ಆಲೂಗಡ್ಡೆ

ಆಲೂಗೆಡ್ಡೆ ಸ್ಕ್ಯಾಬ್

Streptomyces scabies

ಬ್ಯಾಕ್ಟೀರಿಯಾ

5 mins to read

ಸಂಕ್ಷಿಪ್ತವಾಗಿ

  • ಸಸ್ಯದ ವೈಮಾನಿಕ ಭಾಗಗಳಲ್ಲಿ ಯಾವುದೇ ರೋಗಲಕ್ಷಣಗಳಿರುವುದಿಲ್ಲ.
  • ಆಲೂಗಡ್ಡೆಯ ಮೇಲ್ಮೈ ಮೇಲೆ ಕಂದು ಬಣ್ಣದ, ಗಡಸಾದ ಗುಳ್ಳೆಗಳು.
  • ಆಲೂಗೆಡ್ಡೆ ಗೆಡ್ಡೆಗಳ ಮೇಲೆ ಆಳವಿಲ್ಲದ ಅಥವಾ ಆಳವಾದ ಕುಳಿಗಳು ಮತ್ತು ಬಲೆ ತರಹದ ಬಿರುಕುಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಆಲೂಗಡ್ಡೆ

ರೋಗಲಕ್ಷಣಗಳು

ಎಲೆಗಳು, ಕಾಂಡಗಳು ಅಥವಾ ತೊಟ್ಟುಗಳಂತಹ ಸಸ್ಯದ ವೈಮಾನಿಕ ಭಾಗಗಳಲ್ಲಿ ಯಾವುದೇ ಲಕ್ಷಣಗಳು ಗೋಚರಿಸುವುದಿಲ್ಲ. ಸಾಮಾನ್ಯವಾಗಿ, ರೋಗದ ಮೊದಲ ಚಿಹ್ನೆಗಳು ಎಳೆಯ ಗೆಡ್ಡೆಗಳ ಮೇಲೆ ಗೋಚರಿಸುತ್ತವೆ ಮತ್ತು ಅದು ಈ ಕೆಳಗಿನ ರೋಗಲಕ್ಷಣಗಳಿಗೆ ಕಾರಣವಾಗುವಂತೆ ಹರಡುತ್ತದೆ: ಸಿಪ್ಪೆಯ ಅಗಲವಾದ ಪ್ರದೇಶಗಳನ್ನು ಆವರಿಸುವ ಮೇಲ್ನೋಟದ ರಸೆಟ್, ಕೆಂಪು-ಕಂದು ಬಣ್ಣದ ಊದಿದ ಗಡುಸಾದ ಸಿಪ್ಪೆ, ಗಾಢ ಬಣ್ಣದ, ಹೆಚ್ಚು ಕಡಿಮೆ ಆಳವಾದ ರಂಧ್ರಗಳು, ಮತ್ತು ಬಲೆ ತರಹದ ಬಿರುಕುಗಳು. ಒಂದೇ ಗೆಡ್ಡೆಯ ಮೇಲೆ ಒಂದಕ್ಕಿಂತ ಹೆಚ್ಚು ರೀತಿಯ ಗಾಯಗಳು ಕಂಡುಬರಬಹುದು. ಬೀಟ್, ಕ್ಯಾರೆಟ್, ಪಾರ್ಸ್ನಿಪ್ ಮತ್ತು ಮೂಲಂಗಿಯಂತಹ ಇತರ ಟ್ಯೂಬರ್ ಮತ್ತು ಟ್ಯಾಪ್ ರೂಟ್ ಬೆಳೆಗಳ ಮೇಲೆ ಪರಿಣಾಮ ಬೀರಬಹುದು. ಎಲ್ಲಾ ಸಂದರ್ಭಗಳಲ್ಲಿ ಇದು ಗೆಡ್ಡೆಗಳ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಇಳುವರಿ ನಷ್ಟವಾಗುತ್ತದೆ.

Recommendations

ಜೈವಿಕ ನಿಯಂತ್ರಣ

ಕಾಂಪೋಸ್ಟ್, ಕಾಂಪೋಸ್ಟ್ ಚಹಾ ಅಥವಾ ಅವೆರಡರ ಸಂಯೋಜನೆಯೊಂದಿಗೆ ಆಲೂಗೆಡ್ಡೆ ಗಿಡಗಳ ಸಂಸ್ಕರಣೆ ಮಾಡಿದರೆ ಕಾಮನ್ ಸ್ಕ್ಯಾಬ್ ಗಡ್ಡೆ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು. ಬ್ಯಾಕ್ಟೀರಿಯಾದ ಸ್ಪರ್ಧಾತ್ಮಕ ತಳಿಗಳ ಆಧಾರದ ಮೇಲೆ ಜೈವಿಕ ಗೊಬ್ಬರಗಳು ಇಳುವರಿ ಮತ್ತು ಗೆಡ್ಡೆಗಳ ಗುಣಮಟ್ಟ ಎರಡನ್ನೂ ಹೆಚ್ಚಿಸಬಹುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಆಲೂಗೆಡ್ಡೆ ಸ್ಕ್ಯಾಬ್ ಗೆ ಸಂಬಂಧಿಸಿದ ರಾಸಾಯನಿಕ ಚಿಕಿತ್ಸೆಯು ಕಷ್ಟಕರವಾಗಿದೆ, ಏಕೆಂದರೆ ಇದರಿಂದ ಸಸ್ಯಗಳಿಗೆ ಗಾಯಗಳಾಗುವ ಸಾಧ್ಯತೆ ಹೆಚ್ಚು. ಫ್ಲಝಿನಾಮ್, ಆಕ್ಸಿಟೆಟ್ರಾಸಿಕ್ಲೈನ್ ಮತ್ತು ಸ್ಟ್ರೆಪ್ಟೊಮೈಸಿನ್, ಕ್ಲೋರೊಥಲೋನಿಲ್ ಮತ್ತು ಮನ್ಕೊಜೆಬ್ ಗಳನ್ನು ಬಳಸಿ ಬೀಜ ಸಂಸ್ಕರಣೆ ಮಾಡಿದಾಗ ಕಡಿಮೆ ಪ್ರಮಾಣದ ಸೋಂಕು ಕಂಡುಬಂದಿದೆ.

ಅದಕ್ಕೆ ಏನು ಕಾರಣ

ಸ್ಟ್ರೆಪ್ಟೊಮೈಸಸ್ ಸ್ಕ್ಯಾಬೀಸ್ ಎಂಬ ಬ್ಯಾಕ್ಟೀರಿಯಂನಿಂದ ರೋಗಲಕ್ಷಣಗಳು ಉಂಟಾಗುತ್ತವೆ, ಇದು ಮಣ್ಣಿನಲ್ಲಿ ಸೋಂಕಿತ ಮೂಲ ಅಂಗಾಂಶಗಳಲ್ಲಿ ಉಳಿದುಕೊಂಡಿರುತ್ತದೆ. ಇದು ನೀರು, ಸೋಂಕಿತ ಸಸ್ಯ ವಸ್ತುಗಳು ಮತ್ತು ಗಾಳಿಯಿಂದ ಹಾರುವ ಮಣ್ಣಿನ ಮೂಲಕ ಹರಡುತ್ತದೆ. ಇದು ಮುಖ್ಯವಾಗಿ ಅಂಗಾಂಶಗಳು ಮತ್ತು ಗೆಡ್ಡೆಗಳನ್ನು ಗಾಯಗಳು ಮತ್ತು ನೈಸರ್ಗಿಕ ತೂತುಗಳ ಮೂಲಕ ಪ್ರವೇಶಿಸುತ್ತದೆ. ಟ್ಯೂಬರ್ ಬೆಳವಣಿಗೆಯ ಅವಧಿಯಲ್ಲಿ ಓಣ ಮತ್ತು ಬೆಚ್ಚನೆಯ ವಾತಾವರಣವು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಬ್ಯಾಕ್ಟೀರಿಯಾಕ್ಕೆ ಹೆಚ್ಚಿನ ಪ್ರಮಾಣದ ಆಮ್ಲಜನಕ ಬೇಕಾಗಿರುವುದರಿಂದ, ಸಡಿಲವಾದ ಮತ್ತು ಚೆನ್ನಾಗಿ ಗಾಳಿ ಇರುವ ಮಣ್ಣಿನಲ್ಲಿ ಸೋಂಕಿನ ಸಂಭವನೀಯತೆ ಹೆಚ್ಚು. ಒಣ ಮತ್ತು ಕ್ಷಾರೀಯ ಮಣ್ಣಿನಲ್ಲಿ ಬ್ಯಾಕ್ಟೀರಿಯಾ ಹೆಚ್ಚಾಗಿ ಕಂಡುಬರುತ್ತದೆ. ಆಲೂಗಡ್ಡೆ ಪ್ರಭೇದಗಳು ಸಹ ಎಸ್. ಸ್ಕ್ಯಾಬೀಸ್‌ಗೆ ತುತ್ತಾಗುವುದರಲ್ಲಿ ಭಿನ್ನವಾಗಿರುತ್ತವೆ ಮತ್ತು ಕೆಲವು ನಿರೋಧಕ ಸಸ್ಯಗಳು ಕಡಿಮೆ, ಕಠಿಣವಾದ ಲೆಂಟಿಕಲ್ ಮತ್ತು ದಪ್ಪ ಚರ್ಮವನ್ನು ಹೊಂದಿರುತ್ತವೆ ಎಂದು ತೋರಿಸಲಾಗಿದೆ.


ಮುಂಜಾಗ್ರತಾ ಕ್ರಮಗಳು

  • ಸಹಿಷ್ಣು ಪ್ರಭೇದಗಳನ್ನು ನೆಡಿ.
  • ಸುಸಂಘಟಿತವಾದ ಭೂಮಿ ಸರದಿಯನ್ನು ಖಚಿತಪಡಿಸಿಕೊಳ್ಳಿ.
  • ನಿಯಮಿತವಾಗಿ ನೀರಾವರಿ ಮಾಡಿ ಮಣ್ಣಿನ ತೇವಾಂಶವನ್ನು ಚೆನ್ನಾಗಿ ಕಾಪಾಡಿಕೊಳ್ಳಿ ಮತ್ತು ಅತಿಯಾಗಿ ನೀರುಹಾಕುವುದನ್ನು ತಪ್ಪಿಸಿ.
  • ನಿರ್ದಿಷ್ಟ ರಸಗೊಬ್ಬರ ಬಳಕೆ ಯೋಜನೆಯೊಂದಿಗೆ ಮಣ್ಣಿನ pH ಮಟ್ಟವನ್ನು ಕಡಿಮೆ ಮಾಡಿ.
  • ಉದಾಹರಣೆಗೆ, ಕಡಿಮೆ ಮಣ್ಣಿನ pH ಅನ್ನು ನಿರ್ವಹಿಸಲು ಮತ್ತು ರೋಗದ ತೀವ್ರತೆಯನ್ನು ಕಡಿಮೆ ಮಾಡಲು ಧಾತುರೂಪದ ಸಲ್ಫರ್, ಜಿಪ್ಸಮ್ ಅಥವಾ ಅಮೋನಿಯಮ್ ಸಲ್ಫೇಟ್ ಅನ್ನು ಹಾಕಿ.
  • ನೆಡುವ ಮೊದಲು ಸುಣ್ಣ ಹಾಕಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ