ದ್ರಾಕ್ಷಿ

ಹಳದಿ ವೈನ್ ಮಿಟೆ

Eotetranychus carpini

ಹುಳು

5 mins to read

ಸಂಕ್ಷಿಪ್ತವಾಗಿ

  • ಅನಿಯಮಿತ ಬೆಳವಣಿಗೆ.
  • ವಿರೂಪತೆ ಅಥವಾ ಹಲವು ಎಲೆಗಳು ಮತ್ತು ಹೂವಿನ ಮೊಗ್ಗುಗಳು ಒಣಗುವುದು.
  • ಗೆಣ್ಣುಗಳ ನಡುವಣ ಅಂತರ ಕಡಿಮೆ ಇರುತ್ತದೆ.
  • ಎಲೆಯ ನಾಳಗಳ ಉದ್ದಕ್ಕೂ ಕೆಂಪು ಬಣ್ಣದಿಂದ ಕಂದು ಬಣ್ಣದ ಚುಕ್ಕೆಗಳ ಗೋಚರಿಸುತ್ತವೆ.
  • ನಂತರ ಅಂಗಾಂಶಗಳ ಕ್ಲೋರೋಸಿಸ್ ಮತ್ತು ನೆಕ್ರೋಸಿಸ್ ಉಂಟಾಗುತ್ತದೆ.
  • ಹಣ್ಣುಗಳು ಪಕ್ವವಾಗುವುದು ತಡವಾಗುತ್ತದೆ.
  • ಸಕ್ಕರೆ ಅಂಶ ಕಡಿಮೆಯಾಗುತ್ತದೆ.
  • ಮತ್ತು ಇಳುವರಿ ಇಳಿಮುಖವಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು

ದ್ರಾಕ್ಷಿ

ರೋಗಲಕ್ಷಣಗಳು

ಋತುವಿನ ಆರಂಭದಲ್ಲಿ ಹಳದಿ ವೈನ್ ಹುಳು ತಿಂದಿರುವುದರಿಂದ ಆಗಿರುವ ಹಾನಿಯು ಅನಿಯಮಿತ ಬೆಳವಣಿಗೆ, ವಿರೂಪತೆ ಅಥವಾ ಹಲವು ಎಲೆಗಳು ಮತ್ತು ಹೂವಿನ ಮೊಗ್ಗುಗಳು ಒಣಗುವುದಕ್ಕೆ ಕಾರಣವಾಗುತ್ತದೆ. ಗೆಣ್ಣುಗಳ ನಡುವಣ ಅಂತರ ಕಡಿಮೆ ಇರುತ್ತದೆ. ರೋಗದ ನಂತರದ ಹಂತಗಳಲ್ಲಿ, ರೋಗಕಾರಕದ ದಾಳಿಯು ಎಲೆಯ ನಾಳಗಳ ಉದ್ದಕ್ಕೂ ಕೆಂಪು ಬಣ್ಣದಿಂದ ಕಂದು ಬಣ್ಣದ ಚುಕ್ಕೆಗಳಿಂದಾಗಿ ಗೊತ್ತಾಗುತ್ತದೆ. ಹುಳಗಳು ಹೆಚ್ಚಾದಂತೆ, ಈ ರೋಗಲಕ್ಷಣಗಳು ಎಲೆಗಳ ಉಳಿದ ಅಂಗಗಳಿಗೂ ಹರಡುತ್ತವೆ. ನಂತರ ಇದು ಅಂಗಾಂಶಗಳ ಕ್ಲೋರೋಸಿಸ್ ಮತ್ತು ನೆಕ್ರೋಸಿಸ್ ಗೆ ಕಾರಣವಾಗುತ್ತದೆ. ಇದು ದ್ಯುತಿಸಂಶ್ಲೇಷಕ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರಿಂದ ಹಣ್ಣುಗಳು ಪಕ್ವವಾಗುವುದು ತಡವಾಗುತ್ತದೆ. ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಮತ್ತು ಇಳುವರಿ ಇಳಿಮುಖವಾಗುತ್ತದೆ. ಹುಳುಗಳ ಸಂಖ್ಯೆಯು ಕಡಿಮೆಯಾಗಿದ್ದರೂ ಆರಂಭಿಕ ಸೋಂಕು ಹೆಚ್ಚು ಹಾನಿಕಾರಕವಾಗಬಹುದು.

Recommendations

ಜೈವಿಕ ನಿಯಂತ್ರಣ

ಈ ಹುಳಗಳ ಕೆಲವು ವಿರೋಧಿ ಜಾತಿಗಳನ್ನು ಎಟೆಟ್ರಾನಿಚಸ್ ಕರ್ಪಿನಿಯ ಸಂಖ್ಯೆ ನಿಯಂತ್ರಿಸಲು ಬಳಸಬಹುದು. ನಿರ್ದಿಷ್ಟವಾಗಿ ನೈಸರ್ಗಿಕ ಪರಭಕ್ಷಕವಾದ ಕಂಪಿಮೋಡ್ರೋಮಸ್ ಅಬೆರಾನ್ಸ್ ಬಳಸಬಹುದು. ಆದಾಗ್ಯೂ, ಹುಳುಗಳನ್ನು ನಿಯಂತ್ರಿಸಲು ಬಳಸುವ ರಾಸಾಯನಿಕಗಳು ಈ ಪರಭಕ್ಷಕಗಳನ್ನು ಸಹ ಕೊಲ್ಲುತ್ತವೆ. ಸಣ್ಣ ಪೈರೇಟ್ ತಿಗಣೆಗಳು ಅಥವಾ ಹೂವಿನ ತಿಗಣೆಗಳು (ಆನ್ತೋಕೊರೈಡೆ) ಕೆಲವು ಜಾತಿಗಳು ಬೇಲಿಮರ ಹುಳಗಳನ್ನು ತಿನ್ನುತ್ತವೆ ಮತ್ತು ಇದು ಸೋಂಕು ನಿಯಂತ್ರಿಸುವ ಇನ್ನೊಂದು ಮಾರ್ಗವಾಗಿದೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಇರುವ ಸಮಗ್ರವಾದ ಮಾರ್ಗ ಲಭ್ಯವಿದ್ದರೆ ಅದನ್ನು ಮೊದಲು ಪರಿಗಣಿಸಿ. ಈ ಹುಳುವನ್ನು ಕೊಲ್ಲಲು ತೊಣಚಿನಾಶಕಗಳನ್ನು ಎರಡು ಬಾರಿ ಸಿಂಪಡಿಸಬಹುದಾಗಿದೆ. ಮೊದಲು ಮೊಗ್ಗು ಮೂಡಿದಾಗ ಮತ್ತು ಚಿಗುರುಗಳು 10 ಸೆಂ.ಮೀ ಉದ್ದವಾಗಿರುವಾಗ. ಪ್ರಮುಖ ತೊಣಚಿನಾಶಕಗಳೆಂದರೆ ಎಕ್ರಿನತ್ರಿನ್, ಬೆನ್ಝೋಕ್ಸೈಮೇಟ್, ಕ್ಲೋಫೆಂಟೆಝಿನ್, ಸೈಹೆಕ್ಸಟಿನ್, ಡೈಕೋಫೋಲ್, ಫೆನಝಕ್ವಿನ್, ಫೆನ್ಬುಟಾಟಿನ್ -ಆಕ್ಸೈಡ್, ಫ್ಲೂಫೋನೋಕ್ಸುರೋನ್, ಹೆಕ್ಸಿಥಿಯಾಝಾಕ್ಸ್, ಪ್ರೋಪಾರ್ಗೈಟ್, ಪಿರಿಡಬೆನ್ ಮತ್ತು ಟೆಬೋಫೆನ್ಪಿರಾಡ್. ಈ ಉತ್ಪನ್ನಗಳು ನೈಸರ್ಗಿಕ ಪರಭಕ್ಷಕಗಳಾದ ಕ್ಯಾಂಪಿಮೋಡ್ರೋಮಸ್ ಅಬೆರ್ರಾನ್ಸ್ ಗಳ ಮೇಲೂ ಸಹ ಪರಿಣಾಮ ಬೀರುತ್ತವೆ. ಕೆಲವು ಕೀಟನಾಶಕಗಳು ಸಹ ಈ ಹುಳಗಳ ಮೇಲೆ ಪರಿಣಾಮ ಬೀರುತ್ತವೆ. ಬೇಸಿಗೆ ದಿನಗಳಲ್ಲಿನ ಹುಳುಗಳನ್ನು 12 ದಿನಗಳ ಅಂತರದಲ್ಲಿ 2 ಬಾರಿ ಇವುಗಳನ್ನು ಬಳಕೆ ಮಾಡುವ ಮೂಲಕ ನಿಯಂತ್ರಿಸಬಹುದು.

ಅದಕ್ಕೆ ಏನು ಕಾರಣ

ಈ ರೋಗಲಕ್ಷಣಗಳು ಹಳದಿ ವೈನ್ ಮಿಟೆಯಾದ ಎಟೆಟ್ರಾನಿಚಸ್ ಕರ್ಪಿನಿಯಿಂದಾಗಿ ಉಂಟಾಗುತ್ತದೆ. ಇವು ಮುಖ್ಯವಾಗಿ ದ್ರಾಕ್ಷಿಬಳ್ಳಿಗಳು ಅಥವಾ ಪೀಚ್ ಮರಗಳಂತಹ ಪ್ರಮುಖ ಬೆಳೆಗಳಲ್ಲಿ ಸೋಂಕು ಉಂಟು ಮಾಡುತ್ತವೆ. ಹೆಣ್ಣು ಹುಳುಗಳು ಆಯತಾಕಾರದ ದೇಹವನ್ನು ಹೊಂದಿದ್ದು, ಅವುಗಳ ಬಣ್ಣ ತೆಳು ಹಳದಿಯಿಂದ ನಿಂಬೆ ಹಳದಿಯಾಗಿರುತ್ತದೆ. ಅವು ಕೊಂಬೆಗಳ ತೊಗಟೆಯ ಅಡಿಯಲ್ಲಿ ಗುಂಪುಗುಂಪಾಗಿ ಚಳಿಗಾಲವನ್ನು ಕಳೆಯುತ್ತವೆ. ಮೊಟ್ಟಮೊದಲ ಮೊಗ್ಗುಗಳು ಕಾಣಿಸಿಕೊಂಡಾಗ, ಅವು ಹೊರಬಂದು ಎಳೆಯ ಎಲೆಗಳನ್ನು ಸುಮಾರು ಹತ್ತು ದಿನಗಳವರೆಗೆ ತಿನ್ನುತ್ತವೆ. ನಂತರ ಇವು ಗೋಳಾಕಾರದ, ಅರೆಪಾರದರ್ಶಕವಾದ, ತೆಳು ಗೆರೆ ಇರುವ ಮೊಟ್ಟೆಗಳನ್ನು ಎಲೆಗಳ ಕೆಳಭಾಗದಲ್ಲಿ ಇಡಲು ಆರಂಭಿಸುತ್ತವೆ. ತೆಳುವಾದ ಬಲೆಯಿಂದ ರಕ್ಷಿಸಲ್ಪಟ್ಟಿರುವ ಮರಿಹುಳುಗಳ ದೊಡ್ಡ ಸಮೂಹಗಳೇ ಕಂಡುಬರುತ್ತವೆ. ಅವು ಎಲೆಗಳಿಂದ ಉತ್ಪಾದಿಸಲ್ಪಟ್ಟ ಸಾರವನ್ನು ಎಲೆಗಳ ನಾಳಗಳ ಉದ್ದಕ್ಕೂ ತಿನ್ನುತ್ತಾ ಹೋಗುತ್ತವೆ. ಹೆಣ್ಣು ಹುಳುಗಳ ಜೀವಿತಾವಧಿ (12 ರಿಂದ 30 ದಿನಗಳು) ಮತ್ತು ಅವುಗಳ ಪೀಳಿಗೆಯ ಸಂಖ್ಯೆ (5 ರಿಂದ 6) ಎಲೆಗಳ ಸ್ಥಿತಿ ಮತ್ತು ತಾಪಮಾನವನ್ನು ಅವಲಂಬಿಸಿರುತ್ತದೆ. ಅವುಗಳ ಬೆಳವಣಿಗೆಗೆ ಸೂಕ್ತವಾದ ಉಷ್ಣತೆಯು ಸುಮಾರು 23 °C ಆಗಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಮೊಗ್ಗು ಹುಟ್ಟುವ ಸಮಯದಲ್ಲಿ ಮತ್ತು ಬೇಸಿಗೆಯಲ್ಲಿ ರೋಗದ ಲಕ್ಷಣಗಳಿಗಾಗಿ ದ್ರಾಕ್ಷಿತೋಟವನ್ನು ಪರಿಶೀಲಿಸಿ.
  • ಹಾರ್ನ್ ಬೀಮ್ ಹುಳದ ಪ್ರಯೋಜನಕಾರಿ ವೈರಿಗಳ ಮೇಲೆ ಪ್ರಭಾವ ಬೀರದಂತೆ ಕೀಟನಾಶಕದ ಬಳಕೆಯನ್ನು ನಿಯಂತ್ರಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ