ಇತರೆ

ನೈಸರ್ಗಿಕ ಎಲೆ ಮಚ್ಚೆ ರೋಗ

PLS

ಇತರೆ

5 mins to read

ಸಂಕ್ಷಿಪ್ತವಾಗಿ

  • ವಿಭಿನ್ನ ಗಾತ್ರದ ಮತ್ತು ಬಣ್ಣಗಳ ಕಲೆಗಳೊಂದಿಗೆ ಎಲೆಯ ಮೇಲೆ ವಿವಿಧ ಲಕ್ಷಣಗಳು ಕಂಡುಬರುತ್ತವೆ.
  • ಸಸ್ಯದ ಎಲ್ಲಾ ಎಲೆಗಳಲ್ಲೂ ಕಲೆಗಳ ಈ ಮಾದರಿ ಕಂಡುಬರುತ್ತದೆ, ಇವು ಸಾಮಾನ್ಯವಾಗಿ ಚೂಪಾದ ಅಂಚುಗಳಿರುವ ಎಲೆಗಳ ಸಿರೆಗಳಿಗೆ ಸೀಮಿತವಾಗಿರುತ್ತವೆ (ಅಲ್ಲದೆ ಹಳೆಯ ಎಲೆಗಳಿಗೆ ಸೀಮಿತವಾಗಿರುತ್ತವೆ ಮತ್ತು ಶಿಲೀಂಧ್ರಗಳೊಂದಿಗೆ ಹರಡುತ್ತವೆ).

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು
ಬಾರ್ಲಿ
ಗೋಧಿ

ಇತರೆ

ರೋಗಲಕ್ಷಣಗಳು

ಬೆಳೆಯ ವಿಧ, ತಳಿ, ಋತುಮಾನ ಮತ್ತು ನಿರ್ವಹಣೆಯ ಪ್ರಕಾರವನ್ನು ಆಧರಿಸಿ ನೈಸರ್ಗಿಕ ಎಲೆ ಮಚ್ಚೆ ರೋಗದ ಲಕ್ಷಣಗಳು ಗಾತ್ರ ಮತ್ತು ಬಣ್ಣದಲ್ಲಿ ಗಣನೀಯವಾಗಿ ಬದಲಾಗುತ್ತವೆ. ಕೆಲವು ಧಾನ್ಯಗಳ ಮೇಲೆ ಹಳದಿ ಮಚ್ಚೆಗಳು ಅಥವಾ ಕಿತ್ತಳೆ ಬಣ್ಣದ ಸೂಜಿ ಚುಚ್ಚಿದಂತಹ ಕಲೆಗಳು ಬೆಳೆಯುತ್ತವೆ ಮತ್ತು ಇತರವುಗಳಲ್ಲಿ ಕಂದು ಅಥವಾ ಕೆಂಪು-ಕಂದು ಬಣ್ಣದ ಕಲೆಗಳಿರುತ್ತವೆ. ಕೆಲವು ಸಂದರ್ಭಗಳಲ್ಲಿ ಕಲೆಗಳು ದೊಡ್ಡದಾಗುತ್ತವೆ ಮತ್ತು ನೀರು-ನೆನೆಸಿದಂತೆ ಇರುವ ಬೆರಳು ಗುರುತಿನಂತಹ ಗುಳ್ಳೆಗಳಾಗಿ ಮಾರ್ಪಾಡಾಗುತ್ತವೆ. ಈ ಲಕ್ಷಣಗಳು ಶಿಲೀಂಧ್ರಗಳಿಂದ ಉಂಟಾಗುವ ರೋಗಲಕ್ಷಣಗಳೆಂದು ತಪ್ಪಾಗಿ ತಿಳಿಯಬಹುದು, ಉದಾಹರಣೆಗೆ ಟ್ಯಾನ್ ಸ್ಪಾಟ್, ನೆಟ್ ಬ್ಲಾಚ್ ಮತ್ತು ಸೆಪ್ಟೋರಿಯಾ ಎಲೆ ಚುಕ್ಕೆ. ಆದಾಗ್ಯೂ, ಕಾರಣವು ಶಾರೀರಿಕವಾದದ್ದಾಗಿದ್ದರೆ, ಸಸ್ಯದ ಎಲ್ಲಾ ಎಲೆಗಳಲ್ಲೂ ಕಲೆಗಳು ಇರುತ್ತವೆ, ಆದರೆ ಶಿಲೀಂಧ್ರ ರೋಗಗಳು ಸಾಮಾನ್ಯವಾಗಿ ಕೆಳ ಕ್ಯಾನೋಪಿ(ಮೇಲಾವರಣ)ಯಲ್ಲಿ ಪ್ರಾರಂಭವಾಗುತ್ತವೆ. ಮತ್ತೊಂದು ಪ್ರಮುಖ ವ್ಯತ್ಯಾಸವೆಂದರೆ, ಶಾರೀರಿಕ ಗಾಯಗಳು ಎಲೆಯ ಸಿರೆಗಳಿಗೆ ಸೀಮಿತವಾದ ಚೂಪಾದ ಅಂಚುಗಳನ್ನು ಹೊಂದಿರುತ್ತವೆ (ಅಲ್ಲದೆ ಶಿಲೀಂಧ್ರಗಳೊಂದಿಗೆ ಹರಡಿರುತ್ತವೆ).

Recommendations

ಜೈವಿಕ ನಿಯಂತ್ರಣ

ಈ ಸಮಯದಲ್ಲಿ ನೈಸರ್ಗಿಕ ಎಲೆ ಮಚ್ಚೆ ರೋಗಕ್ಕೆ ಯಾವುದೇ ಜೈವಿಕ ನಿಯಂತ್ರಣದ ಆಯ್ಕೆ ಲಭ್ಯವಿಲ್ಲ. ನಿಮಗೆ ಯಾವುದದರೂ ವಿಧದ ಬಗ್ಗೆ ತಿಳಿದಿದ್ದರೆ ದಯವಿಟ್ಟು ನಮಗೆ ತಿಳಿಸಿ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಮಣ್ಣಿನ pH ನಡುನೆಲೆಯದ್ದಾಗಿದ್ದು ಅಥವಾ ಕಡಿಮೆಯಾಗಿದ್ದಲ್ಲಿ, KCl ರೂಪದಲ್ಲಿ ಪೊಟ್ಯಾಶ್ ಸೇರಿಸುವುದರಿಂದ ಕೆಲವು ತಳಿಗಳಲ್ಲಿ ರೋಗಲಕ್ಷಣಗಳನ್ನು ಸರಿಪಡಿಸಬಹುದು ಅಥವಾ ಸಸ್ಯವನ್ನು ಪೂರ್ವಸ್ಥಿತಿಗೆ ಹಿಂದಿರುಗಿಸಬಹುದು ಎಂದು ಕಂಡುಬಂದಿದೆ. ಹೆಚ್ಚಿನ pH ಇರುವ ಮಣ್ಣಿಗೆ ಪೊಟ್ಯಾಶ್ ಸೇರಿಸುವುದು ಸೀಮಿತ ಸೌಲಭ್ಯವನ್ನು ನೀಡುತ್ತದೆ.

ಅದಕ್ಕೆ ಏನು ಕಾರಣ

ನೈಸರ್ಗಿಕ ಎಲೆ ಮಚ್ಚೆ ರೋಗವು ಹೆಚ್ಚಾಗಿ ಚಳಿಗಾಲದ ಗೋಧಿಯಲ್ಲಿ ಕಂಡುಬರುತ್ತದೆ, ಆದರೆ ಇತರ ಧಾನ್ಯಗಳ ಮೇಲೂ ಸಹ ಪರಿಣಾಮವಾಗಬಹುದು. ಈ ಅಸ್ವಸ್ಥತೆಯು ಪರಿಸರದ ಅಂಶಗಳಿಂದಾಗಿ ಅಂಗಾಂಶ ಉತ್ಕರ್ಷಣದಿಂದ ಉಂಟಾಗುತ್ತದೆ ಎಂದು ಭಾವಿಸಲಾಗಿದೆ, ಉದಾಹರಣೆಗೆ ಮೇಲಿನ ಎಲೆಗಳಿಗೆ ಸೂರ್ಯನಿಂದ ಹಾನಿ ಅಥವಾ ಮಣ್ಣಿನಲ್ಲಿ ಕ್ಲೋರೈಡ್ ಕೊರತೆ. ಉಷ್ಣತೆಯುಳ್ಳ, ಬಿಸಿಲು ಪರಿಸ್ಥಿತಿಗಳ ನಂತರ ಪರ್ಯಾಯವಾಗಿ ಬರುವ ತಂಪಾದ, ಮೋಡ ಮತ್ತು ತೇವವಾದ ಹವಾಮಾನದಂತಹ ಇತರ ಒತ್ತಡಗಳು ಪ್ರಚೋದಕಗಳಾಗಿರಬಹುದು. ಎಲೆ ಕವಚಗಳ ತಳದಲ್ಲಿ ಪರಾಗ ಮತ್ತು ನೀರು ಸಂಗ್ರಹವಾಗುವುದು ಸಹ ನೈಸರ್ಗಿಕ ಕಲೆಗಳ ಬೆಳವಣಿಗೆಗೆ ಕಾರಣವಾಗಬಹುದು. ನೈಸರ್ಗಿಕ ಎಲೆ ಮಚ್ಚೆ ರೋಗದಿಂದ ಉಂಟಾಗುವ ಲಕ್ಷಣಗಳು ರೋಗಗಳಿಂದ ಉಂಟಾಗುವ ರೋಗಲಕ್ಷಣಗಳೆಂದು ತಪ್ಪಾಗಿ ತಿಳಿಯಬಹುದು, ಉದಾಹರಣೆಗೆ ಟ್ಯಾನ್ ಸ್ಪಾಟ್, ನೆಟ್ ಬ್ಲಾಚ್ ಮತ್ತು ಸೆಪ್ಟೋರಿಯಾ ಎಲೆ ಚುಕ್ಕೆ. ಹೇಗಾದರೂ, ಈ ರೋಗಕಾರಕಗಳ ವಿರುದ್ಧವಾಗಿ, ಇದು ಇಳುವರಿಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಭಾವಿಸಲಾಗಿದೆ. ಹೀಗಾಗಿ ಶಿಲೀಂಧ್ರನಾಶಕಗಳನ್ನು ಬಳಸಲು ನಿರ್ಧರಿಸುವ ಮೊದಲು ಮಚ್ಚೆಗಳು ರೋಗದಿಂದ ಉಂಟಾಗಿದೆಯೇ ಇಲ್ಲವೇ ಎಂದು ಪ್ರತ್ಯೇಕಿಸುವುದು ಬಹಳ ಮುಖ್ಯ.


ಮುಂಜಾಗ್ರತಾ ಕ್ರಮಗಳು

  • ಪ್ರದೇಶದಲ್ಲಿ ಲಭ್ಯವಿದ್ದರೆ ಚೇತರಿಸಿಕೊಳ್ಳುವ ಪ್ರಭೇದಗಳನ್ನು ಆಯ್ಕೆಮಾಡಿ.
  • ಬೆಳೆಯನ್ನು ನಿಯಮಿತವಾಗಿ ಪರಿಶೀಲಿಸಿ ಮತ್ತು ರೋಗನಿರ್ಣಯ ಪ್ರಯೋಗಾಲಯದಲ್ಲಿ ರೋಗದ ಕುರಿತು ಪರೀಕ್ಷೆ ಮಾಡಿ.
  • ಕಡಿಮೆ ಕ್ಲೋರೈಡ್ ಮಟ್ಟವನ್ನು ಹೊಂದಿರುವ ಮಣ್ಣುಗಳನ್ನು ಬಳಸಬೇಡಿ ಮತ್ತು ಈ ಪೋಷಕಾಂಶಕ್ಕಾಗಿ ಮಣ್ಣನ್ನು ನಿಯಮಿತವಾಗಿ ಪರಿಶೀಲಿಸಿ.
  • ಫಲವತ್ತತೆ ಕೆಲಸದಲ್ಲಿ ಪೂರಕವಾಗುವಂತೆ KCl ರೂಪದಲ್ಲಿರುವ ಪೊಟ್ಯಾಶ್ ಅನ್ನು ಸೇರಿಸಿ (ಮಣ್ಣು ಸೂಕ್ತವಾದ ಕಡಿಮೆ ಪಿಹೆಚ್ ಅನ್ನು ಹೊಂದಿದ್ದರೆ ಮಾತ್ರ).

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ