ಭತ್ತ

ಭತ್ತದ ಸ್ಟಾಕ್ ಸ್ಟಿಂಕ್ ಬಗ್

Tibraca limbativentris

ಕೀಟ

5 mins to read

ಸಂಕ್ಷಿಪ್ತವಾಗಿ

  • ಎಳೆಯ ಬೆಳೆಯುತ್ತಿರುವ ಎಲೆಗಳು ನಿರ್ಜೀವವಾಗುತ್ತವೆ, ಕಾಂಡಗಳಿಗೆ ಹಾನಿಯಾಗುತ್ತದೆ (ಡೆಡ್ ಹಾರ್ಟ್) ಮತ್ತು ಹೂಬಿಡುವ ಹಂತದಲ್ಲಿ ಬಿಳಿ ಹೂಗೊಂಚಲುಗಳು (ವೈಟ್ ಹೆಡ್ಸ್) ಕಂಡುಬರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ನೀರಾವರಿ ಪ್ರದೇಶಗಳು ಮತ್ತು ಒಣಭೂಮಿ ಕೃಷಿ ಎರಡರಲ್ಲೂ ಭತ್ತದ ಸ್ಟಾಕ್ ಸ್ಟಿಂಕ್ ಬಗ್ ಎಂಬ ಕೀಟವು ಕಂಡುಬಂದರೂ, ಇದು ವಿಶೇಷವಾಗಿ ಒಣಭೂಮಿ ಕೃಷಿಯಲ್ಲಿ ತೀವ್ರವಾಗಿರುತ್ತದೆ. ದೊಡ್ಡ ಹುಳುಗಳು ಮತ್ತು ಮರಿ ಹುಳುಗಳೆರಡೂ ಎಳೆಯ ಭತ್ತದ ಸಸ್ಯಗಳ ಮೇಲೆ ದಾಳಿ ಮಾಡುತ್ತವೆ ಮತ್ತು ಇದರಿಂದ "ಡೆಡ್ ಹಾರ್ಟ್" ಮತ್ತು "ವೈಟ್ ಹೆಡ್ಸ್" ಎಂದು ಕರೆಯಲಾಗುವ ರೋಗಲಕ್ಷಣಗಳು ಉಂಟಾಗುತ್ತದೆ. "ಡೆಡ್ ಹಾರ್ಟ್" ಎಂದರೆ ಎಳೆಯ ಬೆಳೆಯುತ್ತಿರುವ ಎಲೆಗಳು ನಿರ್ಜೀವವಾಗುವುದು ಮತ್ತು ಕೆಲವೊಮ್ಮೆ ಇಡೀ ಕಾಂಡವು ನಿರ್ಜೀವಗೊಳ್ಳುತ್ತದೆ. ಡಯಾಟ್ರಾಯಾ ತಳಿಯ ಕೆಲವು ಹಾರುವಕೀಟಗಳೂ ಸಹ ಇದೇ ರೀತಿಯ ರೋಗಲಕ್ಷಣವನ್ನು ಉಂಟುಮಾಡಬಹುದು. ಹೂಬಿಡುವ ಹಂತದಲ್ಲಿ, ಕೀಟವು ಹೂಗೊಂಚಲನ್ನು ಆಕ್ರಮಿಸುತ್ತದೆ ಮತ್ತು "ವೈಟ್ ಪ್ಯಾನಿಕಲ್" ಅಥವಾ "ವೈಟ್ ಹೆಡ್" ಎಂಬ ರೋಗಲಕ್ಷಣವನ್ನು ಉಂಟುಮಾಡುತ್ತದೆ, ಏಕೆಂದರೆ T. ಲಿಂಬಟಿವೆಂಟಸ್ ಕೀಟವು ಹೂಗೊಂಚಲು ಬೆಳೆಯುತ್ತಿರುವಾಗಲೇ ಎಲೆಯ ರಸವನ್ನು ಹೀರಿಕೊಳ್ಳುತ್ತದೆ ಮತ್ತು ಇದರಿಂದ ಧಾನ್ಯಗಳಲ್ಲಿ ವಿಷ ಹರಡುತ್ತದೆ. ಯಾವುದೇ ನಿಯಂತ್ರಣವಿಲ್ಲದಿದ್ದರೆ ಮತ್ತು ರೋಗವು ಏಕಾಏಕಿ ಅಧಿಕವಾಗಿದ್ದರೆ, 80% ರಷ್ಟು ನಷ್ಟವಾಗಬಹುದು.

Recommendations

ಜೈವಿಕ ನಿಯಂತ್ರಣ

ಮೊಟ್ಟೆಗಳನ್ನು ಟೆಲಿನೋಮಸ್ ಜಾತಿಯ ಪರೋಪಜೀವಿಗಳು ಆಕ್ರಮಿಸುತ್ತವೆ. ಕೆಲವು ಸಂದರ್ಭಗಳಲ್ಲಿ, ಈ ಜಾತಿಗಳನ್ನು ಹೊಲಗಳಲ್ಲಿ ಬಿಟ್ಟಾಗ ಅಲ್ಲಿ 90% ರಷ್ಟು ಪರಾವಲಂಬಿತ್ವವನ್ನು ಗಮನಿಸಲಾಗಿದೆ. ಇತರ ನೈಸರ್ಗಿಕ ಶತ್ರುಗಳ ಪೈಕಿ ಎಫೆರಿಯಾ ಜಾತಿಯ ಕೆಲವು ನೊಣಗಳಿವೆ. ಮೆಟಾಹಾರ್ಜಿಯಾಮ್ ಅನಿಸೊಪ್ಲಿಯಾ, ಬೆಯೂವೆರಿಯಾ ಬಾಸ್ಸಿನಾನಾ, ಪಿಸಿಲಿಮಿಸಸ್ sp. ಕಾರ್ಡಿಸೆಪ್ಸ್ ನುಟನ್ಸ್. ಕೊನಿಡಿಯಾ ಆಧಾರಿತ ಉತ್ಪನ್ನಗಳು ಭತ್ತದ ಬೆಳೆಗಳ ಮೇಲೆ ದ್ರಾವಣ ರೂಪದಲ್ಲಿ ಕೂಡ ಹಾಕಬಹುದು. ಪೈಪರ್ ತಳಿಯ ಎಲ್ಲ ಜಾತಿಗಳಿಂದ ತೆಗೆದ ಸಾರಭೂತ ತೈಲಗಳ ದ್ರಾವಣಗಳು (0.25 ರಿಂದ 4.0%) ಮೊಟ್ಟೆಯ ಮೇಲೆ ಪ್ರಭಾವ ಬೀರುತ್ತವೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಬೇರೆ ಯಾವುದೇ ಆಯ್ಕೆಗಳು ಲಭ್ಯವಿಲ್ಲದಿದ್ದರೆ ರಂಜಕ, ಪೈರೆಥ್ರಾಯ್ಡ್ ಅಥವಾ ಅನುಮತಿಸಲಾದ ಕಾರ್ಬಾಮಿಕ್ ಕೀಟನಾಶಕಗಳನ್ನು ಬಳಸಬಹುದು.

ಅದಕ್ಕೆ ಏನು ಕಾರಣ

ಟಿಬ್ರಾಕಾ ಲಿಂಬಟಿವೆಂಟ್ರಿಸ್ ಎಂಬ ಭತ್ತದ ಸ್ಟಾಕ್ ಸ್ಟಿಂಕ್ ಬಗ್ ನಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಇದು ಮಧ್ಯ ಮತ್ತು ದಕ್ಷಿಣ ಅಮೆರಿಕದ ಸ್ಥಳೀಯ ಕೀಟವಾಗಿದ್ದು, ಇದು ಅಕ್ಕಿಯೊಂದೇ ಅಲ್ಲದೆ, ಸೋಯಾಬೀನ್, ಟೊಮೆಟೊ ಮತ್ತು ಗೋಧಿಯನ್ನು ಸಹ ಆಕ್ರಮಿಸುತ್ತದೆ. ಸಾಮಾನ್ಯವಾಗಿ, ಇವು ಕೊಯ್ಲುಗಳ ನಡುವಿನ ಸಮಯವನ್ನು ಹೊಲದ ಹೊರಗೆ ಕಳೆಯುತ್ತವೆ ಮತ್ತು ಹೊಸದಾಗಿ ನಾಟಿ ಮಾಡಿದಾಗ ಮರಳುತ್ತವೆ. ದೊಡ್ಡ ಹುಳುಗಳು ಮತ್ತು ಮರಿ ಹುಳುಗಳೆರಡೂ ಸಸ್ಯಗಳನ್ನು ತಿನ್ನುತ್ತವೆ ಮತ್ತು ಇದರಿಂದಾಗಿ ವೈಟ್ ಹೆಡ್ಸ್ ಮತ್ತು ಡೆಡ್ ಹಾರ್ಟ್ಸ್ ಎಂದು ಕರೆಯಲಾಗುವ ಸ್ಥಿತಿ ಉಂಟಾಗುತ್ತದೆ. ಈ ಲಕ್ಷಣಗಳು ಅನುಕ್ರಮವಾಗಿ ಧಾನ್ಯಗಳು ಮತ್ತು ಕಾಂಡಗಳಿಗಾಗುವ ಹಾನಿಗೆ ಸಂಬಂಧಪಟ್ಟಿವೆ. ಶುಷ್ಕ ಪರಿಸ್ಥಿತಿಗಳಲ್ಲಿ ಅಥವಾ ಕಡಿಮೆ ತೇವಾಂಶದ ಅಡಿಯಲ್ಲಿ ಬೆಳೆದ ಭತ್ತಗಳಲ್ಲಿ ಈ ಹಾನಿ ಹೆಚ್ಚಾಗಿರುತ್ತದೆ. ನೀರಿನ ಕೊರತೆಯಿಂದಾಗಿ ಕೀಟಗಳು ಸಸ್ಯಗಳ ತಳದಲ್ಲೇ ಉಳಿಯುತ್ತವೆ. ಬೆಳೆ ಬೆಳೆದಂತೆ, ಕಾಂಡಗಳು ಗಟ್ಟಿಯಾಗುತ್ತವೆ (ಲಿಗ್ನಿಫಿಕೇಷನ್) ಮತ್ತು ಇದರಿಂದ ಕೀಟಗಳ ಆಹಾರ ಸೇವನೆ ಕಡಿಮೆಯಾಗುತ್ತದೆ ಮತ್ತು ಅವುಗಳ ಸಂಖ್ಯೆಯು ನಿಧಾನವಾಗಿ ಕಡಿಮೆಯಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಮಣ್ಣನ್ನು ತಯಾರಿಸುವ ಸಮಯದಲ್ಲಿ ಬೆಳೆ ಉಳಿಕೆಗಳು ಮತ್ತು ಕಳೆಗಳನ್ನು ನಾಶಮಾಡಿ.
  • ನಿಮ್ಮ ಹೊಲದ ಸುತ್ತಲಿರುವ ಭೂಮಿಯನ್ನು ಸ್ವಚ್ಚವಾಗಿರಿಸಿ, ಏಕೆಂದರೆ ಖಾಲಿ ಬಿಟ್ಟ ಕಳೆಯಿರುವ ಜಾಗಗಳಿಂದ ಕೀಟ ಹರಡುತ್ತದೆ.
  • ಸಸ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡಿ (150 ಸಸ್ಯಗಳು / ಚದರ ಮೀ).
  • ಏಕೆಂದರೆ ಅಧಿಕ ಸಾಂಧ್ರತೆ ಅವುಗಳನ್ನು ನೈಸರ್ಗಿಕ ಶತ್ರುಗಳಿಂದ ರಕ್ಷಿಸುತ್ತದೆ.
  • ಈ ಜಾತಿಗಳ ಪರಭಕ್ಷಕಗಳ ಮೇಲೆ ಪರಿಣಾಮ ಬೀರದಿರಲು ಕೀಟನಾಶಕವನ್ನು ಮಿತಿಯಾಗಿ ಬಳಸಿ.
  • ನೀರಾವರಿ ನೀರಿನ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ