ಹತ್ತಿ

ಹರ್ಬಿಸೈಡ್ ಬ್ಲೀಚ್

Herbicides Photosynthesis Inhibitors

ಇತರೆ

5 mins to read

ಸಂಕ್ಷಿಪ್ತವಾಗಿ

  • ಸಿರೆಗಳ ಮಧ್ಯೆ ಎಲೆಗಳು ಹಳದಿಯಾಗುತ್ತವೆ.
  • ಎಲೆಯ ತುದಿಗಳು ಹಳದಿಯಾಗುತ್ತವೆ ಮತ್ತು ಮೇಲ್ಮುಖವಾಗಿ ಬಾಗುತ್ತವೆ.
  • ಅತಿ ಹೆಚ್ಚಿನ ಪ್ರಮಾಣದಲ್ಲಿ 'ಬ್ಲೀಚಿಂಗ್' ಉಂಟಾಗುತ್ತದೆ ಮತ್ತು ಅಂಗಾಂಶಗಳು ಸಾಯುತ್ತವೆ.
  • ಪೂರ್ಣ ಪ್ರಮಾಣದ ಸೂರ್ಯನ ಬೆಳಕಿನಲ್ಲಿ ರೋಗಲಕ್ಷಣಗಳು ವೇಗವಾಗಿ ಬೆಳೆಯುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ಹತ್ತಿ

ರೋಗಲಕ್ಷಣಗಳು

ರೋಗಲಕ್ಷಣಗಳು ಬಳಸಲ್ಪಟ್ಟ ಉತ್ಪನ್ನಗಳನ್ನು, ಅದನ್ನು ಹಾಕಿದ ಸಮಯ ಮತ್ತು ಪ್ರಮಾಣವನ್ನು ಆಧರಿಸಿರುತ್ತವೆ. ಹಳೆಯ ಎಲೆಗಳೂ ಸಹ ಹೊಸ ಎಲೆಗಳಿಗಿಂತ ಹೆಚ್ಚು ಹಾನಿಗೊಳಗಾಗಿರುತ್ತವೆ. ಎಲೆಗಳಲ್ಲಿ ಸಿರೆಗಳ ನಡುಭಾಗ ಬಣ್ಣ ಕಳೆದುಕೊಳ್ಳುವುದು (ಕ್ಲೋರೊಸಿಸ್) ಅಥವಾ ಮಾಟಲಿಂಗ್ ಸಹ ಉಂಟಾಗುತ್ತವೆ, ಇದರಲ್ಲಿ ಸಿರೆಗಳ ನಡುವಿನ ಅಂಗಾಂಶಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಎಲೆಯ ತುದಿಗಳು ಹಳದಿಯಾಗುತ್ತವೆ ಮತ್ತು ನಂತರ ಮೇಲ್ಮುಖವಾಗಿ ಬಾಗಲು ಪ್ರಾರಂಭಿಸಬಹುದು. ಕ್ರಮೇಣವಾಗಿ, ಎಲೆಗಳು ಒಣಗುತ್ತವೆ ಮತ್ತು ಎರಡರಿಂದ ಐದು ದಿನಗಳ ಒಳಗೆ ಇವು ಉದುರಬಹುದು, ಇದು ಪೂರ್ಣ ಪ್ರಮಾಣದ ಸೂರ್ಯನ ಬೆಳಕಿನಲ್ಲಿ ಉಲ್ಬಣಗೊಳ್ಳುವಂಥಾದ್ದಾಗಿದೆ ("ಪೇಪರ್ ಬ್ಯಾಗಿನಂತೆ ತೋರುತ್ತವೆ"). ಎಲೆಗಳ ಮೇಲೆ ಅವುಗಳ ವೇಗದ ಮತ್ತು ಅಪಾಯಕಾರಿ ಪರಿಣಾಮಗಳ ಕಾರಣದಿಂದಾಗಿ ಅವುಗಳನ್ನು 'ಬ್ಲೀಚರ್ಸ್' ಎನ್ನಲಾಗುತ್ತದೆ.

Recommendations

ಜೈವಿಕ ನಿಯಂತ್ರಣ

ಈ ಹಾನಿಗೆ ಯಾವುದೇ ಜೈವಿಕ ನಿಯಂತ್ರಣ ಪರಿಹಾರಗಳಿಲ್ಲ. ಹಾನಿಯಾಗುವ ಮೊದಲೇ ತಡೆ ಮತ್ತು ಉತ್ತಮ ಬೇಸಾಯ ಪದ್ಧತಿಗಳನ್ನು ರೂಢಿಸಿಕೊಳ್ಳುವುದೇ ಮುಖ್ಯವಾಗಿದೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಲಭ್ಯವಿದ್ದಲ್ಲಿ, ಜೈವಿಕ ನಿಯಂತ್ರಣದ ಜೊತೆ, ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಸಸ್ಯನಾಶಕದ ಸಿಂಪರಣೆಯನ್ನು ಯೋಜಿಸುವ ಮೊದಲು ನೀವು ಯಾವ ವಿಧದ ಕಳೆಗಳನ್ನು ನಿರ್ವಹಿಸುತ್ತಿದ್ದೀರಿ ಎಂಬುದರ ಬಗ್ಗೆ ತಿಳಿಯಿರಿ (ಮೂಲವಾಗಿ ಅಗಲ ಎಲೆಯುಳ್ಳ ಕಳೆಗಳು ಅಥವಾ ಹುಲ್ಲುಗಳು) ಮತ್ತು ಇನ್ನಿತರ ಯಾವುದೇ ವಿಧಾನವು ಈ ಉದ್ದೇಶಕ್ಕೆ ಸೂಕ್ತವಾಗಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಸಸ್ಯನಾಶಕವನ್ನು ಎಚ್ಚರಿಕೆಯಿಂದ ಆರಿಸಿ, ಎಚ್ಚರಿಕೆಯಿಂದ ಲೇಬಲ್ ಅನ್ನು ಓದಿ ಮತ್ತು ಸೂಚಿಸಲಾದ ಸೂಚನೆಗಳನ್ನು, ಪ್ರಮಾಣಗಳನ್ನು ಅನುಸರಿಸಿ.

ಅದಕ್ಕೆ ಏನು ಕಾರಣ

ಸಸ್ಯನಾಶಕಗಳಿಂದಾದ ಹಾನಿಯು ಹೆಚ್ಚಾಗಿ PSII ಪ್ರತಿಬಂಧಕಗಳ ಗುಂಪನ್ನು ಸೇರಿದಂತೆ ಆಟ್ರಾಜಯ್ನ್, ಬ್ರೋಮೋಕ್ಸಿನಿಲ್, ಡೈಯುರಾನ್ ಮತ್ತು ಫ್ಲ್ಯೂಯೋಮೆತುರನ್ ಗಳಿಂದ ಉಂಟಾಗುತ್ತವೆ. ಅವು ದ್ಯುತಿಸಂಶ್ಲೇಷಣೆಯನ್ನು ಪ್ರತಿಬಂಧಿಸುತ್ತವೆ ಮತ್ತು ಜೀವಕೋಶಗಳಲ್ಲಿನ ಹಸಿರು ವರ್ಣದ್ರವ್ಯಗಳನ್ನು ನಾಶಪಡಿಸುತ್ತವೆ ಇದು ಬಣ್ಣ ಕಳೆದುಕೊಳ್ಳುವುದಕ್ಕೆ ದಾರಿಯಾಗುತ್ತದೆ. ಪ್ರಾರಂಭಿಕ ಸಸ್ಯನಾಶಕಗಳಂತೆ (ಪ್ರಿ- ಎಮರ್ಜೆನ್ಸ್) ಇವನ್ನು ಮಣ್ಣಿನಲ್ಲಿ ಹಾಕಿದಾಗ (ಕಳೆಗಳು ಕಾಣುವ ಮೊದಲು) ಅವು ಬೇರುಗಳಿಂದ ಹೀರಲ್ಪಡುತ್ತವೆ ಮತ್ತು ನೀರಿನ ಚಲನೆಯನ್ನು ಅನುಸರಿಸಿ ಅವು ಚಿಗುರುಗಳ ಕಡೆ ಮೇಲ್ಮುಖವಾಗಿ ಚಲಿಸುತ್ತವೆ. ಕೊನೆಯದಾಗಿ, ಅವು ಎಲೆಗಳ ಮೇಲೆ ವಿಶೇಷವಾಗಿ ತುದಿಗಳಲ್ಲಿ ಸಂಗ್ರಹಿಸಲ್ಪಡುತ್ತವೆ. ನಂತರದ (ಪೋಸ್ಟ್ ಎಮರ್ಜನ್ಸ್) ಸಸ್ಯನಾಶಕಗಳಂತೆ ಅವು ಸ್ಥಳೀಯವಾಗಿ ಸಸ್ಯಗಳ ಅಂಗಾಂಶಗಳಿಗೆ ಹಾನಿ ಮಾಡುತ್ತವೆ ಮತ್ತು ಸಸ್ಯದ ಇತರ ಭಾಗಗಳಿಗೆ ಚಲಿಸುವುದಿಲ್ಲ. ಅನೇಕ ವಿಧದ ಕಳೆಗಳಲ್ಲಿ (ಉದಾಹರಣೆಗೆ, ಹುಲ್ಲುಗಳು, ಸಾಸಿವೆ, ಸ್ಟಿಂಗಿಂಗ್ ನೆಟಲ್ ಮತ್ತು ಕಾಡು ಮೂಲಂಗಿ) ಪ್ರತಿರೋಧಕದ ಬೆಳವಣಿಗೆಯ ಸಮಸ್ಯೆಗಳು ಸಾಮಾನ್ಯವಾಗಿವೆ.


ಮುಂಜಾಗ್ರತಾ ಕ್ರಮಗಳು

  • ನೀವು ಯಾವ ವಿಧದ ಕಳೆಗಳನ್ನು ನಿರ್ವಹಿಸುತ್ತಿದ್ದೀರಿ ಎಂಬುದರ ಬಗ್ಗೆ ತಿಳಿಯುವುದನ್ನು ಮರೆಯದಿರಿ (ಮೂಲವಾಗಿ ಅಗಲ ಎಲೆಯುಳ್ಳ ಕಳೆಗಳು ಅಥವಾ ಹುಲ್ಲುಗಳು).
  • ನಿಮ್ಮ ಉದ್ದೇಶಕ್ಕೆ ಉತ್ತಮವಾಗಿ ಸರಿದೂಗುವ ಸಸ್ಯನಾಶಕವನ್ನು ಎಚ್ಚರಿಕೆಯಿಂದ ಆರಿಸಿ.
  • ಲೇಬಲ್ ಅನ್ನು ಎಚ್ಚರಿಕೆಯಿಂದ ಓದಿ ಮತ್ತು ಸೂಚಿಸಿದಂತೆ ಅದರ ಮೇಲಿನ ಸೂಚನೆಗಳನ್ನು ಮತ್ತು ಪ್ರಮಾಣಗಳನ್ನು ಅನುಸರಿಸಿ.
  • ಇತರ ಸಸ್ಯನಾಶಕದಿಂದ ಉಂಟಾಗಬಹುದಾದ ಕಶ್ಮಲೀಕರಣವನ್ನು ತಡೆಯಲು ಯಾವಾಗಲೂ ಬಳಕೆಯ ನಂತರ ಸಿಂಪರಣೆಯ ಕಂಟೇನರ್ ಅನ್ನು ಸ್ವಚ್ಛಗೊಳಿಸಿ.
  • ಇತರ ಹೊಲಗಳಿಗೆ ಹರಡದಂತೆ ಗಾಳಿಯಿರುವ ಪರಿಸ್ಥಿತಿಗಳಲ್ಲಿ ಸಿಂಪಡಿಕೆಯನ್ನು ತಪ್ಪಿಸಿ.
  • ಹರಡುವಿಕೆಯನ್ನು ಕಡಿಮೆ ಮಾಡುವ, ಕಳೆಗಳಿಗೆ ಉತ್ತಮವಾಗಿ ಗುರಿಯಿಡುವ ಸ್ಪ್ರೇ ನಾಝಲ್ಗಳನ್ನು ಬಳಸಿ.
  • ಫಲಿತಾಂಶಗಳ ಪರಿವೀಕ್ಷಣೆಗಾಗಿ ಸಸ್ಯನಾಶಕಗಳನ್ನು ಹುಲ್ಲುಗಾವಲುಗಳಲ್ಲಿ ಮತ್ತು ಒಣಹುಲ್ಲು ಹೊಲಗಳಲ್ಲಿ ಪ್ರಯೋಗಿಸಿ ಮತ್ತು ಪರೀಕ್ಷಿಸಿ.
  • ಹವಾಮಾನ ಮುನ್ಸೂಚನೆಯನ್ನು ಎಚ್ಚರಿಕೆಯಿಂದ ಪರೀಕ್ಷಿಸಿ ಮತ್ತು ಮಳೆಯಿದ್ದಲ್ಲಿ ಸಿಂಪರಣೆಯನ್ನು ಮಾಡಬೇಡಿ.
  • ಸಸ್ಯನಾಶಕವನ್ನು ಹಾಕಲ್ಪಟ್ಟ ದಿನಾಂಕಗಳ, ಅವುಗಳ ಉತ್ಪನ್ನಗಳ, ಹೊಲದಲ್ಲಿನ ಜಾಗಗಳ ಮತ್ತು ಹವಾಮಾನ ಪರಿಸ್ಥಿತಿಗಳ ಚಟುವಟಿಕೆಗಳ ಬಗ್ಗೆ ದಾಖಲೆಯನ್ನು ಇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ