ಸೋಯಾಬೀನ್

ಕೀಟನಾಶಕ ಸುಡುಗಾಯ

Pesticide Burn

ಇತರೆ

5 mins to read

ಸಂಕ್ಷಿಪ್ತವಾಗಿ

  • ಎಲೆ ಚುಕ್ಕೆಗಳು ಅಥವಾ ದೊಡ್ಡ ತೇಪೆಗಳು.
  • ಎಲೆಗಳು ಹಳದಿಯಾಗುವುದು ಮತ್ತು ಸೊರಗುವುದು.
  • ಸುಡುಗಾಯ ಅಥವಾ ತುದಿ ಸುಡುವುದು.

ಇವುಗಳಲ್ಲಿ ಸಹ ಕಾಣಬಹುದು

34 ಬೆಳೆಗಳು
ಬಾಳೆಹಣ್ಣು
ಬಾರ್ಲಿ
ಹುರುಳಿ
ಹಾಗಲಕಾಯಿ
ಇನ್ನಷ್ಟು

ಸೋಯಾಬೀನ್

ರೋಗಲಕ್ಷಣಗಳು

ಫೈಟೋಟಾಕ್ಸಿಸಿಟಿ ಎಂದೂ ಸಹ ಕರೆಯಲ್ಪಡುವ ಈ ತೊಂದರೆ, ಸಸ್ಯಗಳ ಮೇಲೆ ರಾಸಾಯನಿಕಗಳ ದುರ್ಬಳಕೆ ಅಥವಾ ತಪ್ಪು ಪ್ರಯೋಗಳಿಂದ ಉಂಟಾಗುತ್ತದೆ. ಎಲೆಗಳ ಮೇಲೆ ಕಲೆಗಳು, ಸುಕ್ಕು ಅಥವಾ ಸುಡುಗಾಯ ಅಥವಾ ಸುಟ್ಟ ತುದಿ ಇದರ ರೋಗಲಕ್ಷಣಗಳು ಕಂಡುಬರುತ್ತವೆ. ಕೆಲವೊಮ್ಮೆ ಇದನ್ನು ರೋಗ, ಕೀಟ ಅಥವಾ ಹುಳುಗಳಿಂದ ಆದ ಹಾನಿ ಅಥವಾ ಹವಾಮಾನ ಪರಿಸ್ಥಿತಿಗಳಿಂದ ಉಂಟಾದ ಇತರ ರೋಗಲಕ್ಷಣಗಳೆಂದು ತಪ್ಪಾಗಿ ಭಾವಿಸುವ ಸಂಭವವಿದೆ. ಸೂಕ್ಷ್ಮ ಸಸ್ಯಗಳ ಮೇಲೆ ಗಾಳಿಯ ದಿಕ್ಚ್ಯುತಿ ಕಾರಣದಿಂದಾಗಿಯೂ ಹಾನಿ ಸಂಭವಿಸಬಹುದು. ಹೊಂದಾಣಿಕೆಯಾಗದ ರಾಸಾಯನಿಕಗಳನ್ನು ಒಂದೇ ಸಮಯದಲ್ಲಿ ಹಾಕಿದಾಗಲೂ ಫೈಟೋಟಾಕ್ಸಿಸಿಟಿ ಉಂಟಾಗಬಹುದು.

Recommendations

ಜೈವಿಕ ನಿಯಂತ್ರಣ

ಕೀಟಗಳು ಅಥವಾ ರೋಗಗಳು ಸಸ್ಯಗಳಿಗೆ ಗಂಭೀರ ಹಾನಿಮಾಡಿದಾಗ, ಕೆಲವೊಮ್ಮೆ ಕೀಟನಾಶಕಗಳನ್ನು ಹಾಕುವ ಬದಲು ಹಾನಿಗೊಳಗಾದ ಭಾಗಗಳನ್ನು ಕತ್ತರಿಸುವುದು ಅಥವಾ ಗಿಡಗಳನ್ನು ಮರು ನೆಡುವುದು ಉತ್ತಮ. ಮುಂದಿನ ಸಲ ತೊಂದರೆಯನ್ನು ಹೇಗೆ ತಡೆಗಟ್ಟುವುದು ಎಂಬುದನ್ನು ಅರಿಯುವುದು ಉತ್ತಮ.

ರಾಸಾಯನಿಕ ನಿಯಂತ್ರಣ

ಕೀಟನಾಶಕ ಸುಡುಗಾಯಕ್ಕೆ ಯಾವುದೇ ರಾಸಾಯನಿಕ ನಿಯಂತ್ರಣಗಳು ಲಭ್ಯವಿಲ್ಲ. ಸೂಚನೆಗಳ ಪ್ರಕಾರವೇ ಕೀಟನಾಶಕಗಳನ್ನು ಬಳಸುವಂತೆ ಎಚ್ಚರವಹಿಸಿ. ಗಂಭೀರ ಪರಿಸ್ಥಿತಿಗಳಲ್ಲಿ 10 ಗ್ರಾಂ/ಲೀ ನೀರಿನಲ್ಲಿ ಯೂರಿಯಾವನ್ನು ಅಥವಾ 10 ಗ್ರಾಂ/ಲೀ ನೀರಿನಲ್ಲಿ ಪಾಲಿಫೀಡ್ ಅನ್ನು ಸಿಂಪಡಿಸಬಹುದಾಗಿದೆ.

ಅದಕ್ಕೆ ಏನು ಕಾರಣ

ಸಸ್ಯಕ್ಕೆ ಪ್ರತಿಕೂಲವಾದ ವಾತಾವರಣಗಳಲ್ಲಿ ಕೀಟನಾಶಕಗಳನ್ನು ಸಿಂಪಡಿಸಿದಾಗ ಫೈಟೊಟಾಕ್ಸಿಸಿಟಿ ಸಾಧಾರಣವಾಗಿ ಸಂಭವಿಸುತ್ತದೆ. ಸಾಮಾನ್ಯವಾಗಿ ಹೆಚ್ಚಿನ ಉಷ್ಣತೆ ಮತ್ತು ಆರ್ದ್ರತೆಯು ಕೀಟನಾಶಕಗಳಿಂದ (ಕೀಟನಾಶಕಗಳು ಮತ್ತು ಶಿಲೀಂಧ್ರನಾಶಕಗಳು, ಅದರಲ್ಲೂ ವಿಶೇಷವಾಗಿ ಸೋಪ್ ಗಳು, ಎಣ್ಣೆಗಳು ಮತ್ತು ಸಲ್ಫರ್ ಸಂಯುಕ್ತಗಳು) ಗಾಯವಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ತಂಪಾದ ತೇವವಾದ ವಾತಾವರಣದಲ್ಲಿ ತಾಮ್ರದ ಶಿಲೀಂಧ್ರನಾಶಕಗಳಿಂದ ಗಾಯವಾಗುವ ಸಾಧ್ಯತೆ ಹೆಚ್ಚು. ಶಾಂತ, ಶುಷ್ಕ ಮತ್ತು ತಂಪಾದ ಪರಿಸ್ಥಿತಿಗಳಲ್ಲಿ ಇವುಗಳನ್ನು ಸಿಂಪಡಿಸಬೇಕು. ಹೆಚ್ಚಿನ ಕ್ರಿಮಿನಾಶಕಗಳನ್ನು ಉಷ್ಣಾಂಶ 25°C ಗಿಂತ ಕಡಿಮೆ ಇದ್ದಾಗ ಸಿಂಪಡಿಸುವುದು ಉತ್ತಮ. ಜೈವಿಕ ಅಥವಾ ಪರಿಸರ ಒತ್ತಡಗಳು (ಬರ, ಕೀಟದಿಂದಾದ ಗಾಯ) ಸಸ್ಯಗಳನ್ನು ರಾಸಾಯನಿಕ ಹಾನಿಗೆ ಬೇಗ ತುತ್ತಾಗಿಸುತ್ತವೆ. ಒಣಗುವ ಸಾಧ್ಯತೆಯನ್ನು ಕಡಿಮೆಮಾಡುವ ಉಷ್ಣ, ಆರ್ದ್ರ, ಮತ್ತು ಮೋಡದ ವಾತಾವರಣವು ಸಾಮಾನ್ಯವಾಗಿ ಇದಕ್ಕೆ ನಿರೋಧಕವಾಗಿರುವ ಸಸ್ಯಗಳನ್ನು ಕೂಡ ಈ ತೊಂದರೆಗೆ ಒಡ್ಡಬಹುದು.


ಮುಂಜಾಗ್ರತಾ ಕ್ರಮಗಳು

  • ಕೀಟನಾಶಕ ಬಳಕೆ ಅಗತ್ಯವಿದ್ದರೆ, ಲೇಬಲ್ ಮೇಲಿನ ನಿರ್ದೇಶನಗಳ ಪ್ರಕಾರ ರಾಸಾಯನಿಕಗಳನ್ನು ಹಾಕಿ.
  • ಸಸ್ಯಗಳ ಸಂವೇದನೆ ಮತ್ತು ಕೀಟನಾಶಕಗಳ ಸಂಯೋಜನೆಯ ಬಗ್ಗೆ ಯಾವಾಗಲೂ ಮುನ್ನೆಚ್ಚರಿಕೆ ತೆಗೆದುಕೊಳ್ಳಿ.
  • ಕೀಟಗಳು ಅಥವಾ ರೋಗಗಳು ತರಕಾರಿ ಸಸ್ಯಗಳಿಗೆ ಗಂಭೀರ ಹಾನಿಮಾಡಿದಾಗ, ಕೆಲವೊಮ್ಮೆ ಕೀಟನಾಶಕಗಳನ್ನು ಹಾಕುವ ಬದಲು ಹಾನಿಗೊಳಗಾದ ಭಾಗಗಳನ್ನು ಕತ್ತರಿಸುವುದು ಉತ್ತಮ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ