ಇತರೆ

ಕಪ್ಪು ಪೊರೆ

Saissetia oleae

ಕೀಟ

5 mins to read

ಸಂಕ್ಷಿಪ್ತವಾಗಿ

  • ಎಲೆಗಳು ಮತ್ತು ಕಾಂಡಗಳ ತಳಭಾಗದಲ್ಲಿ ಕಪ್ಪು ಪೊರೆಗಳ ಉಂಡೆಗಳು.
  • ಸ್ರವಿಸಲ್ಪಟ್ಟ ಸಿಹಿಅಂಟು ಇರುವೆಗಳನ್ನು ಮತ್ತು ಬೂದಿಯಾದ ಬೂಷ್ಟನ್ನು ಆಕರ್ಷಿಸುತ್ತದೆ.
  • ಕೊಳಕಾದ ಎಲೆಗಳು ಅಕಾಲಿಕವಾಗಿ ಉದುರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

6 ಬೆಳೆಗಳು

ಇತರೆ

ರೋಗಲಕ್ಷಣಗಳು

ಕಪ್ಪು ಪೊರೆಗಳು ಅನೇಕ ಸಂಖ್ಯೆಯಲ್ಲಿ ಎಲೆಗಳನ್ನು ಮತ್ತು ಕಾಂಡಗಳನ್ನು ತಿನ್ನುತ್ತವೆ ಮತ್ತು ಅವು ಹೆಚ್ಚಿನ ಪ್ರಮಾಣದ ಸಸ್ಯರಸವನ್ನು ಹೀರುತ್ತವೆ, ಇದರಿಂದ ಮರಗಳಲ್ಲಿ ಸಾಮಾನ್ಯ ದೌರ್ಬಲ್ಯತೆ ಮತ್ತು ಕುಂಠಿತ ಬೆಳವಣಿಗೆ ಉಂಟಾಗುತ್ತದೆ. ಅವು ತಿನ್ನುವಾಗ ದೊಡ್ಡ ಪ್ರಮಾಣದಲ್ಲಿ ಜಿಡ್ಡಾದ ಸಿಹಿಅಂಟನ್ನು ಉತ್ಪಾದಿಸುತ್ತವೆ, ಇದು ಹತ್ತಿರದ ಎಲೆಗಳು ಮತ್ತು ಹಣ್ಣುಗಳ ಮೇಲೆ ಬೀಳುತ್ತದೆ, ಅವು ಕಪ್ಪಗಿನ ದ್ರವ್ಯರಾಶಿಯಲ್ಲಿ ಲೇಪವಾಗುತ್ತವೆ. ಸಿಹಿಅಂಟು ಅಲ್ಲಿರುವ ಇರುವೆಗಳನ್ನು ಆಕರ್ಷಿಸಬಹುದು ಮತ್ತು ಸಕ್ಕರೆ ನಿಕ್ಷೇಪದ ಮೇಲೆ ಬದುಕುವ ಬೂದಿಯ ಬೂಷ್ಟುಗಳು ಬೇಗನೆ ಅದನ್ನು ವಸಾಹತುಗೊಳಿಸುತ್ತವೆ, ಇದರಿಂದ ದ್ಯುತಿಸಂಶ್ಲೇಷಣೆಯ ಪ್ರಮಾಣ ತಗ್ಗುತ್ತದೆ. ಹೆಚ್ಚಿನ ಮಟ್ಟದ ಹಾನಿಗೊಳಗಾದ ಎಲೆಗಳು ಅಕಾಲಿಕವಾಗಿ ಉದುರಬಹುದು. ವಯಸ್ಕ ಕೀಟಗಳು ಗಾಢವಾದ ಬೂದು ಬಣ್ಣ ಅಥವಾ ಕಂದು ಬಣ್ಣದಿಂದ -ಕಪ್ಪು ಬಣ್ಣದ ಉಂಡೆಗಳಂತೆ ಎಲೆಗಳ ಕೆಳಭಾಗದಲ್ಲಿ ಮತ್ತು ಕಾಂಡದ ಮೇಲೆ ಸ್ಪಷ್ಟವಾಗಿ ಕಂಡುಬರುತ್ತವೆ.

Recommendations

ಜೈವಿಕ ನಿಯಂತ್ರಣ

ಕೆಲವು ಪ್ಯಾರಾಸೈಟಿಕ್ ಕಣಜಗಳು, ಸ್ಕೂಟಲಿಸ್ಟ ಕೆರುಲಿಯ, ಡೈವರ್ಸಿನರ್ವಸ್ ಎಲೆಗನ್ಸ್ ಮತ್ತು ಮೆಟಾಫೈಕಸ್ ಹೆಲ್ವೊಲಸ್ ಒಳಗೊಂಡಂತೆ ಮತ್ತು ಜೀರುಂಡೆಗಳ ಕೆಲವು ಜಾತಿಗಳು (ಚಿಲಾಕೋರಸ್ ಬೈಪುಸ್ತುಲೆಟಸ್) ಸಹ ಸರಿಯಾದ ಪರಿಸ್ಥಿತಿಗಳಲ್ಲಿ ಕಪ್ಪು ಪೊರೆಗಳ ಸಂಖ್ಯೆಯನ್ನು ನಾಶ ಮಾಡಬಲ್ಲವು. ಇರುವ ಸ್ವಾಭಾವಿಕ ಶತ್ರುಗಳನ್ನು ರಕ್ಷಿಸಲು ಒಳಪ್ರದೇಶಗಳಲ್ಲಿ ಶಕ್ತಿಯುತವಾದ ವಿಶಾಲ ವ್ಯಾಪ್ತಿಯುಳ್ಳ ಕೀಟನಾಶಕಗಳ ಬಳಕೆಯನ್ನು ತಪ್ಪಿಸಿ. ಕಪ್ಪು ಪೊರೆಗಳನ್ನು ನಿಯಂತ್ರಿಸಲು ಕನೋಲಾ ಎಣ್ಣೆ ಅಥವಾ ಶಿಲೀಂಧ್ರ ಮೂಲದ ಜೈವಿಕ ಕೀಟನಾಶಕಗಳನ್ನು ಸಹ ಹಾಕಬಹುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಲಭ್ಯವಿದ್ದಲ್ಲಿ, ಜೈವಿಕ ನಿಯಂತ್ರಣದ ಜೊತೆ, ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ತೆವಳುವ ಕೀಟಗಳ ಉಪಸ್ಥಿತಿಯನ್ನು ಮಾಪಿಸಲು, ಎರಡು ಬದಿಉಅಲ್ಲೂ ಜಿಡ್ಡಾದ ವಸ್ತುವಿರುವ ಬಲೆಗಳನ್ನು ಮರದ ಮೇಲಾವರಣದಲ್ಲಿ ಜೋತು ಬಿಟ್ಟು ಬಳಸಿ. ಗರಿಷ್ಟ ಮಿತಿ ಮೀರಿದಲ್ಲಿ, ಕಡಿಮೆ-ವ್ಯಾಪ್ತಿಯುಳ್ಳ ಖನಿಜ ಬಿಳಿ ತೈಲ ಸಿಂಪರಣೆಗಳನ್ನು ಅಥವಾ ಕೀಟದ ಬೆಳವಣಿಗೆಯ ನಿಯಂತ್ರಕವಾದ ಪೈರಿಪ್ರೊಕ್ಸಿಫೆನ್ ಅನ್ನು ಹಾಕಬಹುದು. ಕ್ಲೋರ್ಪೈರಿಫೋಸ್ ಮತ್ತು ಕಾರ್ಬಾರಿಲ್ ಹೊಂದಿರುವ ಉತ್ಪನ್ನಗಳ ಸಿಂಪರಣೆಗಳನ್ನೂ ಬಳಸಬಹುದು.

ಅದಕ್ಕೆ ಏನು ಕಾರಣ

ಕಪ್ಪು ಸ್ಕೇಲಿನ ಪ್ರೌಢ ಹೆಣ್ಣು ಕೀಟಗಳು, ವ್ಯಾಸದಲ್ಲಿ ಸುಮಾರು 5 ಮಿಮೀ ನಷ್ಟಿರುತ್ತವೆ ಮತ್ತು ಗಾಢ ಕಂದು ಬಣ್ಣ ಅಥವಾ ಕಪ್ಪು ಬಣ್ಣದ್ದಾಗಿದ್ದು, ಹಿಂಬದಿಯಲ್ಲಿ H -ಆಕಾರದ ಸ್ಪಷ್ಟವಾದ ಉಬ್ಬನ್ನು ಹೊಂದಿರುತ್ತವೆ. ಅವು ಚಳಿಗಾಲದ ಕೊನೆಯಲ್ಲಿ ಸಣ್ಣ ಮತ್ತು ದೊಡ್ಡ ರೆಂಬೆಗಳಿಗೆ ವಲಸೆ ಹೋಗುತ್ತವೆ ಮತ್ತು ಅಲ್ಲಿ ಅವು ತಮ್ಮ ಉಳಿದ ಜೀವನವನ್ನು ಕಳೆಯುತ್ತವೆ. ಎಳೆಯ ಪೊರೆಗಳು ( ತೆವಳುವವು) ಹಳದಿ ಬಣ್ಣದಿಂದ ಕಿತ್ತಳೆ ಬಣ್ಣ ಹೊಂದಿರುತ್ತವೆ ಮತ್ತು ಅವು ಮರದ ಎಲೆಗಳಲ್ಲಿ ಹಾಗು ಸಣ್ಣ ರೆಂಬೆಗಳಲ್ಲಿ ಕಂಡುಬರುತ್ತವೆ. ಅವು ಚಲಿಸುವುದರ ಮೂಲಕ ಅಥವಾ ಕೆಲವೊಮ್ಮೆ ಗಾಳಿಯ ಮೂಲಕ ಚದರುತ್ತವೆ ಮತ್ತು ಎಲೆಗಳ ಕೆಳಭಾಗದಲ್ಲಿ, ಸಿರೆಗಳ ಉದ್ದಕ್ಕೂ ಅಥವಾ ಎಳೆಯ ಚಿಗುರುಗಳಲ್ಲಿ ನೆಲೆಯೂರುತ್ತವೆ. ಅವು ದಟ್ಟನೆಯ, ಕತ್ತರಿಸಿರದ ಮರದ ಭಾಗಗಳಲ್ಲಿ ಹೆಚ್ಚಾಗಿ ಉತ್ತರ ಪಾರ್ಶ್ವದಲ್ಲಿ ಕಂಡುಬರುತ್ತವೆ. ಇದಕ್ಕೆ ವಿರುದ್ಧವಾಗಿ, ತೆರೆದ ಗಾಳಿಯಾಡುವ ಮರಗಳು ಕಪ್ಪು ಪೊರೆಯ ಸಂಖ್ಯೆಗೆ ಅನುಕೂಲಕರವಾಗಿರುವುದು ಬಹು ವಿರಳ. ಅನುಕೂಲವಿಲ್ಲದ ಪರಿಸ್ಥಿತಿಗಳಲ್ಲಿ ಅವು ಪ್ರತಿ ವರ್ಷದಲ್ಲಿ ಒಂದು ಅಥವಾ ಎರಡು ತಲೆಮಾರುಗಳನ್ನು ಹೊಂದುತ್ತವೆ, ನೀರಾವರಿ ಮಾಡಿದ ಹಣ್ಣಿನ ತೋಟಗಳಲ್ಲಿ ಅವು ಎರಡು ತಲೆಮಾರುಗಳನ್ನು ಹೊಂದಬಹುದು. ನಿಂಬೆ, ಪಿಸ್ಟಾಚಿಯೋ, ಪೇರು, ಸ್ಟೋನ್ ಹಣ್ಣಿನ ಮರಗಳು ಮತ್ತು ದಾಳಿಂಬೆಗಳು ಪರ್ಯಾಯ ಹೋಸ್ಟ್ ಗಳಲ್ಲಿ ಸೇರಿವೆ.


ಮುಂಜಾಗ್ರತಾ ಕ್ರಮಗಳು

  • ಆಲಿವ್ ಮರಗಳನ್ನು ಕಪ್ಪು ಪೊರೆಗಳ ಮುತ್ತುವಿಕೆಗಳಿಗಾಗಿ ನಿಯಮಿತವಾಗಿ ಪರಿವೀಕ್ಷಿಸಿ.
  • ಮರಗಳನ್ನು ತಕ್ಕಮಟ್ಟಿಗೆ ಕತ್ತರಿಸುವುದರಿಂದ ಮೇಲಾವರಣದಲ್ಲಿ ಗಾಳಿಯಾಡುವಿಕೆಯನ್ನು ಸುಧಾರಿಸಬಹುದು ಮತ್ತು ಇದು ಕಪ್ಪು ಪೊರೆಯ ಜೀವನ ಚಕ್ರಕ್ಕೆ ಅಡ್ಡಿಯೊಡ್ಡಬಹುದು.
  • ಕಡಿಮೆ ಮುತ್ತುವಿಕೆಯಿದ್ದ ಸಂದರ್ಭದಲ್ಲಿ, ಸಸ್ಯದ ಭಾಗಗಳನ್ನು ಕೈಯಿಂದ ತೆಗೆಯುವುದು ಮತ್ತು ಕೀಟಗಳನ್ನು ಜಜ್ಜಿಹಾಕುವುದು ಪರಿಣಾಮಕಾರಿಯಾಗಬಹುದು.
  • ಮುತ್ತುವಿಕೆಗೊಳಗಾದ ಮರದ ಭಾಗಗಳನ್ನು ತೆಗೆದು ಹಾಕಿ ಮತ್ತು ಸುಟ್ಟು ಹಾಕಿ ಅಥವಾ ಹಣ್ಣಿನ ತೋಟದಿಂದ ದೂರದಲ್ಲಿ ಅವನ್ನು ಆಳವಾಗಿ ಹೂತು ಹಾಕಿ.
  • ಕೀಟನಾಶಕಗಳ ಹೆಚ್ಚಿನ ಬಳಕೆಯನ್ನು ತಪ್ಪಿಸಿ, ಏಕೆಂದರೆ ಇದು ಸ್ವಾಭಾವಿಕ ಶತ್ರುಗಳ ಸಂಖ್ಯೆಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು.
  • ಇವನ್ನು ರಕ್ಷಿಸುವ ಇರುವೆಗಳನ್ನು, ಮರದ ಕಾಂಡದ ಸುತ್ತಲೂ ಅಂಟಿನ ವಸ್ತುವನ್ನು ಸುತ್ತುಗಟ್ಟುವುದರ ಮೂಲಕ ನಿರ್ವಹಿಸಿ.
  • ಸಸ್ಯಗಳ ನಡುವೆ ಸೇತುವೆಯಾಗದಂತೆ ತಡೆಯಲು ತಕ್ಕಮಟ್ಟಿಗೆ ಅವನ್ನು ಕತ್ತರಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ