ಕ್ಯಾರೆಟ್

ನೆಮಾಟೋಡ್ ಗಳು

Nematoda

ಇತರೆ

5 mins to read

ಸಂಕ್ಷಿಪ್ತವಾಗಿ

  • ಕುಂಠಿತ ಬೆಳವಣಿಗೆ.
  • ಎಲೆಗಳು ಹಳದಿಯಾಗುವುದು, ಸೊರಗುವುದು, ವಿರೂಪತೆ.
  • ಬೇರು ಗಂಟುಗಳು ಅಥವಾ ಬೊಬ್ಬೆಗಳ ರಚನೆ.
  • ಬೇರಿನ ವ್ಯವಸ್ಥೆಯ ಅವನತಿ.
  • ಕಾಂಡಗಳ ಮೇಲೂ ಪರಿಣಾಮವಾಗಬಹುದು.
  • ಸೂಕ್ಷ್ಮ ರೌಂಡಿ ವರ್ಮ್ ಗಳು.

ಇವುಗಳಲ್ಲಿ ಸಹ ಕಾಣಬಹುದು

40 ಬೆಳೆಗಳು
ಸೇಬು
ಜಲ್ದರು ಹಣ್ಣು
ಬಾಳೆಹಣ್ಣು
ಹುರುಳಿ
ಇನ್ನಷ್ಟು

ಕ್ಯಾರೆಟ್

ರೋಗಲಕ್ಷಣಗಳು

ನೆಮಟೋಡ್ಗಳಿಂದಾದ ಸೋಂಕು ನಿರ್ದಿಷ್ಟ ಪ್ರಭೇದಗಳು, ಅವುಗಳ ಸಂಖ್ಯೆ ಮತ್ತು ಅವುಗಳಿಗೆ ಆಶ್ರಯ ನೀಡುವ ಸಸ್ಯವನ್ನು ಅವಲಂಬಿಸಿ ವಿಭಿನ್ನ ರೀತಿಯ ಹಾನಿಗಳನ್ನು ತೋರಿಸುತ್ತದೆ. ಕೆಲವು ನೆಮಟೋಡ್ ಗಳು ತಮ್ಮ ಆಶ್ರಯದಾತ ಸಸ್ಯಗಳು ತುಂಬಾ ಬೇರುಗಳನ್ನು ಉತ್ಪಾದನೆ ಮಾಡುವಂತೆ ಮಾಡುತ್ತವೆ ಮತ್ತು ಬೇರು ಗಂಟುಗಳು ಅಥವಾ ಬೊಬ್ಬೆಗಳ ರಚನೆಗಳನ್ನು ರೂಪಿಸುತ್ತವೆ. ಇತರ ನೆಮಟೋಡ್ ಗಳು ವ್ಯಾಪಕವಾದ ಬೇರು ಗಾಯಗಳನ್ನು ಉಂಟುಮಾಡುತ್ತವೆ ಮತ್ತು ಬೇರುಗಳ ಆಂತರಿಕ ಅಂಗಾಂಶಗಳು ಹಾಳಾಗುತ್ತವೆ. ಅನೇಕ ಸಂದರ್ಭಗಳಲ್ಲಿ, ಶಿಲೀಂಧ್ರಗಳು ಅಥವಾ ಮಣ್ಣಿನ ಬ್ಯಾಕ್ಟೀರಿಯಾಗಳಿಂದ ದ್ವಿತೀಯಕ ದಾಳಿಗಳು ಈ ಗಾಯಗಳ ಮೇಲೆ ಉಂಟಾಗುತ್ತವೆ. ನೀರು ಮತ್ತು ಪೋಷಕಾಂಶಗಳು ಸಸ್ಯದ ಮೇಲಿನ ಭಾಗಗಳನ್ನು ತಲುಪುವುದಿಲ್ಲ. ಸೋಂಕಿತ ಸಸ್ಯಗಳ ಬೆಳವಣಿಗೆ ಕುಂಠಿತವಾಗಿ, ಅವುಗಳು ಒಣಗಲು ಪ್ರಾರಂಭಿಸುತ್ತವೆ. ಎಲೆಗಳು ಕೊಳೆತ ಮತ್ತು ವಿರೂಪತೆಯ ಚಿಹ್ನೆಗಳೊಂದಿಗೆ ಹಳದಿಯಾಗುತ್ತದೆ. ಕೆಲವೊಮ್ಮೆ ಅವು ಕಾಂಡಗಳ ಮೇಲೆ ಸಹ ಪರಿಣಾಮ ಬೀರುತ್ತವೆ.

Recommendations

ಜೈವಿಕ ನಿಯಂತ್ರಣ

ಕೆಲವು ಸಂದರ್ಭಗಳಲ್ಲಿ ಜೈವಿಕ ನಿಯಂತ್ರಣ ಏಜೆಂಟ್ ಗಳು ಕೆಲಸ ಮಾಡುತ್ತವೆ. ಶಿಲೀಂಧ್ರಗಳಾದ ನೆಮಟೊಫೊರಾ ಗಿನೋಫಿಲಾ ಮತ್ತು ವೆರ್ಟಿಸಿಲಿಯಮ್ ಕ್ಲಮೈಡೊಸ್ಪೊರಿಯಮ್ಗಳು ಧಾನ್ಯಗಳಲ್ಲಿ ಕೆಲವು ನೆಮಟೋಡ್ಗಳನ್ನು ಕಡಿಮೆ ಮಾಡಲು ಮತ್ತು / ಅಥವಾ ನಿಗ್ರಹ ಮಾಡಲು ಸಹಾಯ ಮಾಡುತ್ತವೆ. ಚೆಂಡು ಹೂವು (ಟ್ಯಾಗೆಟ್ಸ್ ಪಟುಲಾ) ಮತ್ತು ಕ್ಯಾಲೆನ್ಡುಲಗಳ (ಕ್ಯಾಲೆನ್ಡುಲಾ ಅಫಿಷಿನಾಲಿಸ್) ಸಾರಗಳನ್ನು ಮಣ್ಣಿಗೆ ಹಾಕುವುದರಿಂದ ಇವುಗಳ ಸಂಖ್ಯೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಚಿಕಿತ್ಸೆಗಳು ತೊಂದರೆ ಕೊಡುತ್ತಿರುವ ನೆಮಟೋಡ್ನ ವಿಧದ ಮೇಲೆ ಅವಲಂಬಿತವಾಗಿರುತ್ತದೆ. ಮಣ್ಣಿನ ಫ್ಯೂಮಿಗಂಟ್ ಗಳಾಗಿ ಹಾಕುವ ನೆಮಟಿಸೈಡ್ಸ್ (ಡಜೊಮೆಟ್) ಬಳಕೆಯು ಅವುಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಆದರೆ ಅದು ಬಹಳ ರೈತರಿಗೆ ಆರ್ಥಿಕವಾಗಿ ಪ್ರಯೋಜನಕಾರಿಯಲ್ಲ. ಇದರ ಕೆಲವು ಉತ್ಪನ್ನಗಳನ್ನು ಎಲೆಗಳ ದ್ರವೌಷಧಗಳಾಗಿಯೂ ಸಹ ಬಳಸಬಹುದು.

ಅದಕ್ಕೆ ಏನು ಕಾರಣ

ನೆಮಟೋಡ್ಗಳು ಸೂಕ್ಷ್ಮವಾದ ರೌಂಡ್ ವರ್ಮ್ಗಳಾಗಿದ್ದು, ಅವುಗಳು ಹೆಚ್ಚಾಗಿ ಮಣ್ಣಿನಲ್ಲಿ ವಾಸಿಸುತ್ತವೆ. ಅಲ್ಲಿಂದ ಅವು ಆಶ್ರಯದಾತ ಸಸ್ಯಗಳ ಬೇರುಗಳನ್ನು ಸೋಂಕಿತಗೊಳಿಸಬಹುದು. ಸಾಮಾನ್ಯವಾಗಿ, ಅವುಗಳು ಪ್ರಯೋಜನಕಾರಿ ಜೀವಿಗಳೇ, ಆದರೂ ಅವುಗಳ ಸಂಖ್ಯೆಯು ಗಂಭೀರ ಹಂತವನ್ನು ತಲುಪಿದಾಗ, ಅವು ಸಸ್ಯ ಹಾನಿಗೆ ಕಾರಣವಾಗಬಹುದು. ಅವುಗಳಿಗೆ ಸ್ಟೈಲೆಟ್ ಎಂದು ಕರೆಯಲಾಗುವ ಚೂಪಾದ ಕೊಕ್ಕಿದ್ದು, ಅವು ಅದನ್ನು ಬಳಸಿ ಬೇರುಗಳು ಮತ್ತು ನಲದಡಿಯಲ್ಲಿರುವ ಸಸ್ಯಗಳ ಭಾಗಗಳೊಳಗೆ ಕೊರೆದುಕೊಂಡು ಹೋಗುತ್ತವೆ ಮತ್ತು ಕೆಲವು ಸಂದರ್ಭಗಳಲ್ಲಿ ಎಲೆಗಳು ಮತ್ತು ಹೂವುಗಳನ್ನು ಕೊರೆಯುತ್ತವೆ. ನೆಮಟೋಡ್ಗಳಿಗೆ ವಿಭಿನ್ನ ಆಹಾರ ತಂತ್ರಗಳಿವೆ ಮತ್ತು ಅವು ಮಣ್ಣಿನಲ್ಲಿ ಅನೇಕ ವರ್ಷಗಳವರೆಗೆ ಬದುಕಬಲ್ಲವು. ಅವು ಮಧ್ಯಂತರ ಆಶ್ರಯದಾತ ಸಸ್ಯಗಳ ಮೂಲಕ ಸಂಖ್ಯಾಭಿವೃದ್ಧಿ ಮಾಡುತ್ತವೆ. ಅವು ಬ್ಯಾಕ್ಟೀರಿಯಾ, ವೈರಸ್ಗಳು ಅಥವಾ ಶಿಲೀಂಧ್ರಗಳಿಂದ ಉಂಟಾಗುವ ರೋಗಗಳನ್ನು ಸಹ ಹರಡುತ್ತವೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ, ನಿರೋಧಕ ಅಥವಾ ಸಹಿಷ್ಣು ಸಸ್ಯ ಪ್ರಭೇದಗಳನ್ನು ಬಳಸಿ.
  • ಚೆಂಡು ಹೂವು ಅಥವಾ ಕ್ಯಾಲೆಡುಲಾ ಜೊತೆ ಅಂತರ ಬೇಸಾಯ ಮಾಡಿದರೆ ಅಥವಾ ಬೆಳೆಗಳ ನಡುವೆ ಹೂವಿನ ಪಟ್ಟಿಗಳನ್ನು ಬಿತ್ತನೆ ಮಾಡಿದರೆ, ಅದು ಸಹ ಕೀಟದ ಸಂಖ್ಯೆಯನ್ನು ಕಡಿಮೆ ಮಾಡಬಹುದು.
  • ನೆಮಟೋಡ್ ಗಳನ್ನು ಕೊಲ್ಲಲು ಹಲವಾರು ವಾರಗಳವರೆಗೆ ಪ್ಲ್ಯಾಸ್ಟಿಕ್ ಪದರದೊಂದಿಗೆ ಹೊಲವನ್ನು ಮುಚ್ಚಿ.
  • ಹೊಲವನ್ನು ಉಳುಮೆ ಮಾಡಿ ಮತ್ತು ಮಣ್ಣನ್ನು ಸೌರ ವಿಕಿರಣಕ್ಕೆ ಒಡ್ಡಿ.(ಸೋಲರೈಸೇಷನ್) ತೀವ್ರ ಸೋಂಕಿನ ಸಂದರ್ಭದಲ್ಲಿ, ಹಲವಾರು ತಿಂಗಳುಗಳವರೆಗೆ ಭೂಮಿಯಲ್ಲಿ ಸಾಗುವಳಿ ಮಾಡದೆ ಖಾಲಿ ಬಿಡಿ.
  • ಹಲವಾರು ವರ್ಷಗಳವರೆಗೆ ವೈವಿಧ್ಯಮಯ ಬೆಳೆಗಳೊಂದಿಗೆ ಬೆಳೆ ಸರದಿ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ