ಆಲೂಗಡ್ಡೆ

ಆಲೂಗಡ್ಡೆ ಎಸ್ ವೈರಸ್

PVS

ವೈರಸ್

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ವಿರೂಪತೆ ಮತ್ತು ಕಂಚು ಬಣ್ಣ.
  • ಎಲೆಗಳ ಮೇಲೆ ಸಣ್ಣ ಕಲೆಗಳು ಉಂಟಾಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಆಲೂಗಡ್ಡೆ

ರೋಗಲಕ್ಷಣಗಳು

ವೈರಸ್ ನ ಲಕ್ಷಣಗಳು ಹೆಚ್ಚು ಬದಲಾಗುತ್ತವೆ ಮತ್ತು ಆಶ್ರಯದಾತ ಸಸ್ಯಗಳು, ಪರಿಸರ ಪರಿಸ್ಥಿತಿಗಳು ಸೇರಿದಂತೆ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಹೆಚ್ಚಿನ ತಳಿಗಳಲ್ಲಿ, ವೈರಲ್ ಸೋಂಕು ರೋಗಲಕ್ಷಣವಿಲ್ಲದೆ ಸಸ್ಯದಲ್ಲಿಯೇ ಉಳಿದಿರುತ್ತದೆ. ಕೆಲವು ಪ್ರಭೇದಗಳು ಆರಂಭಿಕ ಬೆಳವಣಿಗೆಯ ಹಂತದಲ್ಲಿ ಸೋಂಕಿಗೆ ಒಳಗಾದಾಗ ನಾಳಗಳು ಆಳವಾಗುವುದು, ಒರಟು ಎಲೆಗಳು, ಹೆಚ್ಚು ತೆರೆದ ಬೆಳವಣಿಗೆ, ಮಿಲ್ಟ್ ಮೋಟ್ಲಿಂಗ್, ಎಲೆಗಳ ಮೇಲೆ ಕಂಚು ಅಥವಾ ಸಣ್ಣ ನೆಕ್ರೋಟಿಕ್ (ಕಪ್ಪು) ಕಲೆಗಳು ಮುಂತಾದ ಲಕ್ಷಣಗಳನ್ನು ಕಾಣಬಹುದು.

Recommendations

ಜೈವಿಕ ನಿಯಂತ್ರಣ

ಗಿಡಹೇನುಗಳ ಪರಭಕ್ಷಕಗಳು ಹಲವಾರು ಇವೆ ಮತ್ತು ಉತ್ತಮ ಕೃಷಿಭೂಮಿ ಅಭ್ಯಾಸಗಳ ಮೂಲಕ ಇವುಗಳನ್ನು ಉತ್ತೇಜಿಸಬೇಕು. ಸಸ್ಯದ ಎಲೆಗಳ ಮೇಲೆ ನೀರು ಮತ್ತು ಕೆಲವು ಹನಿ ಮಾರ್ಜಕದ ಸೌಮ್ಯವಾದ ದ್ರಾವಣವನ್ನು ಸಿಂಪಡಿಸುವ ಮೂಲಕ ಗಿಡಹೇನುಗಳನ್ನು ಅಳಿಸಿಹಾಕಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ವೈರಸ್ ಗೆ ರಾಸಾಯನಿಕಗಳಿಂದ ನೇರವಾಗಿ ಚಿಕಿತ್ಸೆ ನೀಡಲಾಗದಿದ್ದರೂ, ಪ್ರಸರಣದ ವಾಹಕ, ಮುಖ್ಯವಾಗಿ ಗಿಡಹೇನುಗಳನ್ನು ಒಂದು ನಿರ್ದಿಷ್ಟ ಹಂತದವರೆಗೆ ನಿಯಂತ್ರಿಸಬಹುದು. ಗಿಡಹೇನುಗಳು ಮತ್ತು ಅವುಗಳ ಸಂಭಾವ್ಯ ರಾಸಾಯನಿಕ ನಿಯಂತ್ರಣಕ್ಕಾಗಿ ಡೇಟಾಬೇಸ್ ಪರಿಶೀಲಿಸಿ. ಲೇಬಲ್ ನಲ್ಲಿ ಗಿಡಹೇನುಗಳ ಕೀಟನಾಶಕಗಳೆಂದು ಹೇಳುವ ಉತ್ಪನ್ನಗಳನ್ನು ನಮ್ಮ ಪೇಜಿನಲ್ಲಿ ನೀಡಲಾಗಿದೆ.

ಅದಕ್ಕೆ ಏನು ಕಾರಣ

ಕಾರ್ಲವೈರಸ್ ಆಗಿರುವ ಆಲೂಗಡ್ಡೆ ಎಸ್ ವೈರಸ್‌ನಿಂದ ಹಾನಿ ಸಂಭವಿಸುತ್ತದೆ. ಇದು ಮುಖ್ಯವಾಗಿ ಗಿಡಹೇನುಗಳಿಂದ ನಿರಂತರವಲ್ಲದ ರೀತಿಯಲ್ಲಿ ಹರಡುತ್ತದೆ. ಹೊಲದಲ್ಲಿ ನಡೆಯುವಾಗ ಯಂತ್ರೋಪಕರಣಗಳು, ಉಪಕರಣಗಳು ಮತ್ತು ಹಾನಿಕಾರಕ ಸಸ್ಯಗಳಿಂದಲೂ ಇದು ಯಾಂತ್ರಿಕವಾಗಿ ಹರಡಬಹುದು. ಗಿಡಹೇನುಗಳು ಪ್ರಸರಣದ ಅತ್ಯಂತ ಪರಿಣಾಮಕಾರಿ ಸಾಧನಗಳಾಗಿವೆ. ಋತುವಿನ ನಂತರದ ಅವಧಿಯಲ್ಲಿ ಸಸ್ಯಗಳು ಪಿವಿಎಸ್‌ಗೆ ನಿರೋಧಕವಾಗಿರುತ್ತವೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ, ಪ್ರಮಾಣೀಕೃತ ನಿರೋಧಕ ಪ್ರಭೇದಗಳಿಂದ ಸಸ್ಯ ವಸ್ತುಗಳನ್ನು ಬಳಸಿ.
  • ನರ್ಸರಿಗಳನ್ನು ಕೀಟ ವಾಹಕಗಳಿಂದ ಮುಕ್ತವಾಗಿರಿಸಿಕೊಳ್ಳಿ.
  • ಹೊಲದೊಳಗೆ ಯಾಂತ್ರಿಕ ಹರಡುವಿಕೆಯನ್ನು ತಡೆಯಲು ಉತ್ತಮ ನೈರ್ಮಲ್ಯವನ್ನು ಅಭ್ಯಾಸ ಮಾಡಿ.
  • ಸೋಂಕಿತ ಸಸ್ಯಗಳನ್ನು ಹಾಗೂ ಯಾವುದೇ ಪರ್ಯಾಯ ಆಶ್ರಯದಾತ ಸಸ್ಯಗಳನ್ನು (ಕಳೆಗಳು) ತೆಗೆದುಹಾಕಿ ಮತ್ತು ನಾಶಮಾಡಿ.
  • ಅನುಮಾನಾಸ್ಪದ ಆಲೂಗೆಡ್ಡೆ ವಸ್ತುಗಳನ್ನು ಇತರ ಹೊಲಗಳಿಗೆ ಸಾಗಿಸಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ