ಬದನೆ

ರಂಜಕದ ಕೊರತೆ

Phosphorus Deficiency

ಕೊರತೆ

5 mins to read

ಸಂಕ್ಷಿಪ್ತವಾಗಿ

  • ನೇರಳೆ ಬಣ್ಣದ ಎಲೆಗಳು- ಅಂಚಿನಿಂದ ಪ್ರಾರಂಭವಾಗುತ್ತವೆ.
  • ಸುರುಳಿಯಾದ ಎಲೆಗಳು.
  • ಕುಂಠಿತಗೊಂಡ ಬೆಳವಣಿಗೆ.

ಇವುಗಳಲ್ಲಿ ಸಹ ಕಾಣಬಹುದು

57 ಬೆಳೆಗಳು
ಬಾದಾಮಿ
ಸೇಬು
ಜಲ್ದರು ಹಣ್ಣು
ಬಾಳೆಹಣ್ಣು
ಇನ್ನಷ್ಟು

ಬದನೆ

ರೋಗಲಕ್ಷಣಗಳು

ರಂಜಕದ ಕೊರತೆಯ ರೋಗಲಕ್ಷಣಗಳು ಎಲ್ಲಾ ಹಂತಗಳಲ್ಲಿಯೂ ಕಂಡುಬರಬಹುದು. ಆದರೆ ಹೊಸ ಸಸ್ಯಗಳಲ್ಲಿ ಹೆಚ್ಚಾಗಿ ಕಾಣುತ್ತದೆ. ಇತರ ಪೋಷಕಾಂಶಗಳಿಗೆ ಹೋಲಿಸಿದರೆ, ರಂಜಕದ ಕೊರತೆಯ ಲಕ್ಷಣಗಳು ಸಾಮಾನ್ಯವಾಗಿ ಎದ್ದು ಕಾಣುವುದಿಲ್ಲ ಮತ್ತು ಗುರುತಿಸಲು ಕಷ್ಟವಾಗಬಹುದು. ಅಲ್ಪ ಕೊರತೆಯ ಸಂದರ್ಭಗಳಲ್ಲಿ, ಈ ರೋಗದ ಸಂಭವನೀಯ ಲಕ್ಷಣವೆಂದರೆ ಸಸ್ಯಗಳು ಕುಬ್ಜವಾಗಿರುತ್ತವೆ ಅಥವಾ ಬೆಳವಣಿಗೆ ಕುಂಠಿತವಾಗಿರುತ್ತದೆ. ಆದಾಗ್ಯೂ, ಎಲೆಗಳ ಮೇಲೆ ಸ್ಪಷ್ಟ ಲಕ್ಷಣಗಳು ಕಂಡುಬರುವುದಿಲ್ಲ. ತೀವ್ರ ಕೊರತೆ ಇದ್ದಲ್ಲಿ, ಕಾಂಡಗಳು ಮತ್ತು ತೊಟ್ಟುಗಳಲ್ಲಿ ಗಾಢ ಹಸಿರು ಬಣ್ಣದಿಂದ ಕೆನ್ನೇರಳೆ ಬಣ್ಣದವೆರೆಗಿನ ವರ್ಣಕತೆ ಕಂಡುಬರುತ್ತದೆ. ಹಳೆ ಎಲೆಗಳ ಕೆಳಭಾಗದಲ್ಲೂ ನೇರಳೆ ವರ್ಣಕತೆ ಕಾಣಬಹುದು ಇದು ತುದಿ ಮತ್ತು ಅಂಚುಗಳಲ್ಲಿ ಆರಂಭಗೊಂಡು ನಂತರ ಉಳಿದ ಭಾಗಗಳಿಗೆ ಹರಡುತ್ತದೆ. ಈ ಎಲೆಗಳು ತೊಗಲಿನಂತೆ ಆಗಬಹುದು ಮತ್ತು ನಾಳಗಳು ಕಂದುಬಣ್ಣದ ಬಲೆಗಳನ್ನು ರೂಪಿಸಬಹುದು. ಕೆಲವು ಸಂದರ್ಭಗಳಲ್ಲಿ, ರಂಜಕದ ಕೊರತೆಯಿಂದಾಗಿ ತುದಿಗಳು ಸುಟ್ಟಂತಾಗಬಹುದು. ಮತ್ತು ಎಲೆಯ ಅಂಚಿನಲ್ಲಿ ಕ್ಲೋರೋಸಿಸ್ ಮತ್ತು ಕೊಳೆತಂತಹ ಭಾಗಗಳು ಕಾಣಬಹುದು. ಹೂವುಗಳ ಮತ್ತು ಹಣ್ಣುಗಳ ಉತ್ಪಾದನೆಯಾಗುತ್ತದೆ. ಆದರೆ ಹಣ್ಣುಗಳ ಇಳುವರಿ ಕಡಿಮೆಯಿರುತ್ತದೆ.

Recommendations

ಜೈವಿಕ ನಿಯಂತ್ರಣ

ಮಣ್ಣಿನಲ್ಲಿರುವ ರಂಜಕದ ಮಟ್ಟವನ್ನು ಹಟ್ಟಿ ಗೊಬ್ಬರ, ಅಥವಾ ಇತರ ವಸ್ತುಗಳನ್ನು (ಸಾವಯವ ಗೊಬ್ಬರ, ಕಾಂಪೋಸ್ಟ್ ಮತ್ತು ಗ್ವಾನೊ) ಅಥವಾ ಇವೆಲ್ಲದರ ಸಂಯೋಜನೆಯನ್ನು ನೀಡುವ ಮೂಲಕ ಮರುಪೂರಣ ಮಾಡಲಾಗುತ್ತದೆ. ಸುಗ್ಗಿಯ ನಂತರ ಸಸ್ಯದ ಉಳಿಕೆಗಳನ್ನು ಮಣ್ಣಿನಲ್ಲಿ ಸೇರಿಸುವುದರಿಂದ ದೀರ್ಘಾವಧಿಯಲ್ಲಿ ಮಣ್ಣಿನ ಸಂಯೋಜನೆ ಉತ್ತಮಗೊಳ್ಳುವುದಲ್ಲದೆ ರಂಜಕದ ಸಮತೋಲನ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ. ಸಾವಯವ ವಸ್ತುಗಳ ಕೊಳೆಯುವಿಕೆಯು ಸಸ್ಯ-ಲಭ್ಯ ರಂಜಕದ ನಿರಂತರ ಪೂರೈಕೆಯನ್ನು ಒದಗಿಸುತ್ತದೆ.

ರಾಸಾಯನಿಕ ನಿಯಂತ್ರಣ

  • ರಂಜಕ (ಪಿ) ಹೊಂದಿರುವ ರಸಗೊಬ್ಬರಗಳನ್ನು ಬಳಸಿ.
  • ಉದಾಹರಣೆಗಳು: ಡೈಮಮೋನಿಯಮ್ ಫಾಸ್ಫೇಟ್ (ಡಿಎಪಿ), ಸಿಂಗಲ್ ಸೂಪರ್ ಫಾಸ್ಫೇಟ್ (ಎಸ್‌ಎಸ್‌ಪಿ).
  • ನಿಮ್ಮ ಮಣ್ಣು ಮತ್ತು ಬೆಳೆಗೆ ಉತ್ತಮ ಉತ್ಪನ್ನ ಮತ್ತು ಪ್ರಮಾಣವನ್ನು ತಿಳಿಯಲು ನಿಮ್ಮ ಕೃಷಿ ಸಲಹೆಗಾರರನ್ನು ಸಂಪರ್ಕಿಸಿ.

ಹೆಚ್ಚಿನ ಶಿಫಾರಸುಗಳು:

  • ನಿಮ್ಮ ಬೆಳೆ ಉತ್ಪಾದನೆಯನ್ನು ಉತ್ತಮಗೊಳಿಸಲು ಬೆಳೆ ಋತುವಿನ ಪ್ರಾರಂಭದ ಮೊದಲು ಮಣ್ಣಿನ ಪರೀಕ್ಷೆ ಮಾಡಲು ಸೂಚಿಸಲಾಗುತ್ತದೆ.

ಅದಕ್ಕೆ ಏನು ಕಾರಣ

ವಿವಿಧ ಬೆಳೆಗಳು, ವಿವಿಧ ರೀತಿಯಲ್ಲಿ ರಂಜಕದ ಕೊರತೆಗೆ ಒಳಗಾಗುತ್ತವೆ. ಮಣ್ಣಿನಲ್ಲಿರುವ ನೀರಿನಲ್ಲಿ ಕರಗಿದ ಫಾಸ್ಫೇಟ್ ಅಯಾನುಗಳನ್ನು ಬೇರುಗಳು ಹೀರಿಕೊಳ್ಳುತ್ತವೆ. ಹೆಚ್ಚಿನ ಕ್ಯಾಲ್ಸಿಯಂ ಸಾಂದ್ರತೆ ಹೊಂದಿರುವ ಕಲ್ಕಾರಿಯಸ್ ಮಣ್ಣಿನಲ್ಲಿ ರಂಜಕ ಕಡಿಮೆ ಇರಬಹುದು. ಆದರೆ, ಸಾಮಾನ್ಯವಾಗಿ ಈ ಪೋಷಕಾಂಶದ ಲಭ್ಯತೆಯು ಸೀಮಿತವಾಗಿರಲು ಕಾರಣವೇನೆಂದರೆ, ರಂಜಕ ಮಣ್ಣಿನ ಕಣಗಳಿಗೆ ಅಂಟಿಕೊಂಡಿರುತ್ತದೆ ಮತ್ತು ಸಸ್ಯಗಳಿಗೆ ಅದನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಕ್ಷಾರೀಯ ಮತ್ತು ಆಮ್ಲೀಯ ಮಣ್ಣು ಎರಡರಲ್ಲೂ ಕೂಡ ರಂಜಕದ ಲಭ್ಯತೆ ಕಡಿಮೆ ಇರಬಹುದು. ಕಡಿಮೆ ಸಾವಯವ ವಸ್ತು ಇರುವ ಅಥವಾ ಕಬ್ಬಿಣದ ಅಂಶ ಹೆಚ್ಚಿರುವ ಮಣ್ಣುಗಳೂ ಸಮಸ್ಯೆ ಒಡ್ಡಬಹುದು. ಬೇರಿನ ಸರಿಯಾದ ಬೆಳವಣಿಗೆ ಮತ್ತು ಕಾರ್ಯವನ್ನು ತಡೆಗಟ್ಟುವ ಶೀತ ಹವಾಮಾನವು ಕೂಡ ಈ ತೊಂದರೆಗೆ ಕಾರಣವಾಗಬಹುದು. ಬೇರಿನಿಂದ ನೀರು ಮತ್ತು ಪೋಷಕಾಂಶಗಳ ಹೀರುವಿಕೆಯನ್ನು ಸೀಮಿತಗೊಳಿಸುವ ರೋಗಗಳು ಮತ್ತು ಬರಗಾಲ ಕೂಡ ಕೊರತೆಯ ಲಕ್ಷಣಗಳನ್ನು ಪ್ರಚೋದಿಸಬಹುದು. ಇದಕ್ಕೆ ಪ್ರತಿಯಾಗಿ, ಮಣ್ಣಿನ ತೇವಾಂಶ ಈ ಪೋಷಕಾಂಶದ ಹೀರುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಇಳುವರಿಯಲ್ಲಿ ಗಮನಾರ್ಹ ಏರಿಕೆಗೆ ಕಾರಣವಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಮಣ್ಣಿನಿಂದ ರಂಜಕವನ್ನು ಹೀರುವಲ್ಲಿ ಸಮರ್ಥವಾಗಿರುವ ಪ್ರಭೇದಗಳನ್ನು ಬಳಸಿ.
  • ಬೆಳೆಗೆ ಸಮತೋಲಿತ ಮತ್ತು ಪರಿಣಾಮಕಾರಿ ಗೊಬ್ಬರಗಳನ್ನು ಪೂರೈಕೆ ಮಾಡಿ.
  • ಕೊಯ್ಲಿನ ನಂತರ ಸಸ್ಯದ ಉಳಿಕೆಗಳನ್ನು ಮಣ್ಣಿನೊಳಗೆ ಸೇರಿಸಿ.
  • ಮಣ್ಣಿನ ಪೋಷಕಾಂಶದ ಸಮತೋಲನವನ್ನು ಉಳಿಸಿಕೊಳ್ಳಲು ಖನಿಜ ಮತ್ತು ಸಾವಯವ ರಸಗೊಬ್ಬರಗಳ ಸಂಯೋಜಿತ ವಿಧಾನವನ್ನು ಬಳಸಿ.
  • ಮಣ್ಣಿನ pH ಸರಿಪಡಿಸಲು ಅಗತ್ಯವಿದ್ದರೆ ಸುಣ್ಣವನ್ನು ಸೇರಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ