ಇತರೆ

ಬೆಂಕಿ ರೋಗ

Erwinia amylovora

ಬ್ಯಾಕ್ಟೀರಿಯಾ

5 mins to read

ಸಂಕ್ಷಿಪ್ತವಾಗಿ

  • ಮರಗಳು ತೊಗಟೆಯ ಮೇಲೆ ಕೆಂಪು ಬಣ್ಣದ, ನೀರಿನಲ್ಲಿ ನೆನೆದಂತಹ ಗಾಯಗಳು ಬೆಳೆಯುತ್ತವೆ.
  • ಎಲೆಗಳು ಮತ್ತು ಕೊಂಬೆಗಳ ತುದಿಗಳು ಬೇಗನೆ ಒಣಗುತ್ತವೆ ಮತ್ತು ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತವೆ.
  • ಎಲೆಗಳು ಸಾಯುತ್ತವೆ ಆದರೆ ಉದುರುವುದಿಲ್ಲ.
  • ಬೆಂಕಿ ರೋಗವು ಹೂವುಗಳು, ಚಿಗುರುಗಳು, ರೆಂಬೆ-ಕೊಂಬೆಗಳು ಮತ್ತು ಕೆಲವೊಮ್ಮೆ ಇಡೀ ಮರವನ್ನು ಕೊಲ್ಲುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು
ಸೇಬು
ಪೇರು ಹಣ್ಣು/ ಮರಸೇಬು

ಇತರೆ

ರೋಗಲಕ್ಷಣಗಳು

ಬೆಂಕಿ ರೋಗವನ್ನು ಎಲೆಗಳು, ಹೂವುಗಳು, ಹಣ್ಣುಗಳು ಮತ್ತು ಚಿಗುರುಗಳ ಮೇಲೆ ಉಂಟಾಗುವ ಅನೇಕ ರೋಗಲಕ್ಷಣಗಳ ಮೂಲಕ ಗುರುತಿಸಬಹುದು. ಎಲೆಗಳು ಮತ್ತು ಹೂವುಗಳು ಒಣಗಲು ಪ್ರಾರಂಭಿಸುತ್ತಾ ಬೇಗನೇ ಹಸಿರು ಬೂದು ಮತ್ತು ನಂತರ ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಅವು ಋತುವಿನ ಉದ್ದಕ್ಕೂ ಶಾಖೆಗಳಿಗೆ ಅಂಟಿಕೊಂಡಿರುತ್ತವೆ. ಬೆಳೆಯುತ್ತಿರುವ ಚಿಗುರುಗಳು ಸಹ ಹಸಿರು ಬೂದು ಬಣ್ಣಕ್ಕೆ ತಿರುಗುತ್ತವೆ, ಬಾಡುತ್ತವೆ ಮತ್ತು 'ಕುರುಬನ ಕೋಲಿನಂತೆ' ಬಾಗುತ್ತವೆ. ರೋಗವು ಹೆಚ್ಚಾದಂತೆ, ಹೆಚ್ಚು ಹೆಚ್ಚು ಚಿಗುರುಗಳು ಸುಕ್ಕುಗಟ್ಟಿ ಸಾಯುತ್ತವೆ. ರೋಗ ತೀವ್ರವಾದಾಗ, ಮರಗಳು ಬೆಂಕಿಯಿಂದ ಸುಟ್ಟುಹೋದಂತೆ ಕಾಣಿಸಬಹುದು. ಈ ಕಾರಣದಿಂದಲೇ ರೋಗಕ್ಕೆ ಈ ಹೆಸರು ಬಂದಿರುವುದು. ಶಾಖೆಗಳ ಮೇಲೆ ಬೊಕ್ಕೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಅವುಗಳಿಗೆ ಗುಳಿಬಿದ್ದ, ಬಿರುಕು ಬಿಟ್ಟ ತೊಗಟೆಯ ಜೊತೆಗೆ ಗಾಢವಾದ ಬಣ್ಣವನ್ನು ನೀಡುತ್ತದೆ. ಸತ್ತ ತೊಗಟೆಯ ಕೆಳಗೆ, ಮರವು ಕೆಂಪು ಕಂದು ಬಣ್ಣಕ್ಕೆ ತಿರುಗುತ್ತದೆ. ಬೆಚ್ಚಗಿನ, ಆರ್ದ್ರ ವಾತಾವರಣದಲ್ಲಿ, ಸೋಂಕಿತ ಸಸ್ಯದ ಭಾಗಗಳಿಂದ ಲೋಳೆಯ ಬಿಳಿ ದ್ರವವು ಹೊರಬರಬಹುದು. ಚಿಕಿತ್ಸೆ ನೀಡದೆ ಬಿಟ್ಟರೆ, ಸೋಂಕು ಬೇರುಗಳಿಗೆ ಚಲಿಸುತ್ತದೆ ಮತ್ತು ಸಂಪೂರ್ಣ ಮರವೇ ಸಾಯಬಹುದು.

Recommendations

ಜೈವಿಕ ನಿಯಂತ್ರಣ

ಬೋರ್ಡೆಕ್ಸ್ ಮಿಶ್ರಣ ಅಥವಾ ಇತರ ತಾಮ್ರದ ಉತ್ಪನ್ನವನ್ನು (ಸುಮಾರು 0.5%) ದುರ್ಬಲಗೊಳಿಸಿ ಹೂಬಿಡುವ ಅವಧಿಯಲ್ಲಿ ಹಲವಾರು ಬಾರಿ ಬಳಸುವುದರಿಂದ ಹೊಸ ಸೋಂಕುಗಳನ್ನು ಕಡಿಮೆ ಮಾಡಬಹುದು. ಹವಾಮಾನ ಪರಿಸ್ಥಿತಿಗಳನ್ನು ಅನುಸರಿಸಿ ಸಕಾಲಿಕ ಬಳಕೆಯನ್ನು ಶಿಫಾರಸು ಮಾಡಲಾಗಿದೆ. ಹೆಚ್ಚಿನ ಆರ್ದ್ರತೆಯ ಅವಧಿಯಲ್ಲಿ ನಾಲ್ಕರಿಂದ ಐದು ದಿನಗಳ ಅಂತರದಲ್ಲಿ ಬಳಸಿ. ಕೆಲವು ತಾಮ್ರದ ಉತ್ಪನ್ನಗಳು ಹಣ್ಣಿನ ಮೇಲ್ಮೈಯಲ್ಲಿ ಕಲೆಗಳನ್ನು ಉಂಟುಮಾಡಬಹುದು ಎಂಬುದು ತಿಳಿದಿರಲಿ. ಸ್ಟ್ರೆಪ್ಟೊಮೈಸಸ್ ಲಿಡಿಕಸ್ ಹೊಂದಿರುವ ಉತ್ಪನ್ನಗಳ ಬಳಕೆಗಳು ಬ್ಯಾಕ್ಟೀರಿಯಾದ ಹರಡುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ಮುಂಜಾಗ್ರತಾ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಬೆಂಕಿ ರೋಗವನ್ನು ನಿಯಂತ್ರಿಸಲು ಪ್ರಯತ್ನಿಸುವಾಗ ತಾಮ್ರದ ಉತ್ಪನ್ನಗಳನ್ನು ಹೂಬಿಡುವ ಅವಧಿಯಲ್ಲಿ ಬಳಸಬಹುದು. ಆದಾಗ್ಯೂ, ಅನೇಕ ಬಾರಿ ಬಳಸಿದರೂ ಸಹ ಅದು ಸಾಕಷ್ಟು ನಿಯಂತ್ರಣವನ್ನು ನೀಡುವುದಿಲ್ಲ. ಸಮರುವಿಕೆಯನ್ನು ಮಾಡುವಾಗ, ಉಪಕರಣಗಳನ್ನು 10% ಬ್ಲೀಚ್ ದ್ರಾವಣ ಅಥವಾ ಬ್ಯಾಕ್ಟೀರಿಯಾ ವಿರೋಧಿ ಕ್ಲೀನರ್ ನೊಂದಿಗೆ ಸೋಂಕುರಹಿತಗೊಳಿಸಬೇಕು.

ಅದಕ್ಕೆ ಏನು ಕಾರಣ

ಬೆಂಕಿ ರೋಗ ಎಂಬುದು ಎರ್ವಿನಿಯಾ ಅಮೈಲೋವೊರಾ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ರೋಗವಾಗಿದ್ದು ಅದು ಒಂದೇ ಕುಟುಂಬದ ಸೇಬು, ಪೇರಳೆ ಮತ್ತು ಅಲಂಕಾರಿಕ ಸಸ್ಯಗಳಿಗೆ ಸೋಂಕು ತರುತ್ತದೆ. ಪ್ಲಮ್, ಚೆರ್ರಿಗಳು, ಪೀಚ್ ಮತ್ತು ನೆಕ್ಟರಿನ್ ಗಳಂತಹ ಸ್ಟೋನ್ ಹಣ್ಣುಗಳು ಈ ರೋಗಕ್ಕೆ ತುತ್ತಾಗುವುದಿಲ್ಲ. ವಸಂತಕಾಲದಿಂದ ಶರತ್ಕಾಲದವರೆಗೆ ಹಾನಿಯನ್ನು ಕಾಣಬಹುದು. ರೆಂಬೆಗಳು, ಕೊಂಬೆಗಳು ಅಥವಾ ಕಾಂಡಗಳ ಮೇಲಿನ ಬೊಕ್ಕೆಗಳಲ್ಲಿ ಬ್ಯಾಕ್ಟೀರಿಯಾವು ಚಳಿಗಾಲವನ್ನು ಕಳೆಯುತ್ತದೆ. ವಸಂತಕಾಲದಲ್ಲಿ ಅನುಕೂಲಕರ ಪರಿಸ್ಥಿತಿಗಳಲ್ಲಿ, ಇದು ಒಳಗಿನ ಅಂಗಾಂಶಗಳಲ್ಲಿ ಬೆಳವಣಿಗೆಯನ್ನು ಪುನರಾರಂಭಿಸುತ್ತದೆ. ಅವುಗಳಿಗೆ ಕಂದು ಬಣ್ಣವನ್ನು ನೀಡುತ್ತದೆ. ಇದು ನೀರು ಮತ್ತು ಪೋಷಕಾಂಶಗಳ ಸಾಗಣೆಗೆ ಅಡ್ಡಿಯಾಗುತ್ತದೆ ಮತ್ತು ಚಿಗುರಿನ ತುದಿಗಳು ಬಾಡುವುದಕ್ಕೆ ಕಾರಣವಾಗುತ್ತದೆ. ಮತ್ತು ಅವು ಅಂತಿಮವಾಗಿ ಕೆಳಕ್ಕೆ ಬಾಗುತ್ತವೆ. ಮಳೆ ಹನಿ ಅಥವಾ ಕೀಟಗಳು ಬ್ಯಾಕ್ಟೀರಿಯಾವನ್ನು ಹತ್ತಿರದ ತೆರೆದ ಹೂವುಗಳಿಗೆ ಅಥವಾ ತ್ವರಿತವಾಗಿ ಬೆಳೆಯುವ ಚಿಗುರುಗಳಿಗೆ ಹರಡುತ್ತವೆ. ಹೆಚ್ಚಿನ ಮಣ್ಣಿನ ಫಲವತ್ತತೆ ಮತ್ತು ಮಣ್ಣಿನ ತೇವಾಂಶವು ಹಾನಿಯ ತೀವ್ರತೆಯನ್ನು ಹೆಚ್ಚಿಸುತ್ತದೆ. ಬೆಚ್ಚಗಿನ ಪರಿಸ್ಥಿತಿಗಳು ಅಥವಾ ಗಾಯಗಳು ಸೋಂಕನ್ನು ಬೆಂಬಲಿಸುತ್ತವೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ರೋಗ ನಿರೋಧಕ ಪ್ರಭೇದಗಳನ್ನು ನೆಡಬೇಕು.
  • ರಸಗೊಬ್ಬರಗಳಿಗೆ ಹೆಚ್ಚು ಸ್ಪಂದಿಸದ ನಿಧಾನವಾಗಿ ಬೆಳೆಯುವ ಪ್ರಭೇದಗಳನ್ನು ಆರಿಸಿ.
  • ರೋಗದ ಚಿಹ್ನೆಗಳಿಗಾಗಿ ನಿಯಮಿತವಾಗಿ ತೋಟಗಳನ್ನು ಮೇಲ್ವಿಚಾರಣೆ ಮಾಡಿ.
  • ರೋಗ ತಗುಲಿದ ಶಾಖೆಗಳನ್ನು ಕತ್ತರಿಸಿ ಅವುಗಳನ್ನು ಸುಟ್ಟುಹಾಕಿ, ಮುಖ್ಯವಾಗಿ ಚಳಿಗಾಲದ ಅಂತ್ಯದ ವೇಳೆಗೆ.
  • ಬಳಕೆಯ ನಂತರ ಸೋಂಕುನಿವಾರಕದಿಂದ ಕತ್ತರಿಸುವ ಉಪಕರಣಗಳನ್ನು ಎಚ್ಚರಿಕೆಯಿಂದ ಸ್ವಚ್ಛಗೊಳಿಸಿ.
  • ಹೊಲದ ಕೆಲಸದ ಸಮಯದಲ್ಲಿ ಮರಗಳಿಗೆ ಗಾಯವಾಗದಂತೆ ನೋಡಿಕೊಳ್ಳಿ.
  • ಸರಿಯಾದ ಸಮರುವಿಕೆಯ ಮೂಲಕ ಮೇಲಾವರಣವನ್ನು ಗಾಳಿ-ಬೆಳಕಿಗೆ ತೆರೆಯಿರಿ.
  • ಮರಗಳಿಗೆ ಅತೀ ಹೆಚ್ಚು ಸಾರಜನಕವನ್ನು ಹಾಕಬೇಡಿ.
  • ಹೊಲಗಳ ಸುತ್ತಲೂ ಕೀಟಕ್ಕೆ ಪರ್ಯಾಯವಾಗಿ ಆಶ್ರಯ ನೀಡುವ ಗಿಡಗಳನ್ನು ನೆಡದಿರಿ.
  • ಗಂಭೀರ ಸೋಂಕಿನ ಸಂದರ್ಭಗಳಲ್ಲಿ, ಕೊರಡು ಸೇರಿದಂತೆ ಸಂಪೂರ್ಣ ಮರವನ್ನು ತೆಗೆದುಹಾಕಿ.
  • ಹೂಬಿಡುವ ಅವಧಿಯಲ್ಲಿ ಮರಗಳಿಗೆ ನೀರಾವರಿ ಮಾಡಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ