ಬದನೆ

ಫೋಮೊಪ್ಸಿಸ್ ಅಂಗಮಾರಿ

Diaporthe vexans

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಹಣ್ಣುಗಳ ಮೇಲೆ ಕಂದು, ಮೃದುವಾದ, ಮುಳುಗಿದ ಗಾಯಗಳು.
  • ಬೂದು ಬಣ್ಣದಿಂದ ಕಂದು ಬಣ್ಣದ ಕಲೆಗಳು, ಎಲೆಗಳ ಮೇಲೆ ತಿಳಿ ಬಣ್ಣದ ಕೇಂದ್ರಗಳು.
  • ಎಲೆಗಳ ಅಂಗಮಾರಿ ಮತ್ತು ಒಣಗುವುದು.
  • ಕಾಂಡಗಳ ಮೇಲೆ ಗಾಢವಾದ, ಮುಳುಗಿದಂತಹ ಹುಣ್ಣುಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಬದನೆ

ರೋಗಲಕ್ಷಣಗಳು

ಎಲೆಗಳು, ಕಾಂಡ ಮತ್ತು ಹಣ್ಣುಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅವುಗಳು ಹಣ್ಣುಗಳಲ್ಲಿ ಹೆಚ್ಚು ಗೋಚರಿಸುತ್ತವೆ. ತಿಳಿಯಾದ ಕೇಂದ್ರಗಳೊಂದಿಗೆ ಹಲವಾರು ಸಣ್ಣ, ಬೂದು ಬಣ್ಣದಿಂದ ಕಂದು ಬಣ್ಣದ ಕಲೆಗಳು ಎಲೆಗಳ ಮೇಲೆ ಕಾಣಿಸುತ್ತವೆ ಮತ್ತು ಅಂತಿಮವಾಗಿ ಇವು ಹಲವಾರು ಸಂಖ್ಯೆಯಲ್ಲಿ ಕಾಣಿಸಿಕೊಂಡು ಎಲೆಯ ಮೇಲ್ಮೈಯ ದೊಡ್ಡ ಪ್ರದೇಶವನ್ನು ಒಳಗೊಳ್ಳಬಹುದು. ತೀವ್ರವಾಗಿ-ಸೋಂಕಿತವಾದ ಎಲೆಗಳು ಹಸಿರು ಬಣ್ಣ ಕಳೆದುಕೊಳ್ಳುತ್ತವೆ. ಮತ್ತು ಬಿರುಕುಗೊಂಡ, ಹಾನಿಗೊಳಗಾದ, ಅಂಗಾಂಶದೊಂದಿಗೆ (ಎಲೆ ಅಂಗಮಾರಿ) ಉದುರುತ್ತವೆ. ಕಾಂಡಗಳ ಮೇಲೆ ಕಂದು ಬಣ್ಣದಿಂದ ಕಪ್ಪು ಬಣ್ಣದ, ಗುಳಿಬಿದ್ದ ಹುಣ್ಣುಗಳು ಬೆಳೆಯಬಹುದು. ಸಸ್ಯದ ತಳದಲ್ಲಿ ಈ ಹುಣ್ಣುಗಳು ಕಾಂಡವನ್ನು ಸುತ್ತಿ, ನೀರು ಮತ್ತು ಪೋಷಕಾಂಶಗಳ ಸಾಗಣೆಯನ್ನು ತಡೆಗಟ್ಟುತ್ತವೆ. ಅಂತಿಮವಾಗಿ ಸಸ್ಯವನ್ನು ಕೊಲ್ಲುತ್ತವೆ. ಕಂದು, ಮೃದುವಾದ, ಗುಳಿಬಿದ್ದ ಗಾಯಗಳು ಹಣ್ಣುಗಳಲ್ಲಿ ಕಾಣಿಸುತ್ತವೆ. ಅವುಗಳು ದೊಡ್ಡದಾಗುತ್ತಿದ್ದಂತೆ, ಅನೇಕವೇಳೆ ವಿಲೀನಗೊಳ್ಳುತ್ತವೆ. ಹಣ್ಣಿನ ಮೇಲ್ಮೈಯ ಒಂದು ದೊಡ್ಡ ಭಾಗವನ್ನು ಆವರಿಸುತ್ತವೆ. ಮತ್ತು ಅವುಗಳ ಅಂಚುಗಳಲ್ಲಿ ಸಣ್ಣ ಕಪ್ಪು ಚುಕ್ಕೆಗಳಿರುವ ಕೇಂದ್ರೀಕೃತ ಉಂಗುರಗಳನ್ನು ರಚಿಸುತ್ತವೆ. ಅಂತಿಮವಾಗಿ, ಹಣ್ಣುಗಳು ಕೊಳೆಯುತ್ತವೆ. ಸಣ್ಣ ಕಪ್ಪು ಚುಕ್ಕೆಗಳು, ಎಲೆಗಳು ಮತ್ತು ಕಾಂಡಗಳಲ್ಲಿನ ಹಳೆಯ ಗಾಯಗಳಲ್ಲೂ ಸಹ ಗೋಚರಿಸುತ್ತವೆ. ಒಣ ಪರಿಸ್ಥಿತಿಗಳಲ್ಲಿ, ಸೋಂಕಿತ ಹಣ್ಣುಗಳು ಸಸ್ಯದ ಮೇಲೆಯೇ ಕುಗ್ಗಿ, ಒಣಗಿ, ಮಮ್ಮಿಫೈ ಆಗುತ್ತವೆ.

Recommendations

ಜೈವಿಕ ನಿಯಂತ್ರಣ

ಜೈವಿಕ ಶಿಲೀಂಧ್ರನಾಶಕಗಳೊಂದಿಗಿನ ಚಿಕಿತ್ಸೆಗಳು ರೋಗದ ಸಂಭವನೀಯತೆ ಮತ್ತು ತೀವ್ರತೆಯನ್ನು ಕಡಿಮೆ ಮಾಡಲು ಸಹಾಯಕವಾಗಬಹುದು. ತಾಮ್ರದ ದ್ರಾವಣಗಳನ್ನು ಆಧರಿಸಿರುವ ಉತ್ಪನ್ನಗಳು (ಉದಾಹರಣೆಗೆ ಬೋರ್ಡೆಕ್ಸ್ ಮಿಶ್ರಣವನ್ನು) ಎಲೆ ಸಿಂಪಡಕದಂತೆ ಅನ್ವಯಿಸಬಹುದು. ಬೇವಿನ ಸಾರಗಳು ಸುರಕ್ಷಿತ ಮತ್ತು ಪರಿಸರ ಸ್ನೇಹಿ ಪರಿಹಾರವಾಗಿದ್ದು, ಇದನ್ನು ರೋಗದ ನಿರ್ವಹಣೆಯಲ್ಲಿ ಬಳಸಲಾಗುತ್ತದೆ. ಬಿಸಿ ನೀರಿನಲ್ಲಿ ಬೀಜಗಳ ಚಿಕಿತ್ಸೆಯನ್ನು ಕೂಡಾ (15 ಮಿ.ನಿ.ಗೆ 56 °C) ಪರಿಗಣಿಸಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ , ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳು ಒಟ್ಟಾಗಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಹೊಲದಲ್ಲಿ ರೋಗ ಗುರುತಿಸಲ್ಪಟ್ಟರೆ ಮತ್ತು ಆರ್ಥಿಕ ಮಿತಿಗಳನ್ನು ತಲುಪಿದರೆ, ಶಿಲೀಂಧ್ರನಾಶಕಗಳೊಂದಿಗಿನ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ. ಅಜೋಕ್ಸಿಸ್ಟ್ರೋಬಿನ್, ಬೊಸ್ಕ್ಯಾಲಿಡ್, ಕ್ಯಾಪ್ಟಾನ್, ಕ್ಲೋರೊಥಲೋನಿಲ್, ತಾಮ್ರದ ಆಕ್ಸಿಕ್ಲೋರೈಡ್, ಡಿಥಿಯೊಕಾರ್ಬಮೆಟ್ಸ್, ಮನೆಬ್, ಮನ್ಕೊಜೆಬ್, ಥಿಯೋಪನೆಟ್-ಮೀಥೈಲ್, ಟಲ್ಕ್ಲೋಫೊಸ್-ಮೀಥೈಲ್, ಪಿರಾಕ್ಲೋಸ್ಟ್ರೋಬಿನ್ ಇವು ಹೆಚ್ಚು ಸಾಮಾನ್ಯವಾಗಿ ಬಳಕೆಯಾಗುವ ಎಲೆ ಸಿಂಪಡಕ ಶಿಲೀಂಧ್ರನಾಶಕಗಳಾಗಿವೆ. ಕೃಷಿ ನಿಯಂತ್ರಣ ತಂತ್ರಗಳೊಂದಿಗೆ ಸಂಯೋಜಿಸಿದಾಗ ಈ ಶಿಲೀಂಧ್ರನಾಶಕಗಳು ಹೆಚ್ಚು ಪರಿಣಾಮಕಾರಿ. ಬೀಜ ಚಿಕಿತ್ಸೆಯನ್ನು ಕೂಡ ಬಳಸಿಕೊಳ್ಳಬಹುದು. ಉದಾಹರಣೆಗೆ ಥಿಯೋಫೆನೆಟ್ ಮೀಥೈಲ್ (0.2%).

ಅದಕ್ಕೆ ಏನು ಕಾರಣ

ಈ ರೋಗಲಕ್ಷಣಗಳು ಫೊಮೋಪ್ಸಿಸ್ ವೆಕ್ಸನ್ಸ್ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಈ ರೋಗಕಾರಕ ಬಿಳಿಬದನೆಗೆ ನಿರ್ಬಂಧಿಸಲ್ಪಟ್ಟಂತೆ ತೋರುತ್ತದೆ (ಟೊಮ್ಯಾಟೊ ಮತ್ತು ಮೆಣಸುಗಳಲ್ಲಿ ಸೋಂಕಿನ ಕೆಲವು ಪ್ರಕರಣಗಳು ವರದಿಯಾಗಿವೆ). ಬೆಳೆಯ ಅವಶೇಷಗಳಲ್ಲಿ ಶಿಲೀಂಧ್ರವು ಉಳಿದುಕೊಂಡಿರುತ್ತದೆ ಮತ್ತು ಅದರ ಬೀಜಕಗಳು ಗಾಳಿ ಮತ್ತು ಮಳೆಗಳಿಂದ ಆರೋಗ್ಯಕರ ಸಸ್ಯಗಳ ಮೇಲೆ ಹರಡುತ್ತವೆ. ಇದು ಬೀಜಗಳೊಳಗೆ ಮತ್ತು ಬೀಜಗಳ ಮೇಲೆ ಕೂಡ ಹರಡುವ ಸಾಧ್ಯತೆ ಇದೆ. ಇದರಿಂದಾಗಿ ಈ ರೋಗದ ವಿರುದ್ಧದ ಹೋರಾಟದಲ್ಲಿ ಪ್ರಮಾಣೀಕೃತ ಬೀಜಗಳು ಮತ್ತು ಆರೋಗ್ಯಕರ ಸಸಿಗಳನ್ನು ಬಳಸುವುದು ಮುಖ್ಯವಾಗಿದೆ. ಎಲೆಯ ಅಂಗಾಂಶಗಳೊಳಗೆ ನುಗ್ಗುವಿಕೆಯು 6-12 ಗಂಟೆಗಳ ಒಳಗೆ ನಡೆಯಬಹುದು ಮತ್ತು ಸೋಂಕು ಮತ್ತು ರೋಗ ಅಭಿವೃದ್ಧಿಗೆ ಬಿಸಿಯಾದ ವಾತಾವರಣ (27-35 °C) ಮತ್ತು ತುಲನಾತ್ಮಕವಾಗಿ ಆರ್ದ್ರ ಪರಿಸ್ಥಿತಿ ಅಗತ್ಯವಾಗಿರುತ್ತದೆ. ಶೇಖರಣಾ ಕೋಣೆಗಳಲ್ಲಿ 30 °C ಮತ್ತು 50% ರಷ್ಟು ಆರ್ದ್ರತೆಯಲ್ಲಿ ಹಣ್ಣಿನ ಮೇಲಿನ ಗಾಯಗಳು ಬೆಳೆಯುವ ಸಾಧ್ಯತೆಯಿದೆ.


ಮುಂಜಾಗ್ರತಾ ಕ್ರಮಗಳು

  • ವಿಶ್ವಾಸಾರ್ಹ ಮೂಲಗಳಿಂದ ಉತ್ತಮ ಗುಣಮಟ್ಟದ ಪ್ರಮಾಣೀಕೃತ ಬೀಜಗಳನ್ನು ಬಳಸಿ.
  • ಪರ್ಯಾಯವಾಗಿ, ಆರೋಗ್ಯಕರ ಸಸ್ಯಗಳಿಂದ ಬೀಜಗಳನ್ನು ಸಂಗ್ರಹಿಸಿ.
  • ಲಭ್ಯವಿದ್ದರೆ ಮತ್ತು ನಿಮ್ಮ ಮಾರುಕಟ್ಟೆ ಅಗತ್ಯಗಳಿಗೆ ಸೂಕ್ತವಾದರೆ ನಿರೋಧಕ ಪ್ರಭೇದಗಳನ್ನು ನೆಡಿ.
  • ಸಾಲುಗಳ ನಡುವೆ ಮತ್ತು ಸಸ್ಯಗಳ ನಡುವೆ ಅಧಿಕ ಅಂತರವನ್ನು ಉಳಿಸಿ.
  • ಎಲೆಗಳು ವೇಗವಾಗಿ ಒಣಗಲು ಅವಕಾಶ ನೀಡುವಂತೆ ಚಾಲ್ತಿಯಲ್ಲಿರುವ ಗಾಳಿಯ ದಿಕ್ಕಿಗೆ ಸಮಾನಾಂತರವಾಗಿ ನೆಡಿ.
  • ಮುಸ್ಸಂಜೆಯ ಮುಂಚೆ ಎಲೆಗಳು ಒಣಗುವಂತೆ ನೀರಾವರಿಯನ್ನು ಯೋಜಿಸಿ.
  • ಕಡಿಮೆ ಸಾರಜನಕ ಪ್ರಮಾಣ ಹಾಗು ಹೆಚ್ಚಿನ ರಂಜಕ ಮತ್ತು ಪೊಟ್ಯಾಸಿಯಮ್ ಪ್ರಮಾಣಗಳಿರುವ ರಸಗೊಬ್ಬರ ಬಳಸಿ.
  • ಸುಗ್ಗಿಯ ನಂತರ ಬೆಳೆಯ ಅವಶೇಷಗಳನ್ನು ತೆಗೆದುಹಾಕಿ ಮತ್ತು ನಾಶಮಾಡಿ (ಆಳವಾದ ಉಳುಮೆ ಅಥವಾ ಸುಡುವಿಕೆ).
  • ಸೂಕ್ತವಾದ ಶೇಖರಣಾ ಉಷ್ಣಾಂಶದಲ್ಲಿ ಹಣ್ಣುಗಳನ್ನು ಇರಿಸಿ (ತಣ್ಣನೆಯ ಮತ್ತು ಶುಷ್ಕ).
  • ಬೆಳೆ ಸರದಿಗಳನ್ನು (3 ವರ್ಷಗಳು ಅಥವಾ ಹೆಚ್ಚು) ಅಭ್ಯಾಸ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ