ಸಿರಿಧಾನ್ಯ

ರಾಗಿಯ ಎರ್ಗಾಟ್

Claviceps fusiformis

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ತೆನೆಯ ಮೇಲೆ ತೆಳು ಗುಲಾಬಿಯಿಂದ ಕೆಂಪು ಬಣ್ಣದ ದ್ರವ ಪದಾರ್ಥ (ಹನಿಡ್ಯೂ) ಕಂಡು ಬರುತ್ತದೆ.
  • ಧಾನ್ಯದ ಕಾಳುಗಳ ಬದಲಿಗೆ ಕಪ್ಪು ಸ್ಕ್ಲೆರೋಟಿಯಾ ಅಥವಾ ಎರ್ಗಾಟ್ ರಚನೆಗಳು ಇರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸಿರಿಧಾನ್ಯ

ರೋಗಲಕ್ಷಣಗಳು

ತೆನೆಯಲ್ಲಿರುವ ಸೋಂಕಿತ ಹೂವುಗಳು ಗುಲಾಬಿಯಿಂದ ಕೆಂಪು ಬಣ್ಣದ ದ್ರವ ಸ್ರವಿಸುತ್ತವೆ. ಇದು ಎಲೆಗಳು ಮತ್ತು ನೆಲದ ಮೇಲೆ ಬೀಳಬಹುದು. ದ್ರವವು ದೊಡ್ಡ ಪ್ರಮಾಣದಲ್ಲಿ ಕೊನಿಡಿಯಾವನ್ನು (ಶಿಲೀಂಧ್ರದ ಬೀಜಕಗಳು)ಹೊಂದಿರುತ್ತದೆ. ಸೋಂಕಿತ ಹೂವುಗಳು ಧಾನ್ಯಗಳನ್ನು ಉತ್ಪಾದಿಸುವುದಿಲ್ಲ. ಕಾಳುಗಳ ಬದಲಿಗೆ ಕಪ್ಪು ಶಿಲೀಂಧ್ರಗಳ ಗುಂಪು ಕಂಡುಬರುತ್ತದೆ.

Recommendations

ಜೈವಿಕ ನಿಯಂತ್ರಣ

ಕಚ್ಛಾ ಬೇವಿನ ಉತ್ಪನ್ನಗಳನ್ನು ಬಳಸಬಹುದು.

ರಾಸಾಯನಿಕ ನಿಯಂತ್ರಣ

ಜಿರಾಮ್ ಹೊಂದಿರುವ ಶಿಲೀಂಧ್ರನಾಶಕಗಳನ್ನು ಎರ್ಗಾಟ್ ನಿಯಂತ್ರಿಸಲು ಮತ್ತು ತಡೆಗಟ್ಟಲು ಬಳಸಬಹುದು.

ಅದಕ್ಕೆ ಏನು ಕಾರಣ

ರೋಗಕ್ಕೆ ಅನುಕೂಲಕರ ಪರಿಸ್ಥಿತಿಗಳೆಂದರೆ ಆರ್ದ್ರ ಹವಾಮಾನ ಮತ್ತು 20 ರಿಂದ 39 ಡಿಗ್ರಿ ಸೆಲ್ಸಿಯಸ್ ತಾಪಮಾನ. ಸೋಂಕು ತಗುಲಿದ 5 ರಿಂದ 7 ದಿನಗಳ ನಂತರ ಸಿಹಿದ್ರವ್ಯ ಸ್ರವಿಸಲು ಆರಂಭವಾಗುತ್ತದೆ. ಈ ಸ್ರವಿಸಲ್ಪಟ್ಟ ದ್ರವವು ಹೂವುಗಳಿಗೆ ಎರಡನೇ ಹಂತದ ಸೋಂಕನ್ನು ಉಂಟು ಮಾಡುತ್ತವೆ. ಎರ್ಗಾಟ್ ಸೇವನೆಯಿಂದ ಮಾನವರಲ್ಲಿ ಮತ್ತು ಪ್ರಾಣಿಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಈ ಶಿಲೀಂಧ್ರ ಸಸ್ಯದ ಉಳಿಕೆಗಳಲ್ಲಿ ವರ್ಷವಿಡೀ ಉಳಿದುಕೊಂಡಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಪ್ರಭೇದಗಳನ್ನು ನೆಡಿ.
  • ಸೋಂಕುರಹಿತ ಬೀಜಗಳನ್ನು ಬಳಸಿ.
  • ಸಮತೋಲಿತ ಪೋಷಕಾಂಶ ಪೂರೈಕೆ (ಕಡಿಮೆ ಸಾರಜನಕ ಮತ್ತು ಹೆಚ್ಚು ಫಾಸ್ಫರ್) ಖಚಿತಪಡಿಸಿಕೊಳ್ಳಿ.
  • ಮಳೆಯಿಂದ ಫಲವತ್ತಾದ ಸ್ಥಿತಿಯಲ್ಲಿ ನಾಟಿ ಮಾಡಿ.
  • ಎಲ್ಲಾ ಸಸ್ಯದ ಉಳಿಕೆಗಳನ್ನು ಹೂತು ಹಾಕಲು ಆಳವಾಗಿ ಉಳುಮೆ ಮಾಡಿ.
  • ಹುಲ್ಲುಜೋಳದ ಜೊತೆಗೆ ಹೆಸರುಕಾಳು ಬೆಳೆಯಿರಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ