ಇತರೆ

ಝೊನೇಟ್ ಎಲೆ ಚುಕ್ಕೆ

Microdochium sorghi

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಮೊದಲಿಗೆ, ಎಲೆಗಳ ಮೇಲೆ ಕೆಂಪು-ಕಂದು ಬಣ್ಣದ ನೀರಿನಲ್ಲಿ-ನೆನೆಸಿದಂತಹ ಗಾಯಗಳು ಕಾಣಿಸಿಕೊಳ್ಳುತ್ತವೆ.
  • ನಂತರ ಗಾಢ-ಕೆಂಪು ಬಣ್ಣವಾಗಿ ಕೇಂದ್ರೀಕೃತ ರೀತಿಯಲ್ಲಿ ಹರಡುತ್ತವೆ.
  • ವೃತ್ತಾಕಾರ ಅಥವಾ ಅರ್ಧವೃತ್ತಾಕಾರದ ಗಾಯಗಳು ಕ್ರಮವಾಗಿ ಮಧ್ಯದ ನಾಳ ಅಥವಾ ಎಲೆಯ ಅಂಚುಗಳಲ್ಲಿ ಕಾಣಿಸಬಹುದು.
  • ಎಲೆಯ ಕವಚಗಳ ಮೇಲೂ ಗಾಯ ಕಾಣಿಸಿಕೊಳ್ಳಬಹುದು ಮತ್ತು ಹೂಗೊಂಚಲುಗಳು ಸಹ ರೋಗಲಕ್ಷಣಗಳನ್ನು ತೋರಿಸುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ಇತರೆ

ರೋಗಲಕ್ಷಣಗಳು

ಈ ರೋಗದ ಲಕ್ಷಣಗಳು ಎಲೆಗಳು, ಎಲೆಯ ಕವಚಗಳು ಮತ್ತು ಗೊಂಚಲುಗಳಲ್ಲಿ ಕಂಡುಬರುತ್ತವೆ. ಎಲೆಗಳ ಮೇಲೆ, ಕೆಂಪು ಮಿಶ್ರಿತ ಕಂದು ಬಣ್ಣದ, ನೀರಿನಲ್ಲಿ-ನೆನೆಸಿದಂತಹ ಕಲೆಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ಈ ಕಲೆಗಳಿಗೆ ಕಿರಿದಾದ, ತಿಳಿ ಹಸಿರು ಬಣ್ಣದ ಉಂಗುರ ಇರುತ್ತದೆ. ಅವು ಗಾತ್ರದಲ್ಲಿ ಬೆಳೆದಂತೆ, ಸುತ್ತಲೂ ಕೆಂಪು ಬಣ್ಣದ ಅಂಚಿರುವ ಮಧ್ಯದಲ್ಲಿ ತಿಳಿ ಕಂದು ಬಣ್ಣದಲ್ಲಿರುವ ಗಾಯಗಳಾಗಿ ಬೆಳೆಯುತ್ತವೆ. ಇವು ಎಲೆಯ ಅಂಚಿನುದ್ದಕ್ಕೂ ಇದ್ದರೆ ಅರ್ಧವೃತ್ತಾಕಾರವಾಗಿರುತ್ತವೆ ಮತ್ತು ಮಧ್ಯನಾಳದ ಹತ್ತಿರ ಇದ್ದರೆ ವೃತ್ತಾಕಾರದಲ್ಲಿರುತ್ತವೆ. ವಿಶಿಷ್ಟವಾದ ತೆಳು ಮತ್ತು ಗಾಢ ಉಂಗುರಗಳು ಒಂದರ ನಂತರ ಒಂದು ಅಥವಾ ಝೊನೇಟ್ ಮಾದರಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ಅಂತಿಮವಾಗಿ, ಸೋಂಕು ತೀವ್ರವಾದಾಗ ಗಾಯಗಳೆಲ್ಲಾ ಸೇರಿ ಎಲೆಯನ್ನು ಸಂಪೂರ್ಣವಾಗಿ ಆವರಿಸುತ್ತವೆ. ಎಲೆಗಳ ಕವಚಗಳ ಮೇಲೆ, ಗಾಢ ಕೆಂಪು ಬಣ್ಣದಿಂದ ಕಪ್ಪು-ಕೆನ್ನೇರಳೆ ಅಥವಾ ಕಂದು ಬಣ್ಣದ ಗಾಯಗಳು ವಿವಿಧ ಎತ್ತರ, ಆಕಾರ ಮತ್ತು ಗಾತ್ರಗಳಲ್ಲಿ ಕಾಣಿಸಿಕೊಳ್ಳುತ್ತವೆ. ಸೋಂಕಿತ ಎಲೆ, ಕವಚಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ, ಕಳೆಗುಂದುತ್ತವೆ ಮತ್ತು ಸಾಯುತ್ತವೆ. ಹಲವಾರು ಶಿಲೀಂಧ್ರಗಳ ರಚನೆಗಳನ್ನು(ಸ್ಕ್ಲೆರೋಟಿಯಾ) ಈ ಒಣ ಗಾಯಗಳಲ್ಲಿ ಕಾಣಬಹುದು. ಸೋಂಕಿಗೊಳಗಾದ ಹೂಗೊಂಚಲುಗಳು ಹಾಳಾಗುತ್ತವೆ.

Recommendations

ಜೈವಿಕ ನಿಯಂತ್ರಣ

ಈ ರೋಗಕಾರಕಕ್ಕೆ ಜೈವಿಕ ನಿಯಂತ್ರಣ ಕ್ರಮಗಳು ಲಭ್ಯವಿಲ್ಲ. ರೋಗದ ಸಂಭವನೀಯತೆಯನ್ನು ಅಥವಾ ತೀವ್ರತೆಯನ್ನು ತಗ್ಗಿಸಲು ಸಹಾಯ ಮಾಡುವ ಯಾವುದೇ ವಿಧಾನ ನಿಮಗೆ ತಿಳಿದಿದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳಿರುವ ಸಮಗ್ರ ಮಾರ್ಗವಿದ್ದರೆ ಅದನ್ನು ಮೊದಲು ಪರಿಗಣಿಸಿ. ಅಧಿಕ ವೆಚ್ಚದಿಂದಾಗಿ ಶಿಲೀಂಧ್ರನಾಶಕಗಳೊಂದಿಗಿನ ರಾಸಾಯನಿಕ ಚಿಕಿತ್ಸೆಯನ್ನು ಹೆಚ್ಚಾಗಿ ಶಿಫಾರಸು ಮಾಡಲಾಗುವುದಿಲ್ಲ. ಸುಗ್ಗಿಯ ಮತ್ತು ಸರದಿ ಬೆಳೆಯ ನಂತರ ಉಳಿಕೆಗಳ ನಿರ್ವಹಣೆ ಅತ್ಯಂತ ಕಾರ್ಯಸಾಧ್ಯವಾದ ರೋಗ ನಿರ್ವಹಣಾ ವಿಧಾನವಾಗಿದೆ.

ಅದಕ್ಕೆ ಏನು ಕಾರಣ

ಬೀಜಗಳು ಅಥವಾ ಮಣ್ಣಿನಲ್ಲಿ ಹಲವು ವರ್ಷಗಳ ಕಾಲ ಬದುಕಬಲ್ಲ ಗ್ಲೋಯೋಸೆರ್ಕೊಸ್ಪೋರಾ ಸೊರ್ಗಿ ಎಂಬ ಶಿಲೀಂಧ್ರದಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಸ್ಕ್ಲೆರೋಟಾರಿಯಾ( ಗಾಯಗಳ ಮೇಲೆ ಕಂಡುಬರುವ ಸಣ್ಣ ಕಪ್ಪನೆಯ ಚುಕ್ಕೆಗಳು) ಎಂದು ಕರೆಯಲ್ಪಡುವ ಶಿಲೀಂಧ್ರದ ಸುಪ್ತ ರಚನೆಗಳು ಸೋಂಕಿನ ಪ್ರಾಥಮಿಕ ಮೂಲವಾಗಿದೆ ಮತ್ತು ಸೂಕ್ತ ಪರಿಸ್ಥಿತಿಗಳು ಉಂಟಾದಾಗ ಇದು ಸಾಂಕ್ರಾಮಿಕ ರೋಗವನ್ನು ಪ್ರಚೋದಿಸಬಹುದು. ಉದಾಹರಣೆಗೆ ಬೆಚ್ಚಗಿನ ಮತ್ತು ಆರ್ದ್ರ ವಾತಾವರಣ. ರೋಗಕಾರಕವು ಮಣ್ಣಿನಿಂದ, ಕೆಳಗಿನ ಎಲೆಗಳಿಗೆ ನೀರಿನ ಹನಿಗಳ ಅಥವಾ ಗಾಳಿಯ ಮೂಲಕ ಹರಡುತ್ತದೆ. ಪರಿಸ್ಥಿತಿ ಅನುಕೂಲಕರವಾಗಿದ್ದರೆ, ರೋಗವು ಸಸ್ಯದ ಮೇಲ್ಭಾಗಕ್ಕೆ ಹರಡುತ್ತದೆ ಮತ್ತು ಎಲ್ಲಾ ಎಲೆಗಳಲ್ಲೂ ಗಾಯಗಳು ಉಂಟಾಗಬಹುದು. ಹುಲ್ಲುಜೋಳದಲ್ಲಿ ಝೊನೇಟ್ ಎಲೆ ಚುಕ್ಕಿಯನ್ನು ಪ್ರಚೋದಿಸುವ ರೋಗಕಾರಕವು ಜೋಳ ಮತ್ತು ಸಿರಿಧಾನ್ಯಗಳು ಸೇರಿದಂತೆ ಇತರ ಹುಲ್ಲು ಜಾತಿಗಳಿಗೂ ಸಹ ಸೋಂಕು ಉಂಟುಮಾಡುತ್ತವೆ. ಈ ಇತರ ಆಶ್ರಯದಾತ ಸಸ್ಯಗಳು ಮುಂದಿನ ಋತುಗಳಿಗೆ ಇನಾಕ್ಯುಲಮ್ ನ ಸಂಗ್ರಹ ಘಟಕವಾಗಿ ಕೆಲಸಮಾಡಬಹುದು.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಮತ್ತು ಆರೋಗ್ಯಕರ ಪ್ರಭೇದಗಳನ್ನು ನೆಡಿ.
  • ರೋಗದ ಲಕ್ಷಣಗಳಿಗಾಗಿ ನಿಯಮಿತವಾಗಿ ಹೊಲವನ್ನು ಪರಿಶೀಲಿಸಿ.
  • ಹನಿ ನೀರಾವರಿ ತಪ್ಪಿಸಿ ಮತ್ತು ಎಲೆಯ ಆರ್ದ್ರತೆ ಕಡಿಮೆ ಮಾಡಿ.
  • ಸಾರಜನಕ ರಸಗೊಬ್ಬರ ಹಾಕಿ, ಏಕೆಂದರೆ ಇದು ರೋಗದ ಸಂಭವನೀಯತೆಯನ್ನು ಕಡಿಮೆ ಮಾಡುತ್ತದೆ ಎಂದು ಕಂಡುಬಂದಿದೆ.
  • ನಾಲ್ಕು ವರ್ಷಗಳ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಸರದಿ ಬೆಳೆಯನ್ನು ಶಿಫಾರಸು ಮಾಡಲಾಗಿದೆ.
  • ಮಣ್ಣಿನ ಪಿಹೆಚ್ 6 ರಿಂದ 7 ರ ನಡುವೆ ಇರುವಂತೆ ನೋಡಿಕೊಳ್ಳಿ.
  • ಸಸ್ಯದ ಉಳಿಕೆಗಳನ್ನು ಸಂಗ್ರಹಿಸಿ ಮತ್ತು ಅವುಗಳನ್ನು ಜಮೀನಿಂದ ದೂರದಲ್ಲಿ ಆಳವಾಗಿ ಹೂಳುವ ಅಥವಾ ಸುಡುವ ಮೂಲಕ ನಾಶಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ