ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ಗೊಂಡೆಹುಳುಗಳು ಮತ್ತು ಬಸವನಹುಳುಗಳು

Gastropoda

ಇತರೆ

5 mins to read

ಸಂಕ್ಷಿಪ್ತವಾಗಿ

  • ಎಲೆಗಳು, ಕಾಂಡಗಳು, ಹೂವುಗಳು, ಗೆಡ್ಡೆಗಳು ಮತ್ತು ಉಳ್ಳಿಗಳಲ್ಲಿ ಹುಳು ತಿನ್ನುವುದರಿಂದ ಹಾನಿ.
  • ಸಸ್ಯದ ಎಲೆಗಳು ಮತ್ತು ಮೇಲ್ಮಣ್ಣಿನ ಮೇಲೆ ಬೆಳ್ಳಿಯ ಲೋಳೆಯಾದ ಜಾಡುಗಳು.
  • ಎಳೆಯ ಸಸಿಗಳು ಸಾಯುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

30 ಬೆಳೆಗಳು
ಬಾರ್ಲಿ
ಹುರುಳಿ
ಹಾಗಲಕಾಯಿ
ಎಲೆಕೋಸು
ಇನ್ನಷ್ಟು

ದಪ್ಪ ಮೆಣಸಿನಕಾಯಿ & ಮೆಣಸಿನಕಾಯಿ

ರೋಗಲಕ್ಷಣಗಳು

ಬಸವನ ಹುಳುಗಳು ಮತ್ತು ಗೊಂಡೆಹುಳುಗಳು ವ್ಯಾಪಕವಾಗಿ ಹರಡಿರುವ ಕೀಟವಾಗಿದ್ದು, ಅವು ಅತಿಯಾದ ಸಂಖ್ಯೆಯಲ್ಲಿ ಬೆಳೆದರೆ ಬೆಳೆಗಳಲ್ಲಿ ಗಂಭೀರವಾದ ಹಾನಿಯನ್ನು ಉಂಟುಮಾಡಬಹುದು. ಅವು ಎಲೆಗಳನ್ನು ತಿಂದು ಅಲ್ಲಿ ಅನಿಯಮಿತ ಮತ್ತು ದೊಡ್ಡ ತೂತುಗಳನ್ನು ಬಿಡುತ್ತವೆ. ಆದರೆ ಕಾಂಡಗಳು, ಹೂಗಳು, ಗೆಡ್ಡೆಗಳು ಮತ್ತು ಉಳ್ಳಿಗಳ ಮೇಲೆ ಸಹ ಪರಿಣಾಮ ಬೀರಬಹುದು. ಆಲೂಗಡ್ಡೆಯಲ್ಲಿ, ಅವು ಸಿಪ್ಪೆಯಲ್ಲಿ ಗುಂಡಗಿನ ಬಾಹ್ಯ ರಂಧ್ರಗಳನ್ನು ಮಾಡುತ್ತವೆ ಅಥವಾ ಗೆಡ್ಡೆಗಳಲ್ಲಿ ವ್ಯಾಪಕವಾದ ಗುಂಡಿಗಳನ್ನು ಅಗೆಯಬಹುದು, ಇದರಿಂದ ಸಾಕಷ್ಟು ಹಾನಿಯಾಗುತ್ತದೆ. ಸಸ್ಯದ ಎಲೆಗಳು ಮತ್ತು ಮೇಲ್ಮಣ್ಣಿನ ಮೇಲೆ ಕಂಡುಬರುವ ಬೆಳ್ಳಿಯ ಲೋಳೆಯ ಜಾಡುಗಳ ಮೂಲಕ ಈ ಪ್ರಾಣಿಗಳ ಹಾನಿಯನ್ನು ಗುರುತಿಸಬಹುದು. ಅವು ಮುಖ್ಯವಾಗಿ ಆರ್ದ್ರ ವಾತಾವರಣದಲ್ಲಿ ಉಂಟಾಗುತ್ತವೆ ಮತ್ತು ಅವು ವಿಶೇಷವಾಗಿ ಎಳೆಯ ತೆಳುವಾದ ಸಸ್ಯಗಳನ್ನು ಹೆಚ್ಚಾಗಿ ಇಷ್ಟಪಡುತ್ತವೆ. ಅವು ಎಳೆಯ ಸಸಿಗಳನ್ನು ಸಂಪೂರ್ಣವಾಗಿ ತಿನ್ನುವ ಮೂಲಕ ಅವುಗಳನ್ನು ಕೊಲ್ಲಬಹುದು.

Recommendations

ಜೈವಿಕ ನಿಯಂತ್ರಣ

ಫೆರಿಕ್ ಫಾಸ್ಫೇಟ್ ಆಧಾರಿತ ಗೋಲಿಗಳ ಬಳಕೆಯನ್ನು ಸಹ ಸಾವಯವ ಬೆಳೆಗಾರರಿಗೆ ಅನುಮೋದಿಸಲಾಗಿದೆ. ಮುಳ್ಳುಹಂದಿಗಳು, ಪಕ್ಷಿಗಳು, ಕಪ್ಪೆಗಳು, ನೆಲಗಪ್ಪೆಗಳು, ಬ್ಲೈಂಡ್ ವರ್ಮ್ ಗಳು ಮತ್ತು ನೆಲದ ಜೀರುಂಡೆಗಳು ಮುಂತಾದ ಪರಭಕ್ಷಕಗಳನ್ನು ಸಾಕಿದರೆ ಅವು ಕೀಟ ನಿಯಂತ್ರಣದಲ್ಲಿ ಸಹಾಯ ಮಾಡುತ್ತವೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಗೊಂಡೆಹುಳುಗಳ ವೈವಿಧ್ಯತೆ ಮತ್ತು ಜೀವನ ಚಕ್ರದಿಂದಾಗಿ, ಅವುಗಳು ಸಾಮಾನ್ಯವಾಗಿ ರಾಸಾಯನಿಕ ನಿಯಂತ್ರಣಗಳ ವ್ಯಾಪ್ತಿಯಿಂದ ಹೊರಬರುತ್ತವೆ. ಮೆಟಾಲ್ಡಿಹೈಡ್ ಅನ್ನು ಆಧರಿಸಿದ ಗೋಲಿಗಳನ್ನು ಬಳಸಿ ಅವುಗಳನ್ನು ತಮ್ಮ ಗೂಡುಗಳಿಂದ ಹೊರಕ್ಕೆ ಬರುವಂತೆ ಮಾಡಬಹುದು. ಗೊಂಡೆಹುಳುಗಳು ಮತ್ತು ಬಸವನಗಳು ಸಕ್ರಿಯವಾಗಿದ್ದಾಗ ಅಂದರೆ ಮಳೆಯಾದ ನಂತರ ಅವುಗಳನ್ನು ಹರಡಿ.

ಅದಕ್ಕೆ ಏನು ಕಾರಣ

ಬಸವನ ಹುಳುಗಳು ಮತ್ತು ಗೊಂಡೆಹುಳುಗಳು ಕೊಳೆಯುತ್ತಿರುವ ಸಾವಯವ ಪದಾರ್ಥವನ್ನು ತಿನ್ನುತ್ತವೆ, ಮತ್ತು ವಿವಿಧ ರೀತಿಯ ಬೆಳೆಗಳ ಎಲೆಗಳು, ಬೇರುಗಳು ಮತ್ತು ಗೆಡ್ಡೆಗಳನ್ನು ತಿನ್ನುತ್ತವೆ. ಗೊಂಡೆಹುಳುಗಳು ನೆಲದಡಿಯಲ್ಲಿ ಬದುಕುವಂತಹವು, ಸಸ್ಯದ ಕಾಂಡಗಳು ಅಥವಾ ಹುಳುಗಳು ಮಾಡಿದ ಬಿರುಕುಗಳು ಮತ್ತು ಸುರಂಗಗಳನ್ನು ಬಳಸುತ್ತವೆ, ಮತ್ತು ಕೇವಲ ಸಂಯೋಗಕ್ಕಾಗಿ ಮಾತ್ರ ಮೇಲೆ ಬರುತ್ತವೆ. ಆಲೂಗಡ್ಡೆಗಳಲ್ಲಿ, ಅವು ಸಿಪ್ಪೆಯ ಮೇಲೆ ಗುಂಡಾಕಾರದ ಬಾಹ್ಯ ತೂತುಗಳನ್ನು ಉಂಟುಮಾಡುತ್ತವೆ ಅಥವಾ ಗೆಡ್ಡೆಗಳೊಳಗೆ ಆಳವಾದ ಗುಂಡಿಗಳನ್ನು ಕೊರೆಯುತ್ತವೆ. ಇದರಿಂದ ಗಣನೀಯ ಹಾನಿ ಉಂಟಾಗುತ್ತದೆ. ಈ ಪ್ರಾಣಿಗಳು ಆರ್ದ್ರ ವಾತಾವರಣದಲ್ಲಿ ಬೆಳೆಯುತ್ತವೆ. ಆದ್ದರಿಂದ ಸೋಂಕು ಮುಖ್ಯವಾಗಿ ಇಬ್ಬನಿಯ ರಾತ್ರಿಗಳ ನಂತರ ಅಥವಾ ಮಳೆಯ ನಂತರ ತಗುಲುತ್ತದೆ. ಹೆಚ್ಚಿನ ಜಾತಿಗಳು ಸೌಮ್ಯ ಚಳಿಗಾಲವನ್ನು ತಡೆದುಕೊಂಡು ವಸಂತಕಾಲದಲ್ಲಿ ಮತ್ತೆ ಸಕ್ರಿಯವಾಗುತ್ತವೆ.


ಮುಂಜಾಗ್ರತಾ ಕ್ರಮಗಳು

  • ಅತೀ ಹೆಚ್ಚಿನ ಮತ್ತು ಮಧ್ಯಮ ನಿರೋಧಕ ಪ್ರಭೇದಗಳನ್ನು ಆಯ್ಕೆಮಾಡಿ.
  • ಬೇಗನೆ ನೆಡಿ ಅಥವಾ ಬೇಗ ಪಕ್ವವಾಗುವ ಪ್ರಭೇದಗಳನ್ನು ಆಯ್ಕೆ ಮಾಡಿ.
  • ಭಾರವಾದ ಮಣ್ಣಿನಲ್ಲಿ ನಾಟಿ ಮಾಡಬೇಡಿ.
  • ಏಕೆಂದರೆ ಇವುಗಳು ಗೊಂಡೆಹುಳುಗಳಿಗೆ ಅನುಕೂಲಕರ.
  • ನೆಡುವ ಮೊದಲು ಮಣ್ಣನ್ನು ಒಂದು ಅಥವಾ ಎರಡು ಬಾರಿ ಉಳುಮೆ ಮಾಡುವ ಮೂಲಕ ಪರಭಕ್ಷಕಗಳಿಗೆ ಗೊಂಡೆಹುಳುಗಳನ್ನು ಒಡ್ಡಿ.
  • ಈ ಕೀಟಗಳನ್ನು ಹಿಮ್ಮೆಟ್ಟಿಸಲು ಆಯ್ದ ಬೆಳೆಯ ಸುತ್ತ ಕಾಫಿ ಪುಡಿಯನ್ನು ಇರಿಸಿ.
  • ನಿಮ್ಮ ಬೆಳೆಯ ಸುತ್ತಲೂ ಬೇಲಿ ಅಥವಾ ಬಲೆಗಳನ್ನು ನಿರ್ಮಿಸಿ.
  • ಮಾರಕವಲ್ಲದ ಬಲೆಗಳನ್ನು ಉದಾಹರಣೆಗೆ ಹಳೆಯ ಒದ್ದೆಯಾದ ಚೀಲಗಳು ಮತ್ತು ಕೊಳೆತ ಮರದ ಫಲಕಗಳನ್ನು ಬಳಸಿ.
  • ಸೋಂಕನ್ನು ಕಡಿಮೆ ಮಾಡಲು ಬಸವನ ಹುಳುಗಳು ಮತ್ತು ಗೊಂಡೆಹುಳುಗಳನ್ನು ಕೈಯಿಂದ ತೆಗೆದುಹಾಕಿ.
  • ಬೆಳಗ್ಗಿನ ಸಮಯದಲ್ಲಿ ಅತಿಯಾಗಿ ನೀರಾವರಿ ಮಾಡಬೇಡಿ.
  • ಪರಭಕ್ಷಕಗಳ ಸಂಖ್ಯೆಯನ್ನು ಉತ್ತೇಜಿಸಿ.
  • ಬೆಳೆಯನ್ನು ಆದಷ್ಟು ಬೇಗ ಕೀಳಿ.
  • ಹೊಲದಿಂದ ಹಸಿಗೊಬ್ಬರವನ್ನು ತೆಗೆದುಹಾಕಿ.
  • ನಿಮ್ಮ ಹೊಲ ಮತ್ತು ಸುತ್ತಮುತ್ತಲಿನ ಪ್ರದೇಶದಿಂದ ಕಳೆಗಳನ್ನು ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ