ಈರುಳ್ಳಿ

ಕಪ್ಪು ಮೋಲ್ಡ್

Aspergillus niger

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಸಸ್ಯಗಳ ಮೇಲೆ ಕಪ್ಪು, ಮಸಿ ರಾಶಿ ಕಾಣಿಸಿಕೊಳ್ಳುತ್ತದೆ.
  • ನೀರಿನಲ್ಲಿ-ನೆನೆಸಿದ ಪೊರೆಗಳು ಕಾಣುತ್ತವೆ.
  • ನಾಳಗಳ ಉದ್ದಕ್ಕೂ ಗೆರೆಗಳ ರಚನೆ.
  • ಬೀಜ ಮತ್ತು ಕಾಲರ್ ಕೊಳೆತದ ಲಕ್ಷಣಗಳು.

ಇವುಗಳಲ್ಲಿ ಸಹ ಕಾಣಬಹುದು


ಈರುಳ್ಳಿ

ರೋಗಲಕ್ಷಣಗಳು

ಬೀಜಗಳು ಮೊಳಕೆಯೊಡೆಯದೆ ಕೊಳೆಯುತ್ತವೆ ಮತ್ತು ಮೊಳಕೆಯೊಡೆದರೆ, ಕಾಲರ್ ಪ್ರದೇಶವು ನೀರಿನಲ್ಲಿ ನೆನೆಸಿದಂತಹ ಗಾಯಗಳಿಂದ ಕೊಳೆಯುತ್ತದೆ. ಹಾನಿಗೊಳಗಾದ ಸಸ್ಯ ಪ್ರದೇಶಗಳು ನೀರಿನಲ್ಲಿ ನೆನೆಸಿದ ಗಾಯಗಳನ್ನು ಸಹ ತೋರಿಸುತ್ತವೆ. ಪೀಡಿತ ಬೆಳೆಗೆ ಅನುಗುಣವಾಗಿ ರೋಗಲಕ್ಷಣಗಳು ಬದಲಾಗುತ್ತವೆ. ಈರುಳ್ಳಿಯಲ್ಲಿ, ಮೊಳಕೆಯೊಡೆಯುವಿಕೆಯ ಅವಧಿಯಲ್ಲಿ ಸಸಿಗಳು ಕಾಲರ್ ಪ್ರದೇಶದಲ್ಲಿ ಕೊಳೆಯುತ್ತವೆ. ತಿರುಳುಭರಿತ ಗೆಡ್ಡೆಗಳ ಅಂಗಾಂಶದ ನಾಳಗಳ ಉದ್ದಕ್ಕೂ ಸೂಟಿ ಮೋಲ್ಡ್ ಬೆಳೆಯುತ್ತದೆ. ಕಡಲೆಕಾಯಿಯಲ್ಲಿ, ಶಿಲೀಂಧ್ರವು ಕಾಲರ್ ಅಥವಾ ಕ್ರೌನ್ ಕೊಳೆತಕ್ಕೆ ಕಾರಣವಾಗುತ್ತದೆ. ಇದು ಬೇರಿನ ಸುರುಟುವಿಕೆ ಮತ್ತು ಸಸ್ಯದ ಮೇಲಿನ ಭಾಗದ ವಿರೂಪತೆಯಿಂದ ಗುರುತಿಸಲ್ಪಡುತ್ತದೆ. ಬಳ್ಳಿಗಳಲ್ಲಿ, ರೋಗದ ಆರಂಭಿಕ ಲಕ್ಷಣಗಳೆಂದರೆ ಸೋಂಕಿತ ಸ್ಥಳದಲ್ಲಿ ಕೆಂಪು ಬಣ್ಣದ ಸಾರದ ಸೂಜಿಮೊನೆಯಂತಹ ಹನಿಗಳು. ಸುಗ್ಗಿಯ ನಂತರದ ಕೊಳೆಯುವಿಕೆಯು ಬಣ್ಣ, ಗುಣಮಟ್ಟದ ಕ್ಷೀಣತೆ ಮತ್ತು ವಿವಿಧ ಬೆಳೆಗಳ ವಾಣಿಜ್ಯ ಮೌಲ್ಯದ ಕುಸಿತಕ್ಕೆ ಕಾರಣವಾಗುತ್ತದೆ.

Recommendations

ಜೈವಿಕ ನಿಯಂತ್ರಣ

ನಿಮ್ಮ ಮಣ್ಣನ್ನು ಟ್ರೈಕೋಡರ್ಮಾ (ಹಟ್ಟಿ ಗೊಬ್ಬರದಲ್ಲಿ ಸೇರಿಸಿ)ದೊಂದಿಗೆ ತೇವಗೊಳಿಸಿ. ಬೇವಿನ ಕೇಕ್ ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ ಮತ್ತು ಎ. ನೈಗರ್ ಹರಡುವುದನ್ನು ನಿಯಂತ್ರಿಸಲು ಸಹ ಇದನ್ನು ಬಳಸಬಹುದು. ಬೀಜಗಳನ್ನು ನಾಟಿ ಮಾಡುವ ಮೊದಲು 60 ನಿಮಿಷಗಳ ಕಾಲ ಬಿಸಿ ನೀರಿನಿಂದ 60 ° C ಯಲ್ಲಿ ಚಿಕಿತ್ಸೆ ನೀಡಿ. ಫೆನಾಲಿಕ್ ಸಂಯುಕ್ತಗಳ ಉಪಸ್ಥಿತಿಯಿಂದಾಗಿ ಕೆಂಪು ಪದರದ ಎಲೆಗಳನ್ನು ಹೊಂದಿರುವ ಈರುಳ್ಳಿ ಪ್ರಭೇದಗಳು ಶಿಲೀಂಧ್ರ-ವಿರೋಧಿ ಗುಣಗಳನ್ನು ಹೊಂದಿವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಶಿಲೀಂಧ್ರನಾಶಕಗಳ ಅಗತ್ಯವಿದ್ದರೆ, ಮ್ಯಾಂಕೋಜೆಬ್‌ನನ್ನು ಸ್ಥಳೀಯವಾಗಿ ಬಳಸಿ. ಅಥವಾ ಮ್ಯಾಂಕೋಜೆಬ್ ಮತ್ತು ಕಾರ್ಬೆಂಡಜೈನ್‌ನ ಸಂಯೋಜನೆಯನ್ನು ಬಳಸಿ. ಪರ್ಯಾಯವಾಗಿ ತಿರಾಮ್ ಬಳಸಬಹುದು. ಇತರ ಸಾಮಾನ್ಯ ಚಿಕಿತ್ಸೆಗಳಲ್ಲಿ ಟ್ರಯಾಜೋಲ್ ಮತ್ತು ಎಕಿನೊಕಾಂಡಿನ್ ಆಂಟಿಫಂಗಲ್ಸ್ ಸೇರಿವೆ.

ಅದಕ್ಕೆ ಏನು ಕಾರಣ

ಕಪ್ಪು ಮೊಲ್ಡ್ ಒಂದು ಸಾಮಾನ್ಯ ಶಿಲೀಂಧ್ರವಾಗಿದ್ದು ಅದು ವಿವಿಧ ಪಿಷ್ಟದ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕಂಡುಬರುತ್ತದೆ. ಇದು ಆಹಾರ ಹಾಳಾಗಲು ಮತ್ತು ಕೆಡಲು ಕಾರಣವಾಗುತ್ತದೆ. ಆಸ್ಪರ್ಜಿಲಸ್ ನೈಗರ್ ಎಂಬ ಶಿಲೀಂಧ್ರವು ಗಾಳಿ, ಮಣ್ಣು ಮತ್ತು ನೀರಿನಿಂದ ಹರಡುತ್ತದೆ. ಇದು ಸಾಮಾನ್ಯವಾಗಿ ಸ್ಯಾಪ್ರೊಫೈಟ್ ಆಗಿದ್ದು, ಸತ್ತ ಮತ್ತು ಕೊಳೆಯುತ್ತಿರುವ ವಸ್ತುವನ್ನು ಅವಲಂಬಿಸಿ ಬದುಕುವುದು. ಆದರೆ ಆರೋಗ್ಯಕರ ಸಸ್ಯಗಳ ಮೇಲೆ ಸಹ ಬದುಕಬಲ್ಲದು. ಶಿಲೀಂಧ್ರವು ಮೆಡಿಟರೇನಿಯನ್, ಉಷ್ಣವಲಯದ ಮತ್ತು ಉಪ ಉಷ್ಣವಲಯದ ಪ್ರದೇಶಗಳ ಮಣ್ಣಿನಲ್ಲಿ ಸಾಮಾನ್ಯವಾಗಿ ಇರುತ್ತದೆ. 20-40 ° C ಯಲ್ಲಿ ಉತ್ತಮ ಬೆಳವಣಿಗೆ ತೋರುತ್ತದೆ ಮತ್ತು ತಾಪಮಾನವು 37 ° C ನಲ್ಲಿ ಇದ್ದಾಗ ಅತ್ಯುತ್ತಮ ಬೆಳವಣಿಗೆ ತೋರಿಸುತ್ತದೆ. ಅಲ್ಲದೆ, ಹಣ್ಣು ಒಣಗಿಸುವ ಪ್ರಕ್ರಿಯೆಯಲ್ಲಿ, ತೇವಾಂಶವು ಕಡಿಮೆಯಾಗುತ್ತದೆ ಮತ್ತು ಸಕ್ಕರೆಯ ಅಂಶವು ಹೆಚ್ಚಾಗುತ್ತದೆ, ಇದು ಶಿಲೀಂಧ್ರದ ಕ್ಸೆರೋಟಾಲರೆಂಟ್ ಮೋಲ್ಡ್ ಗಳಿಗೆ ಅನುಕೂಲಕರ ಮಾಧ್ಯಮವಾಗಿ ಪರಿಣಮಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ಉತ್ತಮ ಒಳಚರಂಡಿ ಹೊಂದಿರುವ ಭೂಮಿಯನ್ನು ಆರಿಸಿ.
  • ಬೀಜವು ಬೀಜಕಗಳಿಂದ ಮುಕ್ತವಾಗಿದೆ ಮತ್ತು ಕಸಿ ಆರೋಗ್ಯಕರವಾಗಿದೆ ಎಂದು ಖಚಿತಪಡಿಸಿಕೊಳ್ಳಿ.
  • ಕೆಂಪು ಪೊರೆಯ ಎಲೆಗಳನ್ನು ಹೊಂದಿರುವ ಈರುಳ್ಳಿ ಪ್ರಭೇದಗಳಂತಹ ನಿರೋಧಕ ಪ್ರಭೇದಗಳನ್ನು ಬಳಸಿ.
  • ಆರ್ದ್ರ ವಾತಾವರಣದಲ್ಲಿ ಬೆಳೆಗಳನ್ನು ಕೊಯ್ಲು ಮಾಡಬೇಡಿ.
  • ಸಾಗಣೆಯ ಸಮಯದಲ್ಲಿ ಹಾಗು ಗೆಡ್ಡೆಗಳು ಸಂಗ್ರಹದ ಒಳಗೆ ಹೋಗುವಾಗ ಮತ್ತು ಸಂಗ್ರಹದಿಂದ ಹೊರಬರುವಾಗ ಸ್ಥಿರ ತಾಪಮಾನ ಮತ್ತು ಕಡಿಮೆ ಆರ್ದ್ರತೆಯನ್ನು ಕಾಪಾಡಿಕೊಳ್ಳಿ.
  • ಕೊಯ್ಲಿನ ನಂತರ, ಸುಗ್ಗಿಯ ಎಲ್ಲಾ ಅವಶೇಷಗಳನ್ನು ಸಂಗ್ರಹಿಸಿ ಸುಟ್ಟುಹಾಕಿ.
  • ಕೊಯ್ಲಿನ ನಂತರ ಮತ್ತು ಸಂಗ್ರಹಣೆಗೆ ಮತ್ತು ಮಾರಾಟಕ್ಕೆ ಮೊದಲು ಗೆಡ್ಡೆಗಳನ್ನು ಎಚ್ಚರಿಕೆಯಿಂದ ಒಣಗಿಸಿ.
  • ಬಿಸಿ ವಾತಾವರಣದಲ್ಲಿ, ಆರ್ದ್ರತೆಯು 80% ಕ್ಕಿಂತ ಕಡಿಮೆ ಇದೆ ಎಂದು ಖಚಿತಪಡಿಸಿಕೊಳ್ಳಿ.
  • ಅದೇ ಭೂಮಿಯಲ್ಲಿ ಸತತವಾಗಿ ಬೆಳೆದ ಬೆಳೆಗಳು, ರೋಗಕ್ಕೆ ಒಳಗಾಗುವ ಬೆಳೆಗಳು ಮತ್ತು ಅವುಗಳ ಸಂಬಂಧಿ ಬೆಳೆಗಳ ನಡುವೆ 2-3 ವರ್ಷಗಳ ಬೆಳೆ ಸರದಿಯನ್ನುಅನುಸರಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ