ಮೆಕ್ಕೆ ಜೋಳ

ಗಾಸ್ ವಿಲ್ಟ್

Clavibacter michiganensis

ಬ್ಯಾಕ್ಟೀರಿಯಾ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ನಾಳಗಳಿಗೆ ಸಮಾನಾಂತರವಾಗಿ ಅವುಗಳ ಮೇಲೆ ಅನಿಯಮಿತ ಅಂಚುಗಳಿರುವ ಉದ್ದವಾದ ಹಳದಿ ಕಂದು ಬಣ್ಣದ ಗಾಯಗಳು.
  • ಇವು ಹೆಚ್ಚಾದಂತೆ ಎಲೆಗಳು ಕೊಳೆಯುತ್ತವೆ.
  • ಗಾಯಗಳಲ್ಲಿ ಬ್ಯಾಕ್ಟೀರಿಯಾದ ಒಣಗಿದ ಹೊಳೆಯುವ ಸ್ರಾವ ಹೊರಬರುತ್ತದೆ ಮತ್ತು ಕಪ್ಪು ಬಣ್ಣದ ಕಲೆಗಳು ಕಂಡುಬರುತ್ತವೆ.
  • ಸಸಿಗಳು ಒಣಗಿ ನಿರ್ಜೀವಗೊಳ್ಳುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮೆಕ್ಕೆ ಜೋಳ

ರೋಗಲಕ್ಷಣಗಳು

ಪ್ರಾಥಮಿಕ ಲಕ್ಷಣಗಳೆಂದರೆ ಎಲೆಗಳ ನಾಳಗಳಿಗೆ ಸಮಾನಾಂತರವಾಗಿ ಅವುಗಳ ಮೇಲೆ ಅನಿಯಮಿತ ಅಂಚುಗಳಿರುವ ಉದ್ದವಾದ ಹಳದಿ ಕಂದು ಬಣ್ಣದ ಗಾಯಗಳು. ಕಾಲಾನಂತರದಲ್ಲಿ, ಈ ಗಾಯಗಳು ಎಲೆಗಳು ಕೊಳೆಯುವಂತೆ ಮಾಡಿ, ದೊಡ್ಡ ಪ್ರಮಾಣದಲ್ಲಿ ಮೇಲಾವರಣವನ್ನು ನಿರ್ಜೀವಗೊಳಿಸುತ್ತವೆ ಮತ್ತು ಸಸ್ಯಗಳ ಕಾಂಡಗಳು ಕೊಳೆಯುವಂತೆ ಮಾಡುತ್ತವೆ. ಗಾಯಗಳಲ್ಲಿ ದಪ್ಪಗಿನ, ನೀರು-ತುಂಬಿದ ಕಲೆಗಳು ('ಫ್ರೆಕಲ್ಸ್') ಬೆಳೆಯುತ್ತವೆ. ಎಲೆಯ ಅಂಚುಗಳು ಸಾಮಾನ್ಯವಾಗಿ ನೆಕ್ರೋಟಿಕ್ ಆಗುತ್ತವೆ. ಗಾಯಗಳಲ್ಲಿ ಬ್ಯಾಕ್ಟೀರಿಯಾದ ಒಣಗಿದ ಹೊಳೆಯುವ ಸ್ರಾವ ಸಾಮಾನ್ಯವಾಗಿ ಕಂಡುಬರುತ್ತದೆ. ಕಾಂಡಗಳಿಗೆ ಸೋಂಕಾಗಿರುವ ಸಸ್ಯಗಳಲ್ಲಿ, ಕಿತ್ತಳೆ ಬಣ್ಣದ ನಾಳೀಯ ಕಟ್ಟುಗಳನ್ನು ಕಾಂಡದಲ್ಲಿ ಕಾಣಬಹುದು. ಸಸಿ ಹಂತದಲ್ಲಿ ಸೋಂಕು ಸಂಭವಿಸಿದಲ್ಲಿ, ಅದು ಚಿಕ್ಕ ಸಸ್ಯಗಳಿಗೆ ರೋಗವನ್ನು ಉಂಟುಮಾಡಿ ಅವು ಬಾಡುವಂತೆ ಮಾಡುತ್ತವೆ ಮತ್ತು ಕೆಲವು ಪ್ರದೇಶಗಳಲ್ಲಿ ಸಸಿಗಳು ನಿರ್ಜೀವಗೊಳ್ಳುತ್ತವೆ.

Recommendations

ಜೈವಿಕ ನಿಯಂತ್ರಣ

ಸಧ್ಯಕ್ಕೆ ಕ್ಲಾವಿಬ್ಯಾಕ್ಟರ್ ಮಿಚಿಗನೆನ್ಸಿಸ್ ಗೆ ಜೈವಿಕ ನಿಯಂತ್ರಣ ಆಯ್ಕೆಗಳು ಲಭ್ಯವಿಲ್ಲ. ನಿಮಗೆ ತಿಳಿದಿದ್ದರೆ, ದಯವಿಟ್ಟು ನಮಗೆ ತಿಳಿಸಿ. ಪರಿಣಾಮಕಾರಿ ನಿಯಂತ್ರಣ ಕ್ರಮಗಳು ಕೇವಲ ತಡೆಗಟ್ಟುವ ರೀತಿಯದ್ದಾಗಿವೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಸಧ್ಯಕ್ಕೆ ಕ್ಲಾವಿಬ್ಯಾಕ್ಟರ್ ಮಿಚಿಗನೆನ್ಸಿಸ್ ಗೆ ಯಾವುದೇ ರಾಸಾಯನಿಕ ನಿಯಂತ್ರಣ ಆಯ್ಕೆಗಳು ಲಭ್ಯವಿಲ್ಲ. ನಿಮಗೆ ತಿಳಿದಿದ್ದರೆ, ದಯವಿಟ್ಟು ನಮಗೆ ತಿಳಿಸಿ. ಪರಿಣಾಮಕಾರಿ ನಿಯಂತ್ರಣ ಕ್ರಮಗಳು ಕೇವಲ ತಡೆಗಟ್ಟುವ ರೀತಿಯದ್ದಾಗಿವೆ.

ಅದಕ್ಕೆ ಏನು ಕಾರಣ

ಕ್ಲಾವಿಬ್ಯಾಕ್ಟರ್ ಮಿಚಿಗನೆನ್ಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಈ ಬ್ಯಾಕ್ಟೀರಿಯಾವು ಸೋಂಕಿತ ಜೋಳದ ಉಳಿಕೆಗಳು ಅಥವಾ ಗ್ರೀನ್ ಫಾಕ್ಸ್ಟೇಲ್, ಬಾರ್ನ್ಯಾರ್ಡ್ ಗ್ರಾಸ್ ಮತ್ತು ಷಟರ್ ಕೇನ್ ಸೇರಿದಂತೆ ಇತರ ಆಶ್ರಯದಾತ ಸಸ್ಯಗಳ ಕಸಗಳಲ್ಲಿ ಚಳಿಗಾಲವನ್ನು ಕಳೆಯುತ್ತವೆ. ಈ ಸೋಂಕಿತ ಅಂಗಾಂಶಗಳಿಂದ, ಬ್ಯಾಕ್ಟೀರಿಯಾವು ಮುಖ್ಯವಾಗಿ ಮಳೆ ಹನಿ, ಗಾಳಿಯಲ್ಲಿ ಬರುವ ತುಂತುರು ನೀರಾವರಿಯ ಹನಿಗಳಿಂದ ಬೆಳೆಯುವ ಸಸ್ಯಗಳಿಗೆ ವರ್ಗಾವಣೆಗೊಳ್ಳುತ್ತದೆ. ಪ್ರಾಥಮಿಕವಾಗಿ ಗಾಯಗೊಂಡ ಎಲೆಗಳಿಗೆ ಗಾಸ್ ವಿಲ್ಟ್ ಸೋಂಕಾಗುತ್ತದೆ. ಉದಾಹರಣೆಗೆ, ಆಲಿಕಲ್ಲು, ಮರಳು-ಬ್ಲಾಸ್ಟಿಂಗ್ ಮತ್ತು ಬಲವಾದ ಬಿರುಗಾಳಿಗಳಿಂದಾಗುವ ಗಾಯ. ಈ ರೋಗವು ಎಲೆಗಳನ್ನು ಸೋಂಕಿದ ನಂತರ ಇಡೀ ಸಸ್ಯದಲ್ಲಿ ಹರಡುತ್ತದೆ ಮತ್ತು ಸಸ್ಯದಿಂದ ಸಸ್ಯಕ್ಕೂ ಸಹ ಹರಡಬಹುದು. ರೋಗ ಬೆಳವಣಿಗೆಗೆ ಸೂಕ್ತವಾದ ವಾತಾವರಣವೆಂದರೆ ಬೆಚ್ಚಗಿನ ತಾಪಮಾನಗಳು (> 25 °C). ರೇಷ್ಮೆ ಎಳೆ ಬಂದ ನಂತರ ರೋಗಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಮತ್ತು ಆ ಹಂತದ ನಂತರ ತೀವ್ರತೆಯು ಹೆಚ್ಚಾಗುತ್ತದೆ. ಈ ರೋಗಕ್ಕೆ ಸೂಕ್ತ ಪರಿಸ್ಥಿತಿಗಳೆಂದರೆ, ರೋಗಕ್ಕೆ ಬೇಗನೆ ತುತ್ತಾಗುವ ಮಿಶ್ರತಳಿಗಳನ್ನು ನೆಡುವುದು, ಕಡಿಮೆ ಉಳುಮೆ ಮಾಡುವುದು ಮತ್ತು ಏಕ ಬೇಸಾಯ ಮಾಡುವುದು.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ (ಮಾರುಕಟ್ಟೆಯಲ್ಲಿ ಹಲವಾರು ವಿಧಗಳಿವೆ) ಸಸ್ಯ ನಿರೋಧಕ ಪ್ರಭೇದಗಳನ್ನು ನೆಡಿ.
  • ರೋಗದ ಲಕ್ಷಣಗಳನ್ನು ಗುರುತಿಸಲು ಭೂಮಿಯನ್ನು ಆಗಾಗ್ಗೆ ಪರಿಶೀಲಿಸಿ.
  • ಕೃಷಿಯಲ್ಲಿ ಉಪಯೋಗಿಸುವ ಎಲ್ಲಾ ಸಾಧನಗಳಲ್ಲೂ ನೈರ್ಮಲ್ಯಯ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಿ.
  • ಸಸ್ಯಗಳಿಗೆ ಯಾಂತ್ರಿಕವಾಗಿ ಆಗುವ ಹಾನಿಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.
  • ಸಸ್ಯದ ಉಳಿಕೆಗಳನ್ನು ತೆಗೆದುಹಾಕಿ, ಉದಾಹರಣೆಗೆ ಆಳವಾದ ಉಳುಮೆ ಮಾಡುವ ಮೂಲಕ.
  • ಜೋಳದ ಯಾವುದೇ ಉಳಿದ ಕಸಗಳನ್ನು ಕೊಳೆಸಲು ಪ್ರತಿ ಎರಡನೇ ವರ್ಷಕ್ಕೆ ಸರದಿ ಬೆಳೆ ಮಾಡಿ.
  • ಗ್ರೀನ್ ಫಾಕ್ಸ್ಟೇಲ್, ಬಾರ್ನ್ಯಾರ್ಡ್ ಗ್ರಾಸ್ ಮತ್ತು ಷಟರ್ ಕೇನ್ಗಳಂತಹ ಪರ್ಯಾಯ ಆಶ್ರಯದಾತ ಸಸ್ಯಗಳನ್ನು ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ