ಇತರೆ

ಓರಿಯೆಂಟಲ್ ಹಣ್ಣು ನೊಣ

Bactrocera dorsalis

ಕೀಟ

5 mins to read

ಸಂಕ್ಷಿಪ್ತವಾಗಿ

  • ಮಾಗಿದ ಬಾಳೆಹಣ್ಣುಗಳಲ್ಲಿ ಮೊಟ್ಟೆ ಇಟ್ಟ ಗುರುತುಗಳು ತೂತಿನ ಗುರುತುಗಳ ಸುತ್ತಲೂ ನೆಕ್ರೋಟಿಕ್ ಕಲೆಗಳ ರೂಪದಲ್ಲಿ ಗೋಚರಿಸುತ್ತವೆ.
  • ಹಣ್ಣಿನ ತಿರುಳನ್ನು ಮರಿಹುಳುಗಳು ತಿಂದು, ಕ್ರಮೇಣ ಅದು ಕೊಳೆಯುತ್ತದೆ.
  • ಅವಕಾಶವಾದಿ ರೋಗಕಾರಕಗಳು ಕೊಳೆಯುತ್ತಿರುವ ಅಂಗಾಂಶಗಳನ್ನು ತಮ್ಮ ವಸಾಹತುಗಳನ್ನಾಗಿ ಮಾಡಿಕೊಳ್ಳುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

16 ಬೆಳೆಗಳು
ಸೇಬು
ಜಲ್ದರು ಹಣ್ಣು
ಬಾಳೆಹಣ್ಣು
ಹಾಗಲಕಾಯಿ
ಇನ್ನಷ್ಟು

ಇತರೆ

ರೋಗಲಕ್ಷಣಗಳು

ಓರಿಯೆಂಟಲ್ ಹಣ್ಣು ನೊಣ ಮಾಗಿದ ಬಾಳೆಹಣ್ಣುಗಳನ್ನು ಮಾತ್ರ ಆಕ್ರಮಿಸುತ್ತದೆ. ನಿಗದಿತ ಸುಗ್ಗಿ ಕಾಲವನ್ನೂ ಒಂದು ವಾರಕ್ಕೂ ಹೆಚ್ಚು ಕಾಲ ಮೀರಿದ, ಸಸ್ಯಕ್ಕೆ ಅಂಟಿಕೊಂಡೇಇರುವ ಇನ್ನೂ ಮಾಗದ ಹಣ್ಣುಗಳು ಇವುಗಳ ಧಾಳಿಗೆ ಒಳಗಾಗುವುದಿಲ್ಲ. ಕೊಯ್ಲು ಮಾಡಿದ ಹಣ್ಣುಗಳು ಕೂಡ. ಪ್ರಭೇದವನ್ನು ಅವಲಂಬಿಸಿ 1 ರಿಂದ 4 ದಿನಗಳವರೆಗೆ ತಡೆಯಬಲ್ಲವು. ಮಾಗಿದ ಹಣ್ಣಿನಲ್ಲಿ, ಹಾನಿಯು ಸಾಮಾನ್ಯವಾಗಿ ನೊಣಗಳ ಮುತ್ತುವಿಕೆಗೆ ಸಂಬಂಧಿಸಿದ ಅಂಗಾಂಶಗಳ ವಿಘಟನೆ ಮತ್ತು ಆಂತರಿಕ ಕೊಳೆಯುವಿಕೆಯ ರೂಪದಲ್ಲಿ ಕಾಣಿಸುತ್ತದೆ. ಮೊಟ್ಟೆ ಇಟ್ಟ ನಂತರ ತೂತಿನ ಗುರುತುಗಳ ('ಸ್ಟಿಂಗ್') ಸುತ್ತಲೂ ಕೆಲವು ನೆಕ್ರೋಸಿಸ್ ಕಲೆಗಳು ಇರಬಹುದು. ಹಣ್ಣುಗಳಿಗೆ ಯಾಂತ್ರಿಕ ಹಾನಿಯು (ಅಥವಾ ಇತರ ವಿಧಾನಗಳಿಂದ) ಸಿಪ್ಪೆಯ ಸಮಗ್ರತೆಯನ್ನು ಕಡಿಮೆಮಾಡುತ್ತದೆ ಮತ್ತು ಹಣ್ಣಿನ ತಿರುಳಿನೊಳಗೆ ಮೊಟ್ಟೆ ಇಡುವುದಕ್ಕೆ ಒಲವು ತೋರುತ್ತದೆ.

Recommendations

ಜೈವಿಕ ನಿಯಂತ್ರಣ

ಬಾಕ್ಟ್ರೋಸೆರಾ ಡೋರ್ಸಲಿಸ್ ನ ಸಂತಾನಶಕ್ತಿಯಿಲ್ಲದ ಗಂಡು ಕೀಟಗಳನ್ನು, ಬಲೆಗಳೊಂದಿಗೆ ಸೇರಿಸಿ, ಜಪಾನ್ ನಲ್ಲಿ ತೋಟಗಳಿಂದ ನೊಣಗಳನ್ನು ನಿರ್ಮೂಲನೆ ಮಾಡಲು ಬಳಸಲಾಗಿದೆ. ಸಾವಯವವೆಂದು ಸ್ವೀಕರಿಸಲ್ಪಟ್ಟ ಸೂಕ್ತವಾದ ಕೀಟನಾಶಕದೊಂದಿಗೆ (ಉದಾಹರಣೆಗೆ ಸ್ಪಿನೊಸ್ಯಾಡ್) ಪ್ರೋಟೀನ್ ಬೈಟ್ ಬೆರೆಸಿದ ಬೈಟ್ ಸ್ಪ್ರೇಗಳನ್ನು ಬಳಸಿ. ಬಲೆಯಲ್ಲಿ ದಿನಕ್ಕೆ 8 ನೊಣಗಳನ್ನು ಮೀರಿದ ಸಂಖ್ಯೆಯಲ್ಲಿ 3 ದಿನಗಳವರೆಗೆ ನೊಣಗಳು ಸಿಕ್ಕಿ ಬಿದ್ದರೆ ಅಥವಾ 10% ರೋಸೆಟ್ ಹೂವುಗಳು ಅಥವಾ 10% ಹಸಿರು ಬೀಜಕೋಶಗಳು ಹಾನಿಗೊಳಗಾಗಿರುವುದು ಕಂಡುಬಂದರೆ, ತಕ್ಷಣವೇ ಶಿಫಾರಸು ಮಾಡಿದ ರಾಸಾಯನಿಕ ಚಿಕಿತ್ಸೆಗಳನ್ನು ಅನುಸರಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ , ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಒಟ್ಟಾಗಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಫೆರೋಮೋನ್ ಬಲೆಯಲ್ಲಿ ದಿನಕ್ಕೆ 8 ನ್ನು ಮೀರಿದ ಸಂಖ್ಯೆಯಲ್ಲಿ 3 ದಿನಗಳವರೆಗೆ ಕೀಟಗಳು ಸಿಕ್ಕಿ ಬಿದ್ದರೆ ಅಥವಾ 10% ರೋಸೆಟ್ ಹೂವುಗಳು ಅಥವಾ 10% ಹಸಿರು ಬೀಜಕೋಶಗಳು ಹಾನಿಗೊಳಗಾಗಿರುವುದು ಕಂಡುಬಂದರೆ, ಕೆಳಗಿನ ನಿಯಂತ್ರಣ ಕ್ರಮಗಳನ್ನು ಅನುಸರಿಸಿ: ಪ್ರೋಟೀನ್ ದ್ರಾವಣದೊಂದಿಗೆ ಸೂಕ್ತ ಕೀಟನಾಶಕವನ್ನು (ಉದಾ. ಮ್ಯಾಲಾಥಿಯಾನ್, ಸ್ಪೈನೋಸಾಡ್) ಬೆರೆಸಿದ ಬೈಟ್ ಗಳನ್ನು ಬಳಸಿ. ಅತ್ಯಂತ ವ್ಯಾಪಕವಾಗಿ ಬಳಸಲಾಗುವ ಪ್ರೋಟೀನ್ ಎಂದರೆ ಹೈಡ್ರೊಲೈಸ್ಡ್ ರೂಪವಾಗಿದೆ. ಆದರೆ ಇವುಗಳಲ್ಲಿ ಕೆಲವು ತುಂಬಾ ಫೈಟೋಟಾಕ್ಸಿಕ್. ಬೆಳಕಿನಿಂದ ಸಕ್ರಿಯಗೊಳ್ಳುವ ಕ್ಸಾಂಥೀನ್ ಡೈ ಒಂದು ಪರಿಣಾಮಕಾರಿ ಪರ್ಯಾಯವಾಗಿದೆ. ಬಿ. ಡೋರ್ಸಲಿಸ್ ಗಂಡು ಕೀಟಗಳು ಮಿಥೈಲ್ ಯುಗೆನಾಲ್ (4-ಅಲ್ಲೈಲ್ -1,2-ಡಿಮೆಥಾಕ್ಸಿಬೆನ್ಜೀನ್) ಗೆ, ಕೆಲವೊಮ್ಮೆ ದೊಡ್ಡ ಸಂಖ್ಯೆಯಲ್ಲಿ ಆಕರ್ಷಿಸಲ್ಪಡುತ್ತವೆ.

ಅದಕ್ಕೆ ಏನು ಕಾರಣ

ಓರಿಯಂಟಲ್ ಹಣ್ಣು ನೊಣ, ಬಾಕ್ಟ್ರೋಸೆರಾ ಡೋರ್ಸಾಲಿಸ್ ನಿಂದ ಹಾನಿ ಉಂಟಾಗುತ್ತದೆ. ನೊಣದ ಬಣ್ಣವು ಬಹಳಷ್ಟು ವ್ಯತ್ಯಾಸಗೊಳ್ಳುತ್ತದೆ. ಆದರೆ ಮುಖ್ಯವಾಗಿ ಹಳದಿ ಮತ್ತು ಕಂದು ಬಣ್ಣದ, ಎದೆಯ ಬಳಿ (ಥಾರಾಕ್ಸ್) ಕಪ್ಪು ಗುರುತುಗಳಿರುವುದು ಸಾಮಾನ್ಯವಾಗಿದೆ. ಬೇಸಿಗೆ ಕಾಲದಲ್ಲಿ ಮೊಟ್ಟೆಗಳಿಂದ ವಯಸ್ಕ ಕೀಟಗಳ ಬೆಳವಣಿಗೆಗೆ ಸುಮಾರು 16 ದಿನಗಳು ಬೇಕಾಗುತ್ತದೆ. ಆದರೆ ಈ ಅವಧಿಯು ತಂಪಾದ ವಾತಾವರಣವಿದ್ದಾಗ ಗಣನೀಯವಾಗಿ ಹೆಚ್ಚಬಹುದು. ಹೆಣ್ಣು ತನ್ನ ಜೀವಿತಾವಧಿಯಲ್ಲಿ 1,200 ದಿಂದ 1,500 ಮೊಟ್ಟೆಗಳನ್ನು ಕಳಿತ ಹಣ್ಣುಗಳೊಳಗೆ ಇಡಬಹುದು. ಇದನ್ನು ತಡೆಯದೇ ಬಿಟ್ಟರೆ ಗಮನಾರ್ಹ ಹಾನಿಯಾಗುತ್ತದೆ. ಬಾಳೆಯ ತಿರುಳನ್ನು ಸೇವಿಸಿದ ನಂತರ, ಬೆಳೆದ ಲಾರ್ವಾಗಳು ಹಣ್ಣಿನಿಂದ ಹೊರಬರುತ್ತವೆ. ನೆಲಕ್ಕೆ ಇಳಿಯುತ್ತವೆ ಮತ್ತು ಗಾಢ ಕಂದು ಬಣ್ಣದ ಕೋಶಗಳನ್ನು ರೂಪಿಸುತ್ತವೆ. ಹೊರಹೊಮ್ಮಿದ ನಂತರ ವಯಸ್ಕ ಕೀಟಗಳಿಗೆ ತಮ್ಮ ಲೈಂಗಿಕ ಪ್ರಬುದ್ಧತೆಯನ್ನು ತಲುಪಲು ಒಂಬತ್ತು ದಿನಗಳ ಅಗತ್ಯವಿದೆ. ಬಾಳೆಹಣ್ಣು ಹೊರತು ಪಡಿಸಿದರೆ, ಆವಕಾಡೊ, ಮಾವು ಮತ್ತು ಪಪ್ಪಾಯಿಗಳನ್ನು ಇವು ಹೆಚ್ಚಾಗಿ ಆಕ್ರಮಣ ಮಾಡುತ್ತವೆ. ಇತರ ಆಶ್ರಯದಾತ ಸಸ್ಯಗಳೆಂದರೆ ಸ್ಟೋನ್ ಫ್ರೂಟ್, ಸಿಟ್ರಸ್, ಕಾಫಿ, ಅಂಜೂರದ ಹಣ್ಣು, ಪೇರಳೆ, ಪ್ಯಾಶನ್ ಹಣ್ಣು, ಪಿಯರ್, ಪರ್ಸಿಮನ್, ಅನಾನಸ್ ಮತ್ತು ಟೊಮೆಟೋ.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ, ಚೇತರಿಸಿಕೊಳ್ಳುವ ಪ್ರಭೇದಗಳನ್ನು ಆಯ್ಕೆ ಮಾಡಿ.
  • ಮಾರುಕಟ್ಟೆ ಮಾಡಲಾಗದ ಮತ್ತು ಮುತ್ತಿಗೆಗೆ ಒಳಗಾಗಿರುವ ಹಣ್ಣುಗಳನ್ನು ನಾಶಮಾಡಿ.
  • ಕೋಶಗಳನ್ನು ತೊಂದರೆಗೊಳಪಡಿಸಲು ಹಣ್ಣಿನ ಮರಗಳ ಕೆಳಗಿರುವ ಮಣ್ಣನ್ನು ಕೆದಕಿ ಅಥವಾ ಅಡಿಮೇಲು ಮಾಡಿ.
  • ಗಂಡು ಕೀಟಗಳನ್ನು ಪ್ರಲೋಭನೆಗೆ ಒಡ್ಡಲು ಮೆಥೈಲ್ ಯುಗೆನಾಲ್ ಸವರಿದ ಫೆರೋಮೋನ್ ಬಲೆಗಳನ್ನು ಬಳಸಿಕೊಂಡು ತೋಟದ ಮೇಲ್ವಿಚಾರಣೆ ಮಾಡಿ.
  • ಪಕ್ವತೆಗೆ ಮೊದಲೇ ವೃತ್ತ ಪತ್ರಿಕೆ, ಕಾಗದದ ಚೀಲ ಅಥವಾ ಪಾಲಿಥಿನ್ ಸ್ಲೀವ್ ಬಳಸಿ ಹಣ್ಣನ್ನು ಮುಚ್ಚಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ