ಸೌತೆಕಾಯಿ

ಕುಕುರ್ಬಿಟ್ ಸ್ಟಿಂಕ್ ಬಗ್

Coridius janus

ಕೀಟ

5 mins to read

ಸಂಕ್ಷಿಪ್ತವಾಗಿ

  • ಎಲೆಗಳು ಹಳದಿಯಾಗುತ್ತವೆ.
  • ಹಣ್ಣುಗಳು ಮತ್ತು ಕಾಂಡಗಳ ಮೇಲೆ ಸಣ್ಣ ಗುಳಿಬಿದ್ದ ಜಾಗಗಳು.
  • ಸಸ್ಯದ ಬೆಳವಣಿಗೆಯ ಮೇಲೆ ಪರಿಣಾಮವಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

5 ಬೆಳೆಗಳು
ಹಾಗಲಕಾಯಿ
ಸೌತೆಕಾಯಿ
ಕಲ್ಲಂಗಡಿ
ಕುಂಬಳಕಾಯಿ
ಇನ್ನಷ್ಟು

ಸೌತೆಕಾಯಿ

ರೋಗಲಕ್ಷಣಗಳು

ಸ್ಟಿಂಕ್ ಬಗ್‍ಗಳು, ಎಳೆ ಮತ್ತು ವಯಸ್ಕ ಕೀಟಗಳು, ಸಸ್ಯದ ರಸವನ್ನು ಹೀರುವ ಮೂಲಕ ಬೆಳೆಗಳಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಅವು ತಿನ್ನುವ ಭಾಗವನ್ನು ಅವಲಂಬಿಸಿ, ಕಾಂಡಗಳು ಮತ್ತು ಹಣ್ಣುಗಳ ಮೇಲೆ ಸಣ್ಣ ಗುಳಿಬಿದ್ದ ಕಲೆಗಳು ಕಾಣುತ್ತವೆ ಅಥವಾ ಎಲೆಗಳು ಹಳದಿಯಾಗುತ್ತವೆ. ಸಸ್ಯಗಳ ಒಟ್ಟಾರೆ ಬೆಳವಣಿಗೆಯ ಮೇಲೆ ಋಣಾತ್ಮಕವಾಗಿ ಪರಿಣಾಮವಾಗುತ್ತದೆ. ಇಳುವರಿ ಕಡಿಮೆಯಾಗುತ್ತದೆ. ಸ್ಟಿಂಕ್ ಬಗ್‍ಗಳು ಹೆಚ್ಚು ಸಂಖ್ಯೆಯಲ್ಲಿದ್ದಾಗ ಅವು ಸಣ್ಣ ಸಸ್ಯಗಳ ಬೆಳವಣಿಗೆಗೆ ಮತ್ತು ಹೊಸ, ಸೂಕ್ಷ್ಮ ಬೆಳವಣಿಗೆಗೆ ಅಧಿಕ ಅಪಾಯವನ್ನುಂಟುಮಾಡುತ್ತವೆ.

Recommendations

ಜೈವಿಕ ನಿಯಂತ್ರಣ

ಈ ಬಗ್ ನೈಸರ್ಗಿಕ ಶತ್ರುಗಳನ್ನು ಹೊಂದಿದೆ. ಆದರೆ ಅದು ಹೊರಸೂಸುವ ಬಲವಾದ ವಾಸನೆಯು ಪರಭಕ್ಷಕಗಳ ವಿರುದ್ಧ ಬಲವಾದ ರಕ್ಷಣೆಯಾಗಿದೆ. ಸಾರಭೂತ ತೈಲ ಮಿಶ್ರಣಗಳ ಉತ್ಪನ್ನಗಳನ್ನು ನೈಸರ್ಗಿಕ ಪೈರೆಥ್ರಿನ್ಗಳೊಂದಿಗೆ ಸಿಂಪಡಿಸಿ ಅಥವಾ ಬೇವಿನ ಎಣ್ಣೆಯನ್ನು ಸಿಂಪಡಿಸಿ. ರಾಸಾಯನಿಕ ನಿಯಂತ್ರಣ ವಿಭಾಗದಲ್ಲಿನ ಅದೇ ತತ್ವಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ರೋಗಲಕ್ಷಣಗಳಿಗಾಗಿ ನಿಮ್ಮ ಬೆಳೆಗಳನ್ನು ಪರಿಶೀಲಿಸುವ ಮತ್ತು ಯಾವುದೇ ಬಗ್‍ಗಳು ಮತ್ತು ಮೊಟ್ಟೆಗಳನ್ನು ತೆಗೆದುಹಾಕುವ ವಿಧಾನದೊಂದಿಗೆ ಈ ಸ್ಪ್ರೇ ವಿಧಾನವನ್ನು ಸಂಯೋಜಿಸಿ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಹೆಚ್ಚು ಪರಿಸರ ಸ್ನೇಹಿ ಚಿಕಿತ್ಸೆಗಳೊಂದಿಗೆ ಮುಂಜಾಗ್ರತಾ ಕ್ರಮಗಳೊಂದಿಗೆ ಸಮಗ್ರ ವಿಧಾನವನ್ನು ಪರಿಗಣಿಸಿ. ಕೀಟ ಅತಿ ಹೆಚ್ಚು ಮುತ್ತಿಕೊಂಡ ಸಂದರ್ಭದಲ್ಲಿ ನಿಮ್ಮ ಪ್ರದೇಶದಲ್ಲಿ ಈ ಬಳಕೆಗಾಗಿ ನಿಯಂತ್ರಿಸಲಾದ ಸಂಪರ್ಕ ಕೀಟನಾಶಕಗಳನ್ನು ಸಿಂಪಡಿಸಿ. ವಯಸ್ಕ ಹುಳುಗಳು ಸಕ್ರಿಯವಾಗಿರುವಾಗ ಬೆಳಿಗ್ಗೆ ಸಿಂಪಡಿಸಿ ಮತ್ತು ಸ್ಪ್ರೇಗಳನ್ನು ಬೇರುಗಳಿಗೆ ಮತ್ತು ಎಲೆಗಳ ಕೆಳಭಾಗಕ್ಕೆ ಹಾಕಿ. ನೀವು ಎಲೆ ಹಸಿಗೊಬ್ಬರವನ್ನು ಬಳಸಿದರೆ, ಬಗ್‌ಗಳು ಅಡಗಿರುವ ಸ್ಥಳಗಳಿಂದ ಬಲವಂತವಾಗಿ ಹೊರಬರಲು ಎಲೆ ಹಸಿಗೊಬ್ಬರದ ಮೇಲೆ ನೀರನ್ನು ಸಿಂಪಡಿಸಿ ಮತ್ತು ಅವುಗಳ ಮೇಲೆ ಸಿಂಪಡಿಸಿ.

ಅದಕ್ಕೆ ಏನು ಕಾರಣ

ಕೊರಿಡಿಯಸ್ ಜಾನಸ್ ಎಂಬ ಸ್ಟಿಂಕ್ ಬಗ್‍ನಿಂದ ಹಾನಿ ಉಂಟಾಗುತ್ತದೆ. ಈ ಹುಳವು ಮುಖ್ಯವಾಗಿ ಕುಕುರ್ಬಿಟ್ ಸಸ್ಯಗಳಲ್ಲಿ ಕಂಡುಬರುತ್ತದೆ. ಕೀಟಗಳು ಸಸ್ಯದ ಅವಶೇಷಗಳಲ್ಲಿ ಮತ್ತು ಕಳೆಗಳ ನಡುವೆ ವಯಸ್ಕ ಕೀಟಗಳಾಗಿ ಚಳಿಗಾಲವನ್ನು ಕಳೆಯುತ್ತವೆ. ಪ್ರತಿ ಹೆಣ್ಣು ಕೀಟ ಎಲೆಗಳು, ಕಾಂಡಗಳು ಅಥವಾ ಆಶ್ರಯ ಸಸ್ಯಗಳ ಇತರ ಭಾಗಗಳ ಕೆಳಭಾಗದಲ್ಲಿ 100 ಮೊಟ್ಟೆಗಳನ್ನು ಇಡಬಹುದು. ವಯಸ್ಕ ಕೀಟಗಳು ಹಾರುವುದಿಲ್ಲ ಮತ್ತು ಕಪ್ಪು ತಲೆಯನ್ನು ಹೊಂದಿರುತ್ತದೆ, ಕಿತ್ತಳೆ ಬಣ್ಣದ ದೇಹ ಮತ್ತು ಕಪ್ಪು ರೆಕ್ಕೆಗಳನ್ನು ಹೊಂದಿರುತ್ತದೆ. ಹುಳಗಳು ಎಲೆ ಹಸಿಗೊಬ್ಬರದಲ್ಲಿ ಅವಿತುಕೊಳ್ಳಲು ಇಷ್ಟಪಡುತ್ತವೆ. ಅವು ಬೆಳಿಗ್ಗೆ ಮತ್ತು ಸಂಜೆ ಸಕ್ರಿಯವಾಗಿರುತ್ತವೆ. ಆದರೆ ಹಗಲಿನಲ್ಲಿ, ಅವು ಎಲೆಗಳ ಅಡಿಯಲ್ಲಿ ಆಶ್ರಯ ಪಡೆಯುತ್ತವೆ.


ಮುಂಜಾಗ್ರತಾ ಕ್ರಮಗಳು

  • ಬೆಳವಣಿಗೆಯ ಕಾಲದಲ್ಲಿ ಕುಕುರ್ಬಿಟ್‌ಗಳ ಸುತ್ತಲೂ ಎಲೆ ಹಸಿಗೊಬ್ಬರ ಬಳಸಬೇಡಿ.
  • ಏಕೆಂದರೆ ಇದು ಸ್ಕ್ವ್ಯಾಷ್ ಬಗ್‍ಗಳು ಅವಿತುಕೊಳ್ಳುವುದಕ್ಕೆ ಜಾಗ ನೀಡುತ್ತದೆ.
  • ನಿಮ್ಮ ಹೊಲವನ್ನು ಪರಿಶೀಲಿಸಿ ಏಕೆಂದರೆ ನೀವು ಹುಳಗಳು ಮತ್ತು ಮೊಟ್ಟೆಗಳನ್ನು ಗುರುತಿಸಿ ಕೈಯಿಂದ ತೆಗೆದುಹಾಕಿದರೆ ಬಹಳಷ್ಟು ಹಾನಿಯನ್ನು ತಪ್ಪಿಸಬಹುದು.
  • ಹಿಂದಿನ ವರ್ಷಗಳಲ್ಲಿ ಸ್ಟಿಂಕ್ ಬಗ್‍ನ ಹಾನಿಯನ್ನು ನೀವು ನೋಡಿದ ಹೊಲದ ಭಾಗಗಳಿಗೆ ಗಮನ ಕೊಡಿ.
  • ಬೆಳೆದ ಕೀಟಗಳು, ಎಳೆಯ ಕೀಟಗಳು ಅಥವಾ ಮೊಟ್ಟೆಗಳನ್ನು ಗುರುತಿಸಿದರೆ, ಅವುಗಳನ್ನು ನಿಮ್ಮ ಕೈಗಳಿಂದ ತೆಗೆದುಹಾಕಿ ಮತ್ತು ಅವುಗಳನ್ನು ಒಡೆದುಹಾಕಿ.
  • ಸ್ಟಿಂಕ್ ಬಗ್‌ಗಳನ್ನು ಒಡೆದ ನಂತರ ಕೆಟ್ಟ ವಾಸನೆ ಬರುವ ಕಾರಣ ಯಾವಾಗಲೂ ಕೈಗವಸುಗಳನ್ನು ಧರಿಸಿ.
  • ನಿಮ್ಮ ಹೊಲದಲ್ಲಿ ಎಲ್ಲಾ ಸಸ್ಯಾವಶೇಷಗಳನ್ನು ತೆಗೆದುಹಾಕಿ.
  • ಅದು ಕೀಟಗಳಿಗೆ ಚಳಿಗಾಲದಲ್ಲಿ ಅಡಗುತಾಣಗಳಾಗುತ್ತದೆ.
  • ಕೊಯ್ಲು ಮಾಡಿದ ನಂತರ ನಿಮ್ಮ ಮಣ್ಣನ್ನು ಚೆನ್ನಾಗಿ ಉಳುಮೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ