ಭತ್ತ

ಗೋಲ್ಡನ್ ಆಪಲ್ ಸ್ನೇಲ್

Pomacea canaliculata

ಇತರೆ

5 mins to read

ಸಂಕ್ಷಿಪ್ತವಾಗಿ

  • ಸಸ್ಯ ಸರಿಯಾಗಿ ನಿಲ್ಲುವುದಿಲ್ಲ, ಏಕೆಂದರೆ ನೀರಿನ ಮೇಲ್ಭಾಗದ ಕೆಳಗಿರುವ ಕಾಂಡಗಳನ್ನು ಬಸವನ ಹುಳುಗಳು ಹಾನಿ ಮಾಡುತ್ತವೆ.
  • ನೀರಿನ ಕೆಳಭಾಗದಲ್ಲಿರುವ ಕಾಂಡಗಳನ್ನು ಮತ್ತು ಎಲೆಗಳನ್ನು ತಿನ್ನುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಇದು ಪ್ರತ್ಯೇಕವಾಗಿ ತೇವಭೂಮಿ ಭತ್ತದ ಒಂದು ಕೀಟವಾಗಿದೆ. ಹಾನಿಯ ಮೊದಲ ಲಕ್ಷಣವೇನೆಂದರೆ ಸಸ್ಯದ ನಿಲುವವು ಕಡಿಮೆಯಾಗಿರುತ್ತದೆ. ಅಲ್ಲಿ ಬಸವನ ಹುಳುಗಳು ನೀರಿನ ಮಟ್ಟಕ್ಕಿಂತ ಕೆಳಗಿರುವ ಸಸ್ಯ ಕಾಂಡಗಳನ್ನು ಕತ್ತರಿಸುತ್ತವೆ. ಆರಂಭಿಕ ಸಸಿ ಹಂತದಲ್ಲಿ ಈ ಬೆಳೆ ಹೆಚ್ಚು ದುರ್ಬಲವಾಗಿರುತ್ತದೆ, ಆದ್ದರಿಂದ ಇವು ಮುಖ್ಯವಾಗಿ ತೇವವಾದ-ನಾಟಿ ಮಾಡಿದ ಭತ್ತ ಮತ್ತು 30 ದಿನಗಳವರೆಗೆ ಬೆಳೆದ ಕಸಿಮಾಡಿದ ಭತ್ತಕ್ಕೆ ಹಾನಿಮಾಡುತ್ತವೆ. ಅದರ ನಂತರ, ಕಾಂಡಗಳು ತುಂಬಾ ದಪ್ಪವಾಗುತ್ತವೆ ಮತ್ತು ಬಸವನ ಹುಳುಗಳು ಗಟ್ಟಿಯಾದ ಅಂಗಾಂಶಗಳನ್ನು ತಿನ್ನುವುದಿಲ್ಲ. ಬಸವನ ಹುಳುಗಳು ಮೊದಲು ಕಾಂಡಗಳನ್ನು ತಿನ್ನುತ್ತವೆ ನಂತರ ಎಲೆಗಳು ತದನಂತರ ನೀರಿನೊಳಗಿರುವ ಕಾಂಡಗಳನ್ನು ತಿನ್ನುತ್ತವೆ. ಟಾರೊ (ಕೊಲೊಕಾಸಿಯ ಎಸ್ಕ್ಯುಲೆಂಟಮೇಯ್) ನಂತಹ ಇತರ ಸಸ್ಯಗಳಿಗೂ ಕೂಡ ದಾಳಿಯಾಗಬಹುದು. ಈ ಕೀಟದ ಜೀವಿತಾವಧಿಯು 119 ದಿನಗಳಿಂದ 5 ವರ್ಷಗಳವರೆಗೆ ಇರಬಹುದು. ತಾಪಮಾನ ಹೆಚ್ಚಾದಂತೆ ಅವುಗಳ ಆಯುಷ್ಯ ಕಡಿಮೆಯಾಗುತ್ತದೆ.

Recommendations

ಜೈವಿಕ ನಿಯಂತ್ರಣ

ಭೂಮಿ ತಯಾರಿಕೆ, ನಾಟಿ ಅಥವಾ ಬೆಳೆ ಬೆಳವಣಿಗೆಯ ಸಮಯದಲ್ಲಿ ಸಾಮೂಹಿಕವಾಗಿ ಬಸವನ ಹುಳು ಮತ್ತು ಅವುಗಳ ಮೊಟ್ಟೆಗಳನ್ನು ಸಂಗ್ರಹಿಸುವ ಕೆಲಸ ಮಾಡಿದರೆ ಅದು ಬಹಳ ಪರಿಣಾಮಕಾರಿ. ಬಸವನ ಹುಳುಗಳನ್ನು ಹೊರತೆಗೆದು ಪ್ರಾಣಿಗಳ ಆಹಾರವಾಗಿ ಸಹ ಮಾರಾಟ ಮಾಡಬಹುದು. ನೈಸರ್ಗಿಕ ಪರಭಕ್ಷಕಗಳನ್ನು ಕಾಪಾಡಿಕೊಳ್ಳಬೇಕು, ಉದಾಹರಣೆಗೆ ಬಸವನ ಹುಳು ಮೊಟ್ಟೆಗಳನ್ನು ತಿನ್ನುವ ಕೆಂಪು ಇರುವೆಗಳು ಮತ್ತು ಚಿಕ್ಕ ಬಸವನ ಹುಳುಗಳನ್ನು ತಿನ್ನುವ ಹಕ್ಕಿಗಳು ಅಥವಾ ಬಾತುಕೋಳಿಗಳು. ದೇಶೀಯ ಬಾತುಕೋಳಿಗಳನ್ನು ಭೂಮಿ ತಯಾರಿಕೆಯ ಅಂತಿಮ ಹಂತದಲ್ಲಿ ಅಥವಾ ಸಸ್ಯಗಳು ಸಾಕಷ್ಟು ದೊಡ್ಡದಾಗಿ ಬೆಳೆದ ನಂತರ ಹೊಲಗಳಲ್ಲಿ ಬಿಡಬಹುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಸಾಮಾನ್ಯ ರಸಗೊಬ್ಬರ ಅನ್ವಯಿಕ ಪ್ರಮಾಣ ಮತ್ತು ವೇಳಾಪಟ್ಟಿಯನ್ನು ಅನುಸರಿಸಿ ಮತ್ತು ಆಪಲ್ ಬಸವನ ಹುಳುಗಳ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಹೆಚ್ಚಿಸಲು 2 ಸೆಂ.ಮೀ. ನೀರಿಗೆ ರಸಗೊಬ್ಬರವನ್ನು ಹಾಕಿ. ಕೀಟನಾಶಕ ಉತ್ಪನ್ನಗಳನ್ನು ಇಡೀ ಭೂಮಿಗೆ ಹಾಕುವ ಬದಲು ತಗ್ಗಿನ ಸ್ಥಳಗಳು ಮತ್ತು ನೀರಿನ ಹಾದಿಗಳಿಗೆ ಮಾತ್ರ ಹಾಕಿ. ಈ ಉತ್ಪನ್ನಗಳನ್ನು ನಾಟಿ ಮಾಡಿದ ತಕ್ಷಣ ಅಥವಾ ನೇರವಾಗಿ ಬೀಜ ಬಿತ್ತಿದ ಭತ್ತದಲ್ಲಿ ಸಸಿ ಬೆಳೆಯುವ ಹಂತದಲ್ಲಿ ಮತ್ತು 30 ದಿನಗಳಿಗಿಂತಲೂ ಕಡಿಮೆ ವಯಸ್ಸಿನ ಭತ್ತಕ್ಕೆ ಮಾತ್ರ ಬಳಸಬೇಕು. ಯಾವಾಗಲೂ ಲೇಬಲ್ ಅನ್ನು ಓದಿ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಿ.

ಅದಕ್ಕೆ ಏನು ಕಾರಣ

ಎರಡು ಜಾತಿಯ ಗೋಲ್ಡನ್ ಆಪಲ್ ಬಸವನ ಹುಳುಗಳಾದ, ಪೊಮೆಸಿಯ ಕ್ಯಾನಾಲಿಕ್ಯುಲಾಟಾ ಮತ್ತು P. ಮ್ಯಾಕುಲಾಟದಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ಅವು ಹೆಚ್ಚು ಆಕ್ರಮಣಶೀಲವಾಗಿರುವುದರಿಂದ ಇವು ಭತ್ತದ ಬೆಳೆಗಳಿಗೆ ಗಂಭೀರ ಹಾನಿಯನ್ನು ಉಂಟುಮಾಡಬಹುದು. ಅವುಗಳು ನೀರಿನ ಮಾರ್ಗಗಳ ಮೂಲಕ (ನೀರಾವರಿ ಕಾಲುವೆಗಳು, ನೈಸರ್ಗಿಕ ನೀರಿನ ವಿತರಣೆ) ಅಥವಾ ಪ್ರವಾಹದ ಘಟನೆಗಳ ಸಮಯದಲ್ಲಿ ಹರಡುತ್ತವೆ. ನೀರು ಇಲ್ಲದ ಸಂದರ್ಭದಲ್ಲಿ, ಈ ಬಸವನ ಹುಳುಗಳು ಮಣ್ಣಿನಲ್ಲಿ ಅಡಗಿಕೊಳ್ಳುತ್ತವೆ ಮತ್ತು ಆರು ತಿಂಗಳುಗಳ ವರೆಗೆ ಚಳಿನಿದ್ದೆ ಮಾಡುತ್ತವೆ ಮತ್ತು ನೀರು ಮರಳಿದಂತೆ ಮತ್ತೆ ಹೊರಹೊಮ್ಮುತ್ತವೆ. ಭತ್ತದ ಬೆಳೆಗಳಲ್ಲಿ ಸ್ಥಳೀಯ ತಳಿ ಯಾವುದೆಂದು ಹೇಳಲು ಈ ಬಸವನ ಹುಳುಗಳ ಬಣ್ಣ ಮತ್ತು ಗಾತ್ರ ಸಹಾಯ ಮಾಡುತ್ತದೆ. ಗೋಲ್ಡನ್ ಆಪಲ್ ಬಸವನಹುಳುಗಳಿಗೆ ಕಂದು ಬಣ್ಣದ ಚಿಪ್ಪು ಮತ್ತು ಗೋಲ್ಡನ್ ಗುಲಾಬಿ ಅಥವಾ ಕಿತ್ತಳೆ-ಹಳದಿ ಬಣ್ಣದ ದೇಹವಿರುತ್ತದೆ. ಸ್ಥಳೀಯ ಬಸವನ ಹುಳುಗಳಿಗೆ ಹೋಲಿಸಿದರೆ ಅವುಗಳು ದೊಡ್ಡದಾಗಿರುತ್ತವೆ ಮತ್ತು ಬಣ್ಣದಲ್ಲಿ ತೆಳುವಾಗಿರುತ್ತವೆ. ಇದರ ಮೊಟ್ಟೆಗಳು ಗಾಢ ಗುಲಾಬಿ ಬಣ್ಣದಲ್ಲಿರುತ್ತವೆ ಮತ್ತು ಹಲವಾರು ನೂರಾರು ಸಮೂಹಗಳಲ್ಲಿ ಇವು ಮೊಟ್ಟೆಗಳನ್ನು ಇಡುತ್ತವೆ.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಮತ್ತು ಬೇಗ ಬೆಳೆಯುವ ಸಸಿಗಳನ್ನು ನೆಡಿ.
  • ಭತ್ತದ ಸಸ್ಯವು ದುರ್ಬಲ ಹಂತದಲ್ಲಿದ್ದಾಗ (30 ದಿನಗಳ ಒಳಗೆ) ಹೊಲವನ್ನು ಸಾಧ್ಯವಾದಷ್ಟು ನೀರಿನಿಂದ ಬರಿದಾಗಿರಿಸಿ.
  • ಪರ್ಯಾಯವಾಗಿ, ಈ ಹಂತದಲ್ಲಿ ನೀರಿನ ಮಟ್ಟವನ್ನು 2 ಸೆಂ.ಮಿ ಗಿಂತ ಕಡಿಮೆ ಇರಿಸಿ.
  • ಕಡಿಮೆ ಸಾಂದ್ರತೆಯ ನರ್ಸರಿ ಬೆಡ್ ಗಳಿಂದ 25-30 ದಿನ ಹಳೆಯ, ಗಟ್ಟಿಯಾದ ಸಸಿಗಳನ್ನು ಕಸಿ ಮಾಡಿ.
  • ಬಸವನ ಹುಳುಗಳನ್ನು ಕೈಯಿಂದ ತೆಗೆದುಹಾಕಿ ಮತ್ತು ಮೊಟ್ಟೆಯ ರಾಶಿಗಳನ್ನು ಅದುಮಿ ಹಾಕಿ.
  • ಸಾಮಾನ್ಯವಾಗಿ ಬೆಳಗ್ಗಿನ ಸಮಯದಲ್ಲಿ.
  • ಬಸವನ ಹುಳುಗಳನ್ನು ಸುಲಭವಾಗಿ ತೆಗೆದುಹಾಕಲು ಅವನ್ನು ಆಕರ್ಷಿಸಲು ಭತ್ತ ಸಸ್ಯಗಳ ಸುತ್ತಲೂ ಪಪ್ಪಾಯಿ ಮತ್ತು ಕಾಸ್ಸಾವ ಎಲೆಗಳನ್ನು ಇರಿಸಿ.
  • ಭತ್ತದ ಹೊಲಕ್ಕೆ ನೀರು ಪ್ರವೇಶಿಸುವ ಮತ್ತು ನಿರ್ಗಮಿಸುವ ಜಾಗಗಳಲ್ಲಿ ತಡೆಗೋಡೆಗಳನ್ನು ಇರಿಸಿ.
  • ಮೊಟ್ಟೆಗಳನ್ನು ಇಡುವ ಸಲುವಾಗಿ ಜಾಗಗಳನ್ನು ಒದಗಿಸಲು ಬಿದಿರು ಕಂಬಗಳನ್ನು ಇರಿಸಿ.
  • ನೈಸರ್ಗಿಕ ಪರಭಕ್ಷಕಗಳ ಮೇಲೆ ಪರಿಣಾಮ ಆಗದಿರಲು ಕೀಟನಾಶಕಗಳ ಬಳಕೆಯನ್ನು ನಿಯಂತ್ರಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ