ಮಸೂರ ಅವರೆ

ಮಸೂರದಲ್ಲಿ ಬೇರು ಕೊಳೆ ರೋಗ

Rhizoctonia solani

ಶಿಲೀಂಧ್ರ

5 mins to read

ಸಂಕ್ಷಿಪ್ತವಾಗಿ

  • ಬೇರುಗಳ ಮೇಲೆ ಗುಳಿಬಿದ್ದ ಮತ್ತು ಚಿತ್ರವಿಚಿತ್ರ ಗಾಯಗಳು.
  • ಕುಗ್ಗುತ್ತಿರುವ ಬೇರಿನ ವ್ಯವಸ್ಥೆ ಮತ್ತು ಬೇರು ಕೊಳೆತ.
  • ಗಂಟುಗಳು ಕಡಿಮೆ ಪ್ರಮಾಣದಲ್ಲಿರುತ್ತವೆ, ಚಿಕ್ಕದಾಗಿರುತ್ತವೆ ಮತ್ತು ಬಣ್ಣ ಕಳಾಹೀನವಾಗಿರುತ್ತದೆ.
  • ಸಸಿಗಳು ಹೊರಹೊಮ್ಮಿದ ಸ್ವಲ್ಪ ಸಮಯದ ನಂತರ ಒಣಗುತ್ತವೆ ಅಥವಾ ಸಾಯುತ್ತವೆ.
  • ಬೆಳವಣಿಗೆಯ ಕೊನೆಯ ಹಂತಗಳಲ್ಲಿ ಸೋಂಕಿಗೆ ಒಳಗಾದ ಸಸ್ಯಗಳು ಕುಂಠಿತಗೊಂಡ ಬೆಳವಣಿಗೆ ತೋರಿಸುತ್ತವೆ ಮತ್ತು ಹಸಿರು ಬಣ್ಣ ಕಳೆದುಕೊಳ್ಳುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

3 ಬೆಳೆಗಳು

ಮಸೂರ ಅವರೆ

ರೋಗಲಕ್ಷಣಗಳು

ಈ ರೋಗವು ಮುಖ್ಯವಾಗಿ ಬೇರುಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಸಸಿಗಳ ಕಳಪೆ ಬೆಳವಣಿಗೆಗೆ ಕಾರಣವಾಗುತ್ತದೆ. ಸಸ್ಯಗಳ ಬೆಳವಣಿಗೆ ಕುಂಠಿತವಾಗುತ್ತದೆ ಮತ್ತು ಕಡಿಮೆ ಇಳುವರಿಯನ್ನು ನೀಡುತ್ತದೆ. ರೋಗಲಕ್ಷಣಗಳೆಂದರೆ, ಗುಳಿಬಿದ್ದ ಗಾಯಗಳು ಮತ್ತು ಬೇರುಗಳು ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಬೇರಿನ ವ್ಯವಸ್ಥೆ ಕುಗ್ಗುತ್ತದೆ ಮತ್ತು ಬೇರು ಕೊಳೆಯುತ್ತದೆ. ಅವು ಅಭಿವೃದ್ಧಿ ಹೊಂದಿದರೂ, ಗಂಟುಗಳು ಕಡಿಮೆ ಪ್ರಮಾಣದಲ್ಲಿರುತ್ತವೆ, ಚಿಕ್ಕದಾಗಿರುತ್ತವೆ ಮತ್ತು ಬಣ್ಣ ಕಳಾಹೀನವಾಗಿರುತ್ತದೆ. ಸೋಂಕಿತ ಬೀಜಗಳಿಂದ ಬೆಳೆಯುವ ಸಸ್ಯಗಳಲ್ಲಿ, ಸಸಿ ಹೊರಹೊಮ್ಮಿದ ಕೆಲವೇ ದಿನಗಳಲ್ಲಿ ರೋಗ ಉಂಟಾಗಬಹುದು. ಉಳಿದುಕೊಂಡ ಸಸ್ಯಗಳು ಹಸಿರು ಬಣ್ಣ ಕಳೆದುಕೊಂಡು, ಕಳಪೆ ಚಟುವಟಿಕೆಯನ್ನು ತೋರುತ್ತವೆ. ಬೆಳವಣಿಗೆಯ ಕೊನೆಯ ಹಂತಗಳಲ್ಲಿ ಸೋಂಕಿಗೆ ಒಳಗಾದ ಸಸ್ಯಗಳು ಕುಂಠಿತಗೊಂಡ ಬೆಳವಣಿಗೆಯನ್ನು ತೋರಿಸುತ್ತವೆ. ಅವಕಾಶವಾದಿ ರೋಗಕಾರಕಗಳು ಕೊಳೆಯುವ ಅಂಗಾಂಶವನ್ನು ಆವರಿಸುತ್ತವೆ ಮತ್ತು ಅವುಗಳನ್ನು ತಿನ್ನುತ್ತವೆ. ಇದು ರೋಗಲಕ್ಷಣಗಳನ್ನು ಮತ್ತಷ್ಟು ಹದಗೆಡಿಸುತ್ತದೆ. ಹೊಲದಲ್ಲಿ, ರೋಗವು ಸಾಮಾನ್ಯವಾಗಿ ಅಲ್ಲಲ್ಲಿ ಪಟ್ಟೆಯಾಗಿ ಸಂಭವಿಸುತ್ತದೆ ಮತ್ತು ರೋಗಕಾರಕಗಳಿಗೆ ಪರಿಸ್ಥಿತಿಗಳು ಅನುಕೂಲಕರವಾಗಿದ್ದರೆ ವಿಸ್ತರಿಸುತ್ತದೆ.

Recommendations

ಜೈವಿಕ ನಿಯಂತ್ರಣ

ಸಣ್ಣ ಪ್ರಮಾಣದ ಕೆನೆಟಿನ್ ಅನ್ನು ಒಳಗೊಂಡಿರುವ ದ್ರಾವಣಗಳು ಅಥವಾ ಶಿಲೀಂಧ್ರ ಟ್ರೈಕೊಡೆರ್ಮ ಹಾರ್ಜಿಯಂಮ್ ಗೆ ಸಂಬಂಧಿಸಿದ ದ್ರಾವಣಗಳಲ್ಲಿ ಬೀಜಗಳನ್ನು ನೆನೆಸುವುದು ಮಣ್ಣಿನ ಮೂಲದ ಕಾಯಿಲೆಗಳಾದ ಮಸೂರದ ಬೇರು ಕೊಳೆತ ನಿಯಂತ್ರಿಸಲು ಬಳಸಬಹುದು. ಇದಲ್ಲದೆ ಉಳಿದಿರುವ ಸಸ್ಯಗಳ ಬೆಳವಣಿಗೆ ಮತ್ತು ಉತ್ಪಾದಕತೆಯನ್ನು ಅವು ಸುಧಾರಿಸಬಹುದು. ಈ ಉತ್ಪನ್ನಗಳನ್ನು ದೊಡ್ಡ ಪ್ರಮಾಣಗಳಲ್ಲಿ ಪರೀಕ್ಷಿಸಲು ಹೊಲದಲ್ಲಿ ಪ್ರಯೋಗಗಳನ್ನು ನಡೆಸಲಾಗುತ್ತಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆ ಒಟ್ಟಾಗಿರುವ ಸಮಗ್ರ ವಿಧಾನವನ್ನು ಪರಿಗಣಿಸಿ. ಶಿಲೀಂಧ್ರವು ಒಮ್ಮೆ ಸಸ್ಯ ಅಂಗಾಂಶಗಳನ್ನು ಆಕ್ರಮಿಸಿಕೊಂಡ ನಂತರ, ಅವುಗಳ ವಿರುದ್ಧ ಯಾವುದೇ ಚಿಕಿತ್ಸೆ ಅಸಾಧ್ಯ. ಥಿಯೆಬೆಂಡಜೋಲ್ ಮತ್ತು ಕಾರ್ಬಥಿಯಾನ್, ಕಾರ್ಬಥಿಯಾನ್ ಮತ್ತು ಥೀರಮ್ ನೊಂದಿಗೆ ಬೀಜ ಚಿಕಿತ್ಸೆಗಳು ಸಸಿಗಳ ಸ್ಥಾಪನೆಯನ್ನು ಸುಧಾರಿಸುತ್ತದೆ. ಇತರ ಶಿಲೀಂಧ್ರನಾಶಕಗಳು ಸಹ ಲಭ್ಯವಿದೆ.

ಅದಕ್ಕೆ ಏನು ಕಾರಣ

ಬೆಳವಣಿಗೆಯ ಯಾವುದೇ ಹಂತಗಳಲ್ಲಿ ಸಸ್ಯಗಳಿಗೆ ಸೋಂಕು ಉಂಟುಮಾಡುವ ಮಣ್ಣಿನ ಮೂಲದ ಶಿಲೀಂಧ್ರ ರೋಗಕಾರಕಗಳ ಸಂಕೀರ್ಣದಿಂದಾಗಿ ಈ ರೋಗಲಕ್ಷಣಗಳು ಉಂಟಾಗಬಹುದು. ರೈಜೋಕ್ಟೊನಿಯಾ ಸೊಲಾನಿ ಮತ್ತು ಫುಸರಿಯಮ್ ಸೊಲಾನಿ ಈ ಸಂಕೀರ್ಣದ ಭಾಗವಾಗಿದೆ. ಗುಂಪಿನ ಉಳಿದ ಜೀವಿಗಳಂತೆ, ಮಣ್ಣುಗಳಲ್ಲಿ ಇವು ದೀರ್ಘಕಾಲದವರೆಗೆ ಬದುಕಬಲ್ಲವು. ಪರಿಸ್ಥಿತಿಗಳು ಅನುಕೂಲಕರವಾದಾಗ, ಇದು ಬೇರಿನ ಅಂಗಾಂಶಗಳನ್ನು ಆಕ್ರಮಿಸಿಕೊಳ್ಳುತ್ತದೆ ಮತ್ತು ಸಸ್ಯದ ಮೇಲಿನ ಭಾಗಗಳಿಗೆ ನೀರು ಮತ್ತು ಪೋಷಕಾಂಶಗಳ ಸಾಗಣೆಯನ್ನು ದುರ್ಬಲಗೊಳಿಸುತ್ತದೆ. ಇದು ಸಸ್ಯಗಳ ಬಾಡುವಿಕೆ ಮತ್ತು ಬಣ್ಣ ಕಳೆದುಕೊಳ್ಳುವಿಕೆಯನ್ನು ವಿವರಿಸುತ್ತದೆ. ಸಸ್ಯ ಅಂಗಾಂಶಗಳೊಳಗೆ ಬೆಳೆಯುವಾಗ, ಇವು ಹೆಚ್ಚಾಗಿ ಇ ಎಸ್ ಇ ಶಿಲೀಂಧ್ರಗಳ ಜೊತೆಗೆ ಕಂಡುಬರುತ್ತವೆ. ಇವು ಬೇರುಗಳ ಸಾಮಾನ್ಯ ಬೆಳವಣಿಗೆಯನ್ನು ಮತ್ತು ಗಂಟುಗಳ ರಚನೆಯನ್ನು ಪ್ರತಿಬಂಧಿಸುತ್ತವೆ. ಋತುವಿನ ಆರಂಭದಲ್ಲಿ ತಂಪಾದ ಮತ್ತು ತೇವಾಂಶವುಳ್ಳ ಮಣ್ಣು ರೋಗದ ಅಭಿವೃದ್ಧಿಗೆ ಅನುಕೂಲಕರವಾಗಿರುತ್ತದೆ. ವಾಸ್ತವವಾಗಿ, ರೋಗಲಕ್ಷಣಗಳು ಸಾಮಾನ್ಯವಾಗಿ ನೀರು ನಿಂತ ಅಥವಾ ಪ್ರವಾಹ ಇರುವ ಪ್ರದೇಶಗಳೊಂದಿಗೆ ಸಂಬಂಧ ಹೊಂದಿವೆ. ಅಂತಿಮವಾಗಿ, ಬಿತ್ತನೆ ದಿನಾಂಕ ಮತ್ತು ಬಿತ್ತನೆಯ ಆಳ ಸಸಿಗಳ ಹೊರಹೊಮ್ಮುವಿಕೆ ಮತ್ತು ಇಳುವರಿಯ ಮೇಲೆ ಗಣನೀಯ ಪರಿಣಾಮವನ್ನು ಬೀರಬಹುದು.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಸಸ್ಯಗಳಿಂದ ಅಥವಾ ಪ್ರಮಾಣೀಕೃತ ಮೂಲಗಳಿಂದ ಬೀಜಗಳನ್ನು ಬಳಸಿ.
  • ಲಭ್ಯವಿದ್ದರೆ ಹೆಚ್ಚು ನಿರೋಧಕ ಪ್ರಭೇದಗಳನ್ನು ಆರಿಸಿ.
  • ಸರಿಯಾದ ಒಳಚರಂಡಿ ಹೊಂದಿರುವ ಹೊಲವನ್ನು ಆಯ್ಕೆ ಮಾಡಿ.
  • ಸಸ್ಯಗಳಿಗೆ ಅನಪೇಕ್ಷಿತ ಪರಿಸ್ಥಿತಿಗಳನ್ನು ತಪ್ಪಿಸಲು ಋತುವಿನಲ್ಲಿ ತಡವಾಗಿ ಬಿತ್ತನೆ ಮಾಡಿ.
  • ಸಸ್ಯಗಳಿಗೆ ಸಮತೋಲನ ಪೋಷಣೆ ಸಿಗುವಂತೆ ಖಚಿತಪಡಿಸಿಕೊಳ್ಳಿ.
  • ಆರಂಭಿಕ ಬೆಳವಣಿಗೆಯ ಸಮಯದಲ್ಲಿ ಉತ್ತಮವಾದ ರಂಜಕದ ಪೂರೈಕೆಯನ್ನು ಖಚಿತಪಡಿಸಿಕೊಳ್ಳಿ, ವಿಶೇಷವಾಗಿ ತಂಪು ಪರಿಸ್ಥಿತಿಗಳಲ್ಲಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ