ಮೆಕ್ಕೆ ಜೋಳ

ಮೆಕ್ಕೆ ಜೋಳದ ಬುಷೀ ಸ್ಟಂಟ್ ಫೈಟೊಪ್ಲಾಸ್ಮಾ

Phytoplasma asteris

ಬ್ಯಾಕ್ಟೀರಿಯಾ

5 mins to read

ಸಂಕ್ಷಿಪ್ತವಾಗಿ

  • ಎಲೆಯ ಅಂಚುಗಳು ಹಸಿರು ಬಣ್ಣ ಕಳೆದುಕೊಳ್ಳುತ್ತವೆ ಮತ್ತು ಹಳೆಯ ಎಲೆಗಳು ಕೆಂಪು ಬಣ್ಣವನ್ನು ತೋರಿಸುತ್ತವೆ.
  • ಸಸ್ಯಗಳು ಅಸಹಜ ಸಂಖ್ಯೆಯ ಚಿಗುರುಗಳೊಂದಿಗೆ ಕುಂಠಿತ ಬೆಳೆವಣಿಗೆ ತೋರಿಸುವ ಮೂಲಕ ಪೊದೆಯ ರೂಪ ಪಡೆಯುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮೆಕ್ಕೆ ಜೋಳ

ರೋಗಲಕ್ಷಣಗಳು

ರೋಗಲಕ್ಷಣಗಳ ತೀವ್ರತೆ ಮೆಕ್ಕೆ ಜೋಳ ಸಸ್ಯದ ಪ್ರಭೇದ ಮತ್ತು ಸೋಂಕಿನ ಹಂತದ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯವಾಗಿ, ವರ್ತುಲ ಎಲೆಗಳ ಅಂಚುಗಳು ಹಳದಿಯಾಗುವುದು ಮತ್ತು ಹಳೆಯ ಎಲೆಗಳು ಕೆಂಪು ಬಣ್ಣಕ್ಕೆ ತಿರುಗುವುದು ಮೆಕ್ಕೆ ಜೋಳದಲ್ಲಿ ಪಿ. ಆಸ್ಟರಿಸ್ ಸೋಂಕಿನ ಮೊದಲ ಚಿಹ್ನೆಗಳು. ರೋಗವು ಮುಂದುವರೆದಂತೆ ಈ ರೋಗಲಕ್ಷಣಗಳು ತೀವ್ರಗೊಳ್ಳುತ್ತವೆ ಮತ್ತು ಅಂತಿಮವಾಗಿ ಎಲೆಗಳ ಅಂಚು ಸಾಮಾನ್ಯವಾಗಿ ಹರಿದ ಅಥವಾ ಕೊಳೆತಂತಹ ರೂಪ ಪಡೆಯಬಹುದು. ಹೆಚ್ಚುವರಿ ತೆನೆ ಚಿಗುರುಗಳು ಮತ್ತು ಟಿಲ್ಲರ್ ಗಳು ಕಾಣಿಸಿಕೊಳ್ಳುವುದರಿಂದ ಸಸ್ಯವು ಪೊದೆಯಂತೆ ಕಾಣುತ್ತದೆ. ಗೆಣ್ಣುಗಳ ನಡುವೆ ಕಡಿಮೆ ಅಂತರ ಮತ್ತು ಕುಂಠಿತ ಬೆಳವಣಿಗೆ ಸ್ಪಷ್ಟವಾಗಿ ಕಾಣುತ್ತದೆ. ಪುರುಷ ಹೂಗೊಂಚಲುಗಳು ಸಾಮಾನ್ಯವಾಗಿ ರೂಪುಗೊಳ್ಳುವುದಿಲ್ಲ ಅಥವಾ ಬಂಜರಾಗಿರುತ್ತವೆ. ಸಸ್ಯಗಳು ತೆನೆ ಹೊಂದಿರುವುದಿಲ್ಲ ಅಥವಾ ತುಂಬಾ ತೆನೆಗಳನ್ನು ಹೊಂದಿರುತ್ತವೆ. ಆದರೆ, ಅವು ಸ್ವಲ್ಪ ಅಥವಾ ಯಾವುದೇ ಧಾನ್ಯಗಳನ್ನು ಉತ್ಪಾದಿಸುವುದಿಲ್ಲ.

Recommendations

ಜೈವಿಕ ನಿಯಂತ್ರಣ

ಮೆಟಾಹಾರ್ಜಿಯಾಮ್ ಅನಿಸೊಪ್ಲಿಯಾ, ಬೀವೆರಿಯ ಬಾಸ್ಸಿಯಾನಾ, ಪೆಸಿಲೊಮೈಸಸ್ ಫ್ಯೂಮೊಸೊರೋಸಿಯಸ್ ಮತ್ತು ವೆರ್ಟಿಸಿಲಿಯಮ್ ಲೆಕಾನಿಗಳಂತಹ ಪರಾವಲಂಬಿ ಶಿಲೀಂಧ್ರಗಳನ್ನು ಆಧರಿಸಿದ ಜೈವಿಕ ಕೀಟನಾಶಕಗಳನ್ನು ಜಿಗಿ ಹುಳುಗಳ ಸಂಖ್ಯೆಯನ್ನು ನಿಯಂತ್ರಿಸಲು ಬಳಸಬಹುದು. ಅನಾಗ್ರಸ್ ಅಟೊಮಸ್ ನಂತಹ ಪರಾವಲಂಬಿ ಕೀಟಗಳ ಜಾತಿಯನ್ನೂ ಈ ಉದ್ದೇಶಕ್ಕಾಗಿ ಬಳಸಬಹುದಾಗಿದೆ. ಲೇಡಿಬಗ್ ಗಳು ಮತ್ತು ಲೇಸ್ ವಿಂಗ್ ನಂತಹ ಪ್ರಯೋಜನಕಾರಿ ಕೀಟಗಳು ಮೊಟ್ಟೆ ಮತ್ತು ಲಾರ್ವಾ ಹಂತದಲ್ಲಿ ಕೀಟಗಳನ್ನು ವಿಪರೀತವಾಗಿ ತಿನ್ನುತ್ತವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಇರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಸಂಪರ್ಕ ಕೀಟನಾಶಕ ಕಾರ್ಬರಿಲ್ ಅನ್ನು ಆಧರಿಸಿದ ಉತ್ಪನ್ನವು ಎಲೆ ಜಿಗಿ ಹುಳು ಸಂಖ್ಯೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಬಹಳ ಪರಿಣಾಮಕಾರಿಯಾಗಿದೆ. ಮೆಕ್ಕೆ ಜೋಳದ ಸಸ್ಯಗಳು ಸಣ್ಣದಿರುವಾಗ ರೋಗದ ಸಂಭವನೀಯತೆಯನ್ನು ಇದು ಕಡಿಮೆಗೊಳಿಸುತ್ತದೆ. ಆದಾಗ್ಯೂ, ಬಹುತೇಕ ಮೆಕ್ಕೆ ಜೋಳ ಬೆಳೆಯುವ ಪ್ರದೇಶಗಳಲ್ಲಿ, ಈ ಅಭ್ಯಾಸವು ಸಾಮಾನ್ಯವಾಗಿ ಆರ್ಥಿಕವಾಗಿ ಕಾರ್ಯಸಾಧ್ಯವಾಗುವುದಿಲ್ಲ.

ಅದಕ್ಕೆ ಏನು ಕಾರಣ

ಈ ರೋಗಲಕ್ಷಣಗಳು ಬ್ಯಾಕ್ಟೀರಿಯಂ ಫೈಟೋಪ್ಲಾಸ್ಮಾ ಆಸ್ಟರಿಸ್ ನಿಂದ ಉಂಟಾಗುತ್ತವೆ. ಇದು ಮೆಕ್ಕೆ ಜೋಳದ ರೋಗಕಾರಕವಾಗಿದ್ದು, ಮ್ಯಾಕ್ರೋಸ್ಟಲೀಸ್ ಕ್ವಾಡ್ರಿಲಿನೀಟಸ್ ಸೇರಿದಂತೆ ಹಲವಾರು ಎಲೆ ಜಿಗಿ ಹುಳುಗಳಿಂದ ಸ್ವಾಭಾವಿಕವಾಗಿ ಹರಡುತ್ತವೆ. ಇದು ಸೋಂಕಿತ ಸಸ್ಯ ವಸ್ತು (ಸಸಿ ಅಥವಾ ಕಸಿ) ಮೂಲಕ ಹರಡುತ್ತದೆ, ಆದರೆ ಬೀಜಗಳಿಂದ ಅಲ್ಲ. ಈ ಎಲೆ ಜಿಗಿಹುಳುಗಳು ಹಲವು ಆಶ್ರಯದಾತ ಸಸ್ಯಗಳಿಗೆ ರೋಗಕಾರಕಗಳನ್ನು ಹರಡಬಹುದು. ಅವುಗಳಲ್ಲಿ ಒಂದು ಪರಾವಲಂಬಿ "ಡಾಡರ್" (ಕಸ್ಕುಟಾ ಜಾತಿ). ಹೆಚ್ಚಿನ ತಾಪಮಾನವು ರೋಗಲಕ್ಷಣಗಳ ಹದಗೆಡುವಿಕೆಗೆ ಕಾರಣವಾಗುತ್ತದೆ. ಆದರೆ ತಂಪಾದ ವಾತಾವರಣವು ಸಾಮಾನ್ಯವಾಗಿ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ಅಥವಾ ಅತಿ ಕಡಿಮೆ ಪರಿಣಾಮ ಬೀರುತ್ತವೆ. ಆರಂಭಿಕ ಸೋಂಕುಗಳು, ರೋಗಲಕ್ಷಣಗಳ ಮತ್ತು ಇಳುವರಿಗಳ ಮೇಲೆ ಪರಿಣಾಮ ಬೀರುವ ವಿಷಯದಲ್ಲಿ ಅತೀ ಕೆಟ್ಟದಾಗಿರುತ್ತವೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ, ನಿರೋಧಕ ಅಥವಾ ಸಹಿಷ್ಣು ಪ್ರಭೇದಗಳನ್ನು ಬಳಸಿ.
  • ನೆಡುವಿಕೆಗಾಗಿ ಮಾತ್ರ ಪ್ರಮಾಣೀಕೃತ ಮೂಲಗಳಿಂದ ಆರೋಗ್ಯಕರ ಸಸ್ಯ ಸಾಮಗ್ರಿಯನ್ನು ಬಳಸಲು ಮರೆಯದಿರಿ.
  • ವರ್ಷಪೂರ್ತಿ ಮೆಕ್ಕೆ ಜೋಳವನ್ನೇ ನೆಡಬೇಡಿ.
  • ಒಣ ಋತುವಿನಲ್ಲಿ ನೀರಾವರಿ ಅಡಿಯಲ್ಲಿ ಮೆಕ್ಕೆ ಜೋಳ ಹಾಕುವುದನ್ನು ತಪ್ಪಿಸಿ.
  • ರೋಗದ ಚಿಹ್ನೆಗಳಿಗೆ ನಿಯಮಿತವಾಗಿ ಹೊಲದ ಮೇಲ್ವಿಚಾರಣೆ ಮಾಡಿ.
  • ರೋಗಲಕ್ಷಣಗಳು ಗೋಚರಿಸಿದ ತಕ್ಷಣ ಸೋಂಕಿತ ಸಸ್ಯಗಳನ್ನು ತೆಗೆದುಹಾಕಿ.
  • ಹೊಲ ಮತ್ತು ಸುತ್ತಲಿನಲ್ಲಿ ಕಳೆಗಳ ಸಂಪೂರ್ಣ ನಿಯಂತ್ರಣವನ್ನು ಅಭ್ಯಾಸ ಮಾಡಿ.
  • ಕೀಟಗಳ ವಾಹಕಗಳ ಜೀವನಚಕ್ರವನ್ನು ಮುರಿಯಲು ಹಲವಾರು ವಾರಗಳವರೆಗೆ ಅಥವಾ ಕೆಲವು ತಿಂಗಳುಗಳ ಕಾಲ ನೆಲವನ್ನು ಪಾಳು ಬಿಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ