • ಕ್ರಿಮಿನಾಶಕಗಳ ವಿಪರೀತ ಬಳಕೆಯನ್ನು ಕಡಿಮೆ ಮಾಡುವ ಮೂಲಕ ನೈಸರ್ಗಿಕ ಪರಭಕ್ಷಕಗಳನ್ನು ಬೆಂಬಲಿಸಿ.
  • ಇರುವೆಯ ವಿರುದ್ಧ ಬೆಳೆಗಳಿಗೆ ಬಲೆಗಳನ್ನು ಒದಗಿಸಿ.
  • ಸುಗ್ಗಿಯ ನಂತರ ಸಸ್ಯದ ಉಳಿಕೆಗಳನ್ನು ತೆಗೆದುಹಾಕಿ ಮತ್ತು ನಾಶಮಾಡಿ.
  • ಮತ್ತು ಇತರ ಬೆಳೆಗಳನ್ನು ನೆಡುವುದಕ್ಕೆ ಮುಂಚಿತವಾಗಿ ಕನಿಷ್ಠ ಒಂದು ವಾರದ ಕಾಲ ಕಾಯಿರಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ