ಟೊಮೆಟೊ

ಟೊಮೆಟೊದಲ್ಲಿ ಎಲೆ ಸುರುಳಿ ರೋಗ

Physiological Disorder

ಇತರೆ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ವಿರೂಪತೆ ಮತ್ತು ಬಣ್ಣಗೆಡುವುದು.
  • ಗಡಸಾದ ಎಲೆಗೊಂಚಲುಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಟೊಮೆಟೊ

ರೋಗಲಕ್ಷಣಗಳು

ಹೆಸರೇ ಸೂಚಿಸುವಂತೆ, ಎಲೆಗಳ ವಿರೂಪತೆಯಿಂದ ರೋಗಲಕ್ಷಣಗಳನ್ನು ವಿವರಿಸಬಹುದು. ಕೆಳಗಿನ ಎಲೆಗಳಿಂದ ಸುರುಳಿಯಾಗುವುದು ಪ್ರಾರಂಭವಾಗಿ ಮೇಲಕ್ಕೆ ಸುರುಳಿ ಸುತ್ತುತ್ತದೆ ಮತ್ತು ನಂತರ ಉದ್ದಕ್ಕೂ ಒಳಮುಖವಾಗಿ ಸುರುಳಿಯಾಗುತ್ತದೆ. ಸಾಮಾನ್ಯವಾಗಿ, ಒತ್ತಡವನ್ನು ಕಡಿಮೆ ಮಾಡಲು ಪರಿಸರ ಪರಿಸ್ಥಿತಿಗಳು ಮತ್ತು ಬೇಸಾಯ ಅಂಶಗಳನ್ನು ಸರಿಹೊಂದಿಸಿದರೆ ಅವು ಚೇತರಿಸಿಕೊಳ್ಳುತ್ತವೆ. ಎಲೆಗಳು ಕೆಳಭಾಗದಲ್ಲಿ ಹಳದಿ ಅಂಚುಗಳು ಅಥವಾ ಕೆನ್ನೇರಳೆ ಸಿರೆಗಳೊಂದಿಗೆ ಮಸುಕಾಗಿ, ಕುಂಠಿತವಾಗಿ ಕಾಣಿಸಬಹುದು.

Recommendations

ಜೈವಿಕ ನಿಯಂತ್ರಣ

ಈ ಶಾರೀರಿಕ ಅಸ್ವಸ್ಥತೆಯ ವಿರುದ್ಧ ಯಾವುದೇ ಜೈವಿಕ ಚಿಕಿತ್ಸೆ ತಿಳಿದಿಲ್ಲ. ಇದಕ್ಕೆ ಮುಂಜಾಗ್ರತಾ ಕ್ರಮಗಳಿಂದ ಮಾತ್ರ ಚಿಕಿತ್ಸೆ ನೀಡಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳೊಂದಿಗೆ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಈ ಶಾರೀರಿಕ ಅಸ್ವಸ್ಥತೆಗೆ ಮುಂಜಾಗ್ರತಾ ಕ್ರಮಗಳಿಂದ ಮಾತ್ರ ಚಿಕಿತ್ಸೆ ನೀಡಬಹುದು.

ಅದಕ್ಕೆ ಏನು ಕಾರಣ

ಎಲೆಗಳು ಸುರುಳಿಯಾಗುವ ಶಾರೀರಿಕ ಅಸ್ವಸ್ಥತೆಯು ಪರಿಸರ ಒತ್ತಡದಿಂದಾಗಿ ಸಂಭವಿಸುತ್ತದೆ. ಅತಿಯಾದ ತೇವಾಂಶ ಮತ್ತು ಹೆಚ್ಚಿನ ಸಾರಜನಕದ ಮಟ್ಟಗಳು ಎಲೆಗಳ ವಿರೂಪತೆಗೆ ಮುಖ್ಯ ಕಾರಣಗಳಾಗಿವೆ. ಇದರ ಜೊತೆ ಶಾಖ, ಒಣ ಪರಿಸ್ಥಿತಿಗಳು, ತೀವ್ರ ಸಮರುವಿಕೆ, ಬೇರಿನ ಹಾನಿ ಮತ್ತು ಕಸಿ ಆಘಾತಗಳೂ ಸೇರಿವೆ. ಎಲೆ ಸುರುಳಿಯ ಲಕ್ಷಣಗಳು ವೈರಲ್ ಸೋಂಕುಗಳ ರೀತಿಯೇ ಕಾಣಬಹುದು ಮತ್ತು ಅದೇ ಎಂದು ಗೊಂದಲಕ್ಕೊಳಗಾಗಬಹುದು. ಉದಾಹರಣೆಗೆ, ಬಿಳಿನೊಣಗಳು ವೈರಸ್ ಅನ್ನು ಹರಡುತ್ತವೆ (ಹಳದಿ ಎಲೆ ಸುರುಳಿ ವೈರಸ್ - ವೈಎಲ್‌ಸಿವಿ) ಇದು ಹೊಸ ಎಲೆಗಳು ಬಟ್ಟಲಾಕಾರದಂತೆ ಆಗಲು ಕಾರಣವಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಚೆನ್ನಾಗಿ ಬರಿದಾದ ಮಣ್ಣಿನಲ್ಲಿ ಪ್ರಮಾಣೀಕೃತ ತಳಿಗಳನ್ನು ನೆಡಿ.
  • ಮಣ್ಣಿನಲ್ಲಿ ಏಕರೂಪ ಮತ್ತು ಹೆಚ್ಚು ತೇವಾಂಶವನ್ನು ಕಾಪಾಡಿಕೊಳ್ಳಿ.
  • ರಸಗೊಬ್ಬರಗಳ, ವಿಶೇಷವಾಗಿ ಸಾರಜನಕದ ಅತಿಯಾದ ಬಳಕೆಯನ್ನು ಮಾಡಬೇಡಿ.
  • ಸೂಕ್ತಪ್ರಮಾಣದ ರಂಜಕವನ್ನು ಒದಗಿಸಿ.
  • ತೀವ್ರವಾದ ಸಮರುವಿಕೆಯನ್ನು ತಪ್ಪಿಸಿ ಮತ್ತು ನೆರಳು ನೀಡುವ ಮೂಲಕ ಅಥವಾ ಭಾಷ್ಪೀಕರಣ ಕೂಲಿಂಗ್ ಮೂಲಕ ತಾಪಮಾನವನ್ನು 35°C ಗಿಂತ ಕಡಿಮೆ ಇರುವಂತೆ ಕಾಪಾಡಿಕೊಳ್ಳಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ