ತೊಗರಿ ಬೇಳೆ & ಮಸೂರ್ ಬೇಳೆ

ಸ್ಪಿಟಲ್‌ಬಗ್ಸ್

Cercopidae

ಕೀಟ

5 mins to read

ಸಂಕ್ಷಿಪ್ತವಾಗಿ

  • ಕಾಂಡದ ಮೇಲೆ ಬಿಳಿ ನೊರೆ ವಸ್ತು.

ಇವುಗಳಲ್ಲಿ ಸಹ ಕಾಣಬಹುದು


ತೊಗರಿ ಬೇಳೆ & ಮಸೂರ್ ಬೇಳೆ

ರೋಗಲಕ್ಷಣಗಳು

ವಸಂತಕಾಲದ ಆರಂಭದಲ್ಲಿ ಮತ್ತು ಬೇಸಿಗೆಯಲ್ಲಿ, ಎಳೆ ಕಾಂಡಗಳು ಮತ್ತು ಸಸ್ಯಗಳ ಎಲೆಗಳ ಮೇಲೆ ಬಿಳಿ ನೊರೆ ವಸ್ತುವಿನಂತಹ ರಾಶಿಗಳು ಬೆಳೆಯುತ್ತವೆ. ಪ್ರತಿಯೊಂದು ಬಿಳಿ ರಾಶಿಯಲ್ಲಿ 4-6 ಮಿಮೀ ಚಿಕ್ಕದಾದ ಮತ್ತು ಇನ್ನೂ ಸಂಪೂರ್ಣವಾಗಿ ಬೆಳವಣಿಗೆಯಾಗದ ಬಿಳಿ-ಕೆನೆ ಬಣ್ಣದ ಕೀಟವಿರುತ್ತದೆ. ಸಾಮಾನ್ಯವಾಗಿ ಸಸ್ಯದ ಬೆಳವಣಿಗೆಯ ಮೇಲೆ ಪರಿಣಾಮವಾಗುವುದಿಲ್ಲ, ಆದರೆ, ಚಿಗುರಿನ ತುದಿಯನ್ನು ಕೀಟವು ತಿನ್ನುತ್ತಿದ್ದರೆ, ಇದು ಬೆಳವಣಿಗೆಯ ಸಮಸ್ಯೆಗಳನ್ನು ಉಂಟುಮಾಡಬಹುದು.

Recommendations

ಜೈವಿಕ ನಿಯಂತ್ರಣ

ಈ ಸಣ್ಣ ಕೀಟಕ್ಕೆ ಜೈವಿಕ ನಿಯಂತ್ರಣ ಅಸ್ತಿತ್ವದಲ್ಲಿಲ್ಲ. ಅಗತ್ಯವಿದ್ದರೆ, ಅವುಗಳನ್ನು ಕೈಯಿಂದ ಹೆಕ್ಕಿ ತೆಗೆದುಹಾಕಿ.

ರಾಸಾಯನಿಕ ನಿಯಂತ್ರಣ

ಫ್ರಾಗ್‌ಹಾಪರ್‌ಗಳು ಮತ್ತು ಸ್ಪಿಟಲ್‌ಬಗ್‌ಗಳನ್ನು ನಿಯಂತ್ರಿಸಲು ಕೀಟನಾಶಕಗಳ ಅಗತ್ಯವಿಲ್ಲ. ಕೀಟನಾಶಕಗಳು ಸ್ಪಿಟಲ್‌ಬಗ್‌ಗಳ ವಿರುದ್ಧ ಪರಿಣಾಮಕಾರಿಯಾಗಿರುವುದಿಲ್ಲ. ಏಕೆಂದರೆ ಮರಿಕೀಟಗಳನ್ನು ನೊರೆಯಂತಹ ವಸ್ತು ರಕ್ಷಿಸುತ್ತದೆ ಮತ್ತು ಸಿಂಪಡಣೆಯಿಂದ ಅವು ಪ್ರಭಾವಿತವಾಗುವುದಿಲ್ಲ.

ಅದಕ್ಕೆ ಏನು ಕಾರಣ

ಸಸ್ಯದ ರಸವನ್ನು ಹೀರುವ ಸ್ಪಿಟಲ್‌ಬಗ್‌ಗಳಿಂದ ಈ ಹಾನಿ ಉಂಟಾಗುತ್ತದೆ. ಅವು ಸಾಮಾನ್ಯವಾಗಿ ಹೆಚ್ಚಿನ ಹಾನಿಯನ್ನು ಉಂಟುಮಾಡುವುದಿಲ್ಲ. ಆದರೆ ಅವುಗಳ ಸಂಖ್ಯೆಯು ಬೆಳೆದರೆ ಅವು ಸಮಸ್ಯೆಯಾಗಬಹುದು. ಪರಭಕ್ಷಕಗಳಿಂದ ರಕ್ಷಿಸಿಕೊಳ್ಳಲು ಅವು ನೊರೆ ವಸ್ತುವನ್ನು ರಚಿಸುತ್ತವೆ. ಸ್ಪಿಟಲ್‌ಬಗ್‌ಗಳು ತಮ್ಮ ಜೀವನ ಚಕ್ರದಲ್ಲಿ ಮೂರು ಭಾಗಗಳನ್ನು ಹೊಂದಿವೆ: ಮೊಟ್ಟೆ ಹಂತ, ಮರಿ ಹಂತ, ಬೆಳೆದ ಹಂತ. ಪ್ರತಿ ಹಂತವು ಅರ್ಧ ವರ್ಷದವರೆಗೆ ಇರುತ್ತದೆ. ಮೊಟ್ಟೆಗಳು ಹೊರಬಂದಾಗ, ಮರಿ ಕೀಟಗಳು ಸಸ್ಯವನ್ನು ತಿನ್ನುತ್ತವೆ. ಅವುಗಳ ಮುಂದಿನ ಹಂತದಲ್ಲಿ, ಅವು ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನೊರೆಯನ್ನು ಉತ್ಪಾದಿಸುತ್ತವೆ ಮತ್ತು ಅವು ಪ್ರೌಢವಾಗುವವರೆಗೂ ಬೆಳೆಯುತ್ತಲೇ ಇರುತ್ತವೆ. ಬೆಳೆಯಲು, ಮರಿ ಕೀಟದ ಹಂತದಲ್ಲಿ ಸಸ್ಯದ ಸುತ್ತಲೂ 1-3 ತಿಂಗಳ ಕಾಲ ಸಸ್ಯದ ವಿವಿಧ ಭಾಗಗಳನ್ನು ತಿನ್ನುತ್ತವೆ. ಬೆಳೆದ ಸ್ಪಿಟಲ್‌ಬಗ್‌ಗಳು ಸಾಮಾನ್ಯವಾಗಿ ಸಸ್ಯದ ಅವಶೇಷಗಳಲ್ಲಿ ಅಥವಾ ಎಲೆಗಳು ಮತ್ತು ಕಾಂಡಗಳಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಪ್ರತಿ ಹೆಣ್ಣು ಸ್ಪಿಟಲ್‌ಬಗ್ ಸುಮಾರು 100-200 ಮೊಟ್ಟೆಗಳನ್ನು ಇಡುತ್ತದೆ. ಅವು ಸಸ್ಯಗಳ ಮೇಲೆ ಮೊಟ್ಟೆಗಳಾಗಿಯೇ ಚಳಿಗಾಲವನ್ನು ಕಳೆಯುತ್ತವೆ. ಮರಿ ಹಂತದಲ್ಲಿ ಸಾಮಾನ್ಯವಾಗಿ ಹಸಿರು ಬಣ್ಣವನ್ನು ಹೊಂದಿರುತ್ತದೆ. ಮರಿಗಳು ದೊಡ್ಡದಾಗುವ ಮೊದಲು, ದೇಹದ ಬಣ್ಣವು ಕಪ್ಪಾಗುತ್ತದೆ ಮತ್ತು ರೆಕ್ಕೆಗಳು ಬೆಳೆಯಲು ಪ್ರಾರಂಭಿಸುತ್ತವೆ. ಸ್ಪಿಟಲ್‌ಬಗ್‌ಗಳು ದ್ವಿದಳ ಧಾನ್ಯಗಳು ಮತ್ತು ಇತರ ಸಾರಜನಕ-ಫಿಕ್ಸಿಂಗ್ ಸಸ್ಯಗಳನ್ನು ತಿನ್ನುತ್ತವೆ.


ಮುಂಜಾಗ್ರತಾ ಕ್ರಮಗಳು

  • ಸ್ಪಿಟಲ್‌ಬಗ್‌ಗಳನ್ನು ತೊಡೆದುಹಾಕಲು, ನೀವು ನೊರೆಯನ್ನು ತೊಳೆಯಲು ಮತ್ತು ಸಸ್ಯದಿಂದ ಕೀಟಗಳನ್ನು ಅಲ್ಲಾಡಿಸಿ ಬೀಳಿಸಲು ನೀರಿನ ಬ್ಲಾಸ್ಟ್ಅನ್ನು ಬಳಸಬಹುದು.
  • ಚಳಿಗಾಲವನ್ನು ಸುಪ್ತಾವಸ್ಥೆಯಲ್ಲಿ ಕಳೆಯುವ ಮೊಟ್ಟೆಗಳನ್ನು ಕಡಿಮೆ ಮಾಡಲು ಬೆಳವಣಿಗೆಯ ಋತುವಿನ ಅಂತ್ಯದ ನಂತರ ನಿಮ್ಮ ಹೊಲವನ್ನು ಸ್ವಚ್ಛಗೊಳಿಸಿ.
  • ವಸಂತಕಾಲದಲ್ಲಿ, ಕಳೆಗಳ ಮೇಲೆ ಯಾವುದೇ ಸ್ಪಿಟಲ್‌ಬಗ್‌ಗಳನ್ನು ನೋಡಿದರೆ, ಅವು ನಿಮ್ಮ ಬೆಳೆಗಳಿಗೆ ಹರಡುವ ಮೊದಲೇ ಅವುಗಳನ್ನು ತೊಡೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ