Colletotrichum kahawae
ಶಿಲೀಂಧ್ರ
ಕಾಯಿಗಳ ಮೇಲೆ ದಟ್ಟ ಗುಳಿಬಿದ್ದ ಗಾಯಗಳು ಮೂಡಿ ಕಾಯಿಗಳು ಮಾಗುವ ಮುನ್ನವೇ ಒಣಗಿ ಉದುರಲು ಕಾರಣವಾಗುತ್ತದೆ. ಕೆಲವೊಮ್ಮೆ ಇದು ಎಲೆಗಳನ್ನೂ ಬಾಧಿಸುತ್ತದೆ. ಈ ರೋಗ ಗಿಡದ ಬೆಳವಣಿಗೆಯ ಎಲ್ಲಾ ಹಂತದಲ್ಲೂ ಬಾಧಿಸುತ್ತದೆ. ರೋಗ ಮೊಗ್ಗಾಗುವ ಹಂತದಲ್ಲೇ ಶುರುವಾಗಬಹುದು ಆದರೆ ರೋಗಲಕ್ಷಣಗಳು ಹಸಿರು ಕಾಯಿ ಮತ್ತು ಮಾಗಿದ ಹಣ್ಣುಗಳ ಮೇಲೆ ಮಾತ್ರ ಕಾಣಿಸಿಕೊಳ್ಳುತ್ತವೆ.
ರೋಗನಿರೋಧಕ ಪ್ರಬೇಧಗಳನ್ನ ನೆಡಿ.
ಯಾವಾಗಲೂ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಲಭ್ಯವಿರುವ ಜೈವಿಕ ಚಿಕಿತ್ಸೆಯ ಜೊತೆಗೆ ಸಮಗ್ರವಾದ ಮಾರ್ಗವನ್ನು ಆಯ್ದುಕೊಳ್ಳಿ. ಮೊಗ್ಗಿನ ಸಮಯದಲ್ಲಿ ಮೊದಲ ಸಿಂಪಡಣೆ ಮಾಡಿ. ಶಿಲೀಂಧ್ರನಿರೋದಕವಿರುವ ಕಾಪರ್ (copper) ಅನ್ನು ತಿಂಗಳಿಗೆ ಎರಡು ಬಾರಿ ಸಿಂಪಡಿಸುವುದು ಈ ರೋಗದ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಒಂದು ವೇಳೆ ನೀವು ಮುನ್ನೆಚ್ಚರಿಕೆ ಚಿಕಿತ್ಸೆಗಳನ್ನ ಮಾಡಿಲ್ಲವೆಂದಾದರೆ ಮೊದಲ ಲಕ್ಷಣಗಳು ಕಾಣುತ್ತಿದ್ದಂತೆ ಕ್ರಮ ತೆಗೆದುಕೊಳ್ಳಿ.
ಈ ರೋಗಕ್ಕೆ ಕಾರಣ ಕಲೆಟೋಟ್ರಿಚಮ್ ಕಹಾವೇ (Colletotrichum kahawae) ಎನ್ನುವ ಶಿಲೀಂಧ್ರ. ಮಳೆನೀರು ಸಿಡಿಯುವ ಮೂಲಕ, ಕಾಫಿ ತಿನ್ನುವ ಹಕ್ಕಿಗಳ ಮೂಲಕ ಮತ್ತು ರೋಗ ಹಿಡಿದ ಹಣ್ಣುಗಳು ಚಲಿಸುವ ಮೂಲಕ ಈ ರೋಗ ಹರಡುತ್ತದೆ. ಇದೊಂದು ಗಂಭೀರ ರೋಗವಾಗಿದ್ದು ಇಳುವರಿಯ 80%ರಷ್ಟನ್ನ ಕಡಿಮೆ ಮಾಡಬಹುದು.