ಮೆಕ್ಕೆ ಜೋಳ

ಹೋಲ್ಕಸ್ ಎಲೆ ಚುಕ್ಕೆ

Pseudomonas syringae pv. syringae

ಬ್ಯಾಕ್ಟೀರಿಯಾ

5 mins to read

ಸಂಕ್ಷಿಪ್ತವಾಗಿ

  • ಕೆಳಗಿನ ಎಲೆಗಳ ನಾಳಗಳ ಉದ್ದಕ್ಕೂ ನಿಂಬೆ-ಹಸಿರು ಅರೆಪಾರದರ್ಶಕ ಬಣ್ಣಗಳು ಕಾಣಿಸಿಕೊಳ್ಳುತ್ತವೆ.
  • ಗಾಯಗಳು ಉದ್ದವಾಗಿ ವಿಸ್ತರಿಸುತ್ತವೆ ಮತ್ತು ಒಟ್ಟಿಗೆ ಸೇರಿಕೊಳ್ಳುತ್ತವೆ.
  • ಅವುಗಳ ಮಧ್ಯಭಾಗದಲ್ಲಿ ಕಂದು ಬಣ್ಣದ ಪಟ್ಟೆಗಳು ಒಣಗುತ್ತವೆ ಮತ್ತು ಬಿದ್ದು ಹೋಗುತ್ತವೆ.
  • ಇದರಿಂದ ಎಲೆ ಹರಿದಂತೆ ಕಾಣುತ್ತದೆ.
  • ಸೋಂಕಿತ ಅಂಗಾಂಶಗಳಲ್ಲಿ ಬ್ಯಾಕ್ಟೀರಿಯಾದ ಸ್ರಾವ ಕೆಲವೊಮ್ಮೆ ಕಂಡುಬರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು


ಮೆಕ್ಕೆ ಜೋಳ

ರೋಗಲಕ್ಷಣಗಳು

ಆರಂಭದಲ್ಲಿ ನಿಂಬೆ-ಹಸಿರು ಅಥವಾ ಆಲಿವ್-ಬಣ್ಣದ ಅರೆಪಾರದರ್ಶಕ ತೇಪೆಗಳ ರೂಪದಲ್ಲಿ ಕೆಳಗಿನ ಎಲೆಗಳ ನಾಳಗಳ ಉದ್ದಕ್ಕೂ ಗಾಯಗಳು ಕಾಣಿಸಿಕೊಳ್ಳುತ್ತವೆ. ಅವು ಕ್ರಮೇಣವಾಗಿ ಮೇಲಿನ ಎಲೆಯ ಗೊಂಚಲುಗಳಲ್ಲೂ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಗರಿಷ್ಟ ಹವಾಮಾನದ ಸ್ಥಿತಿಗಳಲ್ಲಿ, ಈ ಗಾಯಗಳು ಉದ್ದವಾಗಿ ಹರಡುತ್ತವೆ ಮತ್ತು ಒಟ್ಟಿಗೆ ಸೇರಿಕೊಳ್ಳುತ್ತವೆ. ರೋಗದ ಆರಂಭಿಕ ಹಂತಗಳಲ್ಲಿ ಸೋಂಕಿತ ಅಂಗಾಂಶಗಳಲ್ಲಿ ಬ್ಯಾಕ್ಟೀರಿಯಾದ ಸ್ರಾವಗಳು ಕೆಲವೊಮ್ಮೆ ಕಾಣಬಹುದಾಗಿದೆ. ಕಾಲಕಳೆದಂತೆ ಗಾಯಗಳ ಮಧ್ಯಭಾಗದಲ್ಲಿ ಕಂದು ಬಣ್ಣದ ಒಣ ಪಟ್ಟಿಗಳು ಬೆಳೆಯುತ್ತವೆ. ನಂತರ ಇವು ಒಣಗಿ ಬಿದ್ದು ಹೋಗುತ್ತವೆ. ಇದರಿಂದ ಎಲೆ ಹರಿದಂತೆ ಕಾಣುತ್ತದೆ. ಕೆಲವು ರೋಗಕ್ಕೆ ಸೂಕ್ಷ್ಮವಾಗಿರುವ ಜೋಳದ ಪ್ರಭೇದಗಳಲ್ಲಿ, ಸುರುಳಿ ಎಲೆಗಳ ಮೇಲೆ ಕ್ಲೋರೋಟಿಕ್ ತೇಪೆ ಮತ್ತು ಸಸ್ಯದ ಮೇಲಿನ ಗೆಣ್ಣುಗಳ ವಿರೂಪತೆಯನ್ನು ಗಮನಿಸಬಹುದು.

Recommendations

ಜೈವಿಕ ನಿಯಂತ್ರಣ

ಇಂದಿನವರೆಗೆ, ಯಾವುದೇ ಪರಿಣಾಮಕಾರಿ ಸಾವಯವ ಚಿಕಿತ್ಸೆ ಲಭ್ಯವಿಲ್ಲ. ಜೋಳದಲ್ಲಿ ಬ್ಯಾಕ್ಚೀರಿಯಲ್ ಚುಕ್ಕೆ ನಿಯಂತ್ರಣಕ್ಕೆ ಇರುವ ಪರ್ಯಾಯ ಮಾರ್ಗಗಳು, ತಡೆಗಟ್ಟುವ ಕ್ರಮಗಳು ಮತ್ತು ಉತ್ತಮ ಕೃಷಿಭೂಮಿ ಪದ್ಧತಿಗಳ ಬಳಕೆಗೆ ಸೀಮಿತವಾಗಿವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ತಡೆಗಟ್ಟುವ ಕ್ರಮಗಳೊಂದಿಗೆ, ಜೈವಿಕ ಚಿಕಿತ್ಸೆಗಳಿರುವ ಸಮಗ್ರ ಕೀಟ ಅಥವಾ ರೋಗ ನಿರ್ವಹಣೆ ಯೋಜಿಸಿ. ಪ್ರಸ್ತುತ, ರಾಸಾಯನಿಕ ಚಿಕಿತ್ಸೆ ತಾಮ್ರ ಅಥವಾ ತಾಮ್ರ ಸಂಯೋಜಿತ ಉತ್ಪನ್ನಗಳಿಗೆ ಸೀಮಿತವಾಗಿದೆ. ಅನೇಕ ದ್ರವೌಷಧಗಳು ಸ್ವಲ್ಪ ಮಾತ್ರ ಪರಿಣಾಮಕಾರಿಯಾಗಿವೆ. ಇದರಿಂದಾಗಿ ಸಾಂಕ್ರಾಮಿಕ ರೋಗವು ಒಮ್ಮೆ ಹರಡಿದ ಮೇಲೆ ಅದನ್ನು ನಿಯಂತ್ರಿಸುವುದು ಹೆಚ್ಚು ಕಷ್ಟವಾಗುತ್ತದೆ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಸಸ್ಯದ ಶಕ್ತಿ, ಜೋಳದ ವಿಧ ಮತ್ತು ಪರಿಸರ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ. ಅನೇಕ ಪರ್ಯಾಯ ಆಶ್ರಯದಾತ ಸಸ್ಯಗಳು ಮತ್ತು ಕಳೆಗಳು (ಹುಲ್ಲುಜೋಳ, ಚಿಕ್ಕಗೋಧಿ, ಕ್ಲೋವರ್) ಮತ್ತು ತಾನೇ ತಾನಾಗಿ ಬೆಳೆದ ಗಿಡಗಳ ಮೇಲೆ ಮಣ್ಣುಗಳಲ್ಲಿರುವ ಬೆಳೆಗಳ ಉಳಿಕೆಗಳಲ್ಲಿ ಈ ಬ್ಯಾಕ್ಟೀರಿಯಾಗಳು ಉಳಿದುಕೊಂಡಿರುತ್ತದೆ. ನೀರಾವರಿ ನೀರು, ಗಾಳಿ ಅಥವಾ ರೋಗಕಾರಕ ತಗಲಿರುವ ಕಾರ್ಮಿಕರು ಮತ್ತು ಉಪಕರಣಗಳಿಂದ ಇದು ಸಸ್ಯಗಳ ನಡುವೆ ಪ್ರಸಾರಣವಾಗುತ್ತದೆ. ನೈಸರ್ಗಿಕ ಬಿರುಕುಗಳು ಅಥವಾ ಗಾಯಗಳ ಮೂಲಕ ಸಸ್ಯಕ್ಕೆ ಸೋಂಕು ತಗುಲುವ ಮುಂಚೆಯೇ ಎಲೆಗಳ ಮೇಲೆ ಬ್ಯಾಕ್ಟೀರಿಯಾ ಹೆಚ್ಚಿನ ಸಂಖ್ಯೆಯಲ್ಲಿ ಅಭಿವೃದ್ದಿ ಹೊಂದುತ್ತದೆ. ಇದು 0 ಮತ್ತು 35 °C ನಡುವಿನ ತಾಪಮಾನವನ್ನು ತಡೆದುಕೊಳ್ಳಬಲ್ಲದು. ಆದರೆ ಇದು 25-30 °C ವ್ಯಾಪ್ತಿಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಆರ್ದ್ರ, ಒದ್ದೆ ವಾತಾವರಣದ ಅವಧಿಯಲ್ಲಿ ರೋಗವು ಅಧಿಕವಾಗಿರುತ್ತದೆ. ಋತುವಿನ ಆರಂಭದಲ್ಲಿ ರೋಗ ತಗುಲಿದರೆ, ಕೆಲ ರೈತರು ಇಡೀ ಬೆಳೆಯನ್ನು ಡಿಸ್ಕಿಂಗ್ ಮೂಲಕ ನಾಶ ಮಾಡುತ್ತಾರೆ.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಸಸ್ಯಗಳಿಂದ ಅಥವಾ ಪ್ರಮಾಣೀಕೃತ ಮೂಲಗಳಿಂದ ಬೀಜ ವಸ್ತುಗಳನ್ನು ಬಳಸಿ.
  • ನಿಮ್ಮ ಮಾರುಕಟ್ಟೆಯಲ್ಲಿ ಲಭ್ಯವಿರುವ ಸಹಿಷ್ಣು ಪ್ರಭೇದಗಳನ್ನು ಆಯ್ಕೆಮಾಡಿ.
  • ರೋಗ ಹರಡುವ ಆರ್ದ್ರ ಹವಾಮಾನ ಪರಿಸ್ಥಿತಿಗಳನ್ನು ತಪ್ಪಿಸಲು ಋತುವಿಗಿಂತ ತಡವಾಗಿ ನೆಡಿ.
  • ಎಲೆಗಳು ತೇವವಾಗಿದ್ದಾಗ ಜಮೀನಿನಲ್ಲಿ ಕೆಲಸ ಮಾಡಬೇಡಿ.
  • ತುಂತುರು ನೀರಾವರಿ ಮಾಡಬೇಡಿ.
  • ಕಳೆಗಳು ಮತ್ತು ಪರ್ಯಾಯ ಆಶ್ರಯದಾತ ಸಸ್ಯಗಳನ್ನು ಜಮೀನಿನಿಂದ ತೆರವುಗೊಳಿಸಿ.
  • ತೋಟಗಳ ಬಳಿ ಸಸ್ಯದ ಉಳಿಕೆಗಳನ್ನು ಬಿಡಬೇಡಿ ಮತ್ತು ಮಿಶ್ರಗೊಬ್ಬರ ಮಾಡಬೇಡಿ.
  • ಹೈ-ಪ್ರೂಫ್ ಆಲ್ಕೊಹಾಲ್ ಅಥವಾ ಬೆಂಕಿಯನ್ನು ಬಳಸಿ ನಿಮ್ಮ ಸಾಧನಗಳನ್ನು ಸೋಂಕು ನಿರೋಧಕಗೊಳಿಸಿ (ಎರಡೂ ಒಟ್ಟಿಗೆಯಲ್ಲ).
  • ಸೋಂಕಿತ ಸಸ್ಯಗಳನ್ನು ತಕ್ಷಣ ತೆಗೆದುಹಾಕಿ ಮತ್ತು ಅವುಗಳ ಉಳಿಕೆಗಳನ್ನು ಸುಟ್ಟುಬಿಡಿ.
  • ಸರದಿ ಬೆಳೆಯನ್ನು ಶಿಫಾರಸು ಮಾಡಲಾಗಿದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ