ಸೌತೆಕಾಯಿ

ಸೌತೇಕಾಯಿಯ ಮೇಲೆ ಗಾಳಿ ಹಾನಿ

Wind Damage on Cucumber

ಇತರೆ

5 mins to read

ಸಂಕ್ಷಿಪ್ತವಾಗಿ

  • ಗಾಳಿ ಹಾನಿಯು ಸೌತೆಕಾಯಿಯ ಬೆಳವಣಿಗೆ, ಸಸ್ಯರಚನೆ ಮತ್ತು ರೂಪದಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತದೆ.
  • ಸಸ್ಯಕ್ಕೆ ಆಗುವ ಹಾನಿ ಎಲೆ ಉದುರುವುದು ಮತ್ತು ಮರಳು ಎರಚುವಿಕೆಯಂತಹಗಳನ್ನು ಒಳಗೊಂಡಿರುತ್ತದೆ.
  • ಇದು ಎಲೆಗಳು ಮುರಿಯಲು ಮತ್ತು ಒಣಗಲು ಕಾರಣವಾಗುತ್ತದೆ.
  • ತೀವ್ರತರವಾದ ಪ್ರಕರಣಗಳಲ್ಲಿ, ಕಡಿಮೆ ಹಣ್ಣುಗಳು ಉತ್ಪಾದನೆಯಾಗುತ್ತದೆ ಮತ್ತು ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ.
  • ಇದರಿಂದಾಗಿ ಇಳುವರಿ ನಷ್ಟವಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸೌತೆಕಾಯಿ

ರೋಗಲಕ್ಷಣಗಳು

ರೋಗಲಕ್ಷಣಗಳು ತೀವ್ರತರವಾದ ಬರ ಪರಿಸ್ಥಿತಿಗಳಲ್ಲಿ ಬೆಳೆದ ಸಸ್ಯಗಳಂತೆ ಕಾಣುತ್ತವೆ. ಬಲವಾದ ಗಾಳಿಯಿದ್ದಾಗ ಬಿತ್ತನೆ ಮಾಡಿದ ಬೀಜಗಳು ಮಣ್ಣಿನಿಂದ ಹೊರಗೆ ಹಾರಬಹುದು. ಹೊಸದಾಗಿ ಹೊರಹೊಮ್ಮಿದ ಸಸಿಗಳು ಮರಳಿನ ಕಣಗಳಿಂದ (ಸ್ಯಾಂಡ್ ಬ್ಲಾಸ್ಟಿಂಗ್) ಹಾನಿಗೊಳಗಾಗಬಹುದು. ಬೆಳೆದ ಸಸ್ಯಗಳಲ್ಲಿ, ಎಲೆಗಳು ಸತತವಾದ ಗಾಳಿ ಒತ್ತಡದಿಂದ ಬಾಡಬಹುದು. ಮತ್ತು ಅಂತಿಮವಾಗಿ ಒಣಗಿ, ಪುಡಿ ಪುಡಿಯಾಗುತ್ತವೆ. ಎಲೆಗಳು ಅಂತರ್ ನಾಳ ನೆಕ್ರೋಸಿಸ್ ನ ಚಿಹ್ನೆಗಳನ್ನು ಸಹ ತೋರಿಸಬಹುದು ಮತ್ತು ತೀವ್ರತರವಾದ ಪ್ರಕರಣಗಳಲ್ಲಿ ಚೂರಾಗುತ್ತವೆ ಮತ್ತು ಕೊಳೆಯುತ್ತವೆ. ಗಾಳಿ ಒತ್ತಡಕ್ಕೆ ನಿರಂತರವಾಗಿ ಒಳಗಾದಾಗ ಸಸ್ಯಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ನಂತರದ ಋತುವಿನಲ್ಲಿ, ಹೂವಿನ ನಷ್ಟ, ಹಣ್ಣಿಗೆ ಹಾನಿ ಮತ್ತು ಗಾಯ ಮುಂತಾದ ರೋಗಲಕ್ಷಣಗಳು ಪಟ್ಟಿಗೆ ಸೇರುತ್ತವೆ. ಮೊಡವೆ ತರಹದ ಗಾಯಗಳಿರುವ, ಮೂಗೇಟಿಗೊಳಗಾದ ಹಣ್ಣುಗಳು ಮಾರಲು ಯೋಗ್ಯವಲ್ಲ. ಕಳಪೆ ಹೂವಿನ ಬೆಳವಣಿಗೆ ಮತ್ತು ಹಣ್ಣಿನ ಕಡಿಮೆ ಗುಣಮಟ್ಟದಿಂದಾಗಿ ಇಳುವರಿ ನಷ್ಟಗಳನ್ನು ನಿರೀಕ್ಷಿಸಬಹುದು.

Recommendations

ಜೈವಿಕ ನಿಯಂತ್ರಣ

ಗಾಳಿ ಹಾನಿ ವಿರುದ್ಧ ಜೈವಿಕ ನಿಯಂತ್ರಣ ಪರಿಹಾರಗಳು ಇಲ್ಲ. ತಡೆಗಟ್ಟುವ ಕ್ರಮಗಳು, ಉದಾಹರಣೆಗೆ ಗಾಳಿ ತಡೆ ರೂಪದಲ್ಲಿ, ಹಾನಿ ತಪ್ಪಿಸಲು ಸಹಾಯ ಮಾಡುತ್ತದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆ ಇರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಮೊದಲನೆಯದಾಗಿ, ಹಾನಿಯ ಪ್ರಮಾಣವನ್ನು ಲೆಕ್ಕಹಾಕಿ, ಬೆಳೆಯನ್ನು ಉಳಿಸಬಹುದೇ ಎಂಬುದನ್ನು ನಿರ್ಧರಿಸುವುದು ಮುಖ್ಯ. ಸಂಭಾವ್ಯ ಚಿಕಿತ್ಸೆಗಳು ಸಸ್ಯದ ಬೆಳವಣಿಗೆಯ ಹಂತದ ಮೇಲೆ ಅವಲಂಬಿತವಾಗಿರುತ್ತದೆ. ತೀವ್ರತರವಾದ ಪ್ರಕರಣಗಳಲ್ಲಿ, ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾದ ಕಾಯಿಲೆಗಳನ್ನು ತಡೆಗಟ್ಟುವ ಚಿಕಿತ್ಸೆಗಳ ಬಗ್ಗೆ ಗಮನಹರಿಸಬೇಕು. ಉದಾಹರಣೆಗೆ ಹಾನಿಗೊಳಗಾದ ಸಸ್ಯದ ಭಾಗಗಳನ್ನು ಕಡಿದು ಮತ್ತು ಶಿಲೀಂಧ್ರನಾಶಕ ಮತ್ತು ಆಂಟಿಬ್ಯಾಕ್ಟೀರಿಯಲ್ ಉತ್ಪನ್ನಗಳ ಬಳಕೆ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಗಾಳಿಯಿಂದ ಉಂಟಾಗುತ್ತವೆ ಮತ್ತು ಬಲವಾದ, ನಿರಂತರ ಗಾಳಿ ಬೀಸುವ ಮತ್ತು ಗಾಳಿ ತಡೆ ಇಲ್ಲದ ಹೊಲಗಳಲ್ಲಿ ನಿರ್ದಿಷ್ಟವಾಗಿ ಇದು ಕಳವಳವನ್ನು ಉಂಟುಮಾಡುತ್ತದೆ. ಈ ಹಾನಿ, ಗಾಳಿಯಲ್ಲಿರುವ ಮಣ್ಣಿನ ಕಣಗಳು ಅಥವಾ ಕೊಂಬೆಗಳ ಚಲನೆಯಿಂದ ಆಗಬಹುದು. ಗಾಳಿಯ ವೇಗ, ಅದಕ್ಕೆ ಒಳಗಾಗುವ ಅವಧಿ, ಮತ್ತು ಸಸ್ಯದ ಬೆಳವಣಿಗೆಯ ಹಂತಗಳು ರೋಗಲಕ್ಷಣಗಳ ತೀವ್ರತೆಯನ್ನು ನಿರ್ಧರಿಸುತ್ತದೆ. ಮರಳು ಮಣ್ಣಿನಲ್ಲಿ ಬೆಳೆಯಲಾಗುವ ಎಳೆ ಸೌತೆಕಾಯಿ ಸಸ್ಯಗಳು ವಿಶೇಷವಾಗಿ ಮರಳು ಸವೆತ ಮತ್ತು ಗಾಯಕ್ಕೆ ಒಳಗಾಗುತ್ತವೆ. ಕೊಂಬೆಗಳ ಚಲನೆಗಳು ಎಲೆ ಮತ್ತು ಹಣ್ಣಿನ ಮೇಲ್ಮೈಗಳ ಮೇಲೆ ಗಾಯಗಳನ್ನು ಉಂಟುಮಾಡುತ್ತವೆ. ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಹಾನಿಗೊಳಗಾದ ಅಂಗಾಂಶಗಳನ್ನು ಆಕ್ರಮಿಸಬಹುದು. ಮತ್ತು ಕೊಳೆಯಲು ದಾರಿ ಮಾಡಬಹುದು. ಚೇತರಿಕೆಯು, ಸಸ್ಯದ ಬೆಳವಣಿಗೆಯ ಹಂತ, ಮಣ್ಣಿನ ತೇವಾಂಶ ಮತ್ತು ಹವಾಮಾನದ ಮೇಲೆ ಅವಲಂಬಿತವಾಗಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಗಾಳಿ ಒತ್ತಡಕ್ಕೆ ಒಳಗಾಗದ ಪ್ರದೇಶಗಳಲ್ಲಿ ಬಿತ್ತನೆ ಮಾಡಿ.
  • ಸಾಲು ಪರದೆ ಬಳಸಿ ಎಳೆಯ ಸಸಿಗಳನ್ನು ರಕ್ಷಿಸಿ.
  • ಗಾಳಿ ವೇಗ, ದಿಕ್ಕು ಮತ್ತು ಎಷ್ಟು ಬಾರಿ ಬೀಸುತ್ತದೆ ಎಂಬ ಮಾದರಿಗಳನ್ನು ಅನುಸರಿಸಿ ಶಾಶ್ವತ ಅಥವಾ ಸಾಂದರ್ಭಿಕ ಗಾಳಿ ತಡೆಗಳನ್ನು ಸ್ಥಾಪಿಸಿ.
  • ನಿಮ್ಮ ಬೆಳೆಗಿಂತ ಹೆಚ್ಚು ಎತ್ತರ ಅಥವಾ ದಟ್ಟ ಬೆಳವಣಿಗೆ ಇರುವ ಸಸ್ಯಗಳನ್ನು ಹೊಲದ ಸುತ್ತಲೂ ಬೆಳೆಸಿ.
  • ಉದಾ - ಮೆಕ್ಕೆ ಜೋಳ ಅಥವಾ ರೈ.
  • ಹೊಲಗಳಲ್ಲಿ ಅದೇ ಗುಣಲಕ್ಷಣಗಳೊಂದಿಗೆ ಅಂತರ್ ಬೆಳೆ ಮಾಡಿ.
  • ವಿಪರೀತ ಗಾಳಿ ಅಥವಾ ವಿಭಿನ್ನ ಮಾರುತದ ದಿಕ್ಕುಗಳಿದ್ದಾಗ, ನೀವು ಒಂದಕ್ಕಿಂತ ಹೆಚ್ಚು ಗಾಳಿ ತಡೆಗಳನ್ನು ಆಯ್ಕೆ ಮಾಡಬಹುದು.
  • ಕತ್ತರಿಸುವ ಅಥವಾ ಸಮರುವ ಸಾಧನಗಳಿಂದ ಹಾನಿಗೊಳಗಾದ ಎಲೆಗಳು ಮತ್ತು ಹಣ್ಣುಗಳನ್ನು ತೆಗೆದುಹಾಕಿ.
  • ಸೂಕ್ತವಾದ ಕಡೆ ಹೊಸ ಬೆಳವಣಿಗೆಯನ್ನು ಉತ್ತೇಜಿಸಲು ಹೆಚ್ಚುವರಿ ಸಾರಜನಕವನ್ನು ಸಹ ಹಾಕಬಹುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ