Cicadellidae
ಕೀಟ
ರೋಗಲಕ್ಷಣಗಳು, ಬರದ ಒತ್ತಡ ಅಥವಾ ಪೋಷಕಾಂಶದ ಕೊರತೆಗೆ ಸಸ್ಯದ ಪ್ರತಿಕ್ರಿಯೆಯನ್ನು ಹೋಲುತ್ತವೆ. ಜಿಗಿ ಹುಳುಗಳು ಎಲೆಗಳ ಕೆಳಭಾಗವನ್ನು ತಿನ್ನುತ್ತವೆ. ಗಾಯಗಳು ಸಾಮಾನ್ಯವಾಗಿ ಕೀಟಗಳು ತಿಂದ ಜಾಗಗಳ ಸುತ್ತಲೂ ಅಭಿವೃದ್ಧಿ ಹೊಂದುತ್ತಿರುವ ಕ್ಲೋರೊಟಿಕ್ ಪ್ರದೇಶಗಳೊಂದಿಗೆ ಮತ್ತು ಎಲೆಗಳ ಅಂಚುಗಳು ಸ್ವಲ್ಪ ಸುರುಳಿಯಾಗುವುದರೊಂದಿಗೆ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ, ರೋಗಲಕ್ಷಣಗಳನ್ನು "ಹಾಪರ್ ಬರ್ನ್" ಎಂದು ಕರೆಯಲಾಗುತ್ತದೆ. ನಂತರ, ಕ್ಲೋರೋಟಿಕ್ ಪ್ರದೇಶಗಳು ಎಲೆಯ ಉಳಿದ ಭಾಗಕ್ಕೆ ವಿಸ್ತರಿಸುತ್ತದೆ. ಎಲೆಗಳು ಕೆಳಕ್ಕೆ ಸುರುಳಿಯಾಗಿ ಸುತ್ತಿ ಕೊನೆಗೆ ಕೆಳಗೆ ಉದುರಬಹುದು. ಇದು ಸಸ್ಯದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ ಮತ್ತು ಹಣ್ಣಿನ ಇಳುವರಿಯನ್ನು ಕಡಿಮೆ ಮಾಡುತ್ತದೆ.
ಜೈವಿಕ ನಿಯಂತ್ರಣ ವಿಧಾನವಾಗಿ ಅನಗ್ರಸ್ ಆಟಮಸ್ ನಂತಹ ಪರಾವಲಂಬಿ ಕೀಟಗಳನ್ನು ಬಳಸಿ. ಲೇಡಿಬಗ್ ಗಳು ಮತ್ತು ಲೇಸ್ ವಿಂಗ್ ನಂತಹ ಪ್ರಯೋಜನಕಾರಿ ಕೀಟಗಳು ಮೊಟ್ಟೆ ಮತ್ತು ಲಾರ್ವಾ ಹಂತದಲ್ಲಿರುವ ಕೀಟಗಳನ್ನು ವಿಪರೀತವಾಗಿ ತಿನ್ನುತ್ತವೆ. ತೀವ್ರವಾದ ಸೋಂಕುವಿಕೆಯನ್ನು ನಿಯಂತ್ರಿಸಲು ಮೆಟಾರ್ಜಿಯಮ್ ಅನಿಸೊಪ್ಲಿಯಾ, ಬ್ಯುವೆರಿಯಾ ಬಾಸ್ಸಿನಾ, ಪಿಸಿಲೊಮೈಸಸ್ ಫ್ಯೂಮೊಸೊರೊಸಿಸ್ ಮತ್ತು ವೆರ್ಟಿಸಿಲಿಯಮ್ ಲೆಕಾನಿ ಮುಂತಾದ ಪರಾವಲಂಬಿ ಶಿಲೀಂಧ್ರ ಜೀವಿಗಳನ್ನು ಹೊಂದಿರುವ ಜೈವಿಕ ಕೀಟನಾಶಕಗಳನ್ನು ಬಳಸಿ. ಕೀಟನಾಶಕ ಸೋಪ್ ಗಳು ಸಹ ಕೆಲಸ ಮಾಡುತ್ತವೆ. 0.35ಮಿಲೀ ನಷ್ಟು ಸ್ಪಿನೊಸಾಡ್.
ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಕ್ಲೋರಿಪಿರಿಫೊಸ್ (2.5 ಮಿಲೀ/ ಲೀ), ಫಿಫ್ರೋನಿಲ್ ಅಥವಾ ಫ್ಲೋನಿಕಾಮಿಡ್ ಆಧರಿಸಿದ ನಿರ್ದಿಷ್ಟ ಕೀಟನಾಶಕಗಳೊಂದಿಗೆ ಬೀಜ ಚಿಕಿತ್ಸೆಗಳು ಎಲೆ ಜಿಗಿಹುಳುಗಳ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ತೋರಿಸುತ್ತವೆ. ಅವುಗಳನ್ನು ಮಣ್ಣಿಗೆ ಹಾಕಿದರೆ, ಅವು ಅಲ್ಲಿ ವಾಸಿಸುವ ಕೀಟಗಳನ್ನು ಕೊಲ್ಲುತ್ತವೆ, ಹಾಗೆಯೇ ಅವು ಬೇರುಗಳನ್ನು ಆಕ್ರಮಣ ಮಾಡುವುದನ್ನು ತಡೆಗಟ್ಟುತ್ತವೆ, ಮತ್ತು ಸಸ್ಯಕ್ಕೆ ರಕ್ಷಣೆ ಒದಗಿಸುತ್ತವೆ. ಮುಂಜಾಗ್ರತಾ ಕ್ರಮವಾಗಿ ಬಿತ್ತನೆ ಮಾಡಿದ 30, 45, 60 ದಿನಗಳ ನಂತರ ಇವುಗಳನ್ನು ಸಸ್ಯಗಳಿಗೆ ಹಾಕಿ. ಕ್ಲೋರಂಟ್ರಾನಿಲಿಪೊರೆಲ್ + ಲ್ಯಾಂಬ್ಡ-ಸೈಹಲೋಥ್ರಿನ್ ಅನ್ನು 0.5 ಮಿಲೀ/ಲೀ ನಷ್ಟು, ಲ್ಯಾಂಬ್ಡಾ-ಸೈಹಲೋಥ್ರಿನ್ ಅನ್ನು 1 ಮಿಲೀ ನಷ್ಟು ಅಥವಾ ಸೈಪರ್ಮೆಥ್ರೈನ್ ಅನ್ನು 1 ಲೀಟರ್ ನೀರಿಗೆ 1 ಮಿಲೀ ನಷ್ಟು ಸಸ್ಯದ ನಂತರದ ಹಂತಗಳಲ್ಲಿ 1 ಅಥವಾ 2 ಬಾರಿ ಬಳಸಬಹುದು.
ಅಮ್ರಾಸ್ಕಾ ಎಲೆ ಜಿಗಿ ಹುಳುಗಳ ಹಲವಾರು ಜಾತಿಗಳಿಂದ ಹಾನಿ ಉಂಟಾಗುತ್ತದೆ. ಅವು ಹೆಚ್ಚಾಗಿ ಹಸಿರುಮನೆ ಕೀಟವಾಗಿದ್ದು, ಕಡಿಮೆ ಸಂಖ್ಯೆಯಲ್ಲಿದ್ದರೂ ಹಾನಿ ಮಾಡಬಹುದು. ವಯಸ್ಕ ಜಿಗಿಹುಳುಗಳು ಹಸಿರಾಗಿದ್ದು, ಸುಮಾರು 3-4 ಮಿಮೀ ಇರುತ್ತವೆ ಮತ್ತು ನಿತ್ಯಹರಿದ್ವರ್ಣದ ಸಸ್ಯಗಳ ಮೇಲೆ ಚಳಿಗಾಲ ಕಳೆಯುತ್ತವೆ. ಹೆಣ್ಣು ಕೀಟಗಳು, ಎಲೆಯ ನಾಳದ ಅಂಗಾಂಶಗಳಲ್ಲಿ, ಹೆಚ್ಚಾಗಿ ಎಲೆಗಳ ಕೆಳಭಾಗದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಒಂದರಿಂದ ನಾಲ್ಕು ವಾರಗಳ ನಂತರ ಮೊಟ್ಟೆಯೊಡೆದು ಮರಿಹುಳು ಹೊರಬರುತ್ತದೆ. ಸಸ್ಯ ಅಂಗಾಂಶಗಳನ್ನು ಹೀರುವ ಮೂಲಕ ಮರಿಹುಳುಗಳು ಮತ್ತು ವಯಸ್ಕ ಹುಳುಗಳು ತಮ್ಮ ಆಶ್ರಯದಾತ ಸಸ್ಯಗಳನ್ನು ಹಾನಿಗೊಳಿಸುತ್ತವೆ. ಹೀರುವ ಸಂದರ್ಭದಲ್ಲಿ, ಕೀಟಗಳು ವಿಷಕಾರಿ ಸಂಯುಕ್ತಗಳನ್ನು ಒಳಗೆ ಸೇರಿಸುತ್ತವೆ. ಇವು ಸಸ್ಯ ನಾಳಗಳು ಮುಚ್ಚಲು ಕಾರಣವಾಗಬಹುದು. ಇದರಿಂದಾಗಿ ರೋಗಲಕ್ಷಣಗಳು ನೀರು ಅಥವಾ ಪೋಷಕಾಂಶದ ಕೊರತೆಯನ್ನು ಹೋಲುತ್ತವೆ.