ಮರಗೆಣಸು

ಮರಗೆಣಸಿನ ಫೈಟೊಪ್ಲಾಸ್ಮಾ ರೋಗ

Phytoplasma spp.

ಬ್ಯಾಕ್ಟೀರಿಯಾ

5 mins to read

ಸಂಕ್ಷಿಪ್ತವಾಗಿ

  • ಮರಗೆಣಸಿನ ಗಿಡಗಳ ಮೇಲಿನ ಚಿಕ್ಕ ಚಿಚ್ಚದಾದ ಚಿಗುರುಗಳು ಸಸ್ಯಕ್ಕೆ "ಮಾಟಗಾತಿಯ ಪೊರಕೆ" (ವಿಚಸ್ ಬ್ರೂಂ)ಯ ನೋಟವನ್ನು ನೀಡುತ್ತದೆ.
  • ಆಳವಾದ ಬಿರುಕುಗಳೊಂದಿಗೆ ಬೇರುಗಳು ತೆಳುವಾಗಿ ಮತ್ತ ಗಟ್ಟಿಯಾಗಿ ಬೆಳೆಯಬಹುದು.
  • ಕಾಂಡಗಳ ಕೆಳಭಾಗದಲ್ಲಿ ಊತಗಳು.
  • ಎಲೆಗಳು ಸುರುಳಿಯಾಗುವುದು ಮತ್ತು ಕಲೆಗಳು ಉಂಟಾಗುವುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಮರಗೆಣಸು

ಮರಗೆಣಸು

ರೋಗಲಕ್ಷಣಗಳು

ಫೈಟೊಪ್ಲಾಸ್ಮಾ ಸೋಂಕಿನಿಂದ ಹಲವಾರು ರೋಗ ಲಕ್ಷಣಗಳು ಉಂಟಾಗುತ್ತವೆ. ಆದರೆ ಈ ರೋಗವನ್ನು ಮರಗೆಣಸಿನ ಸಸ್ಯಗಳ ಮೇಲ್ಭಾಗದಲ್ಲಿ ಪೊರಕೆಯಂತೆ ಎಲೆಗಳು ಹರಡಿದ ನಂತರ ಹೆಚ್ಚಾಗಿ ಗುರುತಿಸಲಾಗುತ್ತದೆ. ಸಾಮಾನ್ಯವಾಗಿ, ಇದು ಸುಪ್ತ ಚಿಗುರುಗಳು ಬೆಳೆಯಲು ಕಾರಣವಾಗುತ್ತದೆ. ಸಣ್ಣ, ಹಳದಿ ಎಲೆಗಳನ್ನು ಉತ್ಪಾದಿಸುತ್ತದೆ. ಸಸ್ಯದ ಮೇಲೆ "ಮಾಟಗಾತಿಯ ಪೊರಕೆಯ" (ವಿಚಸ್ ಬ್ರೂಂ) ಆಕಾರದಲ್ಲಿ ಕಾಣಿಸಿಕೊಳ್ಳುತ್ತದೆ. ಕೆಳಗಿನ ಕಾಂಡಗಳಲ್ಲಿ ಸ್ವಲ್ಪ ಊತಗಳು ಆಗಬಹುದು. ಹಾಗೆಯೇ ಎಲೆಗಳು ಸುರುಳಿಯಾಗುವುದು ಮತ್ತು ಎಲೆಗಳ ಮೇಲೆ ಹಸಿರು ಮತ್ತು ಹಳದಿ ಬಣ್ಣದ ಮಚ್ಚೆಯಂತಹ ಕಲೆಗಳು ಕಾಣಿಸಿಕೊಳ್ಳುತ್ತವೆ. ಬೇರುಗಳು ತೆಳ್ಳಗೆ, ಗಟ್ಟಿಯಾಗಿ ಬೆಳೆಯಬಹುದು. ಹೊರಗಿನ ಪದರಗಳು ದಪ್ಪಗಿದ್ದು ಆಳವಾದ ಬಿರುಕುಗಳು ಕಾಣಬಹುದು. ಕೆಲವೊಮ್ಮೆ ಬಿರುಕುಗಳು ಬೇರಿನ ಸುತ್ತ ಒಂದು ಉಂಗುರವನ್ನು ರೂಪಿಸುತ್ತವೆ. ಸಸ್ಯದ ಮೇಲ್ಬಾಗಗಳಿಗೆ ನೀರು ಮತ್ತು ಪೋಷಕಾಂಶಗಳ ಸಾಗಣೆಗೆ ಅಡ್ಡಿಯಾಗುತ್ತದೆ ಮತ್ತು ವಿಲಕ್ಷಣ ಬೆಳವಣಿಗೆಗೆ ಕಾರಣವಾಗುತ್ತದೆ.

Recommendations

ಜೈವಿಕ ನಿಯಂತ್ರಣ

ನಾಟಿ ಮಾಡುವ ಮೊದಲು ಮರಗೆಣಸು ಕಟಿಂಗ್ ಗಳು ಅಥವಾ ಬೀಜಗಳನ್ನು ಆರು ಗಂಟೆಗಳ ಕಾಲ 0.01% ಸ್ಟ್ರೆಪ್ಟೊಮೈಸಿನ್ ದ್ರಾವಣದಲ್ಲಿ ಸಂಸ್ಕರಿಸುವುದು ಮರಗೆಣಸು ಸಸ್ಯಗಳ ಸಾವನ್ನು ಕಡಿಮೆ ಮಾಡುವಲ್ಲಿ ಮತ್ತು ಬೀಜಗಳಲ್ಲಿ ಮೊಳಕೆಯೊಡೆಯುವ ಪ್ರಮಾಣವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ವಿಧಾನವಾಗಿದೆ. ಕೀಟ ವಾಹಕಗಳ ಸಂಖ್ಯೆಯನ್ನು ನಿಯಂತ್ರಿಸಲು ಕೆಲವು ಪರಾವಲಂಬಿ ಕಣಜಗಳನ್ನು ಬಳಸಲಾಗಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಯಾವಾಗಲೂ ಜೈವಿಕ ಚಿಕಿತ್ಸೆಗಳೊಂದಿಗೆ ಮುಂಜಾಗ್ರತಾ ಕ್ರಮಗಳಿರುವ ಸಮಗ್ರ ವಿಧಾನವನ್ನು ಪರಿಗಣಿಸಿ. ಮರಗೆಣಸು ಫೈಟೊಪ್ಲಾಸ್ಮಾ ರೋಗಕ್ಕೆ, ಸದ್ಯಕ್ಕೆ 100% ಪರಿಣಾಮಕಾರಿಯಾದ ರಾಸಾಯನಿಕ ಚಿಕಿತ್ಸೆ ಲಭ್ಯವಿಲ್ಲ. ಕಟಿಂಗ್ ಗಳು ಮತ್ತು ಬೀಜಗಳ ಪ್ರತಿಜೀವಕ ಚಿಕಿತ್ಸೆಯು ಬೇರಿನ ಇಳುವರಿ ಮತ್ತು ಪಿಷ್ಟದ ಅಂಶವನ್ನು ಗಮನಾರ್ಹವಾಗಿ ಹೆಚ್ಚಿಸಿದೆ ಮತ್ತು ಫೈಟೊಪ್ಲಾಸ್ಮಾದ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಬಳಸಬಹುದು.

ಅದಕ್ಕೆ ಏನು ಕಾರಣ

ಸಸ್ಯಗಳ ನಾಳೀಯ ವ್ಯವಸ್ಥೆಯೊಳಗೆ ಮಾತ್ರ ಬದುಕಬಲ್ಲ ಫೈಟೊಪ್ಲಾಸ್ಮಾ ಎಂದು ಕರೆಯಲ್ಪಡುವ ಬ್ಯಾಕ್ಟೀರಿಯಾದಂತಹ ಜೀವಿಗಳಿಂದ ಈ ರೋಗಲಕ್ಷಣಗಳು ಆರಂಭವಾಗುತ್ತವೆ. ಅವುಗಳು ಮುಖ್ಯವಾಗಿ ಕೆಲವು ಕೀಟಗಳ ಆಹಾರ ಚಟುವಟಿಕೆಯಿಂದ ಹರಡುತ್ತವೆ. ಅವುಗಳು ಮರಗೆಣಸು ಸಸ್ಯಗಳ ರಸವನ್ನು ಹೀರುತ್ತವೆ. ಅವುಗಳಲ್ಲಿ ಒಂದು ಕೀಟಗಳೆಂದರೆ ಮೀಲಿಬಗ್‌ಗಳು. ಹರಡುವ ಇನ್ನೊಂದು ಪ್ರಮುಖ ವಿಧಾನವೆಂದರೆ ಹೊಲ ಅಥವಾ ಪ್ರದೇಶಗಳ ನಡುವೆ ಸೋಂಕಿತ ಸಸ್ಯ ವಸ್ತುಗಳ ಬಳಕೆ ಅಥವಾ ಸಾಗಾಣಿಕೆ. ಈ ರೋಗವು ಅನೇಕ ದೇಶಗಳಲ್ಲಿ ಮರಗೆಣಸು ಉದ್ಯಮಕ್ಕೆ ಗಂಭೀರ ಅಪಾಯವನ್ನುಂಟುಮಾಡುತ್ತದೆ. ಫೈಟೊಪ್ಲಾಸ್ಮಾ ರೋಗದ ಸಾಂಕ್ರಾಮಿಕ ಹರಡುವಿಕೆಯು ಕೆಲವೊಮ್ಮೆ ಬೆಳವಣಿಗೆಯ ಹಂತದಲ್ಲಿ ಮರಗೆಣಸು ಸಸ್ಯಗಳ ಮೇಲೆ ಪರಿಣಾಮ ಬೀರಿದಾಗ ಒಟ್ಟಾರೆ ಇಳುವರಿ ನಷ್ಟಕ್ಕೆ ಕಾರಣವಾಗುತ್ತದೆ. ಸೋಂಕಿತ ಸಸ್ಯ ವಸ್ತುಗಳ ಸಾಗಣಿಕೆಯನ್ನು ನಿರ್ಬಂಧಿಸಲು ಕ್ವಾರೆಂಟೈನ್ ಕ್ರಮಗಳು ಕೆಲವು ದೇಶಗಳಲ್ಲಿ ಅಸ್ತಿತ್ವದಲ್ಲಿವೆ ಮತ್ತು ಅದನ್ನು ಇನ್ನಷ್ಟು ಬಲಪಡಿಸಬಹುದು.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲಗಳಿಂದ ಪಡೆದ ರೋಗ-ರಹಿತ ನಾಟಿ ವಸ್ತುಗಳನ್ನು ಬಳಸಿ.
  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ ರೋಗ ನಿರೋಧಕ ಪ್ರಭೇದಗಳನ್ನು ನೆಡಿ.
  • ರೋಗದ ಚಿಹ್ನೆಗಳಿಗಾಗಿ ಹೊಲವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ.
  • ಹೊಲದಲ್ಲಿ ಮತ್ತು ಕೃಷಿ ಉಪಕರಣಗಳು ಮತ್ತು ಸಲಕರಣೆಗಳಲ್ಲಿ ಹೆಚ್ಚಿನ ನೈರ್ಮಲ್ಯ ಗುಣಮಟ್ಟವನ್ನು ಕಾಪಾಡಿಕೊಳ್ಳಿ.
  • ಸೋಂಕಿತ ಸಸ್ಯಗಳನ್ನು ಹೊಲದಿಂದ ದೂರದಲ್ಲಿ ಸುಡುವ ಅಥವಾ ಹೂಳುವ ಮೂಲಕ ನಾಶಮಾಡಿ.
  • ಶಂಕಿತ ಸಾಂಕ್ರಾಮಿಕ ಹರಡುವ ವಸ್ತುಗಳನ್ನು ಇತರ ಹೊಲಗಳಿಗೆ ಅಥವಾ ತೋಟಗಳಿಗೆ ಸಾಗಿಸಬೇಡಿ.
  • ಹೊಲದಲ್ಲಿ ರೋಗಲಕ್ಷಣಗಳು ಕಂಡುಬಂದರೆ ಕ್ವಾರೆಂಟೈನ್ ಅಧಿಕಾರಿಗಳಿಗೆ ತಿಳಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ