ಮಾವು

ಮಾವಿನ ಚಿಗುರಿನ ಜಿಗಿ ಹುಳು (ಶೂಟ್ ಸೈಲಿಡ್)

Apsylla cistellata

ಕೀಟ

5 mins to read

ಸಂಕ್ಷಿಪ್ತವಾಗಿ

  • ಮೊಗ್ಗುಗಳು ಮೂಡಬೇಕಾದ ಸ್ಥಳದಲ್ಲಿ ಗಟ್ಟಿಯಾದ, ಹಸಿರು ಬಣ್ಣದ ಶಂಕುವಿನಾಕಾರದ ಗಡ್ಡೆಗಳಂತಹ ಬೆಳವಣಿಗೆ ಕಾಣುತ್ತದೆ.
  • ಎಲೆಗಳ ಅಡಿಯಲ್ಲಿ ಕಂದು-ಕಪ್ಪು ಅಂಡಾಕಾರದ ಮೊಟ್ಟೆಗಳು ಕಾಣಿಸಿಕೊಳ್ಳುತ್ತವೆ.
  • ರೆಂಬೆಗಳು ತುದಿಯಿಂದ ಬುಡದ ಕಡೆಗೆ ಸಾಯುತ್ತಾ ಹೋಗುತ್ತವೆ.
  • ಹೂಗಳು ಮೂಡುವುದು ಕಡಿಮೆಯಾಗುತ್ತದೆ ಹಾಗೂ ಗಿಡದಲ್ಲಿ ಕಾಯಿ ಕಟ್ಟುವುದೂ ಕಡಿಮೆಯಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮಾವು

ರೋಗಲಕ್ಷಣಗಳು

ಹೆಣ್ಣು ಕೀಟವು ವಸಂತಕಾಲದಲ್ಲಿ ಎಲೆಗಳ ಕೆಳಭಾಗದಲ್ಲಿ ಮುಖ್ಯನಾಳಗಳಲ್ಲಿ ಅಥವಾ ಎಲೆಯ ದಳಗಳಲ್ಲಿ ಅಂಡಾಕಾರದಲ್ಲಿರುವ ಕಂದು - ಕಪ್ಪು ಬಣ್ಣದ ಮೊಟ್ಟೆಗಳನ್ನು ಇಡುತ್ತದೆ. ಮೊಟ್ಟೆಯಿಟ್ಟ ಸುಮಾರು 200 ದಿನಗಳ ನಂತರ, ರೆಕ್ಕೆ ಮೂಡದ ಮರಿಹುಳಗಳು ಮೊಟ್ಟೆಯೊಡೆದು ಹೊರ ಬರುತ್ತವೆ ಹಾಗೂ ಹತ್ತಿರದ ಮೊಗ್ಗುಗಳಿಗೆ ತೆರಳಿ ಅವುಗಳನ್ನು ತಿನ್ನತೊಡಗುತ್ತವೆ. ಗಿಡವನ್ನು ಚುಚ್ಚುವುದರಿಂದ ಮತ್ತು ರಾಸಾಯನಿಕಗಳು ಒಳ ಸೇರುವುದರಿಂದ, ಮೊಗ್ಗುಗಳು ಮೂಡಬೇಕಾದ ಸ್ಥಳದಲ್ಲಿ ಗಾಢ ಹಸಿರು ಬಣ್ಣದ ಶಂಕುವಿನಾಕಾರದ ಗಡ್ಡೆಗಳು ಮೂಡುತ್ತವೆ. ಇದು ಹೂ ಬಿಡುವುದನ್ನು ಮತ್ತು ಕಾಯಿ ಕಟ್ಟುವುದನ್ನು ತಡೆಯುತ್ತದೆ. ತೀವ್ರ ದಾಳಿಯಿದ್ದಲ್ಲಿ ಹಾನಿಗೊಂಡಿರುವ ರೆಂಬೆಗಳು ತುದಿಯಿಂದ ಬುಡಕ್ಕೆ ಸಾಯುತ್ತಾ ಹೋಗಬಹುದು. ನಷ್ಟವು ಮೊಟ್ಟೆಗಳ ಸಂಖ್ಯೆಯನ್ನು ಮತ್ತು ಹೂಗೊಂಚಲುಗಳ ಮೇಲಿನ ಪರಿಣಾಮವನ್ನು ಅವಲಂಬಿಸಿರುತ್ತದೆ. ಅಪಿಸ್ಲಾ ಸಿಸ್ಟಲೆಟಾವು ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಗಂಭೀರ ಹಾನಿಯುಂಟುಮಾಡುವ ಕೀಟ ಎಂದು ವರದಿಯಾಗಿದೆ.

Recommendations

ಜೈವಿಕ ನಿಯಂತ್ರಣ

ಸಿಲಿಕೇಟ್ ಅಂಶ ಹೆಚ್ಚಿರುವ ಕೈಗಾರಿಕಾ ಬೂದಿಯನ್ನು ಬಳಸಲು ಶಿಫಾರಸು ಮಾಡಲಾಗಿದೆ. ಸೋಂಕು ತಗುಲಿರುವ ಕೊಂಬೆಗಳನ್ನು ಮತ್ತು ಚಿಗುರುಗಳನ್ನು ರೋಗಲಕ್ಷಣಗಳು ಕಾಣಿಸಿಕೊಳ್ಳುವ ಭಾಗದಿಂದ 15-30 ಸೆಂಟಿಮೀಟರ್ಗಳಷ್ಟು ಅಂತರದತನಕ ಕತ್ತರಿಸಿ ತೆಗೆಯುವುದರಿಂದ ಗಡ್ಡೆಗಳ ಪ್ರಮಾಣವನ್ನು ಕಡಿಮೆಮಾಡಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಮರದ ಮೇಲಕ್ಕೆ ಮತ್ತು ಕೆಳಗೆ ಚಲಿಸುವ ಕೀಟಗಳನ್ನು ನಿರ್ನಾಮ ಮಾಡಲು ಡೈಮೆಥೊಯೇಟ್ ಪೇಸ್ಟನ್ನು (0.03%) ತೊಗಟೆಯ ಮೇಲೆ ಹರಡಿ. ತೊಗಟೆಗೆ ಡಿಮೆಥೊಯೇಟ್ನ ಚುಚ್ಚುಮದ್ದು ಕೂಡ ಕೆಲಸ ಮಾಡಬಹುದು. ಕೀಟದ ದಾಳಿಯಾದ ಆರಂಭಿಕ ಹಂತಗಳಲ್ಲಿ, ಫಾಸ್ಫಮಿಡಾನ್, ಮಿಥೈಲ್ ಪ್ಯಾರಾಥಿಯಾನ್, ಫೆನಿಟ್ರೋಥಿಯಾನ್ ಮತ್ತು ಮೊನೊಕ್ರೊಟೋಫೊಸ್ (0.04%) ಗಳನ್ನು ಆಧರಿಸಿದ ಸಿಂಪಡಣೆಗಳನ್ನು ಎಲೆಗಳ ಮೇಲೆ ಬಳಸುವುದು ಉತ್ತಮ ಫಲಿತಾಂಶಗಳನ್ನು ಕೊಡುತ್ತದೆ.

ಅದಕ್ಕೆ ಏನು ಕಾರಣ

ಪ್ರೌಢ ಕೀಟಗಳು 3 ರಿಂದ 4 ಮಿಮೀ ಉದ್ದಕ್ಕಿರುತ್ತವೆ. ತಲೆ ಮತ್ತು ದೇಹದ ಮೇಲಿನ ಅರ್ಧ ಭಾಗ ಕಂದು ಮಿಶ್ರಿತ ಕಪ್ಪು ಬಣ್ಣದಲ್ಲಿರುತ್ತದೆ. ಬಣ್ಣಬಣ್ಣದ ಪದರಗಳಿರುವ ರೆಕ್ಕೆಗಳಿರುತ್ತವೆ. ಎಲೆಯ ಮುಖ್ಯ ನಾಳದ ಎರಡೂ ಬದಿಗಳಲ್ಲಿಯೂ ಅಂಗಾಂಶವನ್ನು ಚುಚ್ಚಿ ತೂತು ಮಾಡುವುದರ ಮೂಲಕ ಅಥವಾ ಎಲೆಗಳ ಕೆಳಭಾಗದ ಮೇಲ್ಮೈಯಲ್ಲಿ ಒಂದು ಗೆರೆಯನ್ನು ರೂಪಿಸುವ ಮೂಲಕ ಮೊಟ್ಟೆಗಳನ್ನು ಸೇರಿಸಲಾಗುತ್ತದೆ. ಮೊಟ್ಟೆಯಿಟ್ಟ ಸುಮಾರು 200 ದಿನಗಳ ನಂತರ, ರೆಕ್ಕೆ ಮೂಡದ ಮರಿಹುಳಗಳು ಮೊಟ್ಟೆಯೊಡೆದು ಹೊರ ಬರುತ್ತವೆ, ಅವು ಹಳದಿ ಬಣ್ಣದಲ್ಲಿರುತ್ತವೆ. ಹೊರ ಬಂದ ನಂತರ ಅವು ಮೃದು ಮೊಗ್ಗುಗಳ ಪಕ್ಕಕ್ಕೆ ತೆವಳಿ, ಗಿಡದ ಜೀವಕೋಶಗಳ ರಸವನ್ನು ಹೀರುತ್ತವೆ. ಈ ಹುಳಗಳು ಚುಚ್ಚಿ ಒಳ ಸೇರುವ ರಾಸಾಯನಿಕಗಳಿಂದಾಗಿ ಹಸಿರು ಬಣ್ಣದ ಶಂಕುವಿನಾಕಾರದ ಗಡ್ಡೆಗಳು ಮೂಡುತ್ತವೆ. ಅಲ್ಲಿ, ರೆಕ್ಕೆಯಿಲ್ಲದ ಈ ಹುಳಗಳು ಪ್ರೌಢಾವಸ್ಥೆಯನ್ನು ತಲುಪುವ ಮುನ್ನ ಆರು ತಿಂಗಳುಗಳ ಜೀವನಚಕ್ರವನ್ನು ಮುಂದುವರೆಸುತ್ತವೆ. ಹೊರ ಬರುವ ಪ್ರೌಢ ಕೀಟಗಳು ಗಡ್ಡೆಗಳಿಂದ ನೆಲಕ್ಕೆ ಬಿದ್ದು ಕವಚದ ಉಳಿಕೆಗಳನ್ನು ಉದುರಿಸಿಕೊಳ್ಳುತ್ತವೆ. ನಂತರ, ಅವು ಮರಗಳನ್ನು ಹತ್ತಿ, ಸಂತಾನೋತ್ಪತ್ತಿ ನಡೆಸಿ ಮೊಟ್ಟೆಗಳನ್ನು ಇಡುತ್ತವೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಆರಿಸಿ.
  • ಹುಳದ ದಾಳಿಯನ್ನು ಗುರುತಿಸಲು ನಿಯಮಿತವಾಗಿ ಹೊಲದ ಮೇಲ್ವಿಚಾರಣೆ ಮಾಡಿ.
  • ವಿಪರೀತವಾಗಿ ಗೊಬ್ಬರವನ್ನು ಬಳಸಬೇಡಿ.
  • ಒಣ ಋತುವಿನಲ್ಲಿ ಗಿಡಗಳಿಗೆ ನಿಯಮಿತವಾಗಿ ನೀರುಣಿಸುವುದರಿಂದ ನೀರಿನ ಕೊರತೆಯಿಂದ ಗಿಡದ ಬೆಳವಣಿಗೆ ಕುಂಠಿತವಾಗುವುದನ್ನು ತಪ್ಪಿಸಬಹುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ