ಭತ್ತ

ಅಕ್ಕಿಯಲ್ಲಿ ಕಬ್ಬಿಣದ ವಿಷತ್ವ

Iron Toxicity

ಇತರೆ

5 mins to read

ಸಂಕ್ಷಿಪ್ತವಾಗಿ

  • ಸಸ್ಯ ಅಂಗಾಂಶಗಳಲ್ಲಿ ಕಬ್ಬಿಣವು ವಿಪರೀತವಾಗಿ ಸಂಗ್ರಹವಾದರೆ ಎಲೆಗಳು ಕಂದು ಅಥವಾ ಕಂಚು ಬಣ್ಣಕ್ಕೆ ತಿರುಗುತ್ತವೆ.
  • ಮಣ್ಣಿನಲ್ಲಿ ಕಬ್ಬಿಣವು ಅತಿಯಾಗಿ ಸೇರಿಕೊಂಡರೂ ಸಹ ಬೇರುಗಳ ಆರೋಗ್ಯ ಹದಗೆಡುತ್ತದೆ ಮತ್ತು ಅವು ಅನೇಕ ಅಗತ್ಯ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳದಂತೆ ತಡೆಯುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಬೆಳೆಯ ಬೆಳವಣಿಗೆಯ ಚಕ್ರದ ಉದ್ದಕ್ಕೂ ಕಬ್ಬಿಣದ ವಿಷತ್ವವು ಬರಬಹುದು. ಇದು ವಿಶ್ವದ ವಿವಿಧ ಭಾಗಗಳಲ್ಲಿ ತಗ್ಗು ಪ್ರದೇಶದ ಅಕ್ಕಿಯಲ್ಲಿ ಬರುತ್ತದೆ. ಸಸ್ಯದ ಅಂಗಾಂಶಗಳು ಕಬ್ಬಿಣವನ್ನು ಅತಿಯಾಗಿ ಹೀರಿಕೊಂಡರೆ ಮತ್ತು ಕಬ್ಬಿಣವು ಅತಿಯಾಗಿ ಸಂಗ್ರಹವಾದರೆ ವಿಷಕಾರಿ ಸಂಯುಕ್ತಗಳು ಉತ್ಪಾದನೆಯಾಗುತ್ತದೆ. ಈ ಕಾರಣದಿಂದ, ಕ್ಲೋರೊಫಿಲ್ ನಾಶವಾಗುತ್ತದೆ ಮತ್ತು ಸಸ್ಯೀಯ ಪ್ರಕ್ರಿಯೆಗಳು ದುರ್ಬಲಗೊಳ್ಳುತ್ತವೆ, ಇದರಿಂದ ಎಲೆಗಳು ಕಂದು ಅಥವಾ ಕಂಚು ಬಣ್ಣಕ್ಕೆ ತಿರುಗುತ್ತವೆ. ರೈಝೋಸ್ಫಿಯರ್ ನಲ್ಲಿ ಕಬ್ಬಿಣವು ಅತಿಯಾಗಿ ಸೇರಿಕೊಂಡರೂ ಸಹ ಬೇರುಗಳ ಆರೋಗ್ಯ ಹದಗೆಡುತ್ತದೆ ಮತ್ತು ಇದಕಿಂದ ಅನೇಕ ಅಗತ್ಯ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಲಾಗುವುದಿಲ್ಲ. ಇದರಿಂದಾಗಿ ಇಳುವರಿಯಲ್ಲಿ ಗಣನೀಯ ನಷ್ಟವಾಗುತ್ತದೆ (10-100%).

Recommendations

ಜೈವಿಕ ನಿಯಂತ್ರಣ

ಈ ರೋಗಕ್ಕೆ ಜೈವಿಕ ನಿಯಂತ್ರಣ ಇಲ್ಲ.

ರಾಸಾಯನಿಕ ನಿಯಂತ್ರಣ

ಕಬ್ಬಿಣದ ವಿಷತ್ವವು ಸಮಸ್ಯೆಯಾಗಬಹುದಾದ ಮಣ್ಣು ಮತ್ತು ಸ್ಥಿತಿಗಳಲ್ಲಿ, ರಸಗೊಬ್ಬರದ ಬಳಕೆ (ನಿರ್ದಿಷ್ಟವಾಗಿ ಪೊಟಾಷಿಯಂ) ಮತ್ತು ಸುಣ್ಣ ಹಾಕುವುದನ್ನು ಸಮತೋಲಿತವಾಗಿ ಮಾಡಿದರೆ ಅದು ಈ ರೋಗವನ್ನು ತಪ್ಪಿಸಲು ಮುಖ್ಯವಾದ ಮಾರ್ಗವಾಗುತ್ತದೆ. ರಸಗೊಬ್ಬರ ಮಿಶ್ರಣಕ್ಕೆ ಮ್ಯಾಂಗನೀಸ್ ಸೇರಿಸುವುದರಿಂದ ಸಹ ಸಸ್ಯವು ಕಬ್ಬಿಣವನ್ನು ಹೀರಿಕೊಳ್ಳುವ ಪ್ರಮಾಣವನ್ನು ಕಡಿಮೆ ಮಾಡಬಹುದು. ಅಮ್ಲೀಯ ಮಣ್ಣುಗಳಲ್ಲಿ ಸುಣ್ಣ ಹಾಕುವುದನ್ನು ಹೆಚ್ಚು ಸೂಚಿಸಲಾಗುತ್ತದೆ. ಅಧಿಕ ಪ್ರಮಾಣದಲ್ಲಿ ಕಬ್ಬಿಣ ಮತ್ತು ಸಾವಯವ ಪದಾರ್ಥಗಳನ್ನು ಒಳಗೊಂಡಿರುವ ಮತ್ತು ಒಳಚರಂಡಿ ಸರಿಯಾಗಿರದ ಮಣ್ಣುಗಳಿಗೆ ಹೆಚ್ಚಿನ ಪ್ರಮಾಣದ ಸಾವಯವ ಪದಾರ್ಥವನ್ನು (ಗೊಬ್ಬರ, ಒಣಹುಲ್ಲು) ಹಾಕಬೇಡಿ. ನೈಟ್ರೊಜನ್ ರಸಗೊಬ್ಬರವಾಗಿ ಅಮೋನಿಯಂ ಸಲ್ಫೇಟ್ (ಹೆಚ್ಚು ಆಮ್ಲೀಕರಿಸುವುದು) ಬದಲಿಗೆ ಯೂರಿಯಾವನ್ನು (ಕಡಿಮೆ ಆಮ್ಲೀಕರಿಸುವುದು) ಬಳಸಿ.

ಅದಕ್ಕೆ ಏನು ಕಾರಣ

ಕಬ್ಬಿಣದ ವಿಷತ್ವವು ಸಸ್ಯದ ಬೇರಿನ ಪರಿಸರದಲ್ಲಿ ಅತೀ ಹೆಚ್ಚಿನ ಕಬ್ಬಿಣವು ಇರುವುದರಿಂದ ಬರುತ್ತದೆ. ಈ ರೋಗವು ಮುಖ್ಯವಾಗಿ ನೀರು ನಿಂತ ಮಣ್ಣಿಗೆ ಸಂಬಂಧಿಸಿರುತ್ತದೆ ಮತ್ತು ಮುಖ್ಯವಾಗಿ ತಗ್ಗು ಪ್ರದೇಶದ ಭತ್ತದ ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ. ನೀರಲ್ಲಿ ಮುಳುಗಿರುವ ಮಣ್ಣು ಕಬ್ಬಿಣದ ಪ್ರಮಾಣವನ್ನು ಹೆಚ್ಚಿಸುವುದಲ್ಲದೆ ಸಸ್ಯಗಳು ಅದನ್ನು ಹೀರುವ ಸಾಧ್ಯತೆಯನ್ನೂ ಸಹ ಹೆಚ್ಚಿಸುತ್ತದೆ. ಆಮ್ಲೀಯ ಮಣ್ಣು, ಮಣ್ಣಿನ ಆಮ್ಲಜನಕೀಕರಣ ಮತ್ತು ಫಲವತ್ತತೆಯ ಮಟ್ಟಗಳು ಸಹ ಈ ಪೋಷಕಾಂಶದ ಶೇಖರಣೆ ಮತ್ತು ಹೀರಿಕೊಳ್ಳುವಲ್ಲಿ ದೊಡ್ಡ ಪ್ರಮಾಣದಲ್ಲಿ ಪಾತ್ರ ವಹಿಸುತ್ತವೆ. ಏರೋಬಿಕ್ (ಸಾಮಾನ್ಯ ಆಮ್ಲಜನಕ ಮಟ್ಟಗಳು) ಆಗಿದ್ದಾಗ ಪಿಎಚ್ 5.8 ಕ್ಕಿಂತ ಕಡಿಮೆ ಇರುವ ನೀರು ನಿಂತ ಮಣ್ಣಿನಲ್ಲಿ ಮತ್ತು ಅನೇರೋಬಿಕ್ (ಕಡಿಮೆ ಆಮ್ಲಜನಕ ಮಟ್ಟಗಳು) ಇದ್ದಾಗ ಪಿಎಚ್ 6.5 ಕ್ಕಿಂತ ಕಡಿಮೆ ಇರುವ ಮಣ್ಣಿನಲ್ಲಿ ಕಬ್ಬಿಣದ ವಿಷತ್ವವವನ್ನು ಗಮನಿಸಲಾಗಿದೆ. ಸೂಕ್ತ ನಿರ್ವಹಣಾ ಅಭ್ಯಾಸಗಳೆಂದರೆ ಮಣ್ಣಿಗೆ ಸುಣ್ಣವನ್ನು ಹಾಕುವುದು, ಮಣ್ಣಿನ ಫಲವತ್ತತೆಯನ್ನು ಸುಧಾರಿಸುವುದು ಮತ್ತು ಬೆಳೆಯ ಬೆಳವಣಿಗೆಯ ಕೆಲವು ಹಂತಗಳಲ್ಲಿ ಮಣ್ಣಿನಿಂದ ನೀರು ಬರಿದು ಮಾಡಿ. ಮಣ್ಣಿನಲ್ಲಿ ಮ್ಯಾಂಗನೀಸ್ ಕಬ್ಬಿಣದ ಜೊತೆ ಪೈಪೋಟಿ ಮಾಡುವುದರಿಂದ, ಈ ಸೂಕ್ಷ್ಮ ಪೋಷಕಾಂಶವನ್ನು ಮಣ್ಣಿಗೆ ಹಾಕಿದರೆ ಸಸ್ಯವು ಕಬ್ಬಿಣವನ್ನು ಹೀರಿಕೊಳ್ಳುವ ಪ್ರಮಾಣವನ್ನು ಸ್ವಲ್ಪ ಮಟ್ಟಕ್ಕೆ ಕಡಿಮೆ ಮಾಡಬಹುದು.


ಮುಂಜಾಗ್ರತಾ ಕ್ರಮಗಳು

  • ಮಣ್ಣಿನಲ್ಲಿರುವ ಅಧಿಕ ಮಟ್ಟದ ಕಬ್ಬಿಣವನ್ನು ಸಹಿಸಬಲ್ಲ ಸಹಿಷ್ಣು ಸಸ್ಯ ಪ್ರಭೇದಗಳನ್ನು ನೆಡಿ.
  • ಮೊಳಕೆಗಳನ್ನು ನೇರವಾಗಿ ಬಳಸುವುದಾದರೆ, ಬೀಜಗಳಿಗೆ ಆಕ್ಸಿಡಾಂಟ್ ಗಳನ್ನು ಕೋಟ್ ಮಾಡಿ (ಕಬ್ಬಿಣದ ಪರಿಣಾಮವನ್ನು ತೆಗೆಯುವ ವಸ್ತುಗಳು).
  • ಅತಿಯಾದ ಕಬ್ಬಿಣದ ಅಂಶವು ಮಣ್ಣಿನಿಂದ ಹೋಗುವ ತನಕ ಕಾದಿದ್ದು ನಂತರ ನಾಟಿ ಮಾಡಿ (ಹೊಲದಲ್ಲಿ ನೀರು ತುಂಬಿಸಿ 10-20 ದಿನಗಳ ನಂತರ).
  • ಹೆಚ್ಚಿನ ಪ್ರಮಾಣದ Fe ಮತ್ತು ಸಾವಯವ ವಸ್ತುವನ್ನು ಹೊಂದಿರುವ, ಸರಿಯಾಗಿ ನೀರು ಬರಿದಾಗದ ಮಣ್ಣಿನಲ್ಲಿ ಆಗಾಗ ನೀರು ಲಿಲ್ಲುವಂತೆ ಮಾಡಿ.
  • ಸಂಗ್ರಹವಾಗಿರುವ ಕಬ್ಬಿಣವನ್ನು ತೆಗೆದುಹಾಕುವುದಕ್ಕೆ ಒಳಚರಂಡಿಗೆ ದಾರಿ ಮಾಡಿ.
  • ಇದಕ್ಕೆ ಸೂಕ್ತ ಸಮಯವೆಂದರೆ ಟಿಲ್ಲರಿಂಗ್ ಮಧ್ಯಮ ಹಂತ(ನಾಟಿ ಮಾಡಿದ / ಬಿತ್ತನೆಯ ನಂತರ 25-30 ದಿನಗಳು).
  • ಕೊಯ್ಲಿನ ನಂತರ ಉಳುಮೆ ಮಾಡಿ.
  • ಸಾಧ್ಯವಾದರೆ ಹಲವು ದಿನಗಳು ಅಥವಾ ವಾರಗಳವರೆಗೆ ಭೂಮಿಯಲ್ಲಿ ಬೆಳೆ ಹಾಕದೆ ಹಾಗೇ ಬಿಡಿ (ಸಾಗುವಳಿ ಮಾಡದೆ ಇರುವುದು).
  • ಆಮ್ಲೀಯ ಮಣ್ಣುಗಳಲ್ಲಿ ಪಿಹೆಚ್ ಅನ್ನು ಹೆಚ್ಚಿಸಲು ಮೇಲ್ಮಣ್ಣಿಗೆ ಸುಣ್ಣವನ್ನು ಹಾಕಿ.
  • ಹೆಚ್ಚುವರಿ ಮ್ಯಾಂಗನೀಸ್ ರಸಗೊಬ್ಬರಗಳನ್ನು ಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ