ಪಿಸ್ತಾ

ಪಿಸ್ತಾದಲ್ಲಿ ಸನ್ಬರ್ನ್

Abiotic Sunburn

ಇತರೆ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಬಾಡುವಿಕೆ ಮತ್ತು ಹಳದಿಯಾಗುವಿಕೆ - ಅಂಚುಗಳಿಂದ ಪ್ರಾರಂಭವಾಗುತ್ತದೆ.
  • ಎಲೆ ಉದುರಿದ ನಂತರ ಹಣ್ಣುಗಳು ಮತ್ತು ತೊಗಟೆಗಳ ಮೇಲೂ ಸಹ ಪರಿಣಾಮ ಬೀರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಪಿಸ್ತಾ

ಪಿಸ್ತಾ

ರೋಗಲಕ್ಷಣಗಳು

ಅಬಿಯೋಟಿಕ್ ಸನ್‌ಬರ್ನ್ ಸೂರ್ಯನ ನೇರ ಬೆಳಕು ಮತ್ತು ಅತಿಯಾದ ತಾಪಮಾನದ ಸಂಯೋಜನೆಯಿಂದ ಮರಗಳಿಗೆ ಉಂಟಾಗುವ ಹಾನಿಯನ್ನು ಸೂಚಿಸುತ್ತದೆ. ಈ ಅಂಶಗಳು ಸಸ್ಯದ ಅಂಗಾಂಶಗಳಲ್ಲಿನ ತೇವಾಂಶವನ್ನು ಬದಲಾಯಿಸುತ್ತವೆ. ಇದು ಆರಂಭದಲ್ಲಿ ಎಳೆಯ, ನವಿರಾದ ಎಲೆಗಳ ಬಾಡುವಿಕೆಗೆ ಕಾರಣವಾಗುತ್ತದೆ. ಈ ಎಲೆಗಳು ಕ್ರಮೇಣ ತೆಳು ಹಸಿರು ಬಣ್ಣಕ್ಕೆ ತಿರುಗುತ್ತವೆ ಮತ್ತು 2-3 ದಿನಗಳ ನಂತರ ಅಂತಿಮವಾಗಿ ಅವುಗಳ ತುದಿ ಮತ್ತು ಅಂಚುಗಳ ಬಳಿ ಗಾಯಗಳು ಆರಂಭವಾಗುತ್ತವೆ. ಒಣಗಿದ ಗಾಯಗಳು ನಂತರ ಎಲೆಯ ಕವಚದ ಮಧ್ಯದ ಕಡೆಗೆ ಸಾಗುತ್ತವೆ. ಬರಗಾಲದ ಒತ್ತಡ ಅಥವಾ ಕೀಟಗಳ ದಾಳಿಯಿಂದ ಉಂಟಾದ ಎಲೆ ಉದುರುವಿಕೆಯು ತೊಗಟೆಯ ಬಿಸಿಲಿನ ಗಾಯಕ್ಕೆ ಕಾರಣವಾಗಬಹುದು. ಅಲ್ಲಿ, ಅವು ಬಿರುಕುಗಳು ಮತ್ತು ಕ್ಯಾಂಕರ್ ಗಳ ರೂಪವನ್ನು ಪಡೆಯುತ್ತದೆ. ಇದು ಅಂತಿಮವಾಗಿ ಕಾಂಡದ ಮೇಲೆ ಸತ್ತ ಪ್ರದೇಶಗಳಾಗಿ ಬೆಳೆಯುತ್ತದೆ.

Recommendations

ಜೈವಿಕ ನಿಯಂತ್ರಣ

ಸೂರ್ಯನ ಬೆಳಕನ್ನು ಭೌತಿಕವಾಗಿ ನಿರ್ಬಂಧಿಸಲು ಬಿಳಿ ಜೇಡಿಮಣ್ಣು ಅಥವಾ ಟಾಲ್ಕ್ ಸೂತ್ರೀಕರಣಗಳನ್ನು ಎಲೆಗಳು ಮತ್ತು ಕಾಂಡದ ಮೇಲೆ ಸಿಂಪಡಿಸಬಹುದು. ಇದು ತಾಪಮಾನವನ್ನು 5-10 °C ಕಡಿಮೆ ಮಾಡಬಹುದು. ಕ್ಯಾಲ್ಸಿಯಂ ಕಾರ್ಬೋನೇಟ್ ಅಥವಾ ಸ್ಫಟಿಕದಂತಹ ಸುಣ್ಣದ ಕಲ್ಲುಗಳನ್ನು ಆಧರಿಸಿದ ಉತ್ಪನ್ನಗಳನ್ನು ಸಹ ಶಿಫಾರಸು ಮಾಡಲಾಗಿದೆ. ಕಾರ್ನೌಬಾ ಮೇಣದ ಉತ್ಪನ್ನಗಳು ಸಸ್ಯಗಳಿಗೆ ನೈಸರ್ಗಿಕ ಸನ್ಸ್ಕ್ರೀನ್ ಆಗಿ ಕಾರ್ಯನಿರ್ವಹಿಸುತ್ತವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ರಸಗೊಬ್ಬರ ಪೂರಕವಾಗಿ ಬಳಸಲಾದ ಅಬ್ಸಿಸಿಕ್ ಆಮ್ಲವು ಸೇಬುಗಳಂತಹ ಹಣ್ಣುಗಳಿಗೆ ಸನ್ಬರ್ನ್ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಇತರ ಬೆಳೆಗಳಲ್ಲಿಯೂ ಸಹ ಇದು ಕೆಲಸ ಮಾಡಬಹುದು. ಎಲೆಗಳಿಂದ ನೀರಿನ ನಷ್ಟವನ್ನು ಕಡಿಮೆ ಮಾಡುವ, ಉದಾಹರಣೆಗೆ ಪಾಲಿ-1-ಪಿ ಮೆಂಥೆನ್ ಆಧರಿಸಿದ ಆಂಟಿ-ಟ್ರಾನ್ಸ್ಪಿರಂಟ್ ಉತ್ಪನ್ನಗಳು ಕೆಲವು ಅಧ್ಯಯನಗಳಲ್ಲಿ ಉತ್ತಮ ಫಲಿತಾಂಶಗಳನ್ನು ತೋರಿಸಿವೆ.

ಅದಕ್ಕೆ ಏನು ಕಾರಣ

ಹೆಚ್ಚಿನ ಸೌರ ವಿಕಿರಣ, ಹೆಚ್ಚಿನ ಗಾಳಿಯ ಉಷ್ಣತೆ ಮತ್ತು ಕಡಿಮೆ ಸಾಪೇಕ್ಷ ಆರ್ದ್ರತೆ ಇರುವ ಪ್ರದೇಶಗಳಲ್ಲಿ ಬೆಳೆದ ಮರಗಳಲ್ಲಿ ಸನ್ ಬರ್ನ್ ಗಾಯವು ಸಾಮಾನ್ಯವಾಗಿದೆ. ಹೆಚ್ಚಿನ ಎತ್ತರದಲ್ಲಿ ನೇರಳಾತೀತ (UV) ವಿಕಿರಣವು ಹೆಚ್ಚಿರುವುದರಿಂದ ಎತ್ತರವು ಸಹ ಒಂದು ಪಾತ್ರವನ್ನು ವಹಿಸುತ್ತದೆ. ಎಲೆಗಳು, ಹಣ್ಣುಗಳು ಮತ್ತು ತೊಗಟೆಯ ಮೇಲೆ ರೋಗಲಕ್ಷಣಗಳು ಗೋಚರಿಸುತ್ತವೆ. ಸನ್‌ಬರ್ನ್‌ನ ಸಂಭವ ಮತ್ತು ತೀವ್ರತೆಯು ಸಸ್ಯದ ಪ್ರಬೇಧ, ಅದರ ಬೆಳವಣಿಗೆಯ ಹಂತ ಮತ್ತು ಮಣ್ಣಿನ ತೇವಾಂಶದಂತಹ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಹಣ್ಣಿನ ಬೆಳವಣಿಗೆಯ ಸಮಯದಲ್ಲಿ ಗಾಳಿಯ ಉಷ್ಣತೆ ಮತ್ತು ಬಿಸಿಲಿರುವ ಅವಧಿಯು ಅಧಿಕವಾಗಿದ್ದಾಗ ಸನ್ಬರ್ನ್ ವಿಶೇಷವಾಗಿ ತೀವ್ರವಾಗಿರುತ್ತದೆ. ಹವಾಮಾನ ಘಟನೆಗಳ ಬದಲಾವಣೆಯೂ ಸಹ ಮುಖ್ಯವಾಗಿದೆ: ಹೀಗಾಗಿ, ತಂಪಾದ ಅಥವಾ ಸೌಮ್ಯವಾದ ಹವಾಮಾನದ ನಂತರ ಉಷ್ಣ, ಬಿಸಿಲಿನ ವಾತಾವರಣವು ಥಟ್ಟನೆ ಉಂಟಾದಾಗ ಹಾನಿ ಸಂಭವಿಸಬಹುದು.


ಮುಂಜಾಗ್ರತಾ ಕ್ರಮಗಳು

  • ಸನ್ಬರ್ನ್ ಗೆ ಹೆಚ್ಚು ಸಹಿಷ್ಣುವಾದ ಪ್ರಭೇದಗಳನ್ನು ಬಳಸಿ.
  • ಮಣ್ಣಿನ ನೀರಿನ ಧಾರಣ ಸಾಮರ್ಥ್ಯವನ್ನು ಹೆಚ್ಚಿಸಲು ಸಾಲುಗಳ ನಡುವೆ ಆವರಣ ಬೆಳೆಗಳನ್ನು ಬಳಸಿ (ಉದಾಹರಣೆಗೆ ಅನಾನಸ್ ತೋಟದಲ್ಲಿ ಮೆಕ್ಕೆಜೋಳ ಅಥವಾ ತೋಗರಿಬೇಳೆ).
  • ನಿಮ್ಮ ನೀರಾವರಿಯು ಬೆಳೆಗಳ ನೀರಿನ ಅವಶ್ಯಕತೆಗಳೊಂದಿಗೆ ಚೆನ್ನಾಗಿ ಹೊಂದಿಕೆಯಾಗುತ್ತದೆ ಎಂದು ಖಚಿತಪಡಿಸಿಕೊಳ್ಳಿ.
  • ಮರದ ಒತ್ತಡ ಮತ್ತು ಬಿಸಿಲಿನ ಬೇಗೆಯನ್ನು ತಪ್ಪಿಸಲು ಹೀಟ್ ವೇವ್ ಗೆ ಮೊದಲು ಅಥವಾ ಆ ಸಮಯದಲ್ಲಿ ನೀರಾವರಿ ಮಾಡಿ.
  • ಅತಿಯಾದ ಬೇಸಿಗೆ ಸಮಯದಲ್ಲಿ ಸಮರುವಿಕೆಯನ್ನು ಮತ್ತು ಎಲೆಗಳನ್ನು ತೆಗೆಯುವುದನ್ನು ತಪ್ಪಿಸಿ.
  • ಮೇಲಾವರಣದ ಮೂಲಕ ಗಾಳಿಯ ಚಲನೆಯನ್ನು ಸುಧಾರಿಸಿ.
  • ಸಸ್ಯ ಅಥವಾ ಮರದ ಸ್ಪ್ರಿಂಕ್ಲರ್ ಕೂಲಿಂಗ್ ವ್ಯವಸ್ಥೆಯನ್ನು ಸಹ ಅಳವಡಿಸಬಹುದಾಗಿದೆ.
  • ಅಗತ್ಯವಿದ್ದರೆ ನೆರಳು ಬಲೆಗಳನ್ನು ಸಹ ಬಳಸಬಹುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ