ಮಾವು

ಮಾವಿನ ಬೀಜದ ವಾಡೆ ಹುಳು (ನಟ್ ವೀವಿಲ್)

Sternochetus mangiferae

ಕೀಟ

5 mins to read

ಸಂಕ್ಷಿಪ್ತವಾಗಿ

  • ನೀರಲ್ಲಿ ನೆನೆಸಿದಂತಹ ಭಾಗಗಳಿಂದ ಸುತ್ತುವರಿದ ಕೆಂಪುಮಿಶ್ರಿತ ಕಂದು ಬಣ್ಣದ ಚುಕ್ಕೆಗಳು ಹಣ್ಣುಗಳಲ್ಲಿ ಗೋಚರಿಸುತ್ತವೆ.
  • ಈ ಚುಕ್ಕೆಗಳಿಂದ ಗಟ್ಟಿಯಾದ, ಹಳದಿ ಮಿಶ್ರಿತ ಕಿತ್ತಳೆ ಬಣ್ಣದ ರಸವು ಒಸರುತ್ತದೆ.
  • ಹಣ್ಣಿನ ಓಟೆಗಳಲ್ಲಿ ರಂಧ್ರಗಳನ್ನು ಕಾಣಬಹುದು ಹಾಗೂ ಹಣ್ಣಿನ ಒಳಭಾಗವು ಕಪ್ಪು ಬಣ್ಣದ, ಕೊಳೆತ ಮುದ್ದೆಯಾಗಿ ಬದಲಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮಾವು

ರೋಗಲಕ್ಷಣಗಳು

ಸೋಂಕಿಗೊಳಗಾದ ಹಣ್ಣುಗಳನ್ನು ಸುಲಭವಾಗಿ ಗುರುತಿಸಬಹುದಾಗಿದೆ, ಏಕೆಂದರೆ ಕೀಟವು ಮಾಡಿದ ಗಾಯಗಳು ಮತ್ತು ತೂತುಗಳು ಸಿಪ್ಪೆಯಲ್ಲಿ ನೀರಲ್ಲಿ ನೆನೆಸಿದ ಪ್ರದೇಶಗಳಿಂದ ಆವೃತವಾದ ಕೆಂಪುಮಿಶ್ರಿತ ಕಂದು ಬಣ್ಣದ ಚುಕ್ಕೆಗಳ ರೂಪದಲ್ಲಿ ಗೋಚರಿಸುತ್ತವೆ. ಇವು ಹೆಣ್ಣು ಕೀಟಗಳು ಮೊಟ್ಟೆಯಿಟ್ಟ ಸ್ಥಳಕ್ಕೆ ಸಂಬಂಧಿಸಿರುತ್ತವೆ. ಗಟ್ಟಿಯಾದ, ಹಳದಿ ಮಿಶ್ರಿತ ಕಿತ್ತಳೆ ಬಣ್ಣದ ರಸವು ಈ ಪ್ರದೇಶಗಳಿಂದ ಒಸರುತ್ತದೆ. ಲಾರ್ವಾ ಹೊರ ಬಂದು ಬೀಜಗಳನ್ನು ತಲುಪಲು ಹಣ್ಣಿನ ತಿರುಳನ್ನು ಕೊರೆಯುತ್ತದೆ. ಮಾವಿನ ಓಟೆಗಳಲ್ಲಿ ರಂಧ್ರಗಳು ಕಾಣಿಸುತ್ತವೆ ಹಾಗೂ ಹಣ್ಣಿನ ಒಳ ತಿರುಳು ಕಪ್ಪು ಬಣ್ಣದ ಕೊಳೆತ ಮುದ್ದೆಯಾಗಿ ಬದಲಾಗಬಹುದು. ಸೋಂಕಿನಿಂದ ಹಣ್ಣು ಬೇಗನೆ ಉದುರಬಹುದು. ಅಲ್ಲದೆ, ಬೀಜಗಳ ಮೊಳಕೆಯೊಡೆಯುವಿಕೆಯ ಸಾಮರ್ಥ್ಯ ಕಡಿಮೆಯಾಗುತ್ತದೆ. ಅಪರೂಪಕ್ಕೆ (ಉದಾಹರಣೆಗೆ ಕೆಲವು ತಡವಾಗಿ ಮಾಗುವ ಪ್ರಭೇದಗಳಲ್ಲಿ) ಪ್ರೌಢ ಕೀಟಗಳು ಬೀಜದಿಂದ ಹೊರ ಬಂದು ಹಣ್ಣನ್ನು ಕೊರೆಯಬಹುದು. ಇದರಿಂದ ಹಣ್ಣಿನ ಸಿಪ್ಪೆಯ ಮೇಲೆ ಗಾಯಗಳಾಗಿ ಹೆಚ್ಚುವರಿ ಸೋಂಕುಗಳಿಗೆ ಕಾರಣವಾಗಬಹುದು.

Recommendations

ಜೈವಿಕ ನಿಯಂತ್ರಣ

ಪ್ರೌಢ ಕೀಟಗಳಿಗೆ ಎದುರಾಗಿ ಈಸೋಫೆಲ್ಲಾ ಸ್ಮಾರಾಗ್ಡಿನಾ ಇರುವೆಯನ್ನು ಸಾವಯವ ನಿಯಂತ್ರಣಕ್ಕೆ ಬಳಸಬಹುದು. ಬಿಸಿ ಮತ್ತು ತಂಪು ಸಂಸ್ಕರಣೆಯಿಂದ ಹಣ್ಣುಗಳ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಕೀಟವನ್ನು ಕೊಲ್ಲಬಹುದು. ಕೆಲವು ವೈರಸ್ಗಳು ಎಸ್ ಮ್ಯಾಂಗಿಫೆರಾದ ಲಾರ್ವಾಗಳ ಮೇಲೆ ಪರಿಣಾಮ ಬೀರುತ್ತವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಕಾರ್ಬರಿಲ್, ಅಸಿಫೇಟ್ ಅಥವಾ ಡೆಲ್ಟಾಮೆಥ್ರಿನ್ಗಳ ಎರಡು ಸಿಂಪಡಣೆಗಳಿಂದ ಯಶಸ್ವಿ ನಿಯಂತ್ರಣವನ್ನು ಸಾಧಿಸಬಹುದು - ಮೊದಲ ಸಿಂಪಡಣೆ ಹಣ್ಣುಗಳು ಗಾತ್ರದಲ್ಲಿ 2-4 ಸೆಂ.ಮೀ ಇದ್ದಾಗ ಹಾಗೂ ಎರಡನೆಯ ಸಿಂಪಡಣೆ 15 ದಿನಗಳ ನಂತರ ಮಾಡಬಹುದು. ಎಸ್ ಮಾಂಗಿಫಿರಾ ಸೋಂಕು ತಡೆಗಟ್ಟುವಲ್ಲಿ ಥಿಯಾಮೆಥಾಕ್ಸಮ್ ಮತ್ತು ಫೈಪ್ರ್ರನಿಲ್ಗಳನ್ನು ಒಳಗೊಂಡಿರುವ ಕೀಟನಾಶಕ ಸಿಂಪಡಣೆಗಳು ಹೆಚ್ಚು ಪರಿಣಾಮಕಾರಿ ಎಂದು ಸಾಬೀತಾಗಿದೆ.

ಅದಕ್ಕೆ ಏನು ಕಾರಣ

ಪ್ರೌಢ ವಾಡೆ ಹುಳುವು ಒಂದು ಅಂಡಾಕಾರದ ಜೀರುಂಡೆ. ಅದರ ತಲೆಯ ಭಾಗ ಉದ್ದಕ್ಕಿರುತ್ತದೆ. ಹೆಣ್ಣು ಕೀಟವು ಅರ್ಧ ಮಾಗಿದ (ಹಸಿರು) ಹಣ್ಣಿನಿಂದ ಹಿಡಿದು ಪೂರ್ತಿ ಮಾಗಿದ ಮಾವಿನ ಹಣ್ಣುಗಳ ಮೇಲೆ ಕೆನೆ-ಬಿಳಿ ಬಣ್ಣದ, ಅಂಡಾಕಾರದ ಒಂದು ಮೊಟ್ಟೆಯನ್ನು ಇಡುತ್ತದೆ. ಅದು ಹಣ್ಣಿನ ಮೇಲೆ ತೂತು ಮಾಡುವ ಭಾಗದಲ್ಲಿ ಸೀಳಿದಂತಿದ್ದು, ತಿಳಿಗಂದು ಬಣ್ಣದ ರಸವು ಒಸರುತ್ತದೆ. 5-7 ದಿನಗಳ ನಂತರ, 1 ಮಿ.ಮೀ ಉದ್ದದ ಲಾರ್ವಾ ಹೊರ ಬಂದು ತಿರುಳನ್ನು ಕೊರೆಯುತ್ತಾ ಮಾವಿನ ಬೀಜವನ್ನು ತಲುಪುತ್ತದೆ. ಸಾಮಾನ್ಯವಾಗಿ, ಪ್ರತಿ ಓಟೆಯ ಮೇಲೆ ಒಂದು ಲಾರ್ವಾ ಕಾಣಬಹುದು, ಕೆಲವೊಮ್ಮೆ ಐದು ಲಾರ್ವಾದವರೆಗೆ ಇರುವ ಸಾಧ್ಯತೆಯಿದೆ. ಕೆಲವು ಅಪರೂಪದ ಸಂದರ್ಭಗಳಲ್ಲಿ, ಲಾರ್ವಾಗಳು ತಿರುಳನ್ನು ತಿಂದು ಪ್ಯೂಪಾ ಹಂತಕ್ಕೆ ಬೆಳೆಯುತ್ತವೆ. ಹಣ್ಣುಗಳು ಉದುರುವಾಗ ಪ್ರೌಢ ಕೀಟಗಳು ಹೊರಬರುತ್ತವೆ ಹಾಗೂ ಮರದಲ್ಲಿ ಹೊಸ ಹಣ್ಣುಗಳು ಕಾಣಿಸಿಕೊಳ್ಳುವ ತನಕ ಬೆಳವಣಿಗೆಯನ್ನು ತಡೆಹಿಡಿಯುತ್ತವೆ. ಮಾವಿನ ಹಣ್ಣುಗಳು ಬಟಾಣಿ ಗಾತ್ರಕ್ಕೆ ಬೆಳೆದಾಗ, ಅವು ಮತ್ತೆ ಸಕ್ರಿಯವಾಗುತ್ತವೆ ಮತ್ತು ಎಲೆಗಳನ್ನು ತಿನ್ನತೊಡಗುತ್ತವೆ ಹಾಗೂ ಸಂತಾನೋತ್ಪತ್ತಿಗೆ ತೊಡಗುತ್ತವೆ. ಲಾರ್ವಾ, ಪ್ಯೂಪಾ ಅಥವಾ ಪ್ರೌಢ ಕೀಟಗಳಿರುವ ಹಣ್ಣು, ಬೀಜ, ಸಸಿ ಮತ್ತು/ಅಥವಾ ಕತ್ತರಿಸಿದ ರೆಂಬೆಗಳ ಮೂಲಕ ಸೋಂಕು ಹರಡುತ್ತದೆ.


ಮುಂಜಾಗ್ರತಾ ಕ್ರಮಗಳು

  • ಆರೋಗ್ಯಕರ ಸಸ್ಯಗಳಿಂದ ಅಥವಾ ಪ್ರಮಾಣೀಕೃತ ಮೂಲಗಳಿಂದ ಬೀಜಗಳನ್ನು ಸಂಗ್ರಹಿಸಿ.
  • ಲಾರ್ವಾಗಳ ದಾಳಿಗೆ ನಿರೋಧ ಒಡ್ಡುವ ಪ್ರಭೇದಗಳನ್ನು ಬೆಳೆಸಿ.
  • ಬೀಜಗಳ ಹೊರಗವಚ ಒಡೆದು ಸಂಭವನೀಯ ಹಾನಿಯನ್ನು ಪರಿಶೀಲಿಸಬಹುದು.
  • ಪರಭಕ್ಷಕಗಳಿಗೆ ಕೀಟವನ್ನು ಒಡ್ಡಲು ನಿಯಮಿತವಾಗಿ ಮರಗಳ ಪಕ್ಕದ ನೆಲದ ಮಣ್ಣನ್ನು ಅಗೆಯಿರಿ.
  • ಚದುರಿದ ಓಟೆಗಳು ಮತ್ತು ನೆಲಕ್ಕೆ ಬಿದ್ದ ಹಣ್ಣುಗಳನ್ನು ತೆಗೆದುಹಾಕಿ.
  • ಹಣ್ಣುಗಳನ್ನು ಚೀಲಗಳಿಂದ ಮುಚ್ಚುವುದರಿಂದ ಮೊಟ್ಟೆಯಿಡುವುದನ್ನು ತಪ್ಪಿಸಬಹುದು.
  • ಸೋಂಕಿತ ಬೀಜಗಳು ಅಥವಾ ಮಾವಿನ ಹಣ್ಣುಗಳನ್ನು ಇತರ ಪ್ರದೇಶಗಳಿಗೆ ಸಾಗಿಸದಂತೆ ಎಚ್ಚರಿಕೆ ವಹಿಸಿರಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ