ಗೋಧಿ

ಇಯರ್ ಕಾಕಲ್ ಈಲ್ವರ್ಮ್

Anguina tritici

ಇತರೆ

5 mins to read

ಸಂಕ್ಷಿಪ್ತವಾಗಿ

  • ತಿಳಿ ಹಸಿರು ಬಣ್ಣದ, ವಿರೂಪಗೊಂಡ ಎಲೆಗಳು ಮತ್ತು ಕುಂಠಿತಗೊಂಡ ಸಸ್ಯಗಳು.
  • ಅಸಹಜ ಕೋನದಲ್ಲಿ ಹೊರಚಾಚುವ ಹೂಹಿಡಿಳೊಂದಿಗೆ ಸಣ್ಣ ತೆನೆಗಳು.
  • ತೆನೆಗಳಲ್ಲಿ ವಿರೂಪಗೊಂಡ ಮತ್ತು ಬಣ್ಣಗೆಟ್ಟ ಗಂಟುಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಗೋಧಿ

ರೋಗಲಕ್ಷಣಗಳು

ಕೆಲವು ಸಂದರ್ಭಗಳಲ್ಲಿ, ಎ. ಟ್ರಿಟಿಕಿಯಿಂದ ಸೋಂಕಿಗೊಳಗಾಗಿರುವ ಸಸ್ಯಗಳು ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸುವುದಿಲ್ಲ. ರೋಗಲಕ್ಷಣ ತೋರಿಸುವಂತಹ ಸಸ್ಯಗಳಲ್ಲಿ, ಎಲೆಗಳ ಮೇಲ್ಭಾಗದಲ್ಲಿ ಊದಿಕೊಂಡಂತಹ ತೇಪೆಗಳು ಮತ್ತು ಕೆಳಭಾಗದಲ್ಲಿ ಗುಳಿಬಿದ್ದಂತೆ ಸ್ವಲ್ಪ ಮಟ್ಟಿಗೆ ವಿರೂಪಗೊಂಡಿರಬಹುದು. ಇತರ ರೋಗಲಕ್ಷಣಗಳೆಂದರೆ ಸುಕ್ಕುಗಟ್ಟುವುದು, ತಿರುಚಿಕೊಳ್ಳುವುದು ಮತ್ತು ನಡುದಿಂಡಿನ ಕಡೆಗೆ ಅಂಚುಗಳು ಸುರುಳಿಯಾಗುವುದು ಅಥವಾ ಇತರ ರೀತಿಯ ವಿರೂಪತೆಗಳು. ಸಸ್ಯಗಳು ತಿಳಿ ಹಸಿರು ಅಥವಾ ಕ್ಲೋರೋಟಿಕ್ ಬಣ್ಣಕ್ಕೆ ತಿರುಗುತ್ತವೆ, ಕುಂಠಿತಗೊಳ್ಳುತ್ತವೆ ಅಥವಾ ಕುಬ್ಜವಾಗುತ್ತವೆ ಮತ್ತು ಕಾಂಡಗಳು ಬಾಗಬಹುದು. ತೆನೆಗಳು ಚಿಕ್ಕದಾಗಿದ್ದು, ಹೂಹಿಡಿಗಳು ಅಸಹಜ ಕೋನದಲ್ಲಿ ಹೊರಚಾಚುತ್ತವೆ. ಈ ಲಕ್ಷಣವು ರೈ ತೆನೆಗಳಲ್ಲಿ ಗೋಚರಿಸುವುದಿಲ್ಲ. ಕೆಲವೊಂದು ಬೀಜಗಳು ನೆಮಟೋಡ್ಗಳ ಒಣಗಿದ ದ್ರವ್ಯರಾಶಿಯನ್ನು ಹೊಂದಿರುವ ಬೊಬ್ಬೆಗಳಾಗಿ ಪರಿವರ್ತಿತವಾಗುತ್ತವೆ. ಈ ಬೊಬ್ಬೆಗಳು ಅವುಗಳ ಆರೋಗ್ಯಕರ ಪ್ರತಿರೂಪಕ್ಕಿಂತ ಸಣ್ಣದಾಗಿ, ದಪ್ಪವಾಗಿ, ಮತ್ತು ಹಗುರವಾಗಿರುತ್ತವೆ ಮತ್ತು ಅವುಗಳ ಬಣ್ಣವು ಅವು ಬೆಳೆಯುತ್ತಿದ್ದಂತೆ ತಿಳಿ ಕಂದು ಬಣ್ಣದಿಂದ ಕಪ್ಪು ಬಣ್ಣದವರೆಗೆ ಬದಲಾಗುತ್ತದೆ (ಹಳದಿ-ಕಂದು ಬಣ್ಣದ ಬದಲಾಗಿ).

Recommendations

ಜೈವಿಕ ನಿಯಂತ್ರಣ

ಬೀಜಗಳನ್ನು ಸಾಮಾನ್ಯ ಉಪ್ಪಿನ ದ್ರಾವಣದಲ್ಲಿ (1 ಕೆಜಿ / 5 ಲೀ ನೀರು) ಇಡಬಹುದು ಮತ್ತು ಜೋರಾಗಿ ತಿರುಗಿಸಬಹುದು. ಈ ಎರೆತದಲ್ಲಿ, ರೋಗ ಪೀಡಿತ ಬೀಜಗಳು ಮತ್ತು ಅವಶೇಷಗಳು ಮೇಲ್ಭಾಗಕ್ಕೆ ತೇಲಿ ಬರುತ್ತವೆ ಮತ್ತು ನಂತರ ಅದನ್ನು ಸಂಗ್ರಹಿಸಿ, ಬೇಯಿಸಲಾಗುತ್ತದೆ, ಕುದಿಸಲಾಗುತ್ತದೆ ಅಥವಾ ನೆಮಟೋಡ್ಗಳನ್ನು ಕೊಲ್ಲಲು ರಾಸಾಯನಿಕವಾಗಿ ಚಿಕಿತ್ಸೆ ನೀಡಲಾಗುತ್ತದೆ. ಪಾತ್ರೆಯ ಕೆಳಭಾಗಕ್ಕೆ ಮುಳುಗಿರುವ ಆರೋಗ್ಯಕರ ಬೀಜಗಳನ್ನು ಹಲವಾರು ಬಾರಿ ಶುದ್ಧ ನೀರಿನಲ್ಲಿ ತೊಳೆಯಲಾಗುತ್ತದೆ ಮತ್ತು ಬಿತ್ತನೆಗಾಗಿ ಒಣಗಿಸಲಾಗುತ್ತದೆ. 10-12 ನಿಮಿಷಗಳ ಕಾಲ 54-56 °ಸಿ ನ ಬಿಸಿನೀರಿನಲ್ಲಿ ಬೀಜಗಳನ್ನು ಹಾಕುವುದು ಸಹ ನೆಮಟೋಡ್ ಅನ್ನು ಕೊಲ್ಲುತ್ತದೆ. ಅಂತಿಮವಾಗಿ, ಬೊಬ್ಬೆಗಳು ಬೀಜಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ, ಅವುಗಳನ್ನು ಜರಡಿಯಾಡುವ ಮೂಲಕ ಯಾಂತ್ರಿಕವಾಗಿ ತೆಗೆಯಬಹುದು. ಎ ಟ್ರಿಟಿಕಿಯನ್ನು ನಿಯಂತ್ರಿಸಲು ಬೀಜಗಳನ್ನು ಶುಚಿಮಾಡುವ ಕೆಲಸದಷ್ಟು ನೆಮಟಿಸೈಡಲ್ ಸಸ್ಯಗಳು ಪರಿಣಾಮಕಾರಿಯಾಗಿರುವುದಿಲ್ಲ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಈ ಕೀಟಕ್ಕೆ ಯಾವುದೇ ರಾಸಾಯನಿಕ ಚಿಕಿತ್ಸೆ ಇಲ್ಲ. ಬೀಜ ಶುಚಿಗೊಳಿಸುವಿಕೆ ಮತ್ತು ಬೀಜ ಪ್ರಮಾಣೀಕರಣ ಕಾರ್ಯಕ್ರಮಗಳಿಂದ ಈ ರೋಗವನ್ನು ನಿರ್ಮೂಲನೆ ಮಾಡಲಾಗಿದೆ, ಅಂದರೆ ಗಂಟುಗಳನ್ನು (ಬೀಜಕ್ಕಿಂತ ಹಗುರವಾದ ಮತ್ತು ಕಡಿಮೆ ದಟ್ಟವಾದ) ತೊಡೆದುಹಾಕಲು, ಪ್ಲವನ, ಬಿಸಿನೀರಿನ ಚಿಕಿತ್ಸೆಗಳು, ಅಥವಾ ಗುರುತ್ವಾಕರ್ಷಣೆಯ ಮೇಜಿನ ಬೀಜ ಸಂಸ್ಕರಣೆಗಳನ್ನು ಬಳಸಬಹುದು.

ಅದಕ್ಕೆ ಏನು ಕಾರಣ

ಆಂಗ್ವೀನ ಟ್ರಿಟಿಕಿ ಎಂಬ ನೆಮಟೋಡ್ ನಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಮರಿ ಕೀಟಗಳು ನೀರಿನ ಒಂದು ಸಣ್ಣ ಎಳೆಯಲ್ಲಿ ಸಸ್ಯಗಳ ಮೇಲ್ಭಾಗಕ್ಕೆ ಚಲಿಸುತ್ತವೆ, ಕಾಂಡದ ತುದಿಯಲ್ಲಿರುವ ಸಸ್ಯೋತಕದ (ಮೆರಿಸ್ಟೆಮ್‌) ಮೇಲೆ ಆಕ್ರಮಣ ಮಾಡಿ, ಹೂವುಗಳೊಳಗೆ ತೂರಿಕೊಳ್ಳುತ್ತವೆ. ಗೋಧಿ, ಬಾರ್ಲಿ ಮತ್ತು ರೈ ಪ್ರಮುಖ ಆಶ್ರಯ ಗಿಡಗಳಾಗಿವೆ, ಆದರೆ ಓಟ್, ಮೆಕ್ಕೆ ಜೋಳ ಮತ್ತು ಹುಲ್ಲು ಜೋಳ ಅಲ್ಲ. ಒಮ್ಮೆ ಪಕ್ವವಾಗಿರುವ ಬೀಜದ ಒಳಹೊಕ್ಕರೆ, ಅವು ಬೊಬ್ಬೆಗಳ ರಚನೆಯನ್ನು ಪ್ರಚೋದಿಸುತ್ತವೆ, ಅವು ಅಲ್ಲೇ ನೆಲೆಗೊಳ್ಳುತ್ತವೆ ಮತ್ತು ಅಂತಿಮವಾಗಿ ಪ್ರೌಢ ಕೀಟಗಳಾಗಲು ಮೋಲ್ಟ್ (ಹೊರಚರ್ಮವನ್ನು ಬಿಡುವುದು) ಆಗುತ್ತವೆ. ಸಂಯೋಗದ ನಂತರ, ಹೆಣ್ಣು ಕೀಟಗಳು ಬೀಜದ ಬೊಬ್ಬೆಗಳೊಳಗೆ ಮೊಟ್ಟೆಯೊಡೆಯುವ ಮೊಟ್ಟೆಗಳನ್ನು ಇಡುತ್ತವೆ. ಈ ಮೊಟ್ಟೆಗಳು ನಂತರ ಅಲ್ಲೇ ಒತ್ತಿಕೊಂಡು ಮುಂದಿನ ವಸಂತಕಾಲದವರೆಗೆ ಸುಪ್ತವಾಗುತ್ತವೆ. ಬೀಜದಂತಹ ಗಂಟುಗಳನ್ನು ನೆಡುವಾಗ ಮತ್ತು ಕೊಯ್ಲಿನ ಸಮಯದಲ್ಲಿ ಅವು ಬೀಜಗಳ ಜೊತೆಯೇ ಹರಡುತ್ತವೆ. ತೇವವಾದ ಮಣ್ಣು ಮತ್ತು ನೀರಿನೊಂದಿಗೆ ಸಂಪರ್ಕಕ್ಕೆ ಬಂದಾಗ ನೆಮಟೋಡ್ಗಳು ತಮ್ಮ ಜೀವನ ಚಕ್ರವನ್ನು ಪುನರಾರಂಭಿಸುತ್ತವೆ. ತಂಪಾದ ಮತ್ತು ತೇವಾಂಶವುಳ್ಳ ಹವಾಮಾನವು ಅದರ ಅಭಿವೃದ್ಧಿಗೆ ವಿಶೇಷವಾಗಿ ಅನುಕೂಲಕರವಾಗಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಅತ್ಯುತ್ತಮ ಗುಣಮಟ್ಟದ ಪ್ರಮಾಣಿತ ಬೀಜಗಳನ್ನು ಬಳಸಲು ಮರೆಯದಿರಿ.
  • ನಿರೋಧಕ ತಳಿಗಳನ್ನು ಆಯ್ಕೆ ಮಾಡಿ (ಹಲವಾರು ಮಾರುಕಟ್ಟೆಯಲ್ಲಿವೆ).
  • ಸಾಧ್ಯವಾದರೆ, ಕನಿಷ್ಠ ಒಂದು ವರ್ಷ ಭೂಮಿಯಲ್ಲಿ ಸಾಗುವಳಿ ಮಾಡದೆ ಖಾಲಿ ಬಿಡಿ.
  • ರೋಗಕಾರಕವು ರವಾನೆಯಾಗುವುದನ್ನು ತಡೆಗಟ್ಟಲು ರೋಗಕ್ಕೆ ಆಶ್ರಯ ನೀಡದ ಸಸ್ಯಗಳೊಂದಿಗೆ ಕನಿಷ್ಟ ಒಂದು ವರ್ಷದ ಬೆಳೆ ಸರದಿಯನ್ನು ಯೋಜಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ