ಮಾವು

ನೀಲಿ-ಪಟ್ಟೆಯ ನೆಟಲ್ ಗ್ರಬ್

Parasa lepida

ಕೀಟ

5 mins to read

ಸಂಕ್ಷಿಪ್ತವಾಗಿ

  • ಎಲೆಗಳಲ್ಲಿ ಕೀಟ ಅಗಿದಿರುವ ತೂತುಗಳು.
  • ಕೀಟ ತಿನ್ನುವ ಕಾರಣದಿಂದಾಗಿ ಸಂಪೂರ್ಣ ಎಲೆಗಳ ನಷ್ಟ.

ಇವುಗಳಲ್ಲಿ ಸಹ ಕಾಣಬಹುದು

4 ಬೆಳೆಗಳು
ಬಾಳೆಹಣ್ಣು
ಕಾಫಿ
ಮಾವು
ಮರಗೆಣಸು

ಮಾವು

ರೋಗಲಕ್ಷಣಗಳು

ಮರಿಹುಳುಗಳು ಚಿಕ್ಕದಾಗಿದ್ದಾಗ, ಅವು ಎಲೆಯ ಕೆಳಗಿನ ಪದರವನ್ನು ತಿನ್ನುತ್ತವೆ. ಹಾನಿ ಸಾಮಾನ್ಯವಾಗಿ ಎಲೆಗಳ ತುದಿಯಿಂದ ಪ್ರಾರಂಭವಾಗುತ್ತದೆ. ಆರಂಭದಲ್ಲಿ ಮೊಟ್ಟೆಗಳನ್ನು ಅಲ್ಲಿ ಇಡಲಾಗುತ್ತದೆ. ನಂತರ ಅವು ಎಲೆಯ ಅಂಚುಗಳಿಗೆ ಚಲಿಸುತ್ತವೆ ಮತ್ತು ಅವುಗಳಲ್ಲಿ ಬಹುತೇಕವನ್ನು ತಿಂದು ಮುಗಿಸುತ್ತವೆ. ಅವು ಬೆಳೆದಂತೆ, ತುದಿಯಿಂದ ಪ್ರಾರಂಭಿಸಿ ಅವು ಸಂಪೂರ್ಣ ಎಲೆಯನ್ನು ತಿನ್ನುತ್ತವೆ. ಎಲೆಯ ಮಧ್ಯ ಭಾಗವನ್ನು ಮಾತ್ರ ಬಿಡುತ್ತದೆ. ತಿಂದ ಗುರುತುಗಳು ಹಾಗೇ ಇರುತ್ತವೆ. ಪರಿಣಾಮವಾಗಿ, ಸಸ್ಯಗಳು ಸರಿಯಾಗಿ ದ್ಯುತಿಸಂಶ್ಲೇಷಣೆ ಮಾಡಲು ಸಾಧ್ಯವಾಗುವುದಿಲ್ಲ, ಇದರಿಂದ ಬೆಳೆಗಳಲ್ಲಿ ಇಳುವರಿ ಕಡಿಮೆಯಾಗುತ್ತದೆ. ಬಾಧೆಗೊಳಗಾದ ಸಸ್ಯವು ಹಣ್ಣುಗಳನ್ನು ಹೊಂದಿದ್ದರೆ ಅವು ಪಕ್ವವಾಗುವ ಮುಂಚೆಯೇ ಬೀಳಬಹುದು. ಮರಿಹುಳುಗಳು ಗುಂಪು ಗುಂಪುಗಳಾಗಿ ತಿನ್ನುವುದನ್ನು ನೋಡಬಹುದು. ಮರಿಹುಳುಗಳ ವಿಸರ್ಜನೆ (ಫ್ರಾಸ್) ಕಾಣುತ್ತದೆ.

Recommendations

ಜೈವಿಕ ನಿಯಂತ್ರಣ

ರಾಸಾಯನಿಕಗಳಿಲ್ಲದೆ ಕೀಟವನ್ನು ನಿಯಂತ್ರಿಸಲು, ಪೀಡಿತ ಸಸ್ಯಗಳಿಂದ ಮರಿಹುಳುಗಳನ್ನು ಕೈಯಿಂದ ತೆಗೆದುಹಾಕುವುದು ಒಂದು ಆಯ್ಕೆಯಾಗಿದೆ. ಇದನ್ನು ನೇರವಾಗಿ ಮುಟ್ಟದೆ, ಒಂದು ಜೋಡಿ ಟ್ವೀಜರ್ ಅಥವಾ ಟೇಪ್ ತುಂಡನ್ನು ಬಳಸಿ ಮಾಡಬೇಕು. ಬೆಳೆದ ಪತಂಗಗಳನ್ನು ಬಲೆಗೆ ಬೀಳಿಸಲು ಮತ್ತು ಸಂಗ್ರಹಿಸಲು ಬೆಳಕಿನ ಬಲೆಗಳನ್ನು ಸಹ ಸ್ಥಾಪಿಸಬಹುದು. ಕೀಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಪ್ರತಿ ಹೆಕ್ಟೇರಿಗೆ ಸುಮಾರು 5 ಬೆಳಕಿನ ಬಲೆಗಳನ್ನು ಅಳವಡಿಸಬಹುದು.

ರಾಸಾಯನಿಕ ನಿಯಂತ್ರಣ

ನಿಮ್ಮ ನಿರ್ದಿಷ್ಟ ಸನ್ನಿವೇಶಕ್ಕೆ ಸೂಕ್ತವಾದ ಕೀಟನಾಶಕವನ್ನು ಆಯ್ಕೆಮಾಡಿ. ಲೇಬಲ್ ಸೂಚನೆಗಳನ್ನು ಎಚ್ಚರಿಕೆಯಿಂದ ಅನುಸರಿಸಿ ಮತ್ತು ಅದನ್ನು ಬಳಸುವಾಗ ರಕ್ಷಣಾತ್ಮಕ ಬಟ್ಟೆ ಮತ್ತು ಕೈಗವಸುಗಳನ್ನು ಧರಿಸಿ. ಬಾಧೆ ಹೆಚ್ಚಿದ್ದಲ್ಲಿ ಮಾತ್ರ ಸಿಂಪಡಣೆ ಮಾಡಿ. ಕಾರ್ಬರಿಲ್, ಡೈಕ್ಲೋರ್ವೋಸ್ ಮತ್ತು ಎಂಡೋಸಲ್ಫಾನ್ ಕೀಟಗಳನ್ನು ನಿಯಂತ್ರಿಸುತ್ತವೆಂದು ವರದಿಯಾಗಿದೆ.

ಅದಕ್ಕೆ ಏನು ಕಾರಣ

ನೀಲಿ-ಪಟ್ಟೆ ನೆಟಲ್ ಗ್ರಬ್ನಿಂದ ಹಾನಿ ಉಂಟಾಗುತ್ತದೆ. ಅವು ಹೆಚ್ಚಾಗಿ ಉಷ್ಣವಲಯ ಮತ್ತು ವರ್ಷಪೂರ್ತಿ ಇರುತ್ತವೆ. ಈ ಪತಂಗವು ತಮ್ಮ ಜೀವನ ಚಕ್ರದಲ್ಲಿ ಹಲವಾರು ಹಂತಗಳನ್ನು ಹಾದುಹೋಗುತ್ತದೆ. ಇದು ಸಸ್ಯಗಳ ಎಲೆಗಳ ಮೇಲೆ ಇಡುವ ಮೊಟ್ಟೆಗಳಿಂದ ಪ್ರಾರಂಭವಾಗುತ್ತದೆ. ಮೊಟ್ಟೆಯೊಡೆದ ನಂತರ, ಎಳೆಯ ಮರಿಹುಳುಗಳು ಎಲೆಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಬೆಳವಣಿಗೆಯ ಸಮಯದಲ್ಲಿ, ಅವು ತಮ್ಮ ಚರ್ಮವನ್ನು ಹಲವಾರು ಬಾರಿ ನವೀಕರಿಸುತ್ತವೆ ಮತ್ತು ಅದನ್ನು ಹೊಸದರೊಂದಿಗೆ ಬದಲಾಯಿಸುತ್ತವೆ. ಅಂತಿಮವಾಗಿ, ಅವು ತಮ್ಮ ಸುತ್ತಲೂ ಕೋಶವನ್ನು ರೂಪಿಸುತ್ತವೆ ಮತ್ತು ಪ್ಯೂಪೇಟ್ ಆಗುತ್ತವೆ. ಸ್ವಲ್ಪ ಸಮಯದ ನಂತರ, ಬೆಳೆದ ಪತಂಗಗಳು ಕಕೂನ್‌ಗಳಿಂದ ಹೊರಬರುತ್ತವೆ ಮತ್ತು ಮರಳಿ ಜೀವನ ಚಕ್ರವನ್ನು ಪ್ರಾರಂಭಿಸುತ್ತವೆ. ಈ ಕೀಟದ ಗ್ರಬ್‌ಗಳು ಮೂರು ತೆಳು ನೀಲಿ ಪಟ್ಟೆಗಳನ್ನು ಹೊಂದಿದ್ದು ಹಸಿರು ದೇಹವನ್ನು ಹೊಂದಿರುತ್ತವೆ ಮತ್ತು 3-4 ಸೆಂ.ಮೀ ಉದ್ದದವರೆಗೆ ಬೆಳೆಯುತ್ತವೆ. ಕಕೂನ್ಗಳು ರೇಷ್ಮೆಯಿಂದ ಮುಚ್ಚಿದ ಗಟ್ಟಿಯಾದ ಕಾಗದದ ಥರದ ಚಿಪ್ಪಿನೊಂದಿಗೆ ದೊಡ್ಡ ಬೀಜಗಳಂತೆ ಕಾಣುತ್ತವೆ. ಹೆಣ್ಣು ಮತ್ತು ಗಂಡು ಪತಂಗಗಳು ಒಂದೇ ರೀತಿಯ ಬಣ್ಣದ ಮಾದರಿಯನ್ನು ಹೊಂದಿರುತ್ತವೆ. ಅವು ಹಳದಿ-ಹಸಿರು ತಲೆ, ಕೆಂಪು-ಕಂದು ದೇಹ, ಕಡು ಕೆಂಪು-ಕಂದು ಕಾಲುಗಳು ಮತ್ತು ರೆಕ್ಕೆಯ ಹೊರ ಭಾಗದಲ್ಲಿ ಕಂದು ಅಂಚನ್ನು ಹೊಂದಿರುತ್ತವೆ.


ಮುಂಜಾಗ್ರತಾ ಕ್ರಮಗಳು

  • ಬಾಧೆಗಳು ಆರಂಭದಲ್ಲಿ ಒಂದು ಪ್ರದೇಶಕ್ಕೆ ಸೀಮಿತವಾಗಿರುತ್ತವೆ.
  • ಮರಿಹುಳುಗಳನ್ನು ಕೈಯಿಂದ ಹೆಕ್ಕಿ ತೆಗೆದು ನಾಶಪಡಿಸಬಹುದು.
  • ಅದೇ ಪ್ರದೇಶದಲ್ಲಿ ಕಕೂನ್‌ಗಳನ್ನು ಹುಡುಕಿ ಅವುಗಳನ್ನು ನಾಶಮಾಡಿ.
  • ಕಾಂಡದ ಮೇಲೆ, ಎಲೆಗಳ ಮೇಲೆ ಮತ್ತು ನೆಲದ ಮೇಲೆ ನೋಡಿ.
  • ಕಕೂನ್ ಗಳನ್ನು ಸಾಮಾನ್ಯವಾಗಿ ಒಂದರ ಪಕ್ಕ ಒಂದು ಇಡಲಾಗುತ್ತದೆ.
  • ಸ್ವಚ್ಛವಾದ, ಮಾನ್ಯತೆ ಪಡೆದ ಪೂರೈಕೆದಾರರಿಂದ ಪ್ರಮಾಣೀಕರಿಸಿದ ಆದ್ಯತೆಯ ಸಸ್ಯ ವಸ್ತುಗಳನ್ನು ಮಾತ್ರ ಖರೀದಿಸಿ.
  • ಮೊಟ್ಟೆಗಳು ಅಥವಾ ಲಾರ್ವಾಗಳಿಂದ ಬಾಧಿತವಾದ ಸಸ್ಯ ವಸ್ತುಗಳ ಮೂಲಕ ನೀಲಿ-ಪಟ್ಟೆಯ ನೆಟಲ್ ಗ್ರಬ್ ಹೊಸ ಸ್ಥಳಗಳಿಗೆ ಸ್ಥಳಾಂತರವಾಗಬಹುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ