ಟೊಮೆಟೊ

ಕ್ಯಾಲ್ಸಿಯಂ ಕೊರತೆ

Calcium Deficiency

ಕೊರತೆ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಅಲ್ಲಲ್ಲಿ ಒಂದೊಂದು ಹಳದಿ ಕಲೆಗಳು.
  • ಸುರುಳಿಯಾದ ಎಲೆಗಳು.
  • ಸರಿಯಾಗ ಬೆಳೆಯದ ಎಳೆ ಚಿಗುರುಗಳು ಅಥವಾ ಕಾಂಡಗಳು ಮತ್ತು ಹಣ್ಣುಗಳು.
  • ಸಸ್ಯ ಬಾಡುವುದು.
  • ಕುಂಠಿತಗೊಂಡ ಬೆಳವಣಿಗೆ.

ಇವುಗಳಲ್ಲಿ ಸಹ ಕಾಣಬಹುದು

57 ಬೆಳೆಗಳು
ಬಾದಾಮಿ
ಸೇಬು
ಜಲ್ದರು ಹಣ್ಣು
ಬಾಳೆಹಣ್ಣು
ಇನ್ನಷ್ಟು

ಟೊಮೆಟೊ

ರೋಗಲಕ್ಷಣಗಳು

ಹೊಸ ಚಿಗುರುಗಳು ಮತ್ತು ಎಲೆಗಳಂತಹ ವೇಗವಾಗಿ ಬೆಳೆಯುತ್ತಿರುವ ಅಂಗಾಂಶಗಳಲ್ಲಿ ರೋಗಲಕ್ಷಣಗಳು ಪ್ರಾಥಮಿಕವಾಗಿ ಗೋಚರಿಸುತ್ತವೆ. ಎಳೆ ಚಿಗುರುಗಳು ಸರಿಯಾಗಿ ಬೆಳೆದಿರುವುದಿಲ್ಲ ಮತ್ತು ಕಾಲಾನಂತರದಲ್ಲಿ ಅವುಗಳ ಸಂಖ್ಯೆ ಕಡಿಮೆಯಾಗುತ್ತದೆ. ಆರಂಭದಲ್ಲಿ, ಹೊಸ ಅಥವಾ ಮಧ್ಯವರ್ತಿ ಎಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಕ್ಲೋರೋಟಿಕ್ ಕಲೆಗಳು ಕಾಣಬಹುದು. ಆಗಲೇ ಕ್ರಮ ಕೈಗೊಳ್ಳದಿದ್ದಲ್ಲಿ, ಅವು ಕೆಳಮುಖ ಅಥವಾ ಮೇಲ್ಮುಖವಾಗಿ ಸುರುಳಿ ಸುತ್ತಲು ಪ್ರಾರಂಭಿಸುತ್ತವೆ ಮತ್ತು ಅವುಗಳ ಅಂಚುಗಳು ಕ್ರಮೇಣ ಕೊಳೆತ ಮತ್ತು ಸುಟ್ಟ ರೀತಿಯಲ್ಲಿ ಗೋಚರಿಸುತ್ತವೆ. ಬೆಳೆದ ಮತ್ತು ಹಳೆಯ ಎಲೆಗಳನ್ನು ಇವು ಸಾಮಾನ್ಯವಾಗಿ ಬಾಧಿಸುವುದಿಲ್ಲ. ಬೇರಿನ ವ್ಯವಸ್ಥೆ ಕಳಪೆಯಾಗಿ ಬೆಳೆಯುತ್ತದೆ ಮತ್ತು ಸಸ್ಯಗಳು ಬಾಡುತ್ತವೆ ಮತ್ತು ಕುಂಠಿತ ಬೆಳವಣಿಗೆಯನ್ನು ತೋರಿಸುತ್ತವೆ. ತೀವ್ರ ಕೊರತೆಯಿದ್ದಲ್ಲಿ, ಹೂವುಗಳು ಬೀಳುತ್ತವೆ, ಮತ್ತು ಹೊಸ ಎಲೆಗಳು ಬೆಳೆಯುವ ಸ್ಥಳಗಳು ಸುಟ್ಟಂತೆ ಆಗುತ್ತದೆ ಅಥವಾ ಸಾಯುತ್ತವೆ. ಹಣ್ಣುಗಳು ಚಿಕ್ಕದಾಗಿರುತ್ತವೆ ಮತ್ತು ಸಿಹಿಯಾಗಿರುವುದಿಲ್ಲ. ಸೌತೆಕಾಯಿ, ಮೆಣಸು ಮತ್ತು ಟೊಮೆಟೊಗಳಂತಹ ಸಸ್ಯಗಳಲ್ಲಿ ತುದಿ ಕೊಳೆತಿರಬಹುದು. ಬೀಜಗಳು ಮೊಳಕೆಯೊಡೆಯುವ ಪ್ರಮಾಣ ಕಡಿಮೆಯಾಗಿರುತ್ತದೆ.

Recommendations

ಜೈವಿಕ ನಿಯಂತ್ರಣ

ಸಣ್ಣ ರೈತರು ಅಥವಾ ತೋಟದ ಮಾಲಿಕರು, ಪುಡಿಯಾದ ಮೊಟ್ಟೆಯ ಚಿಪ್ಪುಗಳನ್ನು ಬಹಳ ನುಣ್ಣಗೆ ಪುಡಿಮಾಡಿ ಯಾವುದಾದರೋ ದುರ್ಬಲ ಆಮ್ಲ (ವಿನೆಗರ್) ಜೊತೆ ಸೇರಿಸಿ ಬಳಸಬಹುದು. ಪರ್ಯಾಯವಾಗಿ, ಕ್ಯಾಲ್ಸಿಯಂ-ಭರಿತ ಪದಾರ್ಥಗಳಾದ ಅಲ್ಗಲ್ ಸುಣ್ಣದ ಕಲ್ಲು, ಬಸಾಲ್ಟ್ ಪುಡಿ, ಸುಟ್ಟ ಸುಣ್ಣ, ಡೋಲಮೈಟ್, ಜಿಪ್ಸಮ್ ಮತ್ತು ಸ್ಲ್ಯಾಗ್ ಸುಣ್ಣವನ್ನು ಹಾಕಬಹುದು. ಗೊಬ್ಬರ ಅಥವಾ ಕಾಂಪೋಸ್ಟ್ ರೂಪದಲ್ಲಿ ಸಾವಯವ ವಸ್ತುಗಳನ್ನು ಮಣ್ಣಿಗೆ ಸೇರಿಸಿ ಅದರ ತೇವಾಂಶ-ಉಳಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಬಹುದು.

ರಾಸಾಯನಿಕ ನಿಯಂತ್ರಣ

  • ಕ್ಯಾಲ್ಸಿಯಂ (Ca) ಹೊಂದಿರುವ ಮಣ್ಣಿನ ರಸಗೊಬ್ಬರಗಳನ್ನು ಬಳಸಿ.
  • ಉದಾಹರಣೆಗಳು: ಕ್ಯಾಲ್ಸಿಯಂ ನೈಟ್ರೇಟ್, ಸುಣ್ಣ, ಜಿಪ್ಸಮ್.
  • ನಿಮ್ಮ ಮಣ್ಣು ಮತ್ತು ಬೆಳೆಗೆ ಉತ್ತಮವಾದ ಉತ್ಪನ್ನ ಮತ್ತು ಪ್ರಮಾಣವನ್ನು ತಿಳಿಯಲು ನಿಮ್ಮ ಕೃಷಿ ಸಲಹೆಗಾರರನ್ನು ಸಂಪರ್ಕಿಸಿ.

ಹೆಚ್ಚಿನ ಶಿಫಾರಸುಗಳು:

  • ನಿಮ್ಮ ಬೆಳೆಯ ಉತ್ಪಾದನೆಯನ್ನು ಉತ್ತಮಗೊಳಿಸಲು ಬೆಳೆ ಋತುವಿನ ಪ್ರಾರಂಭಕ್ಕೆ ಮೊದಲು ಮಣ್ಣಿನ ಪರೀಕ್ಷೆ ಮಾಡಲು ಸೂಚಿಸಲಾಗುತ್ತದೆ.
  • ಈಗಾಗಲೇ ಕೊರತೆ ಇದ್ದಲ್ಲಿ ಕರಗಬಲ್ಲ ಕ್ಯಾಲ್ಸಿಯಂ ನೈಟ್ರೇಟ್ ಎಲೆಗಳ ಮೇಲೆ ಸಿಂಪಡಿಸುವುದು ಪರಿಹಾರ.
  • ಕ್ಯಾಲ್ಸಿಯಂ ಕ್ಲೋರೈಡ್ ಬಳಸುವಾಗ, ತಾಪಮಾನವು 30°C ಗಿಂತ ಹೆಚ್ಚಿದ್ದರೆ ಸಿಂಪಡಿಸಬೇಡಿ.
  • ಹೊಲ ಸಿದ್ಧಪಡಿಸುವ ಸಮಯದಲ್ಲಿ, ಮಣ್ಣಿನ ಪಿಹೆಚ್ ಆಮ್ಲೀಯವಾಗಿದ್ದರೆ ಸುಣ್ಣವನ್ನು ಬಳಸಿ ಮತ್ತು ಮಣ್ಣಿನ ಪಿಹೆಚ್ ಕ್ಷಾರೀಯವಾಗಿದ್ದರೆ ಜಿಪ್ಸಮ್ ಬಳಸಿ.
  • ನಾಟಿ ಮಾಡುವ ಎರಡರಿಂದ ನಾಲ್ಕು ತಿಂಗಳ ಮೊದಲು ಲೈಮಿಂಗ್ ಮಾಡಬಹುದು.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಸಾಮಾನ್ಯವಾಗಿ, ಮಣ್ಣಿನಲ್ಲಿನ ಪೋಷಕಾಂಶದ ಕೊರತೆಗಿಂತಲೂ ಹೆಚ್ಚಾಗಿ, ಪೋಷಕಾಂಶ ಸಸ್ಯಗಳಿಗೆ ಲಭಿಸುವ ವಿಷಯಕ್ಕೆ ಸಂಬಂಧಿಸಿದೆ. ಕ್ಯಾಲ್ಸಿಯಂ ಗಿಡಗಳಲ್ಲಿ ಸಂಚರಿಸುವುದಿಲ್ಲ ಮತ್ತು ಅದರ ಹೀರುವಿಕೆಯು ಸಸ್ಯದಲ್ಲಿನ ನೀರಿನ ಸಂಗ್ರಹ ಮತ್ತು ಸಾಗಣಿಕೆಯ ಜೊತೆಗೆ ಬಲವಾದ ಸಂಬಂಧ ಹೊಂದಿದೆ. ಹೊಸ ಎಲೆಗಳಲ್ಲೇ ಮೊದಲು ಕೊರತೆಯ ರೋಗಲಕ್ಷಣಗಳು ಏಕೆ ಕಾಣಿಸಿಕೊಳ್ಳುತ್ತವೆ ಎಂಬುದನ್ನು ಇದು ವಿವರಿಸುತ್ತದೆ. ಒದ್ದೆ ಮಣ್ಣುಗಳು ಮತ್ತು ನೀರಾವರಿ ಮಾಡಿದ ಮಣ್ಣುಗಳು ಕ್ಯಾಲ್ಸಿಯಂ ಕರಗಿಸುವುದರಲ್ಲಿ ಮತ್ತು ಅದನ್ನು ಸಸ್ಯಗಳಿಗೆ ತಲುಪಿಸುವುದರಲ್ಲಿ ಉತ್ತಮವಾಗಿವೆ. ಆದರೆ, ಮರಳು ಮಣ್ಣು ತನ್ನ ಕಡಿಮೆ ಜಲ ಧಾರಣ ಸಾಮರ್ಥ್ಯದಿಂದಾಗಿ ಬರಕ್ಕೆ ಒಳಪಡಬಹುದು ಮತ್ತು ಇದರಿಂದಾಗಿ ಅದರ ಹೀರುವಿಕೆ ಸೀಮಿತಗೊಳ್ಳಬಹುದು. ಮಣ್ಣಿಗೆ ನೀರುಣಿಸುವ ನಡುವಿನ ಅವಧಿಯಲ್ಲಿ ಮಣ್ಣನ್ನು ತುಂಬಾ ಒಣಗಲು ಬಿಡುವುದರಿಂದಲೂ ಈ ಲಕ್ಷಣಗಳು ಉಂಟಾಗಬಹುದು. ಕಡಿಮೆ pH ಹೊಂದಿರುವ, ಹೆಚ್ಚು ಉಪ್ಪಿನಂಶ ಅಥವಾ ಅಮೋನಿಯಮ್ ಇರುವ ಮಣ್ಣುಗಳು ಕೂಡ ಸಮಸ್ಯೆ ಒಡ್ಡಬಹುದು. ಗಾಳಿಯಲ್ಲಿ ಅಧಿಕ ಆರ್ದ್ರತೆ ಅಥವಾ ಮಣ್ಣಲ್ಲಿ ನೀರು ನಿಲ್ಲುವುದು ಸಹ ಅಂಗಾಂಶಗಳಿಗೆ ನೀರಿನ ಸಾಗಾಣಿಕೆಯನ್ನು ನಿಧಾನಗೊಳಿಸಬಹುದು ಮತ್ತು ಆದರಿಂದ ಕ್ಯಾಲ್ಸಿಯಂ ಕಡಿಮೆ ಹೀರಲ್ಪಡುತ್ತದೆ.


ಮುಂಜಾಗ್ರತಾ ಕ್ರಮಗಳು

  • ಮಣ್ಣಿನಿಂದ ಕ್ಯಾಲ್ಸಿಯಂನ್ನು ಪಡೆಯಬಲ್ಲ ಉತ್ತಮ ಪ್ರಭೇದಗಳನ್ನು ಆಯ್ಕೆ ಮಾಡಿ.
  • ಮಣ್ಣಿನ pH ಪರೀಕ್ಷಿಸಿ ಮತ್ತು ಸೂಕ್ತ ಶ್ರೇಣಿಯೊಳಗೆ ಇರಲು ಅಗತ್ಯವಿದ್ದರೆ ಸುಣ್ಣ ಸೇರಿಸಿ.
  • 7.0 ದಿಂದ 8.5 ಸೂಕ್ತ ಶ್ರೇಣಿಯಾಗಿದೆ.
  • ಮಣ್ಣಿನಲ್ಲಿ ಕ್ಯಾಲ್ಸಿಯಂ ಕೊರತೆ ತಪ್ಪಿಸಲು ಅಮೋನಿಯಮ್ ಆಧಾರಿತ ರಸಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಿ.
  • ಹಣ್ಣಿನ ಆರಂಭಿಕ ಬೆಳವಣಿಗೆಯ ಸಮಯದಲ್ಲಿ ಸಾರಜನಕ ರಸಗೊಬ್ಬರವನ್ನು ಅತಿಯಾಗಿ ಬಳಸಬೇಡಿ.
  • ಸಸ್ಯಗಳ ಬಳಿ ಕೆಲಸ ಮಾಡುತ್ತಿದ್ದರೆ ಅವುಗಳ ಬೇರುಗಳಿಗೆ ಹಾನಿಯಾಗದಂತೆ ಎಚ್ಚರಿಕೆಯಿಂದಿರಿ.
  • ಆಗಾಗ್ಗೆ ನೀರುಹಾಕಿ.
  • ಆದರೆ ಅತಿಯಾಗಿ ನೀರುಣಿಸಬೇಡಿ.
  • ಸಾವಯವ ಪದಾರ್ಥವನ್ನು ಮಣ್ಣಿಗೆ ಸೇರಿಸಿ.
  • ಉದಾಹರಣೆಗೆ ಗೊಬ್ಬರ ಅಥವಾ ಸಾವಯವ ಗೊಬ್ಬರ ಅಥವಾ ಮಿಶ್ರಗೊಬ್ಬರ.
  • ಹಸಿಗೊಬ್ಬರ (ಹುಲ್ಲು, ಕೊಳೆತ ಮರದ ಪುಡಿ) ಅಥವಾ ಪ್ಲಾಸ್ಟಿಕ್ ಪದರ ಮಣ್ಣಿನ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ.
  • ನಿಯಮಿತವಾಗಿ ತೋಟದ ಮೇಲ್ವಿಚಾರಣೆ ಮಾಡಿ ಮತ್ತು ರೋಗಲಕ್ಷಣವಿರುವ ಹಣ್ಣುಗಳನ್ನು ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ