ಲಿಚಿ ಎರಿನೋಸ್ ನುಸಿ

LITCHI

ಲಿಚಿ ಎರಿನೋಸ್ ನುಸಿ

Aceria litchii

ಹುಳು

ಸಂಕ್ಷಿಪ್ತವಾಗಿ

  • ಎಲೆಗಳು ತುಪ್ಪಳದಂತೆ ಕಾಣುತ್ತವೆ, ಸುರುಳಿ ಸುತ್ತಿಕೊಳ್ಳುತ್ತವೆ ಮತ್ತು ವಿರೂಪಗೊಳ್ಳುತ್ತವೆ.
  • ಎಲೆಯ ಮೇಲ್ಮೈಯಲ್ಲಿ ಕಂದು ಬಣ್ಣದ ವೆಲ್ವೆಟ್‌ನಂತಹ ಬೆಳವಣಿಗೆ ಕಂಡುಬರುತ್ತದೆ.
  • ಸಣ್ಣ ಹಳ್ಳಗಳಂತಹ ಗುರುತುಗಳು ಕಾಲಕ್ರಮೇಣ ಗಂಟುಗಳಾಗಿ ಬದಲಾಗುತ್ತವೆ.
  • ಸುರುಳಿಯಾದ ಎಲೆಗಳು ಅಂತಿಮವಾಗಿ ಒಣಗಿಹೋಗುತ್ತವೆ ಮತ್ತು ಕೂದಲಿನಂತಹ ಬೆಳವಣಿಗೆಯ ಒಳಗೆ ಅತೀ ಸಣ್ಣ ನುಸಿಗಳು ವಾಸಿಸುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

0 ಬೆಳೆಗಳು

ಲಿಚಿ ಎರಿನೋಸ್ ನುಸಿ

LITCHI

ರೋಗಲಕ್ಷಣಗಳು

ಎಳೆಯ ಮರಗಳು ಮತ್ತು ಹೊಸದಾಗಿ ಬರುತ್ತಿರುವ ಚಿಗುರುಗಳು ಈ ಕೀಟಕ್ಕೆ ಹೆಚ್ಚು ತುತ್ತಾಗುತ್ತವೆ. ಬಾಧೆಯ ಆರಂಭಿಕ ಲಕ್ಷಣಗಳು ಎಳೆಯ ಎಲೆಗಳು ಮತ್ತು ಚಿಗುರುಗಳ ಮೇಲೆ ಸಣ್ಣ ಗುಳ್ಳೆಗಳ ರೂಪದಲ್ಲಿ ಕಂಡುಬರುತ್ತವೆ. ಈ ಗುಳ್ಳೆಗಳಲ್ಲಿ ಬೆಳ್ಳಿಯಂತಹ ಬಿಳಿ ಬಣ್ಣದ ಕೂದಲುಗಳು (ಎರಿನಿಯಾ) ಕಾಣಿಸಿಕೊಳ್ಳುತ್ತವೆ. ಎಲೆಯ ಕೆಳಭಾಗದಲ್ಲಿ ಸಣ್ಣ ಬಿಳಿ ನುಸಿಗಳು ಬರಿಗಣ್ಣಿಗೆ ಅಷ್ಟಾಗಿ ಕಾಣಿಸುವುದಿಲ್ಲ. ಬಾಧೆ ಹೆಚ್ಚಾದಂತೆ ಗುಳ್ಳೆಗಳು ಕೆಂಪು-ಕಂದು ಬಣ್ಣಕ್ಕೆ ತಿರುಗಿ ದಪ್ಪವಾದ ವೆಲ್ವೆಟ್‌ನಂತೆ ಬದಲಾಗುತ್ತವೆ. ಎಲೆಗಳು ತೀವ್ರವಾಗಿ ವಿರೂಪಗೊಂಡು ಸುರುಳಿ ಸುತ್ತಿಕೊಳ್ಳುತ್ತವೆ ಮತ್ತು ಸಣ್ಣ ಹಳ್ಳಗಳು ಗಟ್ಟಿಯಾದ ಗಂಟುಗಳಾಗಿ ಮಾರ್ಪಡುತ್ತವೆ. ಸೋಂಕಿತ ಎಲೆಗಳು ಒಣಗಿ ಮರದಿಂದ ಉದುರಿಹೋಗುತ್ತವೆ ಹಾಗೂ ಈ ಲಕ್ಷಣಗಳು ಎಲೆಯ ತೊಟ್ಟು, ಕಾಂಡ ಮತ್ತು ಹೂವಿನ ಮೊಗ್ಗುಗಳ ಮೇಲೆಯೂ ಕಾಣಿಸಿಕೊಳ್ಳಬಹುದು.

ಶಿಫಾರಸುಗಳು

ಜೈವಿಕ ನಿಯಂತ್ರಣ

ಜೈವಿಕ ನಿಯಂತ್ರಣವನ್ನು ಕೃಷಿ ಪದ್ಧತಿಗಳೊಂದಿಗೆ ಸಂಯೋಜಿಸಿ ಬಳಸುವುದು ಸೂಕ್ತವಾಗಿದೆ. ಅಗತ್ಯವಿದ್ದಾಗ ಮಾತ್ರ ನಿರ್ದಿಷ್ಟ ರಾಸಾಯನಿಕಗಳನ್ನು ಬಳಸಿ. ನುಸಿಗಳ ವಿರುದ್ಧ ಹೋರಾಡಲು ಸಹಕಾರಿ ಕೀಟಗಳನ್ನು ಬಳಸಿ. ಲಿಚಿ ತೋಟದ ಸುತ್ತಲೂ ವೈವಿಧ್ಯಮಯ ಸಸ್ಯ ಪರಿಸರವನ್ನು ಕಾಪಾಡಿಕೊಳ್ಳಿ. ನೈಸರ್ಗಿಕ ಶತ್ರು ಕೀಟಗಳಿಗೆ ಹಾನಿ ಮಾಡದ ಆಯ್ದ ಅಕರಿಸೈಡ್‌ಗಳನ್ನು ಬಳಸಿ. ಉಪಕಾರಿ ನುಸಿಗಳ ಸಂಖ್ಯೆಯನ್ನು ನಿಯಮಿತವಾಗಿ ಗಮನಿಸಿ.

ರಾಸಾಯನಿಕ ನಿಯಂತ್ರಣ

ಬಾಧೆಯು ಮೊದಲು ಪತ್ತೆಯಾದ ತಕ್ಷಣವೇ ಔಷಧ ಸಿಂಪಡಿಸಿ ಮತ್ತು ಹೊಸ ಚಿಗುರುಗಳು ಗಟ್ಟಿಯಾಗುವವರೆಗೆ ಪ್ರತಿ 15 ದಿನಗಳಿಗೊಮ್ಮೆ ಇದನ್ನು ಪುನರಾವರ್ತಿಸಿ. ನುಸಿಗಳು ಅಡಗಿರುವ ಎಲೆಗಳ ಕೆಳಭಾಗಕ್ಕೆ ಸರಿಯಾಗಿ ತಲುಪುವಂತೆ ಔಷಧ ಸಿಂಪಡಿಸಿ. ಸಂಪೂರ್ಣವಾಗಿ ಮರವನ್ನು ಆವರಿಸಲು ನೆಲದ ಮೇಲೆ ಬಳಸುವ ಉಪಕರಗಳನ್ನು ಬಳಸಿ ಮತ್ತು ವೈಮಾನಿಕ ಸಿಂಪಡಣೆ ಮಾಡಬೇಡಿ. ಔಷಧ ಬಳಸುವಾಗ ಯಾವಾಗಲೂ ರಕ್ಷಣಾತ್ಮಕ ಉಡುಪುಗಳನ್ನು ಧರಿಸಿ ಮತ್ತು ಸೂಚನೆಗಳನ್ನು ಪಾಲಿಸಿ.

ಅದಕ್ಕೆ ಏನು ಕಾರಣ

ಈ ಲಕ್ಷಣಗಳು ಲಿಚಿ ಎರಿನೋಸ್ ನುಸಿ ಎಂಬ ಸೂಕ್ಷ್ಮ ನುಸಿಯಿಂದ ಉಂಟಾಗುತ್ತವೆ. ಇವು ಸಸ್ಯದ ರಸವನ್ನು ಹೀರಿ ಬದುಕುತ್ತವೆ. ಗಾಳಿಯು ಈ ನುಸಿಗಳನ್ನು ಸೋಂಕಿತ ಮರದಿಂದ ಆರೋಗ್ಯಕರ ಮರಗಳಿಗೆ ಹೊತ್ತೊಯ್ಯುತ್ತದೆ. ಇವು ಉಪಕರಣಗಳು, ಕೃಷಿ ಸಲಕರಣೆಗಳು, ಕೆಲಸಗಾರರು ಮತ್ತು ಸೋಂಕಿತ ಸಸ್ಯದ ಭಾಗಗಳ ಮೂಲಕವೂ ಹರಡುತ್ತವೆ. ಎಳೆಯ ಲಿಚಿ ಮರಗಳು (ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ) ಈ ಬಾಧೆಗೆ ಹೆಚ್ಚು ತುತ್ತಾಗುತ್ತವೆ. ಈ ನುಸಿಗಳು ಹೊಸ ಚಿಗುರುಗಳನ್ನು ಇಷ್ಟಪಡುವುದರಿಂದ, ಮೃದುವಾದ ಎಲೆಗಳು ಮತ್ತು ಚಿಗುರುಗಳನ್ನು ಹೊಂದಿರುವ ಬಲಿತ ಮರಗಳ ಮೇಲೆಯೂ ಇವು ದಾಳಿ ಮಾಡಬಲ್ಲವು.


ಮುಂಜಾಗ್ರತಾ ಕ್ರಮಗಳು

  • ಉತ್ತಮವಾಗಿ ಗಾಳಿಯಾಡಲು ಮರಗಳ ನಡುವೆ ಸರಿಯಾದ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಆರ್ದ್ರತೆಯನ್ನು ಕಡಿಮೆ ಮಾಡಲು ಕೊಂಬೆಗಳನ್ನು ಸವರಬೇಕು.
  • ಬಾಧೆಯನ್ನು ಆರಂಭದಲ್ಲೇ ಪತ್ತೆಹಚ್ಚಲು ವಾರಕ್ಕೊಮ್ಮೆ ಮರಗಳನ್ನು ಪರೀಕ್ಷಿಸಬೇಕು.
  • ಎಳೆಯ ಚಿಗುರುಗಳ ಬೆಳವಣಿಗೆಯನ್ನು ಅತಿಯಾಗಿ ಉತ್ತೇಜಿಸುವ ಸಾರಜನಕಯುಕ್ತ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಬೇಕು.
  • ರೋಗಪೀಡಿತ ಎಲೆಗಳು ಮತ್ತು ರೆಂಬೆಗಳನ್ನು ತಕ್ಷಣವೇ ತೆಗೆದು ಸುಟ್ಟುಹಾಕಬೇಕು.
  • ಸೋಂಕಿತ ಪ್ರದೇಶಗಳಿಂದ ಸಸ್ಯದ ಯಾವುದೇ ಭಾಗಗಳನ್ನು ಸಾಗಿಸಬಾರದು.
  • ಒಂದು ಮರದಿಂದ ಇನ್ನೊಂದು ಮರಕ್ಕೆ ಹೋಗುವಾಗ ಉಪಕರಣಗಳನ್ನು ಸ್ವಚ್ಛಗೊಳಿಸಬೇಕು ಮತ್ತು ಬಾಧಿತ ಮರಗಳೊಂದಿಗೆ ಕೆಲಸ ಮಾಡಿದ ನಂತರ ಬಟ್ಟೆಗಳನ್ನು ಬದಲಾಯಿಸಬೇಕು.
  • ಹೊಸ ಚಿಗುರುಗಳು ಬರುವ ಮೊದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ