ಹಲಸಿನ ಕೊರಕ

JACKFRUIT

ಹಲಸಿನ ಕೊರಕ

Glyphodes caesalis

ಕೀಟ

ಸಂಕ್ಷಿಪ್ತವಾಗಿ

  • ಚಿಗುರು ಮತ್ತು ಹಣ್ಣುಗಳ ಮೇಲೆ ರಂಧ್ರಗಳಿರುತ್ತವೆ ಹಾಗೂ ಅದರ ಸುತ್ತ ಕಂದು ಬಣ್ಣದ ಪುಡಿ (ತ್ಯಾಜ್ಯ) ಇರುತ್ತದೆ.
  • ಹೂವುಗಳು ಮತ್ತು ಎಳೆಯ ಕಾಯಿಗಳು ಅಕಾಲಿಕವಾಗಿ ಉದುರುತ್ತವೆ.
  • ಚಿಗುರುಗಳು ಬಾಡಿ ಒಣಗುತ್ತವೆ.
  • ಹಣ್ಣುಗಳು ಕೊಳೆತು ತಿನ್ನಲು ಯೋಗ್ಯವಲ್ಲದಂತಾಗುತ್ತವೆ.
  • ಗಿಡದ ಮೇಲೆ ಕಪ್ಪು ಚುಕ್ಕೆಗಳಿರುವ ಕೆಂಪು-ಕಂದು ಬಣ್ಣದ ಹುಳುಗಳು ಕಾಣಿಸುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

0 ಬೆಳೆಗಳು

ಹಲಸಿನ ಕೊರಕ

JACKFRUIT

ರೋಗಲಕ್ಷಣಗಳು

ಬೆಳೆದ ಮರದಲ್ಲಿನ ಎಳೆಯ ಚಿಗುರುಗಳ ತುದಿಗಳಿಗೆ ಕೀಟಗಳು ದಾಳಿ ಮಾಡುತ್ತವೆ. ಇದರಿಂದ ಚಿಗುರುಗಳು ಬಾಡಿಹೋಗುತ್ತವೆ. ಮರಿಹುಳುಗಳು ಬೆಳೆಯುತ್ತಿರುವ ಕುಡಿಗಳು ಮತ್ತು ಚಿಗುರುಗಳ ಒಳಗೆ ರಂಧ್ರ ಕೊರೆದು ಪ್ರವೇಶಿಸುತ್ತವೆ. ಇದರಿಂದಾಗಿ, ಅವು ಬಾಡುವುದು, ಒಣಗುವುದು, ಬೆಳವಣಿಗೆ ಕುಂಠಿತವಾಗುವುದು, ಕಾಂಡಗಳು ಅಂಕುಡೊಂಕಾಗುವುದು ಮತ್ತು ಪಾರ್ಶ್ವದ ರೆಂಬೆಗಳು ಅತಿಯಾಗಿ ಬೆಳೆಯಲು ಕಾರಣವಾಗುತ್ತವೆ. ಹೂವಿನ ಗೊಂಚಲುಗಳನ್ನು ಇವು ಒಳಗಿನಿಂದಲೇ ತಿನ್ನುವುದರಿಂದ, ಅವು ಹೂ ಬಿಡದೆ ಕೊಳೆಯುತ್ತವೆ. ಕೀಟದ ಬಾಧೆ ಮೊದಲೇ ಉಂಟಾದರೆ ಹಣ್ಣುಗಳು ವಿರೂಪಗೊಳ್ಳುತ್ತವೆ ಅಥವಾ ಅಕಾಲಿಕವಾಗಿ ಉದುರುತ್ತವೆ. ನಂತರದ ಹಂತದಲ್ಲಿ ಕೀಟ ಬಾಧೆಯಾದರೆ ಹುಳುಗಳು ಪಕ್ವವಾದ ಹಣ್ಣಿನೊಳಗೆ ರಂಧ್ರ ಕೊರೆದು, ತಿನ್ನಲು ಯೋಗ್ಯವಾದ ತಿರುಳನ್ನು ನಾಶಪಡಿಸುತ್ತವೆ. ಹುಳುಗಳು ತಿಂದು ಮಾಡಿದ ಹಾನಿಯು ಇತರ ಸೂಕ್ಷ್ಮಾಣುಜೀವಿಗಳ ಹರಡುವಿಕೆಗೆ ಮೂಲವಾಗುತ್ತದೆ, ಇದು ಹಣ್ಣುಗಳು ಮತ್ತಷ್ಟು ಕೊಳೆಯಲು ಕಾರಣವಾಗುತ್ತದೆ.

ಶಿಫಾರಸುಗಳು

ಜೈವಿಕ ನಿಯಂತ್ರಣ

ಕೀಟಗಳ ಸಂಖ್ಯೆಯನ್ನು ನೋಡಿ ಸಿಂಪಡಣೆಯ ಬಗ್ಗೆ ನಿರ್ಧರಿಸಿ. ಹಣ್ಣುಗಳಿಗೆ ಚೀಲ ಕಟ್ಟುವ ವಿಧಾನದ ಜೊತೆಗೆ ಜೈವಿಕ ಔಷಧಗಳನ್ನು ಬಳಸಿ. ಮೊಟ್ಟೆ ಮತ್ತು ಎಳೆಯ ಹುಳುಗಳಿದ್ದಾಗಲೇ ನಿಯಂತ್ರಿಸುವುದು ಹೆಚ್ಚು ಪರಿಣಾಮಕಾರಿ. ಜೈವಿಕ ವಿಧಾನಗಳು ಕೆಲಸ ಮಾಡದಿದ್ದಾಗ ಮಾತ್ರ ರಾಸಾಯನಿಕಗಳನ್ನು ಬಳಸಿ.

ರಾಸಾಯನಿಕ ನಿಯಂತ್ರಣ

ಚಿಗುರುಗಳು ಮತ್ತು ಹಣ್ಣುಗಳ ಮೇಲೆ ಕೀಟದ ಹಾವಳಿ ಕಂಡ ತಕ್ಷಣ ಔಷಧ ಸಿಂಪಡಿಸಿ. ಬೆಳವಣಿಗೆಯ ಅವಧಿಯಲ್ಲಿ ಪ್ರತಿ 15 ದಿನಕ್ಕೊಮ್ಮೆ ಇದನ್ನು ಪುನರಾವರ್ತಿಸಿ. ಎಳೆಯ ಚಿಗುರುಗಳು, ಹೂವಿನ ಮೊಗ್ಗುಗಳು ಮತ್ತು ಎಳೆಯ ಹಣ್ಣುಗಳ ಮೇಲೆ ಹೆಚ್ಚು ಗಮನ ಹರಿಸಿ. ಬಿಸಿಲಿನ ತಾಪ ತಪ್ಪಿಸಲು ಬೆಳಿಗ್ಗೆ ಅಥವಾ ಸಂಜೆ ವೇಳೆ ಸಿಂಪಡಿಸಿ. ಔಷಧ ಎಲ್ಲಾ ಕಡೆ ಹರಡಲು ಮತ್ತು ಗಿಡಕ್ಕೆ ಚೆನ್ನಾಗಿ ಅಂಟಿಕೊಳ್ಳಲು 'ಸ್ಪ್ರೆಡರ್' ಬಳಸಿ. ಔಷಧ ಸಿಂಪಡಿಸುವಾಗ ರಕ್ಷಣಾತ್ಮಕ ಬಟ್ಟೆಗಳನ್ನು ಧರಿಸಿ.

ಅದಕ್ಕೆ ಏನು ಕಾರಣ

ಹಲಸಿನ ಚಿಗುರು ಮತ್ತು ಹಣ್ಣು ಕೊರಕ ಹುಳು (ಡಯಾಫೇನಿಯಾ ಸೀಸಾಲಿಸ್) ಹಲಸಿನ ಬೆಳೆಯ ಪ್ರಮುಖ ಕೀಟವಾಗಿದ್ದು, ವಿಶೇಷವಾಗಿ ಆರ್ದ್ರತೆಯುಳ್ಳ ಉಷ್ಣವಲಯದ ಪ್ರದೇಶಗಳಲ್ಲಿ ಹೆಚ್ಚು ಕಂಡುಬರುತ್ತದೆ. ಈ ಹಣ್ಣು ಕೊರಕವು ಹೂವಿನ ಮೊಗ್ಗಿನ ಹಂತದಿಂದ ಹಣ್ಣು ಪಕ್ವವಾಗುವವರೆಗೆ ಬೆಳೆಗೆ ಗಮನಾರ್ಹ ಹಾನಿಯನ್ನುಂಟುಮಾಡುತ್ತದೆ. ಕಪ್ಪು ಚುಕ್ಕೆಗಳನ್ನು ಹೊಂದಿರುವ ಕೆಂಪು-ಕಂದು ಬಣ್ಣದ ಮರಿಹುಳುವು ಎಳೆಯ ಚಿಗುರುಗಳು, ಹೂವಿನ ಗೊಂಚಲುಗಳು ಮತ್ತು ಬೆಳೆಯುತ್ತಿರುವ ಹಣ್ಣುಗಳೊಳಗೆ ರಂಧ್ರ ಕೊರೆಯುವ ಮೂಲಕ ತೀವ್ರ ಹಾನಿ ಮಾಡುತ್ತದೆ. ಬೆಳೆದ ಪತಂಗವು ತಿಳಿ ಕಂದು ಬಣ್ಣದಲ್ಲಿದ್ದು, ಗಾಢ ಕಂದು ಬಣ್ಣದ ಚುಕ್ಕೆಗಳು ಮತ್ತು ಕಿತ್ತಳೆ ಬಣ್ಣದ ಪಟ್ಟೆಗಳನ್ನು ಹೊಂದಿರುತ್ತದೆ. ಹೆಣ್ಣು ಪತಂಗಗಳು ಎಳೆಯ ಚಿಗುರುಗಳು ಮತ್ತು ಹೂವಿನ ಮೊಗ್ಗುಗಳ ಮೇಲೆ ಮೊಟ್ಟೆ ಇಡುತ್ತವೆ, ಮತ್ತು ಮೊಟ್ಟೆ ಒಡೆದ ತಕ್ಷಣ ಮರಿಹುಳುಗಳು ಸಸ್ಯದ ಭಾಗದೊಳಗೆ ಕೊರೆಯುತ್ತವೆ. ಹೂಬಿಡುವ ಮತ್ತು ಹಣ್ಣು ಬಿಡುವ ಸಮಯದಲ್ಲಿ ಈ ಹುಳುಗಳ ಚಟುವಟಿಕೆಯು ಹೆಚ್ಚಾಗಿರುತ್ತದೆ. ಮಳೆನೀರು ಮತ್ತು ಸೂಕ್ಷ್ಮಾಣುಜೀವಿಗಳ ಪ್ರವೇಶಕ್ಕೆ ಈ ಹುಳುಗಳು ಮಾಡಿದ ರಂಧ್ರಗಳೇ ದಾರಿಯಾಗುವುದರಿಂದ, ಇದು ದ್ವಿತೀಯ ಹಂತದ ಸೋಂಕಿಗೆ ಕಾರಣವಾಗುತ್ತದೆ. ಈ ಹಾನಿಯು ಹಣ್ಣುಗಳು ಮತ್ತು ಸಸಿಗಳ ಮಾರುಕಟ್ಟೆ ಮೌಲ್ಯವನ್ನು ಕಡಿಮೆ ಮಾಡುತ್ತದೆ.


ಮುಂಜಾಗ್ರತಾ ಕ್ರಮಗಳು

  • ಮರಗಳಲ್ಲಿ ರಂಧ್ರಗಳು, ಕೀಟದ ವಿಸರ್ಜನೆಯ ರಾಶಿ ಅಥವಾ ಒಣಗಿದ ಚಿಗುರುಗಳಿವೆಯೇ ಎಂದು ವಾರಕ್ಕೊಮ್ಮೆ ಪರೀಕ್ಷಿಸಿ.
  • ಪೀಡಿತ ಚಿಗುರುಗಳು, ಮೊಗ್ಗುಗಳು ಮತ್ತು ಹಣ್ಣುಗಳನ್ನು ತಕ್ಷಣ ಕತ್ತರಿಸಿ ತೆಗೆಯಿರಿ.
  • ತೆಗೆದ ಭಾಗಗಳನ್ನು ಸಂಪೂರ್ಣವಾಗಿ ಸುಟ್ಟುಹಾಕಿ ಅಥವಾ ಮಣ್ಣಿನಲ್ಲಿ ಹೂತುಹಾಕಿ.
  • ಪತಂಗಗಳು ಮೊಟ್ಟೆ ಇಡದಂತೆ ತಡೆಯಲು ಎಳೆಯ ಕಾಯಿಗಳಿಗೆ ಪ್ಲಾಸ್ಟಿಕ್ ಚೀಲಗಳನ್ನು ಕಟ್ಟಿ.
  • ಪತಂಗಗಳನ್ನು ಹಿಡಿಯಲು ಬೆಳಕಿನ ಬಲೆಗಳನ್ನು ಬಳಸಿ.
  • ರಂಧ್ರಗಳನ್ನು ಸ್ವಚ್ಛಗೊಳಿಸಿ ಹತ್ತಿ ಮತ್ತು ಮಣ್ಣಿನ ಪೇಸ್ಟ್‌ನಿಂದ ಮುಚ್ಚಿ.
  • ಆರ್ದ್ರತೆ ಕಡಿಮೆ ಮಾಡಲು ಮತ್ತು ಗಾಳಿಯ ಸಂಚಾರಕ್ಕಾಗಿ ಮರದ ರೆಂಬೆಗಳನ್ನು ಕತ್ತರಿಸಿ.
  • ಮರದ ಕೆಳಗೆ ಬಿದ್ದ ಹಣ್ಣು ಮತ್ತು ಕಸವನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ