ಹತ್ತಿ

ಪ್ಯಾರಾವಿಲ್ಟ್

Parawilt

ಇತರೆ

5 mins to read

ಸಂಕ್ಷಿಪ್ತವಾಗಿ

  • ಪ್ಯಾರಾವಿಲ್ಟ್ ಎಂಬುದು ಸಸ್ಯೀಯ ಅಸ್ವಸ್ಥತೆಯಾಗಿದ್ದು, ನೀರು ನಿಂತ ಪ್ರದೇಶಗಳಲ್ಲಿ ತ್ವರಿತ ಬೆಳವಣಿಗೆಯನ್ನು ಹೊಂದಿರುವ ಸಸ್ಯಗಳ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತದೆ.
  • ರೋಗಲಕ್ಷಣಗಳೆಂದರೆ ಎಲೆಯು ಬಾಡುವುದು ಮತ್ತು ಬಣ್ಣ ಕಳೆದುಕೊಳ್ಳುವುದು.
  • ರೋಗ ಮುಂದುವರೆದಂತೆ ಎಲೆಯ ಬಣ್ಣವು ಕ್ಲೋರೋಟಿಕ್ ನಿಂದ ಕಂಚು / ಕೆಂಪು ಬಣ್ಣಕ್ಕೆ ಬದಲಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಹತ್ತಿ

ರೋಗಲಕ್ಷಣಗಳು

'ಹಠಾತ್ ಬಾಡುವಿಕೆ' ಎಂದೂ ಕರೆಯಲಾಗುವ ಪ್ಯಾರಾವಿಲ್ಟ್, ಹೊಲದಲ್ಲಿ ಅಲ್ಲಲ್ಲಿ ಹರಡಿದಂತೆ ಮತ್ತು ಅಕಾಲಿಕವಾಗಿ ಕಾಣಿಸುತ್ತದೆ. ಈ ಅಸ್ವಸ್ಥತೆಗೆ ಸಂಬಂಧಿಸಿದ ಯಾವುದೇ ನೈಜ ಹೊಲದ ಮಾದರಿ ಇಲ್ಲ ಮತ್ತು ಇದನ್ನು ರೋಗಕಾರಕಗಳಿಂದ ಉಂಟಾದ ಕಾಯಿಲೆ ಎಂದು ಬಹಳ ಸಲ ತಪ್ಪಾಗಿ ತಿಳಿಯುವ ಸಂಭವ ಇದೆ. ಮುಖ್ಯ ಲಕ್ಷಣಗಳು ಬಾಡುವಿಕೆ ಮತ್ತು ಎಲೆಗಳ ಬಣ್ಣ ಕಳೆದುಕೊಳ್ಳುವಿಕೆ. ಎಲೆಯ ಬಣ್ಣವು ಕ್ಲೋರೋಟಿಕ್ ನಿಂದ ಕೆಂಚು ಅಥವಾ ಕೆಂಪು ಬಣ್ಣಕ್ಕೆ ಬದಲಾಗಬಹುದು ಮತ್ತು ನಂತರ ಅಂಗಾಂಶಗಳು ಒಣಗುತ್ತದೆ. ಈ ಅಸ್ವಸ್ಥತೆಯು ವಿಶೇಷವಾಗಿ ಕ್ಷಿಪ್ರ ಬೆಳವಣಿಗೆಯ, ದೊಡ್ಡ ಮೇಲಾವರಣ ಮತ್ತು ಭಾರವಾದ ಬೀಜಕೋಶದ ಹೊರೆ ಇರುವ ಸಸ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಬೀಜಗಳು ಮತ್ತು ಎಲೆಗಳ ಬೇಗ ಉದುರುವಿಕೆ ಮತ್ತು ಬೇಗನೆ ಬೀಜಕೋಶಗಳು ಬಿರಿಯುವ ಸಂಭವ ಇರುತ್ತದೆ. ಸಸ್ಯಗಳು ಚೇತರಿಸಿಕೊಳ್ಳಬಹುದು. ಆದರೆ ಇಳುವರಿಯ ಮೇಲೆ ಇದು ಋಣಾತ್ಮಕ ಪರಿಣಾಮ ಬೀರುತ್ತದೆ.

Recommendations

ಜೈವಿಕ ನಿಯಂತ್ರಣ

ಪ್ಯಾರಾವಿಲ್ಟ್ ಗೆ ಜೈವಿಕ ನಿಯಂತ್ರಣ ಕ್ರಮಗಳು ಇಲ್ಲ. ಈ ಅಸ್ವಸ್ಥತೆಯನ್ನು ತಪ್ಪಿಸಲು, ಹತ್ತಿ ಸಸ್ಯಗಳ ನೀರಾವರಿ ಮತ್ತು ರಸಗೊಬ್ಬರ ಬಳಕೆ ಸರಿಹೊಂದಿಸುವುದು ಮತ್ತು ಮಣ್ಣಿನ ಉತ್ತಮ ಒಳಚರಂಡಿ ಯೋಜನೆ ಮಾಡುವುದು ಅತ್ಯಗತ್ಯ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ , ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಮೊದಲು ಪರಿಗಣಿಸಿ. ಪ್ಯಾರಾವಿಲ್ಟ್ ಗೆ ಯಾವುದೇ ರಾಸಾಯನಿಕ ಚಿಕಿತ್ಸೆಗಳಿಲ್ಲ. ಆದಾಗ್ಯೂ, ಒಳಚರಂಡಿ ಕಾಲುವೆ ಮೂಲಕ ಹೆಚ್ಚಿನ ನೀರನ್ನು ತೆಗೆದುಹಾಕುವುದರ ಮೂಲಕ ನೀವು ಪ್ರಾರಂಭಿಸಬಹುದು. ನಂತರ 15 ಗ್ರಾಂ ಯೂರಿಯಾ ದ್ರಾವಣ, 15 ಗ್ರಾಂ ಮ್ಯೂರೇಟ್ ಆಫ್ ಪೊಟಾಷ್ ಮತ್ತು 2 ಗ್ರಾಂ ತಾಮ್ರದ ಆಕ್ಸಿಕೊರೈಡ್ ಅನ್ನು 1 ಲೀಟರ್ ನೀರಿನಲ್ಲಿ ಕರಗಿಸಿ ದ್ರಾವಣ ತಯಾರಿಸಿ. ಇದನ್ನು ಸಸ್ಯದ ಬೇರಿನ ವಲಯದಲ್ಲಿ 100 -150 ಮಿಲೀ ಸೇರಿಸಿ. ಈ ದ್ರಾವಣ ಸಸ್ಯಕ್ಕೆ ತ್ವರಿತ ಪೋಷಕಾಂಶವನ್ನು ಒದಗಿಸುತ್ತದೆ ಮತ್ತು ಶಿಲೀಂಧ್ರನಾಶಕವು ಶಿಲೀಂಧ್ರಗಳ ಸೋಂಕನ್ನು ತಡೆಗಟ್ಟುತ್ತದೆ.

ಅದಕ್ಕೆ ಏನು ಕಾರಣ

ಪ್ಯಾರಾವಿಲ್ಟ್ ಒಂದು ಸಸ್ಯೀಯ ಅಸ್ವಸ್ಥತೆ. ಅಂದರೆ ಶಿಲೀಂಧ್ರಗಳು, ಬ್ಯಾಕ್ಟೀರಿಯಾಗಳು, ವೈರಸ್ ಗಳು ಅಥವಾ ಆ ರೀತಿಯ ಯಾವ ರೋಗಕಾರಕಗಳನ್ನು ಒಳಗೊಂಡಿರುವುದಿಲ್ಲ. ಹತ್ತಿ ಗಿಡಗಳಲ್ಲಿ ಇದೇ ರೋಗಲಕ್ಷಣಗಳನ್ನು ಉಂಟುಮಾಡುವ ಇತರ ಕಾಯಿಲೆ ಅಥವಾ ಒತ್ತಡಗಳಿಗೆ ವಿರುದ್ಧವಾಗಿ, ಪ್ಯಾರಾವಿಲ್ಟ್ ಕೆಲವು ಗಂಟೆಗಳಲ್ಲಿ ಮತ್ತು ನಿರ್ದಿಷ್ಟ ಪ್ರಾದೇಶಿಕ ಮಾದರಿಯಿಲ್ಲದೆ ಬೆಳೆಯುತ್ತದೆ. ಅಲ್ಲಲ್ಲಿ ಹರಡಿದಂತಿರುವುದು ಮತ್ತು ಅಕಾಲಿಕವಾಗಿ ಘಟಿಸುವುದು ಇದರ ವಿಶಿಷ್ಟ ಚಿಹ್ನೆಗಳಾಗಿವೆ. ಈ ಅಸ್ವಸ್ಥತೆಗೆ, ಬೇರಿನ ಸುತ್ತ ನೀರಿನ ಹಠಾತ್ ಶೇಖರಣೆಯ (ಮಳೆ ಅಥವಾ ಹೆಚ್ಚಿನ ನೀರಾವರಿ ನಂತರ) ನಂತರ ಹೆಚ್ಚಿನ ಉಷ್ಣತೆ ಮತ್ತು ಹೆಚ್ಚಿನ ಸೂರ್ಯನ ಬೆಳಕು ಕಾರಣ ಎಂದು ಈಗ ತಿಳಿದುಬಂದಿದೆ. ಸಸ್ಯದ ತ್ವರಿತ ಬೆಳವಣಿಗೆ ಮತ್ತು ಪೋಷಕಾಂಶದ ಅಸಮತೋಲನ ಕೂಡಾ ಇದರಲ್ಲಿ ಒಳಗೊಂಡಿವೆ. ಮಣ್ಣಿನಲ್ಲಿ ಹೆಚ್ಚಿನ ಜೇಡಿನ ಅಂಶ ಅಥವಾ ಕಳಪೆ ಒಳಚರಂಡಿ ಇರುವ ಮಣ್ಣುಗಳಲ್ಲಿ ಈ ಅಸ್ವಸ್ಥತೆ ಉಂಟಾಗುವ ಸಾಧ್ಯತೆ ಹೆಚ್ಚು.


ಮುಂಜಾಗ್ರತಾ ಕ್ರಮಗಳು

  • ಪ್ಯಾರಾವಿಲ್ಟ್ ನಿರೋಧಕ ಪ್ರಭೇದಗಳು ಅಥವಾ ಮಿಶ್ರತಳಿಗಳನ್ನು ನೆಡಿ.
  • ಹೊಲಗಳಲ್ಲಿ ನೀರು ನಿಲ್ಲುವುದನ್ನು ತಡೆಯಲು ಉತ್ತಮ ಒಳಚರಂಡಿ ವ್ಯವಸ್ಥೆ ಮಾಡಿ.
  • ನಿರ್ದಿಷ್ಟ ಬೆಳವಣಿಗೆಯ ಹಂತ ಮತ್ತು / ಅಥವಾ ಶುಷ್ಕ ಸ್ಥಿತಿಗಳಲ್ಲಿ ಅಗತ್ಯವಿರುವಾಗ ಹೊರತುಪಡಿಸಿ, ಅಗತ್ಯವಿಲ್ಲದಾಗ ವಿಪರೀತ ಅಥವಾ ಆಗಾಗ್ಗೆ ನೀರಾವರಿ ಮಾಡುವುದನ್ನು ತಪ್ಪಿಸಿ.
  • ನಿಯಮಿತವಾಗಿ ಬೆಳೆಗಳ ಮೇಲ್ವಿಚಾರಣೆ ಮಾಡಿ.
  • ಅದರಲ್ಲೂ, ವಿಶೇಷವಾಗಿ ಭಾರೀ ಮಳೆಯ ನಂತರ ಹೆಚ್ಚಿನ ತಾಪಮಾನ ಮತ್ತು ಹೆಚ್ಚಿನ ಸೂರ್ಯನ ಬೆಳಕು ಇರುವಾಗ.
  • ವಿಪರೀತ ಬೆಳವಣಿಗೆಯನ್ನು ತಪ್ಪಿಸಲು ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಬಳಕೆ ಮಾಡಬೇಡಿ (ಉದಾ: ದೊಡ್ಡ ಮೇಲಾವರಣ ಮತ್ತು ಭಾರವಾದ ಬೀಜಕೋಶಗಳ ಹೊರೆ).
  • ಅಸ್ವಸ್ಥತೆಯ ಕಾರಣಗಳನ್ನು ತಪ್ಪಿಸಲು ಬಿತ್ತನೆಯ ದಿನಾಂಕವನ್ನು ಮಾರ್ಪಡಿಸಿ (ಭಾರಿ ಮಳೆ ಮತ್ತು ಸೂರ್ಯನ ಬೆಳಕು).

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ