ಬದನೆ

ಅಗಲ ಮೂಗಿನ ಸೊಂಡಿಲುಕೀಟಗಳು (ವೀವಿಲ್)

Myllocerus sp.

ಕೀಟ

5 mins to read

ಸಂಕ್ಷಿಪ್ತವಾಗಿ

  • ಕಚ್ಚಿದಂತಾಗಿರುವ ಎಲೆಯ ಅಂಚುಗಳು.
  • ಕುಂಠಿತಗೊಂಡ ಸಸ್ಯ ಬೆಳವಣಿಗೆ.
  • ತಿಳಿ ಬೂದು ಪ್ರೌಢ ವೀವಿಲ್‌ಗಳ ರೆಕ್ಕೆಯ ಕವಚ ಮತ್ತು ತಲೆಯ ಮೇಲೆ ಗಾಢ ಬಣ್ಣದ ಮಾದರಿಗಳು.


ಬದನೆ

ರೋಗಲಕ್ಷಣಗಳು

ಹತ್ತಿ ಬೂದು ವೀವಿಲ್ ನ ಮುತ್ತಿಕೊಳ್ಳುವಿಕೆಯ ಮೊದಲ ಗೋಚರ ಲಕ್ಷಣವೆಂದರೆ ಕಚ್ಚಿದಂತಾಗಿರುವ ಎಲೆಯ ಅಂಚುಗಳಾಗಿವೆ. ಪ್ರೌಢ ವೀವಿಲ್‌ಗಳು ಹೊಸ ಸಸ್ಯಗಳ ಅಂಚಿನಲ್ಲಿ ಆಹಾರವನ್ನು ತಿನ್ನುತ್ತಾ ಮತ್ತು ಒಳಮುಖವಾಗಿ ಮುಂದುವರಿಯುತ್ತಾ ಹೋಗುತ್ತವೆ. ತೀವ್ರವಾಗಿ ಸೋಂಕಿತ ಎಲೆಗಳು ಸಂಪೂರ್ಣವಾಗಿ ಉದುರಿಹೋಗಬಹುದು. ಆರೋಗ್ಯಕರ ಸಸ್ಯಗಳು ಕೀಟದ ಆಹಾರ ಚಟುವಟಿಕೆಯ ಹಾನಿಯಿಂದ ಚೇತರಿಸಿಕೊಳ್ಳುತ್ತವೆ, ಆದರೆ ಎಳೆಯ ಸಸಿಗಳು ಹೂಬಿಡುವ ಸಮಯದಲ್ಲಿ ಸಾಯುತ್ತವೆ. ತೀವ್ರವಾದ ಮುತ್ತಿಕೊಳ್ಳುವಿಕೆಯು ಸಸ್ಯಗಳ ಬೆಳವಣಿಗೆಯನ್ನು ನಿರ್ಬಂಧಿಸಬಹುದು. ಬಾಧಿತ ಸಸ್ಯಗಳನ್ನು ಸುಲಭವಾಗಿ ಕೀಳಬಹುದು.

Recommendations

ಜೈವಿಕ ನಿಯಂತ್ರಣ

ನಿಮ್ಮ ಮಣ್ಣನ್ನು 2.5 ಮಿಗ್ರಾಂ/ಲೀಟರ್ ನಷ್ಟು ಬ್ಯಾಸಿಲಸ್ ಥುರಿಂಜಿಯೆನ್ಸಿಸ್ ಎಸ್‌ಎಸ್‌ಪಿ ಟೆನೆಬ್ರಿಯೊನಿಸ್ (ಬಿಟಿಟಿ) ನೊಂದಿಗೆ ತೇವಗೊಳಿಸಿ. ಬ್ಯಾಕ್ಟೀರಿಯಾವನ್ನು ಬೇರು ತುದಿ ವಿಧಾನದಲ್ಲಿಯೂ ಬಳಸಬಹುದು. ನಿಮ್ಮ ಸಸ್ಯದ ಬೇರುಗಳನ್ನು ಬಿಟಿಟಿ ದ್ರಾವಣದಲ್ಲಿ ಅದ್ದಿ ಮತ್ತು ಮಣ್ಣಿನಲ್ಲಿ ಮರು ನೆಡುವ ಮೊದಲು ಅವುಗಳನ್ನು ಗಾಳಿಯಲ್ಲಿ ಒಣಗಿಸಿ. ಲಾರ್ವಾಗಳ ಮರಣವು ಆರ್ದ್ರತೆ ಮತ್ತು ತಾಪಮಾನದ ನಿರ್ವಹಣೆಯ ಮೇಲೆ ಅವಲಂಬಿತವಾಗಿರುತ್ತದೆ. ಕೊನೆಯ ಉಳುಮೆಯ ಸಮಯದಲ್ಲಿ ಹೆಕ್ಟೇರಿಗೆ 500 ಕೆಜಿಯಷ್ಟು ನೀಮ್ ಕೇಕ್ ಹಾಕಿ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಮೊಟ್ಟೆ, ಲಾರ್ವಾಗಳು ಮತ್ತು ಪ್ಯೂಪೆಗಳು ಮಣ್ಣಿನಲ್ಲಿರುವುದರಿಂದ ಹತ್ತಿ ಬೂದು ವೀವಿಲ್ ಅನ್ನು ನಿರ್ವಹಿಸಲು ರಾಸಾಯನಿಕ ಚಿಕಿತ್ಸೆಯು ಸೀಮಿತ ಯಶಸ್ಸನ್ನು ಹೊಂದಿದೆ. ಪ್ರೌಢ ವೀವಿಲ್ಗಳಿಗೆ ಹಾರಲು, ಅಡಗಿಕೊಳ್ಳಲು ಮತ್ತು ಸತ್ತಂತೆ ನಟಿಸುವ ಸಾಮರ್ಥ್ಯವಿರುವುದರಿಂದ ಅವುಗಳನ್ನು ನಿಭಾಯಿಸುವುದು ಕಷ್ಟ. ಪ್ರತಿರೋಧದ ಬೆಳವಣಿಗೆಯೊಂದಿಗೆ ಸಮಸ್ಯೆಗಳು ಉದ್ಭವಿಸುತ್ತವೆ. ಬಿತ್ತನೆ ಮಾಡಿದ 20 ದಿನಗಳ ನಂತರ ನೀವು ಕ್ವಿನಾಲ್ಫೋಸ್ ಅಥವಾ ಕ್ಲೋರ್ಪಿರಿಫೊಸ್, ಡೈಮಿಥೊಯೇಟ್ ಅನ್ನು ಸಿಂಪಡಿಸಬಹುದು ಅಥವಾ ಮರಳಿನೊಂದಿಗೆ ಫೊರೆಟ್ ಅಥವಾ ಕಾರ್ಬರಿಲ್ ಹರಳಿನ ಮಿಶ್ರಣವನ್ನು ಹರಡಬಹುದು.

ಅದಕ್ಕೆ ಏನು ಕಾರಣ

ಹತ್ತಿ ಬೂದು ವೀವಿಲ್ ಆದ, ಮೈಲೋಸೆರಸ್ ಜಾತಿಯ ಪ್ರೌಢ ಕೀಟ ಮತ್ತು ಗ್ರಬ್‌ ಎರಡರಿಂದಲೂ ಈ ರೋಗಲಕ್ಷಣಗಳು ಉಂಟಾಗುತ್ತವೆ. ಪ್ರೌಢ ವೀವಿಲ್ ಗಳು ಸಣ್ಣದಾಗಿ ತಿಳಿ ಬೂದು ಬಣ್ಣದಲ್ಲಿರುತ್ತವೆ, ಅವುಗಳ ರೆಕ್ಕೆಯ ಕವಚ ಮತ್ತು ತಲೆಯ ಮೇಲೆ ಗಾಢ ಬಣ್ಣದ ಮಾದರಿಗಳಿವೆ. ಹೆಣ್ಣು ಕೀಟಗಳು 24 ದಿನಗಳ ಅವಧಿಯಲ್ಲಿ ಮಣ್ಣಿನಲ್ಲಿ ಸರಾಸರಿ 360 ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಯೊಡೆದ ನಂತರ, ಲಾರ್ವಾಗಳು ಮಣ್ಣಿನೊಳಗೆ ಕೊರೆದುಕೊಂಡು ಹೋಗಿ ಸಸ್ಯದ ಬೇರುಗಳನ್ನು ತಿನ್ನುತ್ತವೆ. ನಂತರ ಗ್ರಬ್‌ಗಳು ಮಣ್ಣಿನಲ್ಲಿ ಕೋಶಾವಸ್ಥೆಗೆ ಹೋಗುತ್ತವೆ. ಪ್ರೌಢ ಜೀರುಂಡೆಗಳು ಸಸ್ಯಾವಶೇಷಗಳ ಅಡಿಯಲ್ಲಿ ಅಡಗಿ ಚಳಿಗಾಲದಲ್ಲಿ ಬದುಕುಳಿಯುತ್ತವೆ. ಮೈಲೋಸೆರಸ್ ಜಾತಿಗೆ ಅಲಂಕಾರಿಕ ಸಸ್ಯಗಳಿಂದ ಹಿಡಿದು, ತರಕಾರಿಗಳು, ಹಣ್ಣಿನ ಜಾತಿಗಳವರೆಗೆ ವ್ಯಾಪಕವಾದ ಆತಿಥೇಯ ಸಸ್ಯಗಳಿವೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿರುವ ನಿರೋಧಕ ಪ್ರಭೇದಗಳನ್ನು ಬಳಸಿ.
  • ಮುನ್ನೆಚ್ಚರಿಕೆಗಾಗಿ ಹೊಸ ಎಲೆಗಳು ಬೆಳೆಯಲು ಪ್ರಾರಂಭಿಸಿದಾಗ ಬೆಳೆಗಳ ಮೇಲೆ ನಿಗಾ ಇರಿಸಿ ಮತ್ತು ಪತ್ತೆ ಮಾಡಿ.
  • ಆಗಾಗ್ಗೆ ಹಲಿವೆ ಹೊಡೆಯುವುದರಿಂದ ಗ್ರಬ್ ಗಳಿಗೆ ತೊಂದರೆಯಾಗಬಹುದು ಮತ್ತು ಅವುಗಳು ಸಾಯಬಹುದು.
  • ಕೆಲವು ಮೂಲಗಳು ತೊಗರಿ ಬೇಳೆಯನ್ನು ಬಲೆ ಬೆಳೆಯಾಗಿ ನೆಡುವುದು ಪರಿಣಾಮಕಾರಿ ಎಂದು ವರದಿ ಮಾಡಿವೆ.
  • ಮರ/ ಕೊಂಬೆಗಳನ್ನು ಅಲ್ಲಾಡಿಸಿ ಮತ್ತು ಸಾಬೂನು ನೀರಿನ ಪಾತ್ರೆಯಲ್ಲಿ ಹಾಕುವ ಮೂಲಕ ಪ್ರೌಢ ವೀವಿಲ್‌ಗಳನ್ನು ತೆಗೆದುಹಾಕಬಹುದು.
  • ಪೀಡಿತ ಸಸ್ಯಗಳು/ ಕೊಂಬೆಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ನಾಶಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ